ಬೆಂಗಳೂರಿನಲ್ಲಿ ಜಡ್ಜ್‌ ಮೊಬೈಲ್‌ ಅನ್ನೇ ಎಗರಿಸಿದ ಕಳ್ಳರು, ನಡೆದು ಹೋಗುತ್ತಿದ್ದಾಗ ಸ್ಮಾರ್ಟ್‌ ಫೋನ್‌ ಕಿತ್ತು ಪರಾರಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಜಡ್ಜ್‌ ಮೊಬೈಲ್‌ ಅನ್ನೇ ಎಗರಿಸಿದ ಕಳ್ಳರು, ನಡೆದು ಹೋಗುತ್ತಿದ್ದಾಗ ಸ್ಮಾರ್ಟ್‌ ಫೋನ್‌ ಕಿತ್ತು ಪರಾರಿ

ಬೆಂಗಳೂರಿನಲ್ಲಿ ಜಡ್ಜ್‌ ಮೊಬೈಲ್‌ ಅನ್ನೇ ಎಗರಿಸಿದ ಕಳ್ಳರು, ನಡೆದು ಹೋಗುತ್ತಿದ್ದಾಗ ಸ್ಮಾರ್ಟ್‌ ಫೋನ್‌ ಕಿತ್ತು ಪರಾರಿ

ಬೆಂಗಳೂರಿನ ಜನ ನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನ್ಯಾಯಾಧೀಶರನ್ನು ಮಾತನಾಡಿಸುವ ನಾಟಕವಾಡಿ ಮೊಬೈಲ್‌ ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ನ್ಯಾಯಾಧೀಶರೊಬ್ಬರ ಮೊಬೈಲ್‌ ಕಳ್ಳತನ ಮಾಡಲಾಗಿದೆ.
ಬೆಂಗಳೂರಿನಲ್ಲಿ ನ್ಯಾಯಾಧೀಶರೊಬ್ಬರ ಮೊಬೈಲ್‌ ಕಳ್ಳತನ ಮಾಡಲಾಗಿದೆ.

ಬೆಂಗಳೂರು: ಬೆಂಗಳೂರಿನ ಜನನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬೆಂಗಳೂರು ನ್ಯಾಯಾಧೀಶರೊಬ್ಬರ ಭಾರೀ ಬೆಲೆ ಬಾಳುವ ಸ್ಮಾರ್ಟ್‌ ಮೊಬೈಲ್ ಫೋನ್ ಅನ್ನು ಇಬ್ಬರು ಬೈಕ್ ಸವಾರರು ಕಸಿದುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಶಂಕಿತರು ನ್ಯಾಯಾಧೀಶರ ಬಳಿ ಮಾಹಿತಿ ಕೇಳುವ ನೆಪದಲ್ಲಿ ಬೈಕ್‌ ನಲ್ಲಿ ಬಂದು ಭಾರೀ ಬೆಲೆ ಬಾಳುವ ಸ್ಮಾರ್ಟ್‌ ಫೋನ್ ಕಿತ್ತುಕೊಂಡು ಇಬ್ಬರು ಪರಾರಿಯಾಗಿರುವುದಾಗಿ ದೂರು ದಾಖಲಾಗಿದೆ. ನ್ಯಾಯಾಧೀಶರು ನೀಡಿದ ದೂರು ಆಧರಿಸಿ ಬೆಂಗಳೂರಿನ ಪೊಲೀಸರು ಈಗಾಗಲೇ ಸಿಸಿಟಿವಿ ಫೂಟೇಜ್‌ ಗಳನ್ನು ತೆಗೆದು ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ. ಅವರು ಬಳಸಿದ್ದ ವಾಹನವನ್ನು ಆಧರಿಸಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆಗಿದ್ದಾದರೂ ಏನು

