ಮಹಿಳೆಯನ್ನು ಕೊಂದು 30 ಪೀಸ್ ಮಾಡಿ ಫ್ರಿಡ್ಜ್​​ನಲ್ಲಿಟ್ಟದ ಭೂಪ; ಭೀಕರ ಕೃತ್ಯ ಬೆಳಕಿಗೆ ಬಂದಿದ್ದೇ ರೋಚಕ-bengaluru crime news woman murdered and body cut into 30 pieces found stacked in fridge in vyalikaval house prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮಹಿಳೆಯನ್ನು ಕೊಂದು 30 ಪೀಸ್ ಮಾಡಿ ಫ್ರಿಡ್ಜ್​​ನಲ್ಲಿಟ್ಟದ ಭೂಪ; ಭೀಕರ ಕೃತ್ಯ ಬೆಳಕಿಗೆ ಬಂದಿದ್ದೇ ರೋಚಕ

ಮಹಿಳೆಯನ್ನು ಕೊಂದು 30 ಪೀಸ್ ಮಾಡಿ ಫ್ರಿಡ್ಜ್​​ನಲ್ಲಿಟ್ಟದ ಭೂಪ; ಭೀಕರ ಕೃತ್ಯ ಬೆಳಕಿಗೆ ಬಂದಿದ್ದೇ ರೋಚಕ

Murder in Bengaluru: ಮಹಿಳೆಯನ್ನು ಕೊಂದು ಮೃತದೇಹವನ್ನು 30 ಪೀಸ್ ಮಾಡಿ ಫ್ರಿಜ್ಡ್​​ನಲ್ಲಿಟ್ಟ ಘಟನೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ನಡೆದಿದೆ. ಆರೋಪಿ ವಾಸನೆ ಬರದಂತೆ ರಾಸಾಯನಿಕ ಸಿಂಪಡಿಸಿದ್ದ.

ಕೊಲೆ ನಡೆದ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ ಕ್ಷಣ.
ಕೊಲೆ ನಡೆದ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ ಕ್ಷಣ.

ಬೆಂಗಳೂರು: ಮಹಿಳೆಯೊಬ್ಬರರನ್ನು ಭೀಕರವಾಗಿ ಕೊಂದು ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮಾಂಸದ ತುಂಡುಗಳನ್ನು ಫ್ರಿಡ್ಜ್​ನಲ್ಲಿ ಇಟ್ಟು ವಾಸನೆ ಬರದಂತೆ ರಾಸಾಯನಿಕ ಸಿಂಪಡಿಸಿದ್ದ ಘಟನೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮಹಾಲಕ್ಷ್ಮೀ (29) ಬರ್ಬರವಾಗಿ ಹತ್ಯೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಆದರೆ ಆಕೆಯನ್ನು ಕೊಲೆ ಮಾಡಿರುವುದು ಯಾರೆಂದು ತಿಳಿದುಬಂದಿಲ್ಲ.

ಈಕೆಯ ಪತಿ ಹೇಮಂತ್ ದಾಸ್ ನೆಲಮಂಗಲದಲ್ಲಿ ವಾಸವಾಗಿದ್ದರು. ಇವರು ನೇಪಾಳ ಮೂಲದವರು. ಮಹಾಲಕ್ಷ್ಮಿ ಕೂಡ ನೇಪಾಳದವರು. ಆದರೆ ಅವರ ತಂದೆ ನೆಲಮಂಗಲದಲ್ಲಿ 35 ವರ್ಷಗಳಿಂದ ನೆಲೆಸಿದ್ದಾರೆ. ಈಕೆ ಹೇಮಂತ್ ದಾಸ್​ರನ್ನು ಮದುವೆಯಾಗಿದ್ದರು. ಆದರೆ ಈಕೆ ವೈಯಕ್ತಿಕ ಕಾರಣಕ್ಕಾಗಿ ಗಂಡ ಹಾಗೂ ಮಗುವನ್ನು ತೊರೆದು ವೈಯಾಲಿಕಾವಲ್ ಠಾಣಾ ವ್ಯಾಪ್ತಿಯ ಮುನೇಶ್ವರ ನಗರದಲ್ಲಿ ಕಳೆದ 5 ತಿಂಗಳಿಂದ ವಾಸವಾಗಿದ್ದಳು. ಮೃತ ಮಹಿಳೆ ಫ್ಯಾಷನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು.

