ಡ್ರಾಪ್‌ ಕೊಡುವ ನೆಪದಲ್ಲಿ ಪಾನಮತ್ತ ಯುವತಿಯರ ಮೇಲೆ ಅತ್ಯಾಚಾರ, ವ್ಹೀಲಿಂಗ್ ಪುಂಡರ ಬೈಕ್‌ ಪುಡಿ ಪುಡಿ ಮಾಡಿದ ಸಾರ್ವಜನಿಕರು-bengaluru crime news 21 year old college student raped by biker after taking lift was returning home in hsr layout mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಡ್ರಾಪ್‌ ಕೊಡುವ ನೆಪದಲ್ಲಿ ಪಾನಮತ್ತ ಯುವತಿಯರ ಮೇಲೆ ಅತ್ಯಾಚಾರ, ವ್ಹೀಲಿಂಗ್ ಪುಂಡರ ಬೈಕ್‌ ಪುಡಿ ಪುಡಿ ಮಾಡಿದ ಸಾರ್ವಜನಿಕರು

ಡ್ರಾಪ್‌ ಕೊಡುವ ನೆಪದಲ್ಲಿ ಪಾನಮತ್ತ ಯುವತಿಯರ ಮೇಲೆ ಅತ್ಯಾಚಾರ, ವ್ಹೀಲಿಂಗ್ ಪುಂಡರ ಬೈಕ್‌ ಪುಡಿ ಪುಡಿ ಮಾಡಿದ ಸಾರ್ವಜನಿಕರು

ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ಎರಡು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಪಾನಮತ್ತರಾಗಿದ್ದ ಯುವತಿಯರ ಮೇಲೆ ಡ್ರಾಪ್‌ ಕೊಡುವ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಮತ್ತೊಂದು ಕಡೆ ಮತ್ತಿನಲ್ಲಿದ್ದ ಯುವತಿ ಮೇಲೆ ಆಟೋ ಚಾಲಕನೋರ್ವ ಅತ್ಯಾಚಾರಕ್ಕೆ ಮುಂದಾಗಿದ್ದಾನೆ.

ಡ್ರಾಪ್‌ ಕೊಡುವ ನೆಪದಲ್ಲಿ ಪಾನಮತ್ತ ಯುವತಿಯರ ಮೇಲೆ ಅತ್ಯಾಚಾರ, ವ್ಹೀಲಿಂಗ್ ಪುಂಡರ ಬೈಕ್‌ ಪುಡಿ ಪುಡಿ ಮಾಡಿದ ಸಾರ್ವಜನಿಕರು
ಡ್ರಾಪ್‌ ಕೊಡುವ ನೆಪದಲ್ಲಿ ಪಾನಮತ್ತ ಯುವತಿಯರ ಮೇಲೆ ಅತ್ಯಾಚಾರ, ವ್ಹೀಲಿಂಗ್ ಪುಂಡರ ಬೈಕ್‌ ಪುಡಿ ಪುಡಿ ಮಾಡಿದ ಸಾರ್ವಜನಿಕರು

Bengaluru Crime news: ಬೆಂಗಳೂರಿನಲ್ಲಿ ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ಪ್ರಕರಣ ನಡೆದಿದ್ದು ಬೆಂಗಳೂರನ್ನು ಬೆಚ್ಚಿ ಬೀಳಿಸಿದೆ. ಎರಡೂ ಪ್ರಕರಣಗಳಲ್ಲಿ ಯುವತಿಯರು ಪಾನಮತ್ತರಾಗಿದ್ದರು ಎಂದು ತಿಳಿದು ಬಂದಿದೆ. ಪಾನಮತ್ತರಾಗಿದ್ದ ಯುವತಿಯೊಬ್ಬರಿಗೆ ಡ್ರಾಪ್‌ ನೀಡುವ ನೆಪದಲ್ಲಿ ಕರೆದೊಯ್ದು ಅತ್ಯಾಚಾರಕ್ಕೆ ಪ್ರಯತ್ನಿಸಿರುವ ಪ್ರಕರಣ ಭಾನುವಾರ ಬೆಳಗಿನ ಜಾವ ಎಚ್.ಎಸ್. ಆರ್. ಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭಾನುವಾರ ಮುಂಜಾನೆ 1ರಿಂದ 1.30ರೊಳಗೆ ಹೊಸೂರು ಮುಖ್ಯ ರಸ್ತೆಯಲ್ಲಿ ಈ ಪ್ರಕರಣ ನಡೆದಿದ್ದು, ಅಪರಿಚಿತ ಯುವಕನ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಯುವತಿಯು ಈ ಯುವಕನಿಂದ ಲಿಫ್ಟ್‌ ಕೇಳಿದ್ದರು ಎಂದು ತಿಳಿದು ಬಂದಿದೆ. ಆರೋಪಿಯು ನಿರ್ಜನ ಪ್ರದೇಶದತ್ತ ತೆರಳಿ ಅತ್ಯಾಚಾರ ನಡೆಸಲು ಪ್ರಯತ್ನ ನಡೆಸಿದ್ದಾನೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ರಮಣ್‌ ಗುಪ್ತಾ ತಿಳಿಸಿದ್ದಾರೆ. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಯುವತಿಯು ನಿರ್ಜನ ಪ್ರದೇಶದಿಂದ ತನ್ನ ಸ್ನೇಹಿತರೊಬ್ಬರಿಗೆ ಮೆಸೇಜ್‌ ಮತ್ತು ಲೊಕೇಷನ್‌ ಹಂಚಿಕೊಂಡು ಸಹಾಯಕ್ಕಾಗಿ ಮೊರೆಯಿಟ್ಟಿದ್ದಾರೆ. ಆ ಸ್ನೇಹಿತರು ಮತ್ತೊಬ್ಬ ಸ್ನೇಹಿತರಿಗೆ ಈ ವಿಷಯವನ್ನು ಮುಟ್ಟಿಸಿದ್ದಾರೆ. ಅವರು ಲೊಕೇಷನ್‌ ಆಧರಿಸಿ ಅಲ್ಲಿಗೆ ತೆರಳಿದ್ದಾರೆ. ಇವರು ಅಲ್ಲಿಗೆ ತರಳಿದಾಗ ಆತ ಅಲ್ಲಿಯೇ ಇದ್ದು ಇವರನ್ನು ನೋಡಿದ ಕೂಡಲೇ ಪರಾರಿಯಾಗಿದ್ದಾನೆ. ಆ ಸಂದರ್ಭದಲ್ಲಿ ಆತ ಪ್ಯಾಂಟ್‌ ಮಾತ್ರ ಧರಿಸಿದ್ದು, ಮುಖದ ಮೇಲೆ ತರಚಿದ ಗಾಯವಾಗಿತ್ತು ಎಂದು ತಿಳಿಸಿದ್ದಾರೆ.

