ಕನ್ನಡ ಸುದ್ದಿ  /  ಕರ್ನಾಟಕ  /  ಸತತ ಮಳೆಯಾದರೂ ತಗ್ಗದ ಬೆಲೆ; ಬೆಂಗಳೂರಿನಲ್ಲಿ ಟೊಮೆಟೊ, ಬೀನ್ಸ್, ಕ್ಯಾರೆಟ್ ಸೇರಿ ತರಕಾರಿ ದರಗಳು ಹೀಗಿವೆ

ಸತತ ಮಳೆಯಾದರೂ ತಗ್ಗದ ಬೆಲೆ; ಬೆಂಗಳೂರಿನಲ್ಲಿ ಟೊಮೆಟೊ, ಬೀನ್ಸ್, ಕ್ಯಾರೆಟ್ ಸೇರಿ ತರಕಾರಿ ದರಗಳು ಹೀಗಿವೆ

ಮೇ ತಿಂಗಳ ಆರಂಭದಿಂದಲೂ ಕರ್ನಾಟಕದಲ್ಲಿ ವರುಣ ಅಬ್ಬರಿಸುತ್ತಿದ್ದು, ಭೂಮಿ ತಂಪಾಗಿದೆ. ಆದರೆ ತರಕಾರಿ ಬೆಲೆ ಮಾತ್ರ ಕಡಿಮೆಯಾಗುತ್ತಿಲ್ಲ. ಅತ್ತ ರೈತರಿಗೆ ಲಾಭವಿಲ್ಲ, ಇತ್ತ ಗ್ರಾಹಕರಿಗೆ ಕಡಿಮೆ ಬೆಲೆಗೆ ತರಕಾರಿ ಸಿಗುತ್ತಿಲ್ಲ. ಮಧ್ಯವರ್ತಿಗಳು ಒಳ್ಳೆ ದುಡ್ಡು ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ ಸತತ ಮಳೆಯಾಗುತ್ತಿದ್ದರೂ ತರಕಾರಿ ಬೆಲೆಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಬೆಂಗಳೂರಿನಲ್ಲಿ ಟೊಮೆಟೊ, ಬೀನ್ಸ್, ಕ್ಯಾರೆಟ್ ಸೇರಿ ತರಕಾರಿ ದರಗಳ ವಿವರ ಇಲ್ಲಿದೆ.
ಕರ್ನಾಟಕದಲ್ಲಿ ಸತತ ಮಳೆಯಾಗುತ್ತಿದ್ದರೂ ತರಕಾರಿ ಬೆಲೆಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಬೆಂಗಳೂರಿನಲ್ಲಿ ಟೊಮೆಟೊ, ಬೀನ್ಸ್, ಕ್ಯಾರೆಟ್ ಸೇರಿ ತರಕಾರಿ ದರಗಳ ವಿವರ ಇಲ್ಲಿದೆ.

ಬೆಂಗಳೂರು: ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ಭಾರಿ ಮಳೆಯಾಗುತ್ತಿದ್ದರೂ ತರಕಾರಿಗಳ ಬೆಲೆಗಳ (Vegetables Price) ಇನ್ನೂ ಯಾವುದೇ ರೀತಿಯ ಪರಿಣಾಮ ಬೀರಿಲ್ಲ. ಏಪ್ರಿಲ್‌ನಲ್ಲಿ ರಣ ಬಿಸಿಲು ಹಾಗೂ ನೀರಿನ ಕೊರತೆಯಿಂದ ಸರಿಯಾದ ಪ್ರಮಾಣದಲ್ಲಿ ತರಕಾರಿ ಫಸಲನ್ನು ತೆಗೆಯಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಪೂರೈಕೆಯಲ್ಲಿ ತೀವ್ರವಾಗಿ ಕೊರತೆಯುಂಟಾಗಿದೆ. ಹೀಗಾಗಿ ಕಳೆದ ಹಲವು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ತರಕಾರಿಗಳ ಬೆಲೆಗಳು ಏರಿಕೆಯ (Vegetables Price in Bengaluru) ಮಟ್ಟದಲ್ಲೇ ಇದ್ದು, ಸದ್ಯದ ಮಟ್ಟಿಗೆ ಇಳಿಕೆಯಾಗುವಂತೆ ಕಾಣುತ್ತಿಲ್ಲ. ಇದು ಸಾಮಾನ್ಯ ಗ್ರಾಹಕರು, ಹೋಟೆಲ್, ಮದುವೆಯಂತ ಸಭೆ ಸಮಾರಂಭಗಳ ಮೇಲೆ ಪರಿಣಾಮ ಬೀರುತ್ತಿವೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರಿನಲ್ಲಿ ಪ್ರಸ್ತುತ ಕೆಜಿ ಹಸಿ ಮೆಣಸಿನಕಾಯಿ 110 ರೂಪಾಯಿ ಇದೆ. ಗೋರಿಕಾಯಿ 64 ರೂಪಾಯಿ, ಕ್ಯಾರೆಟ್, 82 ರೂಪಾಯಿ, ಪಡವಲಕಾಯಿ 47 ರೂಪಾಯಿ, ಹುರುಳಿಕಾಯಿ 235 ರೂಪಾಯಿ, ಶುಂಠಿ 195 ರೂಪಾಯಿ, ಬದನೆಯಾಕಿ 79 ರೂಪಾಯಿ, ಸೋರೆಕಾಯಿ 55 ರೂಪಾಯಿ, ಬಟಾಣಿ 190 ರೂಪಾಯಿ, ಹಾಗಲಕಾಯಿ 80 ರೂಪಾಯಿ, ಬೆಂಡೆಕಾಯಿ 66 ರೂಪಾಯಿ ಇದೆ.

