ಎಲೆಕ್ಟ್ರಾನಿಕ್ ಸಿಟಿಯ ಅಪಾರ್ಟ್‌ಮೆಂಟ್ ಕಾರಿಡಾರ್‌ನಲ್ಲಿ ಶೂ ರಾಕ್ ಇರಿಸಿದ ಬೆಂಗಳೂರು ನಿವಾಸಿ: 15,000 ದಂಡ
ಕನ್ನಡ ಸುದ್ದಿ  /  ಕರ್ನಾಟಕ  /  ಎಲೆಕ್ಟ್ರಾನಿಕ್ ಸಿಟಿಯ ಅಪಾರ್ಟ್‌ಮೆಂಟ್ ಕಾರಿಡಾರ್‌ನಲ್ಲಿ ಶೂ ರಾಕ್ ಇರಿಸಿದ ಬೆಂಗಳೂರು ನಿವಾಸಿ: 15,000 ದಂಡ

ಎಲೆಕ್ಟ್ರಾನಿಕ್ ಸಿಟಿಯ ಅಪಾರ್ಟ್‌ಮೆಂಟ್ ಕಾರಿಡಾರ್‌ನಲ್ಲಿ ಶೂ ರಾಕ್ ಇರಿಸಿದ ಬೆಂಗಳೂರು ನಿವಾಸಿ: 15,000 ದಂಡ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಅಪಾರ್ಟ್‌ಮೆಂಟ್ ಕಾರಿಡಾರ್‌ನಲ್ಲಿ ಇರಿಸಿದ್ದ ಶೂ ರಾಕ್ ತೆಗೆಯಲು ನಿರಾಕರಿಸಿದ ವ್ಯಕ್ತಿಗೆ 15,000 ದಂಡ ವಿಧಿಸಲಾಗಿದೆ.

ಅಪಾರ್ಟ್‌ಮೆಂಟ್ ಕಾರಿಡಾರ್‌ನಲ್ಲಿ ಶೂ ರಾಕ್ ಇರಿಸಿದ ಬೆಂಗಳೂರು ನಿವಾಸಿ
ಅಪಾರ್ಟ್‌ಮೆಂಟ್ ಕಾರಿಡಾರ್‌ನಲ್ಲಿ ಶೂ ರಾಕ್ ಇರಿಸಿದ ಬೆಂಗಳೂರು ನಿವಾಸಿ

ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿಯ ಪ್ರೆಸ್ಟೀಜ್ ಸನ್‌ರೈಸ್ ಪಾರ್ಕ್ ನಿವಾಸಿಯೊಬ್ಬರು ತಮ್ಮ ಅಪಾರ್ಟ್‌ಮೆಂಟ್ ಹೊರಗೆ ಇರಿಸಿದ್ದ ಶೂ ರಾಕ್ ಅನ್ನು ತೆಗೆದುಹಾಕಲು ನಿರಾಕರಿಸಿದ್ದಕ್ಕಾಗಿ 15,000 ರೂ.ಗಿಂತ ಹೆಚ್ಚಿನ ದಂಡವನ್ನು ಪಾವತಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನಲ್ಲಿ ನಾರ್‌ವುಡ್ ಬ್ಲಾಕ್‌ನಲ್ಲಿರುವ ನಿವಾಸಿಗಳು ಎಲ್ಲರೂ ತಮ್ಮ ಎಲ್ಲ ವೈಯಕ್ತಿಕ ವಸ್ತುಗಳು, ಶೂ ರಾಕ್, ಹೂಕುಂಡ, ಪಾಟ್ ಸಸ್ಯಗಳು ಮತ್ತು ಸ್ಟೋರೇಜ್ ಯುನಿಟ್‌ಗಳನ್ನು ಅಪಾರ್ಟ್‌ಮೆಂಟ್‌ನ ಕಾಮನ್ ಪ್ಲೇಸ್‌ನಿಂದ ತೆಗೆದುಹಾಕುವಂತೆ ಸೂಚಿಸಿತ್ತು.