ಬೆಂಗಳೂರಿನ ಸಿವಿಲ್‌ ನ್ಯಾಯಾಧೀಶರಾದ ಮಹಂತೇಶ್ ಮಠ್ (30) ಕ್ರಸೆಂಟ್‌ ರಸ್ತೆಯಲ್ಲಿ ವೈಯಕ್ತಿಕ ಕೆಲಸಕ್ಕೆಂದು ನಡೆದು ಹೊರಟಿದ್ದರು. ಅವರನ್ನೇ ಹೋಂಡಾ ಆಕ್ಟಿವಾದಲ್ಲಿ ಇಬ್ಬರು ಆಗುಂತುಕರು ಹಿಂಬಾಲಿಸುತ್ತಿದ್ದರು. ಇದನ್ನು ನ್ಯಾಯಾಧೀಶರು ಗಮನಿಸಿರಲಿಲ್ಲ. ಆದರೆ ಅವರು ರಸ್ತೆಯನ್ನು ದಾಟುವ ವೇಳೆ ಮಾಹಿತಿ ಕೇಳಲು ಮುಂದಾದರು. ಅವರು ವಿವರಣೆ ನೀಡಲು ಮುಂದಾಗುತ್ತಿದ್ದ ವೇಳೆ ಒಬ್ಬಾತ ಅವರ ಕೈಯಲ್ಲಿದ್ದ ಸ್ಮಾರ್ಟ್‌ ಫೋನ್‌ ಅನ್ನು ಕಿತ್ತುಕೊಂಡಿದ್ದಾನೆ. ಮುಂದೆ ಕುಳಿತವನು ವೇಗದಲ್ಲಿಯೇ ಸ್ಕೂಟರ್‌ ಓಡಿಸಿಕೊಂಡು ಪರಾರಿಯಾಗಿದ್ದಾನೆ. ನ್ಯಾಯಾಧೀಶ ಮಹಂತೇಶ್ ಮಠ್ ಅವರು ಕ್ಷಣ ಮಾತ್ರದಲ್ಲೇ ತಮ್ಮ ಮೊಬೈಲ್‌ ಅನ್ನು ಕಳೆದುಕೊಂಡಿದ್ದಾರೆ. ಈ ವೇಳೆ ಅವರು ಕೂಗಿಕೊಂಡರೂ ಸ್ಕೂಟರ್‌ನಲ್ಲಿದ್ದವರು ಅಲ್ಲಿಂದ ಪರಾರಿಯಾಗಿದ್ದರು.

ನ್ಯಾಯಾಧೀಶರು ಕೂಡಲೇ ಹೈಗ್ರೌಂಡ್ಸ್ ಪೊಲೀಸರಿಗೆ ಮಾಹಿತಿ ನೀಡಿದರು. ಹೈಗ್ರೌಂಡ್ಸ್ ಪೊಲೀಸರು ಸ್ಥಳಕ್ಕೆ ಧಾವಿಸಿ ಸುತ್ತಮುತ್ತಲೂ ಹುಡುಕಾಟ ನಡೆಸಿದರು. ನಾಕಾಬಂದಿ ಹಾಕಿ ಆರೋಪಿಗಳ ಪತ್ತೆಗೆ ಕ್ರಮ ವಹಿಸಿದರೂ ಅವರು ಗಲ್ಲಿಗಳ ಮೂಲಕ ಪರಾರಿಯಾಗಿದ್ದರು. ಈ ಕುರಿತು ಸುತ್ತಮುತ್ತಲಿನ ಪೊಲೀಸ್‌ ಠಾಣೆಗಳಿಗೂ ಮಾಹಿತಿ ನೀಡಲಾಯಿತು.

ನ್ಯಾಯಾಧೀಶರು ನೀಡಿರುವ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಲಾಗಿದೆ. ಸಿಸಿಟಿವಿ ಫೂಟೇಜ್‌ ಆಧರಿಸಿಯೇ ಆರೋಪಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ಧಾರೆ. ಹೈಗ್ರೌಂಡ್ಸ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಬೆಂಗಳೂರು ಪೊಲೀಸರು ಇತ್ತೀಚೆಗೆ ಅಂತರರಾಜ್ಯ ಮೊಬೈಲ್ ದರೋಡೆ ಗ್ಯಾಂಗ್ ಅನ್ನು ಭೇದಿಸಿದ್ದಾರೆ. 15 ಕ್ಕೂ ಹೆಚ್ಚು ಜನರು ಗ್ಯಾಂಗ್‌ನವರು ಇಂತಹದ್ದೇ ಕೃತ್ಯದಲ್ಲಿ ಭಾಗವಾಗಿದ್ದಾರೆ ಎಂದು ಹೇಳಲಾಗಿದ್ದು, ಹೆಚ್ಚಿನ ಶಂಕಿತರು ಕೇರಳದವರು ಎನ್ನುವುದು ಪೊಲೀಸರ ವಿವರಣೆ.

