ಕನ್ನಡ ಸುದ್ದಿ  /  Karnataka  /  Bengaluru Crime News: Air Hostess Falls To Death From 4th Floor

Bengaluru Crime News: ಬೆಂಗಳೂರಿನಲ್ಲಿ ಗಗನಸಖಿ ಅನುಮಾನಸ್ಪದ ಸಾವು, ಪ್ರಿಯಕರನ ಮೇಲೆ ಅನುಮಾನ

ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಹಿಮಾಚಲ ಪ್ರದೇಶದ 28 ವರ್ಷದ ಗಗನಸಖಿ ಅರ್ಚನಾ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಆತ್ಮಹತ್ಯೆಯೋ, ಕೊಲೆಯೋ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Bengaluru Crime News: ಬೆಂಗಳೂರಿನಲ್ಲಿ ಗಗನಸಖಿ  ಅನುಮಾನಸ್ಪದ ಸಾವು, ಪ್ರಿಯಕರನ ಮೇಲೆ ಅನುಮಾನ
Bengaluru Crime News: ಬೆಂಗಳೂರಿನಲ್ಲಿ ಗಗನಸಖಿ ಅನುಮಾನಸ್ಪದ ಸಾವು, ಪ್ರಿಯಕರನ ಮೇಲೆ ಅನುಮಾನ

ಬೆಂಗಳೂರು: ಉದ್ಯಾನನಗರಿಯಲ್ಲಿರುವ ಪ್ರಿಯಕರನ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಹಿಮಾಚಲ ಪ್ರದೇಶದ 28 ವರ್ಷದ ಗಗನಸಖಿ ಅರ್ಚನಾ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಆತ್ಮಹತ್ಯೆಯೋ, ಕೊಲೆಯೋ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆದೇಶ್‌ ಎಂಬ ಪ್ರಿಯಕರನನ್ನು ಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ದಈ ಗಗನಸಖಿಯು ತಡರಾತ್ರಿ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ಬಿದ್ದಿದ್ದರು. ಗಗನಸಖಿ ಅರ್ಚನಾ ಅವರು ಸಾಫ್ಟ್ ವೇರ್ ಎಂಜಿನಿಯರ್ ಕೇರಳ ಮೂಲದ ಆದೇಶ್ ಎಂಬಾತನನ್ನು ಪ್ರೀತಿಸುತ್ತಿದ್ದರು.

ಮೊನ್ನೆಯಷ್ಟೇ ಆದೇಶ್‌ನನ್ನು ಭೇಟಿಯಾಗಲು ಬೆಂಗಳೂರಿಗೆ ಆಗಮಿಸಿದ್ದರು. ಆದೇಶ್‌ಗೂ ಅರ್ಚನಾ ಧಿಮಾನ್‌ಗೂ ಡೇಟಿಂಗ್‌ ಆಪ್‌ ಮೂಲಕ ಪರಿಚಯವಾಗಿ ಸ್ನೇಹ ಬೆಳೆದಿತ್ತು. ಇವರು ಆಗಾಗ ಭೇಟಿಯಾಗುತ್ತಿದ್ದರು ಎನ್ನಲಾಗಿದೆ.

ದುಬೈನಲ್ಲಿ ಅರ್ಚನಾ ಗಗನಸಖಿಯಾಗಿ ಉದ್ಯೋಗಿಯಾಗಿದ್ದರು. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಾಣಿಸುತ್ತದೆ. ಆದರೆ, ಆದೇಶ್‌ ಈಕೆಯನ್ನು ಮೇಲಿನಿಂದ ತಳ್ಳಿರುವ ಸಾಧ್ಯತೆಯೂ ಇದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ಸಮಯದಲ್ಲಿ ಆದೇಶ್‌ ಅದೇ ಫ್ಲಾಟ್‌ನಲ್ಲಿದ್ದ. ಆತನೇ ಪೊಲೀಸರಿಗೆ ಕರೆ ಮಾಡಿ ಅರ್ಚನಾ ಮಹಡಿಯಿಂದ ಬಿದ್ದಿರುವ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದ.

