ಕನ್ನಡ ಸುದ್ದಿ  /  Karnataka  /  Bengaluru Man Arrested As Son Files Fir Holding Him Responsible For His Mother's Suicide

Bengaluru News: ನನ್ನ ತಾಯಿ ಆತ್ಮಹತ್ಯೆಗೆ ಅಪ್ಪನೇ ಕಾರಣ ಎಂದು ಮಗನಿಂದಲೇ ದೂರು.. ತಂದೆ ಅರೆಸ್ಟ್

ಅಪ್ಪನ ಕುಡಿತದ ಚಟವೇ ತನ್ನ ತಾಯಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿತು ಎಂದು ಹೇಳಿಕೊಂಡು ಮಗ ಎಫ್​ಐಆರ್​ ದಾಖಲಿಸಿದ್ದು, ಆರೋಪಿ ತಂದೆಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಪ್ಪನ ಕುಡಿತದ ಚಟವೇ ತನ್ನ ತಾಯಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿತು ಎಂದು ಹೇಳಿಕೊಂಡು ಮಗ ಎಫ್​ಐಆರ್​ ದಾಖಲಿಸಿದ್ದು, ಆರೋಪಿ ತಂದೆಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಯಲಹಂಕದ ರಾಮಯ್ಯ ಬೀದಿಯ ನಿವಾಸಿ ವಸಂತ (45) ಅವರು ಅಕ್ಟೋಬರ್ 1 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರು ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು. ವಸಂತ ಅವರು ಮನೆಗೆಲಸ ಮಾಡುತ್ತಿದ್ದರೆ, ಅವರ ಮಗ ಕಾರ್ಪೆಂಟರ್ ಆಗಿ ಮತ್ತು ಮಗಳು ಟೈಲರ್ ಆಗಿ ಕೆಲಸ ಮಾಡುತ್ತಿದ್ದರು.

ಪತಿ ಲೋಕೇಶ್​ (50) ಕುಡುಕನಾಗಿದ್ದು, ಪದೇ ಪದೇ ಮದ್ಯ ಸೇವಿಸಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಸೆಪ್ಟೆಂಬರ್​ 30ರಂದು ರಾತ್ರಿ ಕುಡಿದ ಅಮಲಿನಲ್ಲಿ ಲೋಕೇಶ್ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದ.

ಮರುದಿನ, ಮಗ ಮತ್ತು ಮಗಳು ಕೆಲಸಕ್ಕೆ ಹೋದ ನಂತರ ವಸಂತ ಅವರು ನೇಣು ಬಿಗಿದುಕೊಂಡು ಪ್ರಾಣಬಿಟ್ಟಿದ್ದರು.

ತಂದೆ ಪದೇ ಪದೇ ಕಿರುಕುಳ ನೀಡುತ್ತಿದ್ದರಿಂದ ತಾಯಿ ವಸಂತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತನ ಕುಡಿತದ ಚಟ ತಾಯಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿತು ಎಂದು ಮಗ ಆನಂದ್​ ಪೊಲೀಸರಿಗೆ ದೂರು ನೀಡಿದ್ದಾನೆ. ತನ್ನ ತಾಯಿಯ ಸಾವಿಗೆ ತಂದೆಯೇ ಹೊಣೆಯಾಗಿದ್ದು, ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಎಫ್​ಐಆರ್​ ದಾಖಲಿಸಿಕೊಂಡ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.

ಪ್ರಿಯತಮನ ಜೊತೆ ಮಗಳು ಪರಾರಿ.. ಮನನೊಂದ ಅಪ್ಪ,ಅಮ್ಮ, ಮಗ ಆತ್ಮಹತ್ಯೆ

ಮಗಳು ತನ್ನ ಪ್ರಿಯತಮನ ಜೊತೆ ಓಡಿಹೋದಳೆಂದು ಮನನೊಂದು ಆಕೆಯ ಅಪ್ಪ, ಅಮ್ಮ ಹಾಗೂ ಸಹೋದರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದಲ್ಲಿ ಒಂದೇ ಕುಟುಂಬದ ಈ ಮೂವರು ವಿಷಸೇವಿಸಿ ಪ್ರಾಣಬಿಟ್ಟಿದ್ದಾರೆ. ಮೃತರನ್ನು ಶ್ರೀರಾಮಪ್ಪ (65), ಸರೋಜಮ್ಮ (60) ಮಗ ಮನೋಜ್ (24) ಎಂದು ಗುರುತಿಸಲಾಗಿದೆ.

ಮಗಳು ನಾಪತ್ತೆಯಾಗಿದ್ದಾಗ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆದರೆ ಆಕೆ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ ಎಂದು ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

IPL_Entry_Point