ತರಕಾರಿಗಳು ಗರಿಷ್ಠ ಬೆಲೆಯನ್ನು ನೋಡುವುದಾದರೆ ಬೀನ್ಸ್ ಕೆಜಿಗೆ ಬೆಲೆ 250 ರೂಪಾಯಿ ವರೆಗೆ ಹೋಗಿದೆ, ಅದೇ ರೀತಿ ಕ್ಯಾರೆಟ್ 100 ರೂಪಾಯಿ, ಕ್ಯಾಪ್ಸಿಕಂ 90 ರೂಪಾಯಿ, ಬದನೆಕಾಯಿ 85 ರೂಪಾಯಿ, ಕೊತ್ತಂಬರಿ ಸೊಪ್ಪು ಒಂದು ಕಟ್ಟಿಗೆ ಗರಿಷ್ಠ 60 ರೂಪಾಯಿ, ಪಾಲಕ್ ಸೊಪ್ಪು ಒಂದು ಕಟ್ಟಿಗೆ ಗರಿಷ್ಠ 50 ರೂಪಾಯಿ, ಎಲೆ ಕೋಸು 150 ರೂಪಾಯಿ, ಟೊಮೆಟೊ 60 ರೂಪಾಯಿ ತಲುಪಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ಹೇಳುತ್ತಿವೆ.

ಇಷ್ಟು ದಿನಗಳಿಂದ ಮಳೆ ಇಲ್ಲ ಅಂತ ತರಕಾರಿ ಬೆಲೆಗಳು ಹೆಚ್ಚಾಗಿದ್ದವು, ಈಗ ಹೆಚ್ಚು ಮಳೆ ಬಂದಿದ್ದಕ್ಕೆ ತರಕಾರಿ ಬೆಲೆ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ ಎಂದು ಗ್ರಾಹಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನ ಬೆಲೆಗಳು ಗಗನಕ್ಕೇರಿರುವ ಕಾರಣ 1 ಕೆಜಿ 2 ಕೆಜಿ ತರಕಾರಿ ಖರೀದಿಸುತ್ತಿದ್ದ ಗ್ರಾಹಕರು ಅರ್ಧ ಕೆಜಿ ಹಾಗೆ ಖರೀದಿಸುತ್ತಿದ್ದಾರೆ. ಪೂರ್ಣಪ್ರಮಾಣದಲ್ಲಿ ತರಕಾರಿ ಮಾರುಕಟ್ಟೆಗೆ ಬರುವವರೆಗೆ ಬೆಲೆಗಳು ಹೀಗೆಯೇ ಮುಂದುವರಿಯುವ ಬಹಳಷ್ಟು ಸಾಧ್ಯತೆ ಇದೆ ಎಂದು ಆರ್‌ಟಿ ನಗರದ ವ್ಯಾಪಾರಿಯೊಬ್ಬರು ವಿವರಿಸಿದ್ದಾರೆ.

ಒಂದು ಕಡೆ ಮಳೆಯ ಕೊರತೆಯಿಂದ ಬೆಳೆಗಳು ಕೈಕೊಟ್ಟಿದ್ದರೆ, ಮತ್ತೊಂದು ಕಡೆ ಭಾರಿ ಮಳೆಯಿಂದಾಗಿ ಅಷ್ಟೋ ಇಷ್ಟೋ ಬೆಳೆದಿದ್ದ ಬೆಳೆಗೆ ರೋಗಬಾಧೆ ಶುರುವಾಗಿದ್ದು, ಫಸಲು ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಮಾರುಕಟ್ಟೆಗಳಿಗೆ ಸರಿಯಾದ ಪ್ರಮಾಣದಲ್ಲಿ ತರಕಾರಿಗಳು ಬರುತ್ತಿಲ್ಲ. ಆದರೆ ಬಂದಂತಹ ತರಕಾರಿಗಳಿಗೆ ಬೆಲೆಯೆನೋ ಉತ್ತಮವಾಗಿದೆ. ಇದು ರೈತರಿಗೆ ಲಾಭವಾಗದೆ ಮಧ್ಯವರ್ತಿಗಳ ಪಾಲಾಗುತ್ತಿದೆ. ಬಹುತೇಕ ರೈತರು ನೇರವಾಗಿ ಮಾರುಕಟ್ಟೆಗೆ ತರಕಾರಿಗಳನ್ನು ತರುವುದಿಲ್ಲ. ಬದಲಾಗಿ ತೊಟದಲ್ಲೇ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಈ ವ್ಯಾಪಾರಿ ಕಂ ಮಧ್ಯವರ್ತಿಗಳು ಹೆಚ್ಚಿನ ಲಾಭಕ್ಕೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ದುಡ್ಡು ಮಾಡಿಕೊಳ್ಳುತ್ತಾರೆ. ಆದರೆ ಸಣ್ಣ ಪುಟ್ಟ ಸಗಟು ವ್ಯಾಪಾರಿಗಳು ತರಕಾರಿಗಳನ್ನು ದುಪ್ಪಟ್ಟು ಬೆಲೆಗೆ ತರಕಾರಿಗಳನ್ನು ಮಾರಾಟ ಮಾಡುತ್ತಾರೆ. ತರಕಾರಿ ಬೆಳೆದ ರೈತನಿಗೆ ಸರಿಯಾದ ಪ್ರಮಾಣದಲ್ಲಿ ಬೆಲೆ ಸಿಗುತ್ತಿಲ್ಲ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024