ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್ ಮೇ 22ಕ್ಕೆ ಬೆಳಿಗ್ಗೆ 9.30ಕ್ಕೆ, ಕುಂದುಕೊರತೆ ಬಗೆಹರಿಸಲು ಕ್ರಮ
ಬೆಂಗಳೂರು ಜಲ ಮಂಡಳಿಯ ನೀರಿನ ಅದಾಲತ್ ಗುರುವಾರ (ಮೇ 22) ಬೆಳಿಗ್ಗೆ ನಡೆಯಲಿದೆ. ವಿಶೇಷವಾಗಿ ಆಗ್ನೇಯ -3, ಆಗ್ನೇಯ 6, ಪಶ್ಚಿಮ 1-3, ವಾಯವ್ಯ -5, ಉತ್ತರ 2-3, ದಕ್ಷಿಣ 1-3, ನೈಋತ್ಯ – 3, ನೈಋತ್ಯ -6, ಮತ್ತು ಪೂರ್ವ 2-4 ಉಪವಿಭಾಗಗಳಲ್ಲಿ ನೀರಿನ ಅದಾಲತ್ ನಡೆಯಲಿದೆ.

ಜಲಮಂಡಳಿ ನೀರಿನ ಅದಾಲತ್: ಬೆಂಗಳೂರು ಜಲಮಂಡಳಿಯ ವಿವಿಧ ಉಪವಿಭಾಗಗಳಲ್ಲಿ ಗುರುವಾರ (ಮೇ 22) ಬೆಳಿಗ್ಗೆ 9.30ರಿಂದ 11 ಗಂಟೆ ತನಕ ನೀರಿನ ಅದಾಲತ್ ನಡೆಯಲಿದೆ ಎಂದು ಮಂಡಳಿ ಪ್ರಕಟಣೆ ತಿಳಿಸಿದೆ. ಇದರಂತೆ, ಬೆಂಗಳೂರು ಜಲ ಮಂಡಳಿಯ ಆಗ್ನೇಯ -3, ಆಗ್ನೇಯ 6, ಪಶ್ಚಿಮ 1-3, ವಾಯವ್ಯ -5, ಉತ್ತರ 2-3, ದಕ್ಷಿಣ 1-3, ನೈಋುತ್ಯ – 3, ನೈಋತ್ಯ -6, ಮತ್ತು ಪೂರ್ವ 2-4, ಉಪವಿಭಾಗಗಳಲ್ಲಿ ನೀರಿನ ಅದಾಲತ್ ನಡೆಯಲಿದೆ.
ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಮೇ 22 ರಂದು ಬೆಳಿಗ್ಗೆ 9.30 ಗಂಟೆಯಿಂದ 11 ಗಂಟೆಯವರೆಗೆ ನೀರಿನ ಅದಾಲತ್‍ನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಜಲ ಮಂಡಳಿ ಪ್ರಕಟಣೆ ತಿಳಿಸಿದೆ.
ಬೆಂಗಳೂರು ಜಲ ಮಂಡಳಿ ನೀರಿನ ಅದಾಲತ್ ಎಲ್ಲೆಲ್ಲಿ
ಅದಾಲತ್ ಸೇವಾ ಠಾಣೆಗಳಾದ ಅರಳೂರು, ದೊಡ್ಡ ಕಣ್ಣನಹಳ್ಳಿ, ಕಸವನಹಳ್ಳಿ, ಬಿ.ಟಿ.ಎಂ ಲೇಔಟ್, 1,2 ಮತ್ತು 3, ವೆಸ್ಟ್ ಆಫ್ ಕಾರ್ಡ್ ರಸ್ತೆ, 1 ಮತ್ತು 2, ಕಾಮಾಕ್ಷಿಪಾಳ್ಯ, ಕಮಲಾನಗರ, ಮಹಾಲಕ್ಷ್ಮೀ ಲೇಔಟ್, ಅಗ್ರಹಾರ ದಾಸರಹಳ್ಳಿ, ಶೆಟ್ಟಿಹಳ್ಳಿ, ಅಬ್ಬಿಗೆರೆ, ಚಿಕ್ಕಸಂದ್ರ, ಸಿಡೇದಹಳ್ಳಿ, ದೊಡ್ಡಬಿದರಕಲ್ಲು, ಜಿ.ಕೆ.ವಿ.ಕೆ, ಮಾನ್ಯತಾ ಟೆಕ್‍ಪಾರ್ಕ್, ಅಂಜನಾಪುರ, ಬ್ಯಾಂಕ್ ಆಫೀಸರ್ಸ್ ಲೇಔಟ್, ಗೊಟ್ಟಿಗೆರೆ, ಎಂ.ಎನ್, ಪಾರ್ಕ್, ಬಿ.ಟಿ.ಆರ್, ಮೌಂಟ್‍ಜಾಯ್, ನಾಗೇಂದ್ರ ಬ್ಲಾಕ್, ಗಿರಿನಗರ, ಅಂಗಧೀರನಹಳ್ಳಿ, ಹೆಮ್ಮಿಗೆಪುರ, ಬನಶಂಕರಿ 6ನೇ ಹಂತ, ಕೆ.ಆರ್. ಪುರಂ, ಬಸವನಪುರ, ದೇವಸಂದ್ರ, ರಾಮಮೂರ್ತಿ ನಗರ, ವಿಜಿನಾಪುರ, ದೂರವಾಣಿನಗರ ಇಲ್ಲಿ ನೀರಿನ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.
ಸಾರ್ವಜನಿಕರು ಕುಂದು ಕೊರತೆಗಳಿಗೆ ಸಂಬಂಧಿಸಿ ಮಂಡಳಿಯ 24/7 ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ 1916ಗೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದು. ಹಾಗೂ ವಾಟ್ಸ್‌ಆಪ್ ಸಂಖ್ಯೆ 8762228888 ಸಂದೇಶದ ಮೂಲಕ ದೂರನ್ನು ಸಲ್ಲಿಸಬಹುದಾಗಿದೆ ಎಂದು ಬೆಂಗಳೂರು ಜಲ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.