ಹೆಚ್ಚು ಬಾಡಿಗೆ ನೀಡಿ ಅಪಾರ್ಟ್‌ಮೆಂಟ್ ಪಡೆದು ಭದ್ರತಾ ಠೇವಣಿಯೂ ಸಿಗದೇ ಖಾಲಿ;ಶೋಷಣೆಯ ಭಯಾನಕ ಕಥೆಯನ್ನು ಹಂಚಿಕೊಂಡ ಸ್ಟಾರ್ಟ್ಅಪ್ ಸಂಸ್ಥಾಪಕ
ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್ ಅಥವಾ ಮನೆಗಳನ್ನು ಬಾಡಿಗೆ ಪಡೆಯುವವರು ಭೂಮಾಲೀಕರಿಂದ ಅನುಭವಿಸುವ ಕಿರಿಕಿರಿ ಪ್ರಕರಣಗಳೂ ಇವೆ. ದಂಪತಿ ಎದುರಿಸಿದ ಪ್ರಕರಣವೊಂದನ್ನು ಸ್ಟಾರ್ಟ್‌ಅಪ್ ಕಂಪೆನಿ ಸಂಸ್ಥಾಪಕ ಹಂಚಿಕೊಂಡಿರುವುದು ವೈರಲ್ ಆಗಿದೆ.

ಬೆಂಗಳೂರು: ಬೆಂಗಳೂರು ಹೆಚ್ಚು ಬಾಡಿಗೆ ಕೊಟ್ಟು ಅಪಾರ್ಟ್‌ಮೆಂಟ್ ಅನ್ನು ಹಿಡಿಯುವ ಬಾಡಿಗೆದಾರರು ಭೂಮಾಲೀಕರಿಂದ ಸಾಕಷ್ಟು ಕಿರುಕುಳು ಅನುಭವಿಸುತ್ತಾರೆ. ಕೆಲವೊಮ್ಮೆ ಭದ್ರತಾ ಠೇವಣಿಯನ್ನೂ ವಾಪಸ್ ಪಡೆಯಲು ಆಗದೇ ಕೊನೆಗೆ ಮನೆ ಖಾಲಿ ಮಾಡಿಕೊಂಡು ಹೋಗುತ್ತಾರೆ. ಬೆದರಿಕೆಗೋ ಇಲ್ಲವೇ ಕಾನೂನಿನ ಮೊರೆ ಹೋಗಿ ಅದಕ್ಕಾಗಿ ಸಮಯ ಹಾಗೂ ಹಣ ವ್ಯಯಿಸುವ ಬದಲು ಸುಮ್ಮನಾಗಿ ಬಿಡುವವರೂ ಅನೇಕರು ಇದ್ದಾರೆ. ಇಂತಹದ್ದೇ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ. ಮಾಸಿಕ ಹೆಚ್ಚು ಬಾಡಿಗೆ ಕೊಟ್ಟು ಬಾಡಿಗೆ ಹಿಡಿದವರು ಕೊನೆಗೆ ಮಾಲೀಕರ ಅಸಹಕಾರ ಹಾಗೂ ಕಿರುಕುಳದಿಂದ ಭದ್ರತಾ ಠೇವಣಿಯನ್ನೂ ಪಡೆದು ಬೇರೆಗೆ ಸ್ಥಳಾಂತರಗೊಂಡಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಬಂದ ದಂಪತಿಗಳು ಬಡಾವಣೆಯೊಂದರಲ್ಲಿ ಅಪಾರ್ಟ್‌ಮೆಂಟ್ ಖಾಲಿ ಇರುವ ಮಾಹಿತಿ ಆಧರಿಸಿ ಮಾತುಕತೆ ನಡೆಸಿ ಮಾಸಿಕ 55 ರೂ. ಬಾಡಿಗೆಯೊಂದಿಗೆ ಮನೆ ಹಿಡಿದಿದ್ದರು. 2 ಬಿಎಚ್‌ಕೆ ಮನೆಗೆ ಮುಂಗಡ ಭದ್ರತಾ ಠೇವಣಿಯನ್ನೂ ನೀಡಿದ್ದರು. ಮನೆಗೆ ಬಂದ ನಂತರ ಅಲ್ಲಲ್ಲಿ ಸೋರಿಕೆ ಆಗುತ್ತಿತ್ತು. ಇದನ್ನು ಮನೆಯ ಮಾಲೀಕರ ಗಮನಕ್ಕೆ ತಂದರೂ ಅವರು ಪೂರಕವಾಗಿ ಸ್ಪಂದಿಸದೇ ಸಮಸ್ಯೆಯಾಗುತ್ತಿತ್ತು. ನೀವೇ ಬೇಕಾದರೆ ಮಾಡಿಸಿಕೊಳ್ಳಿ ಎಂದು ಅವರು ಹೇಳಿದ್ದರಿಂದ ಒಂದು ಲಕ್ಷ ರೂ. ಖರ್ಚು ಸರಿಪಡಿಸಿಕೊಂಡಿದ್ದರು. ಈ ಬಗ್ಗೆ ಮಾಲೀಕರಿಗೆ ಹೇಳಿದರೆ ಅವರು ಕಿವಿ ಮೇಲೆ ಹಾಕಿಕೊಳ್ಳಲೇ ಇಲ್ಲ.