ಅತ್ಯಾಚಾರ ಎಸಗಿದ ಆಟೋ ಚಾಲಕ

ಮತ್ತೊಂದು ಪ್ರಕರಣದಲ್ಲಿ ಯುವತಿಯೊಬ್ಬರು ಆಟೋದಲ್ಲಿ ತೆರಳುತ್ತಿದ್ದಾಗ ಆಕೆಯ ಮೇಲೆ ಆಟೋ ಚಾಲಕ ಅತ್ಯಾಚಾರ ನಡೆಸಿರುವ ಘಟನೆ ಎಚ್‌ ಎಸ್‌ ಆರ್‌ ಲೇ ಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಶನಿವಾರ ರಾತ್ರಿ ಕೋರಮಂಗಲದ ಪಬ್‌ ವೊಂದರಿಂದ ಪಾನಮತ್ತರಾಗಿ ಹೊರ ಬಂದ ಯುವತಿ ತಮ್ಮ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾರೆ. ಆದರೆ ಆಕೆಯ ವಾಹನ ಅಪಘಾತಕ್ಕೀಡಾಗಿದ್ದರಿಂದ ವಾಹನವನ್ನು ಬಿಟ್ಟು ಆಟೋ ಹತಿದ್ದಾರೆ. ಈಕೆ ಅರೆ ಪ್ರಜ್ಞಾವಸ್ಥೆಯಲ್ಲಿರುವುದನ್ನು ಮನಗಂಡ ಆಟೋ ಚಾಲಕ ಬೊಮ್ಮನಹಳ್ಳಿಯ ಸಮೀಪದ ಗೋಡೌನ್‌ ಬಳಿ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ನಂತರ ಯುವತಿಯು ತನ್ನ ಸ್ನೇಹಿತೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅವರು ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಯಲ್ಲಿ ಅತ್ಯಾಚಾರ ನಡೆದಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ನಂತರ ಎಚ್‌ ಎಸ್‌ ಆರ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿಯು ತನ್ನ ಹೇಳಿಕೆಗಳನ್ನು ಪದೇ ಪದೇ ಬದಲಾಯಿಸುತ್ತಿದ್ದು ಸ್ಪಷ್ಟ ಮಾಹಿತಿ ಸಿಕ್ಕ ನಂತರ ವಿವರ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ ಪ್ರತಿಕ್ರಿಯಿಸಿ, ಯುವತಿಯ ಮೇಲೆ ಅತಾಚಾರಕ್ಕೆ ನಡೆದಿರುವುದು ನಿಜ. ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಹೆದ್ದಾರಿಯಲ್ಲಿ ವ್ಹೀಲಿಂಗ್;‌ ಸಾರ್ವಜನಿಕರ ಆಕ್ರೋಶ

ರಸ್ತೆಗಳಲ್ಲಿ ವ್ಹೀಲಿಂಗ್‌ ಮಾಡುತ್ತಾ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದ ಯುವಕರ ವರ್ತನೆಯಿಂದ ಸಿಟ್ಟಿಗೆದ್ದ ವಾಹನ ಸವಾರರು ಎರಡು ದ್ವಿಚಕ್ರ ವಾಹನಗಳನ್ನು ಮೇಲ್ಸೇತುವೆಯಿಂದ ಕೆಳಗೆ ಎಸೆದಿರುವ ಪ್ರಕರಣ ನೆಲಮಂಗಲದಲ್ಲಿ ನಡೆದಿದೆ. ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿಯ ಅಡಕಮಾರನಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ದ್ವಿಚಕ್ರ ವಾಹನಗಳನ್ನು ಮೇಲ್ಸೇತುವೆಯಿಂದ ಕೆಳಗಿನ ರಸ್ತೆಗೆ ಎಸೆಯುತ್ತಿರುವ ದೃಶ್ಯವನ್ನು ಚಿತ್ರೀಕರಿಸಿರುವ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ ಲೋಡ್‌ ಮಾಡಿದ್ದಾರೆ. ಈ ಹೆದ್ದಾರಿಯಲ್ಲಿ ವ್ಹೀಲಿಂಗ್‌ ಮಾಡುತ್ತಿದ್ದ ಯುವಕನೊಬ್ಬ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಆತನ ಮತ್ತು ಆತನ ಜೊತೆಗೆ ವ್ಹೀಲಿಂಗ್‌ ಮಾಡುತ್ತಿದ್ದ ಮತ್ತೊಬ್ಬ ಯುವಕನ ದ್ವಿಚಕ್ರವಾಹನಗಳನ್ನು ಕೆಳಗೆ ಎಸೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ: ಎಚ್.‌ಮಾರುತಿ, ಬೆಂಗಳೂರು