ತಡರಾತ್ರಿ ಇಬ್ಬರ ನಡುವೆ ಏನಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಅಪಾರ್ಟ್‌ ಮೆಂಟ್ ಸೇರಿದಂತೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ

ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲ್ಲಾಪುರದ ಎನ್ಸಿಪಿ ನಾಯಕ ಹಸನ್ ಮುಶ್ರಿಫ್ ಮನೆ ಮೇಲೆ ಇ.ಡಿ. ದಾಳಿ

ಮುಂಬೈ: ಜಾರಿ ನಿರ್ದೇಶನಾಲಯ- ಇ.ಡಿ. ಅಧಿಕಾರಿಗಳು ಮತ್ತೊಮ್ಮೆ ಎನ್ಸಿಪಿ ನಾಯಕ ಮಾಜಿ ಮಂತ್ರಿ ಹಸನ್ ಮುಶ್ರಿಫ್ ಅವರ ಕೊಲ್ಹಾಪುರದ ಕಾಗಲ್ ನಲ್ಲಿರುವ ಮನೆಗೆ ದಾಳಿ ನಡೆಸಿದ್ದಾರೆ.

ಕಳೆದ ಒಂದೂವರೆ ತಿಂಗಳಿನಲ್ಲಿ ಎನ್ ಸಿಪಿ ನಾಯಕನ ಮನೆ ಮೇಲೆ ನಡೆಯುತ್ತಿರುವ ಎರಡನೆಯ ದಾಳಿಯಾಗಿದ್ದು ಅದು ರಾಜಕೀಯ ಬಿರುಗಾಳಿಯೆಬ್ಬಿಸಿದೆ. ಎರಡನೆಯ ಬಾರಿ ಇ.ಡಿ.ದಾಳಿಯಿಂದ ಮುಶ್ರಿಫ್’ರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ನಿನ್ನೆ ಬೆಳಗ್ಗೆ ನಾಲ್ಕೈದು ಇಡಿ ಅಧಿಕಾರಿಗಳು ಕಾಗಲ್ನ ಹಸನ್ ಮುಶ್ರಿಫ್ ಅವರ ಮನೆಗೆ ದಾಳಿ ಮಾಡಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. ಮುಂಜಾನೆಯೆ ಬಂದ ಇಡಿ ಅಧಿಕಾರಿಗಳು ಶೋಧ ಕೈಗೊಂಡರು. ಅತಿ ಮುಖ್ಯವಾದ ದಾಖಲೆ ಪತ್ರಗಳನ್ನು ಅವರು ವಶಪಡಿಸಿಕೊಂಡಿದ್ದಾರೆ. ಈ ಆಪರೇಶನ್ ಗೆ ಯಾವುದೇ ಅಡೆ ತಡೆ ಬರಬಾರದು ಎನ್ನುವುದಕ್ಕಾಗಿ ಮನೆಯ ಹೊರಗೆ ಭಾರೀ ಭದ್ರತಾ ಪಡೆಗಳವರನ್ನು ನಿಲ್ಲಿಸಲಾಗಿತ್ತು.

ಬಂಡೆ ಸ್ಫೋಟ: ಮನೆಗಳಿಗೆ ಹಾನಿ

ಬೆಂಗಳೂರು: ಜಿಲೆಟಿನ್ ಕಡ್ಡಿ ಬಳಸಿ ಬಂಡೆಯೊಂದನ್ನು ಸ್ಫೋಟಗೊಳಿಸಿದ ಪರಿಣಾಮ ಮನೆಗಳ ಗೋಡೆಗಳು ಬಿರುಕು ಬಿಟ್ಟಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅನ್ನಪೂರ್ಣೇಶ್ವರಿನಗರದ ಐಎಎಸ್ ಅಧಿಕಾರಿಯೊಬ್ಬರ ಪತ್ನಿಗೆ ಸೇರಿದ ಹೊಸ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಲು, ಮಣ್ಣು ತೆಗೆಯುವಾಗ ಬಂಡೆ ಪತ್ತೆಯಾಗಿದೆ. ಬಂಡೆಯನ್ನು ಸ್ಫೋಟಿಸಲು ಜಿಲೆಟಿನ್ ಕಡ್ಡಿ ಬಳಸಿದ್ದಾರೆ. ಇದರಿಂದ ಅಕ್ಕಪಕ್ಕದ ಮನೆಗಳ ಗೋಡೆಗಳಲ್ಲಿ ಬಿರುಕು ಬಿಟ್ಟಿದೆ. ನಗರದಲ್ಲಿ ಜಿಲೆಟಿನ್ ಕಡ್ಡಿ ನಿಷೇಧಿತ ವಸ್ತುವಾಗಿದ್ದರೂ ಕೂಡ ಬಳಸಲಾಗಿದೆ.

ಈ ಹಿನ್ನೆಲೆ ಸೋಮಶೇಖರ್ ಎಂಬುವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.