ನಿವಾಸಿಗಳ ಸುರಕ್ಷತೆ ಸಲುವಾಗಿ ಕಾರಿಡಾರ್ ಸುರಕ್ಷತೆಯನ್ನು ಸುಧಾರಿಸುವ ಮತ್ತು ಅಗ್ನಿ ಸುರಕ್ಷತಾ ನಿಯಮಗಳನ್ನು ಅನುಸರಿಸುವ ಸಲುವಾಗಿ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಸೂಚನೆ ನೀಡಲಾಗಿತ್ತು. ಸುರಕ್ಷತಾ ನಿಯಮಗಳ ಅನುಸಾರ ಎತ್ತರದ ಕಟ್ಟಡಗಳಲ್ಲಿ ನಿರ್ಗಮನ ಮಾರ್ಗಗಳನ್ನು ಅಡೆತಡೆಗಳಿಂದ ಮುಕ್ತವಾಗಿ ಇರಿಸಬೇಕು ಎನ್ನುವ ಕ್ರಮದ ಸಲುವಾಗಿ ಈ ಸೂಚನೆ ನೀಡಲಾಗಿತ್ತು. ವಸ್ತುಗಳನ್ನು ತೆರವುಗೊಳಿಸಲು ಎರಡು ತಿಂಗಳ ಅವಧಿ ನೀಡಿದ್ದು, ಹಲವಾರು ಸುತ್ತಿನ ಸೂಚನೆ ನಂತರ, ಬಹುತೇಕ ಎಲ್ಲಾ 1,046 ಅಪಾರ್ಟ್‌ಮೆಂಟ್‌ಗಳ ಮಾಲೀಕರು ನಿಯಮವನ್ನು ಅನುಸರಿಸಿದ್ದರು. ನೋಟಿಸ್ ನೀಡಿದ ಬಳಿಕವೂ ಅಪಾರ್ಟ್‌ಮೆಂಟ್ ವಾಸಿಗಳಿಗೆ ಸುರಕ್ಷತೆಯ ಪ್ರಾಮುಖ್ಯತೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ವಿವರಿಸಲಾಗಿತ್ತು.

ಅಪಾರ್ಟ್‌ಮೆಂಟ್‌ನ ಈ ನಿಯಮಕ್ಕೆ ಆರಂಭದಲ್ಲಿ ಕೇವಲ ಎರಡು ಕುಟುಂಬಗಳು ಮಾತ್ರ ಪ್ರತಿರೋಧ ವ್ಯಕ್ತಪಡಿಸಿದ್ದರು. ಒಬ್ಬರು ಅಂತಿಮವಾಗಿ ತಮ್ಮ ವಸ್ತುಗಳನ್ನು ತೆಗೆದುಹಾಕಿದರೆ, ಮತ್ತೊಬ್ಬರು ಕಾಮನ್ ಪ್ಲೇಸ್‌ನಲ್ಲಿಯೇ ಶೂ ರಾಕ್ ಇರಿಸುವುದನ್ನು ಮುಂದುವರಿಸಿದ್ದರು.

ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘದ ಅಧ್ಯಕ್ಷ ಅರುಣ್ ಪ್ರಸಾದ್ ಅವರ ಪ್ರಕಾರ, ನಿವಾಸಿಯು ಕಾರಿಡರ್‌ನಲ್ಲಿ ಶೂ ರಾಕ್ ಅನ್ನು ಇಡುವುದನ್ನು ಮುಂದುವರಿಸಿದ್ದು, ಅದಕ್ಕಾಗಿ 15,000 ರೂ.ಗಳ ಮುಂಗಡ ದಂಡವನ್ನು ಸಹ ಪಾವತಿಸಿದ್ದಾರೆ. ಅಪಾರ್ಟ್‌ಮೆಂಟ್ ಸಂಘವು ಪ್ರಸ್ತುತ ಅಂತಹ ಉಲ್ಲಂಘನೆಗಳಿಗೆ ಪ್ರತಿದಿನ 100 ರೂ.ಗಳ ದಂಡವನ್ನು ವಿಧಿಸುತ್ತಿದ್ದು, ಮುಂದಿನ ಹಂತದಲ್ಲಿ ಈ ಪ್ರಕರಣವನ್ನು ಪರಿಹರಿಸಲು ಅದನ್ನು ನಿರ್ದಿಷ್ಟವಾಗಿ 200 ರೂ.ಗೆ ದ್ವಿಗುಣಗೊಳಿಸಲು ನಿರ್ಧರಿಸಿದೆ.

ಬಹುತೇಕ ಎಲ್ಲ ಅಪಾರ್ಟ್‌ಮೆಂಟ್‌ಗಳಲ್ಲಿ ಕೂಡ ಕಾಮನ್ ಪ್ಲೇಸ್ ಮತ್ತು ನಿವಾಸಿಗಳ ಸಂಘದ ಸೂಚನೆ ಅನುಸಾರ ಅಲ್ಲಿನ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಜತೆಗೆ ತಮಗೆ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ತಮ್ಮ ವಸ್ತುಗಳನ್ನು ಇರಿಸಲು ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲದೆ, ಭದ್ರತಾ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸಲು ಕಾಲಕಾಲಕ್ಕೆ ಸೂಚನೆ ನೀಡಲಾಗುತ್ತದೆ.

ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in