ಕೊನೆಗೆ ಮನೆ ಖಾಲಿ ಮಾಡಿಕೊಂಡು ಹೋಗುತ್ತೇವೆ ಎಂದರೆ ಏಕಾಏಕಿ ಬಿಡುವುದಾದರೆ ಭದ್ರತಾ ಠೇವಣಿ 1.75 ಲಕ್ಷ ರೂ.ಗಳನ್ನು ನೀಡಲು ಕೂಡ ನಿರಾಕರಿಸಿದರು. ನೀವು ಎಲ್ಲಿಗೆ ಹೋಗುತ್ತೀರೋ, ಯಾರಿಗೆ ದೂರು ಕೊಡುತ್ತೀರೋ ಕೊಡಿ. ನನ್ನನ್ನು ಏನು ಮಾಡಿಕೊಳ್ಳಲು ಆಗುವುದಿಲ್ಲ ಎಂದು ಬೆದರಿಕೆ ಕೂಡ ಹಾಕಿದರು. ಕೊನೆಗೆ ಭದ್ರತಾ ಠೇವಣಿಯೂ ಇಲ್ಲದೇ, ತಾವು ಖರ್ಚು ಮಾಡಿದ ಒಂದು ಲಕ್ಷ ರೂ. ಕೂಡ ಇಲ್ಲದೇ ಮನೆ ಖಾಲಿ ಮಾಡಿಕೊಂಡರು. ಸೂಕ್ತ ದಾಖಲೆಗಳೂ ಅವರ ಬಳಿ ಇರಲಿಲ್ಲ.ಕಾನೂನು ಸಮರ ಎದುರಿಸಲು ಹೋಗಿ ಮತ್ತಷ್ಟು ಕಿರಿಕಿರಿ ಅನುಭವಿಸುವುದು ಬೇಡ ಎಂದು ಅಲ್ಲಿಂದ ಹೊರಟೇ ಬಿಟ್ಟರು.
ವೈರಲ್ ಆದ ಪೋಸ್ಟ್
ಈ ಘಟನೆಯನ್ನು ಬೆಂಗಳೂರಿನ ಸ್ಟಾರ್ಟ್ಅಪ್ ಸಂಸ್ಥಾಪಕರೊಬ್ಬರು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ಧಾರೆ. ದಂಪತಿ ಘಟನೆ ನಂತರ ಬೆಂಗಳೂರಿನ ಹೆಚ್ಚುತ್ತಿರುವ ಬಾಡಿಗೆ ಮಾರುಕಟ್ಟೆಯು ಟೀಕೆಗೆ ಗುರಿಯಾಗಿದೆ.
ಲಿಂಕ್ಡ್ಇನ್ನಲ್ಲಿ ಪೋಸ್ಟ್ ಮಾಡಿದ ಶ್ರವಣ್ ಟಿಕೂ, ಬೆಂಗಳೂರು ಕೆಲವು ಭೂಮಾಲೀಕರು ನಿಜಕ್ಕೂ ಅಪಾಯಕಾರಿ. ಅವರ ನಡವಳಿಕೆಯು "ಆಧುನಿಕ ದಿನದ ಶೋಷಣೆ"ಗೆ ಸಮನಾಗಿದೆ. ವಿಶೇಷವಾಗಿ ಸ್ಥಳೀಯರಲ್ಲದ ನಿವಾಸಿಗಳು ಇದನ್ನು ಅನುಭವಿಸುತ್ತಿದ್ದಾರೆ ಎಂದು ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.
ಯಾವುದೇ ಕಾನೂನು ನೆರವು ಇಲ್ಲದ ಕಾರಣ, ದಂಪತಿ ತಮ್ಮ ಠೇವಣಿಯನ್ನು ಮರುಪಡೆಯದೆ ಫ್ಲ್ಯಾಟ್ ಅನ್ನು ತ್ಯಜಿಸಬೇಕಾಯಿತು. ಹೆಚ್ಚಿನ ಬಾಡಿಗೆಗೆ ಒತ್ತಾಯಿಸುವವರು ಜವಾಬ್ದಾರಿಗಳನ್ನು ಪಾಲಿಸಲು ವಿಫಲವಾದ ಭೂಮಾಲೀಕರನ್ನು ಒಳಗೊಂಡ ಇದೇ ರೀತಿಯ ಪ್ರಕರಣಗಳನ್ನು ನೋಡಿದ್ದೇವೆ ಎಂದು ಹೇಳಿದ್ದಾರೆ. "ಬಾಡಿಗೆಯನ್ನು ಹೆಚ್ಚಿಸುವ ವಿಷಯಕ್ಕೆ ಬಂದಾಗ, ಭೂಮಾಲೀಕರು ಮೊದಲು ನಿಮಗೆ ಕರೆ ಮಾಡುತ್ತಾರೆ. ಆದರೆ ಸಮಸ್ಯೆ ಇದ್ದಾಗ, ಅದು ಇದ್ದಕ್ಕಿದ್ದಂತೆ ನಿಮ್ಮ ಸಮಸ್ಯೆಯಾಗಿದೆ ಎಂದು ಹೇಳಿ ಬಿಡುತ್ತಾರೆ. ಇದನ್ನು ಬಹಳಷ್ಟು ಜನ ಅನುಭವಿಸುತ್ತಿದ್ದಾರೆ ಎನ್ನುವುದು ಪೋಸ್ಟ್‌ನ ಸಾರ.
