ಅನೇಕಲ್‌ನ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಅನಾಹುತ; ಉರುಳಿ ಬಿದ್ದ ರಾಯಸಂದ್ರ ಗ್ರಾಮದ ತೇರು, ಓರ್ವ ಸಾವು, ಹಲವರಿಗೆ ಗಾಯ
ಕನ್ನಡ ಸುದ್ದಿ  /  ಕರ್ನಾಟಕ  /  ಅನೇಕಲ್‌ನ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಅನಾಹುತ; ಉರುಳಿ ಬಿದ್ದ ರಾಯಸಂದ್ರ ಗ್ರಾಮದ ತೇರು, ಓರ್ವ ಸಾವು, ಹಲವರಿಗೆ ಗಾಯ

ಅನೇಕಲ್‌ನ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಅನಾಹುತ; ಉರುಳಿ ಬಿದ್ದ ರಾಯಸಂದ್ರ ಗ್ರಾಮದ ತೇರು, ಓರ್ವ ಸಾವು, ಹಲವರಿಗೆ ಗಾಯ

ಬೆಂಗಳೂರು ಸಮೀಪದ ಆನೇಕಲ್ ತಾಲ್ಲೂಕಿನ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಗೆ ಬರುತ್ತಿದ್ದ ರಾಯಸಂದ್ರ ಗ್ರಾಮದ ತೇರು ಉರುಳಿ ಬಿದ್ದಿದೆ. ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಹಲವರಿಗೆ ಗಂಭೀರ ಗಾಯಗಳಾಗಿವೆ.

ಅನೇಕಲ್‌ನ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಅನಾಹುತ; ಉರುಳಿ ಬಿದ್ದ ರಾಯಸಂದ್ರ ಗ್ರಾಮದ ತೇರು, ಓರ್ವ ಸಾವು
ಅನೇಕಲ್‌ನ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಅನಾಹುತ; ಉರುಳಿ ಬಿದ್ದ ರಾಯಸಂದ್ರ ಗ್ರಾಮದ ತೇರು, ಓರ್ವ ಸಾವು

ಬೆಂಗಳೂರು: ಬೆಂಗಳೂರು ಗ್ರಾಮಾಂತರ ವ್ಯಾಪ್ತಿಗೆ ಬರುವ ಆನೇಕಲ್‌ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಅನಾಹುತವೊಂದು ನಡೆದಿದೆ. ಜಾತ್ರೆಗೆ ಬರುತ್ತಿದ್ದ ರಾಯಸಂದ್ರ ಗ್ರಾಮದ ತೇರು ಉರುಳಿ ಬಿದಿದ್ದೆ. ಈ ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ.

ತೇರು ಬೀಳುತ್ತಿರುವ ದೃಶ್ಯ ಸೆರೆಯಾಗಿದ್ದು, ವಿಡಿಯೊ ವೈರಲ್ ಆಗುತ್ತಿದೆ. ಜಾತ್ರೆಗೆ ತೇರು ಎಳೆದು ತರುವ ವೇಳೆ ಈ ಅವಘಢ ಸಂಭವಿಸಿದೆ. 150 ಅಡಿ ಎತ್ತರದ ತೇರು ಇದಾಗಿದೆ. ತೇರಿನ ಅಡಿಗೆ ಸಿಲುಕಿದೆ ವ್ಯಕ್ತಿಗೆ ಗಂಭೀರ ಗಾಯವಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ವಿವರ

ಅನೇಕಲ್‌ನ ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ವಿವಿಧ ಊರುಗಳಿಂದ ತೇರುಗಳು ಬರುತ್ತವೆ. ಇಂದು ಕೂಡ ತೇರಿನ ಸಂಭ್ರಮ ಕಳೆಗಟ್ಟಿತ್ತು. ಆದರೆ ಸಂಜೆ ವೇಳೆ ಗಾಳಿ, ಮಳೆ ಶುರುವಾಗಿತ್ತು. ಇದರಿಂದಾಗಿ ದೊಡ್ಡ ನಾಗಮಂಗಲ ಮತ್ತು ರಾಯಸಂದ್ರದ ಖುರ್ಚು (ತೇರು) ನೆಲಕ್ಕುರುಳಿದೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.

ಕಳೆದ ವರ್ಷ ಕೂಡ ಇಲ್ಲಿ ತೇರು ಅಥವಾ ಖರ್ಚು ಬಿದ್ದು ಅನಾಹುತ ಉಂಟಾಗಿತ್ತು, ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಇತಿಹಾಸ ಪ್ರಸಿದ್ಧ ಈ ಜಾತ್ರೆಯಲ್ಲಿ ಖುರ್ಜು ಕಟ್ಟೋದೇ ಪ್ರತಿಷ್ಠೆಯ ವಿಷಯವಾಗಿದೆ. ಇಲ್ಲಿ ವಿವಿಧ ಗ್ರಾಮಗಳ ಜನರು ಪೈಪೋಟಿಗೆ ಬಿದ್ದು ಅತಿ ಎತ್ತರದ ತೇರುಗಳನ್ನು ನಿರ್ಮಾಣ ಮಾಡುತ್ತಾರೆ. 150 ರಿಂದ 200 ಅಡಿ ತೇರುಗಳು ಕೂಡ ಇರುತ್ತವೆ. ಹುಸ್ಕೂರು ಜಾತ್ರೆಗೆ ನೆರೆಯ ಆಂಧ್ರಪ್ರದೇಶ ತಮಿಳುನಾಡಿನಿಂದಲೂ ಜನ ಬರುತ್ತಾರೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner