ಕನ್ನಡ ಸುದ್ದಿ  /  Karnataka  /  Bengaluru Crime News Robbers Attack Jewellery Shop In Bengaluru Owner Injured In Shooting Mgb

ಬೆಂಗಳೂರಿನಲ್ಲಿ ಹಾಡಹಗಲೇ ಚಿನ್ನದಂಗಡಿ ಲೂಟಿಗೆ ಯತ್ನ, ಗುಂಡಿನ ದಾಳಿ; ಮಾಲೀಕನ ಸ್ಥಿತಿ ಗಂಭೀರ

Bengaluru crime news: ಬೆಂಗಳೂರಿನ ಕೊಡಿಗೇಹಳ್ಳಿ ಸಮೀಪದ ದೇವಿನಗರದ ಲಕ್ಷ್ಮಿ ಜ್ಯುವೆಲರ್ಸ್ ಚಿನ್ನಾಭರಣ ಮಳಿಗೆಯಲ್ಲಿ ದರೋಡೆ ನಡೆಸಲು ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಮಾಲೀಕ ಮತ್ತು ಓರ್ವ ಕೆಲಸಗಾರ ಗಾಯಗೊಂಡಿದ್ದಾರೆ. (ವರದಿ: ಎಚ್. ಮಾರುತಿ)

ಚಿನ್ನಾಭರಣ ಮಳಿಗೆಯಲ್ಲಿ ದರೋಡೆ ನಡೆಸಲು ಬಂದ ದುಷ್ಕರ್ಮಿಗಳು
ಚಿನ್ನಾಭರಣ ಮಳಿಗೆಯಲ್ಲಿ ದರೋಡೆ ನಡೆಸಲು ಬಂದ ದುಷ್ಕರ್ಮಿಗಳು

ಬೆಂಗಳೂರು: ಚಿನ್ನದ ಮಳಿಗೆಯೊಂದರ ಮಾಲೀಕನ ಮೇಲೆ ಹಾಡಹಗಲೇ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿ ಸಮೀಪದ ದೇವಿನಗರದಲ್ಲಿ ನಡೆದಿದೆ. ದೇವಿನಗರದ ಲಕ್ಷ್ಮಿ ಜ್ಯುವೆಲರ್ಸ್ ಚಿನ್ನಾಭರಣ ಮಳಿಗೆಯಲ್ಲಿ ದರೋಡೆ ನಡೆಸಲು ಎರಡು ಬೈಕ್‍ಗಳಲ್ಲಿ ನಾಲ್ಕು ಮಂದಿ ಆಗಮಿಸಿದ್ದರು. ಇವರಲ್ಲಿ ಇಬ್ಬರು ಅಂಗಡಿಗೆ ನುಗ್ಗಿ ಹಣ ಮತ್ತು ಚಿನ್ನಕ್ಕೆ ಬೇಡಿಕೆ ಇಟ್ಟಿದ್ದಾರೆ. ಮಾಲೀಕ ಕೊಡಲು ನಿರಾಕರಿಸಿದಾಗ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.

ಅಂಗಡಿ ಮಾಲೀಕ ಅಪ್ಪುರಾಮ್ ಮತ್ತು ಮತ್ತೊಬ್ಬ ನೌಕರರ ಮೇಲೆ ಮೂರು ಸುತ್ತಿನ ಗುಂಡು ಹಾರಿಸಿದ್ದಾರೆ. ಅಪ್ಪುರಾಮ್ ಅವರ ಹೊಟ್ಟೆಗೆ ಗುಂಡು ತಗುಲಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಅಂತರಾಮ್ ಎಂಬವರ ಕಾಲಿಗೆ ಗುಂಡು ತಗುಲಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದುಷ್ಕರ್ಮಿಗಳು. ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಅಂಗಡಿ ಹೊರಗಿಂದ ಒಬ್ಬ ಹಾಗೂ ಅಂಗಡಿ ಒಳಗೆ ಓರ್ವ ಗುಂಡು ಹಾರಿಸಿದ್ದಾನೆ ಎಂದು ತಿಳಿದು ಬಂದಿದೆ.

ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮಾತನಾಡಿದ ಅವರು, ಬೆಳಗ್ಗೆ 11 ಗಂಟೆ ವೇಳೆಗೆ ನಾಲ್ವರು ಆರೋಪಿಗಳು ಚಿನ್ನದ ಅಂಗಡಿಗೆ ಭೇಟಿ ನೀಡಿದ್ದಾರೆ. ಅವರು ಮುಖ ಮುಚ್ಚಿಕೊಂಡು ಬಂದಿರುವುದನ್ನು ನೋಡಿದರೆ ದೋಚಲು ಬಂದವರೆಂದೆ ಕಾಣಿಸುತ್ತದೆ. ಇಬ್ಬರ ಮೇಲೆ ಫೈರಿಂಗ್ ಮಾಡಿದ್ದಾರೆ. ಸದ್ಯ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಅಂಗಡಿಯಲ್ಲಿ ಕಳವು ನಡೆದಿಲ್ಲ.

ಗುಂಡು ಹಾರಿಸಿದ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಒಂದು ಪಿಸ್ತೂಲನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಪೊಲೀಸರು ಅಂಗಡಿ ಮತ್ತು ಆ ರಸ್ತೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇಬ್ಬರ ಮುಖ ಕಾಣಿಸುತ್ತಿದೆ.

ವರದಿ: ಎಚ್. ಮಾರುತಿ

ಬೆಂಗಳೂರು ನೀರಿನ ಸಮಸ್ಯೆ; ಶೌಚಕ್ಕೂ ನೀರಿಲ್ಲ ಎನ್ನುತ್ತ ಉದ್ಯೋಗವನ್ನು ಬಿಟ್ಟು ದೆಹಲಿಗೆ ಹೊರಟ ಟೆಕ್ಕಿ

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಕಾರಣ ಜನಜೀವನ ಸಂಕಷ್ಟಕ್ಕೆ ಒಳಗಾಗಿದ್ದು, ನಿತ್ಯವೂ ಒಬ್ಬೊಬ್ಬರ ಜೀವನಾನುಭವದ ಚಿತ್ರಣ ಬಹಿರಂಗವಾಗುತ್ತಿದೆ. ಬೃಹತ್ ಅಪಾರ್ಟ್‌ಮೆಂಟ್ ಸಂಕೀರ್ಣಗಳು, ಐಷಾರಾಮಿ ಅಪಾರ್ಟ್‌ಮೆಂಟ್‌ಗಳು ನೀರಿನ ಬಳಕೆಗೆ ನಿರ್ಬಂಧ ಹೇರಿದ್ದು ಇದು ಜನರನ್ನು ಇನ್ನಷ್ಟು ಹೈರಾಣಾಗುವಂತೆ ಮಾಡಿದೆ. ಶೌಚಕ್ಕೂ ನೀರಿಲ್ಲ ಎನ್ನುತ್ತ ಉದ್ಯೋಗವನ್ನು ಬಿಟ್ಟು ಟೆಕ್ಕಿಯೊಬ್ಬ ದೆಹಲಿಗೆ ಹೊರಟಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ

IPL_Entry_Point