ಮೊಬೈಲ್‌ ಬಾಕ್ಸ್‌ ವಶ

ವಾರಸುದಾರರಿಲ್ಲದ ಕೊರಿಯರ್ ಬಾಕ್ಸ್ನ ತನಿಖೆಯಲ್ಲಿ ಬೆಂಗಳೂರು ಪೊಲೀಸರು 10 ಲಕ್ಷ ರೂ.ಗೂ ಹೆಚ್ಚು ಮೌಲ್ಯದ 52 ಕದ್ದ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅಕ್ಟೋಬರ್ 24 ರಂದು ಭದ್ರಾವತಿಯಿಂದ ಕೊಚ್ಚಿಗೆ ಕಳುಹಿಸಲಾದ ಪಾರ್ಸೆಲ್ ವಾರಸುದಾರರಿಲ್ಲದೆ ಮರಳಿದೆ ಎಂದು ಕೊರಿಯರ್ ಸಂಸ್ಥೆಯ ಅಧಿಕಾರಿಯೊಬ್ಬರು ವರದಿ ಮಾಡಿದಾಗ ತನಿಖೆ ಪ್ರಾರಂಭವಾಯಿತು. ಕಳುಹಿಸುವವರನ್ನು ಸಂಪರ್ಕಿಸಲು ಪದೇ ಪದೇ ಮಾಡಿದ ಪ್ರಯತ್ನಗಳು ಉತ್ತರಿಸಲಿಲ್ಲ, ಇದು ಅನುಮಾನವನ್ನು ಹುಟ್ಟುಹಾಕಿತು.

ಕೊರಿಯರ್ ಅಧಿಕಾರಿಯಿಂದ ದೂರು ದಾಖಲಿಸಿದ ನಂತರ, ಪೆಟ್ಟಿಗೆಯನ್ನು ತೆರೆಯುವ ಮೊದಲು ನಾವು ಮಹಜರ್ ಕಾರ್ಯವಿಧಾನವನ್ನು ನಡೆಸಿದ್ದೇವೆ. ಒಳಗೆ 10 ಬಳಸಿದ ಮೊಬೈಲ್ ಫೋನ್ಗಳು ಪತ್ತೆಯಾಗಿವೆ ಎಂದು ಉಪ ಪೊಲೀಸ್ ಆಯುಕ್ತ ಎಸ್.ಗಿರೀಶ್ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಶ್ರೀನಿವಾಸ್ ಎಂಬಾತನನ್ನು ಭದ್ರಾವತಿ ನಿವಾಸದಿಂದ ವಶಕ್ಕೆ ಪಡೆದಿದ್ದಾರೆ. ಈತ ಈ ಹಿಂದೆ ಬೆಂಗಳೂರು ಮತ್ತು ಭದ್ರಾವತಿಯಲ್ಲಿ ಮೊಬೈಲ್ ಕಳ್ಳತನಕ್ಕಾಗಿ ಬಂಧಿತನಾಗಿದ್ದು, ಆತನಿಂದ ಸುಮಾರು 100 ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ದಾಖಲೆಗಳು ತಿಳಿಸಿವೆ.

ಶ್ರೀನಿವಾಸ್ ತಪ್ಪೊಪ್ಪಿಗೆಯ ಆಧಾರದ ಮೇಲೆ ಪೊಲೀಸರು ಆತನ ಸಹಚರ ಶಫೀಕ್ ನನ್ನು ಬಂಧಿಸಿ 32 ಹೆಚ್ಚುವರಿ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 10 ಲಕ್ಷ ಮೌಲ್ಯದ 52 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

Whats_app_banner