ಪತ್ನಿ ಇದ್ದ ಮನೆಯಲ್ಲಿ ದುರ್ವಾಸನೆ ಬರುತ್ತಿರುವುದಾಗಿ ಮನೆಯ ಮಾಲೀಕ ಗಂಡನಿಗೆ ಕಾಲ್ ಮಾಡಿ ಹೇಳಿದ್ದರಂತೆ. ಈ ಹಿಂದೆ ಪತ್ನಿಯನ್ನು ಸಂಪರ್ಕಿಸಿದರೂ ಮೊಬೈಲ್ ಸ್ವಿಚ್ ಆಫ್ ಬರುತ್ತಿತ್ತು. ಮನೆ ಮಾಲೀಕರು ಕಾಲ್ ಮಾಡಿದ್ದಕ್ಕೆ ಮಹಿಳೆ ತಾಯಿ ಹಾಗೂ ಗಂಡ ಮತ್ತು ಕುಟುಂಬಸ್ಥರು ಮನೆ ಬಳಿ ಬಂದಿದ್ದಾರೆ. ಬೀಗ ಹೊಡೆದು ಒಳಹೋಗುತ್ತಿದ್ದಂತೆ ಶವದ ದುರ್ವಾಸನೆ ಮೂಗಿಗೆ ಅಪ್ಪಳಿಸಿತ್ತು.

ಬ್ರಿಡ್ಜ್ ಓಪನ್ ಮಾಡುತ್ತಿದ್ದಂತೆ ಮಹಿಳೆಯ ಶವವನ್ನು ಸುಮಾರು 30 ಹೆಚ್ಚು ತುಂಡುಗಳಾಗಿ ಕತ್ತರಿಸುವುದನ್ನು ಕಂಡು ಗಾಬರಿಯಾಗಿದ್ದಾರೆ. ಅಲ್ಲದೆ, ವಾಸನೆಯೂ ತಾಳಲಾರದೆ ಮನೆಯಿಂದ ಹೊರ ಬಂದ ಅವರು, ನೆರೆಹೊರೆಯವರಿಗೆ ವಿಷಯ ತಿಳಿಸಿ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಎಫ್ಎಸ್ಎಲ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆದರೆ ಗಂಡನು ನಾಲ್ವರ

ಪ್ರಕರಣ ಹೊರ ಬಂದಿದ್ದು ಹೇಗೆ..?

ಕಳೆದ 10 ದಿನಗಳ ಹಿಂದೆಯೇ ಕೊಲೆ ಮಾಡಿರುವ ಸಾಧ್ಯತೆ ಇದೆ. ಆರೋಪಿ ಕೊಲೆ ಮಾಡಿ ಮೃತದೇಹವನ್ನು ಸುಮಾರು 30 ಪೀಸ್ ಮಾಡಿ ಫ್ರಿಡ್ಜ್​​​ನಲ್ಲಿ ಇಟ್ಟು ನಂತರ ಮನೆಯನ್ನು ಲಾಕ್ ಮಾಡಿ ಹೋಗಿದ್ದಾನೆ. ದುರ್ವಾಸನೆ ಬರದ ರೀತಿ ಒಂದಷ್ಟು ಕೆಮಿಕಲ್ ಹಾಕಿ ಪರಾರಿಯಾಗಿದ್ದಾನೆ. ಕೊಲೆಯಾದ ಮಹಿಳೆಯು ಮೊಬೈಲ್ ಸೆ​ 2ರಂದು ಸ್ವಿಚ್ ಆಫ್ ಆಗಿದ್ದು, ಅಂದೇ ಹತ್ಯೆಯಾಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಳೆದ 2 ದಿನಗಳಿಂದ ಮನೆಯಿಂದ ವಾಸನೆ ಬರ್ತಿತ್ತು. ಹೀಗಾಗಿ ಅದೇ ಬಿಲ್ಡಿಂಗ್​ನ ಅಕ್ಕಪಕ್ಕದವರು ಮನೆ ಮಾಲೀಕರಿಗೆ ತಿಳಿಸಿದ್ದರು. ಬಳಿಕ ಮನೆ ಮಾಲೀಕರು ಗಂಡನಿಗೆ ವಿಷಯ ಮುಟ್ಟಿಸಿದ್ದರು. ಮನೆ ಬೀಗ ತೆಗೆದ ಸಂದರ್ಭದಲ್ಲಿ ಶವದಿಂದ ಹುಳಗಳ ಹೊರಗೆ ಬರುತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

mysore-dasara_Entry_Point