ಕನಸುಗಳ ಈ ನಗರವು ಶೀಘ್ರವಾಗಿ ದುಃಸ್ವಪ್ನವಾಗಿ ಬದಲಾಗಬಹುದು. ಮನೆಗಳನ್ನು ಬಾಡಿಗೆಗೆ ಪಡೆಯುವಾಗ ಅಥವಾ ಖರೀದಿಸುವಾಗ ಜಾಗರೂಕರಾಗಿರಿ ಮತ್ತು ನಿಮ್ಮನ್ನು ಗೌರವಿಸುವ ಜನರೊಂದಿಗೆ ವ್ಯವಹರಿಸಲು ಆದ್ಯತೆ ನೀಡಿ ಎನ್ನುವುದು ಅವರು ನೀಡಿರುವ ಸಲಹೆ.
ಬಾಡಿಗೆದಾರರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬಹುದು?
ಈ ವೈರಲ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಚಾರ್ಟರ್ಡ್ ಅಕೌಂಟೆಂಟ್ , ಬಾಡಿಗೆದಾರರನ್ನು ಸಂಭಾವ್ಯ ಶೋಷಣೆಯಿಂದ ರಕ್ಷಿಸಲು ಪ್ರಾಯೋಗಿಕ ಕ್ರಮಗಳನ್ನು ಸೂಚಿಸಿದ್ದಾರೆ.
ಬಾಡಿಗೆ ಪ್ರಕರಣಗಳಲ್ಲಿ ಅನುಭವ ಹೊಂದಿರುವ ವಕೀಲರಿಂದ ಬಾಡಿಗೆ ಒಪ್ಪಂದವನ್ನು ಪರಿಶೀಲಿಸುವುದು, ಆಸ್ತಿಯನ್ನು ಕೂಲಂಕಷವಾಗಿ ಪರಿಶೀಲಿಸುವುದು ಮತ್ತು ಛಾಯಾಚಿತ್ರಗಳೊಂದಿಗೆ ಮೊದಲೇ ಅಸ್ತಿತ್ವದಲ್ಲಿರುವ ಯಾವುದೇ ಸಮಸ್ಯೆಗಳನ್ನು ದಾಖಲಿಸುವುದು ಮತ್ತು ಇವುಗಳನ್ನು ಒಪ್ಪಂದಕ್ಕೆ ಲಗತ್ತಿಸುವುದು ಪ್ರಮುಖ ಶಿಫಾರಸುಗಳಲ್ಲಿ ಸೇರಿವೆ.
ದೂರುಗಳು ಮತ್ತು ಜ್ಞಾಪನೆಗಳ ಸರಿಯಾದ ದಾಖಲೆಯನ್ನು ಖಚಿತಪಡಿಸಿಕೊಳ್ಳಲು ಇಮೇಲ್ ಮೂಲಕ ಸಂವಹನವನ್ನು ನಿರ್ವಹಿಸಬೇಕು. ಹೆಚ್ಚುವರಿಯಾಗಿ, ಖಾಲಿ ಮಾಡುವ ಮೂರು ತಿಂಗಳ ಮೊದಲು ಲಿಖಿತ ನೋಟಿಸ್ ಕಳುಹಿಸಬೇಕು. ಅಂತಿಮ ತಿಂಗಳ ಬಾಡಿಗೆಗೆ ಭದ್ರತಾ ಠೇವಣಿಯ ಹೊಂದಾಣಿಕೆಯ ಬಗ್ಗೆ ಗಮನಿಸಬೇಕು. ಠೇವಣಿಯನ್ನು ಮರುಪಾವತಿಸದ ಸಂದರ್ಭದಲ್ಲಿ ಮೂವ್-ಔಟ್ ಛಾಯಾಚಿತ್ರಗಳನ್ನು ಸೆರೆಹಿಡಿಯುವುದು ಮತ್ತು ಕಾನೂನು ನೋಟಿಸ್ ನೀಡುವುದು ಬಾಡಿಗೆದಾರರ ಹಕ್ಕುಗಳನ್ನು ರಕ್ಷಿಸುವ ನಿರ್ಣಾಯಕ ಹಂತಗಳಾಗಿವೆ ಎನ್ನುವುದು ಅವರ ಸಲಹೆ.

ವಿಭಾಗ