ಹಾಯ್, ಐ ಆ್ಯಮ್ ರಿತು… ಅಡುಗೆ ಕೆಲಸಕ್ಕೆ ಹೀಗೂ ಸಿವಿ ರೆಡಿ ಮಾಡಬಹುದಾ? ಸಖತ್ ಕ್ರಿಯೇಟಿವ್ ರೆಸ್ಯೂಮ್ ವೈರಲ್
Cook Resume: ಅಡುಗೆ ಕೆಲಸಕ್ಕಾಗಿ ಭಿನ್ನ, ವಿಭಿನ್ನ, ವಿನೂತನವಾಗಿ ಸಿದ್ದಪಡಿಸಿದ ರೆಸ್ಯೂಮ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ರೆಸ್ಯೂಮ್ಗೆ ಎಲ್ಲರೂ ಫಿದಾ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಶಿಕ್ಷಣ, ವೃತ್ತಿಪರ ಕೋರ್ಸ್ಗಳನ್ನು ಪೂರ್ಣಗೊಳಿಸಿದ ನಂತರ ಅದ್ಭುತ ರೆಸ್ಯೂಮ್ ರಚಿಸಿ ಕೆಲಸಕ್ಕೆ ಹುಡುಕಾಟ ನಡೆಸುವುದು ಸರ್ವೇಸಾಮಾನ್ಯ. ಕೆಲಸ ಪಡೆಯಲು ರೆಸ್ಯೂಮ್ ಬೇಕೇಬೇಕು. ಉದ್ಯೋಗ ನೀಡುವ ಕಂಪನಿಗಳಿಗೆ ರೆಸ್ಯೂಮ್ ಕಳುಹಿಸಿ ಸಂದರ್ಶನಕ್ಕೆ ಮತ್ತು ಇ-ಮೇಲ್ ಪ್ರತಿಕ್ರಿಯೆಗಾಗಿ ಕಾಯುವುದು ಸಹಜ. ಆದರೆ ಸ್ಥಳೀಯ ನಿವಾಸಿಯೊಬ್ಬರು, ಅನಿರೀಕ್ಷಿತ ಕಾರಣಕ್ಕೆ ಗಮನ ಸೆಳೆದಿದ್ದಾರೆ. ಅಡುಗೆ ಕೆಲಸಕ್ಕಾಗಿ ಭಿನ್ನ, ವಿಭಿನ್ನ, ವಿನೂತನವಾಗಿ ರೆಸ್ಯೂಮ್ ರೆಡಿ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಉರ್ವಿ ಎಂಬ ಎಕ್ಸ್ ಬಳಕೆದಾರರು ಪ್ಲಾಟ್ಫಾರ್ಮ್ನಲ್ಲಿ ಪೋಸ್ಟ್ ಮಾಡಿದ್ದು, ಎಚ್ಎಸ್ಆರ್ ಲೇಔಟ್ನಲ್ಲಿ ಸರಳ, ಮನೆ ಆಹಾರ ತಯಾರಿಸಬಲ್ಲ ಅಡುಗೆಯವರು ಬೇಕಿದ್ದಾರೆ ಎಂದು ಮನವಿ ಮಾಡಿದ್ದರು. 'ಹೇ ಚಾಟ್, ನಾನು ಎಚ್ಆರ್ಎಸ್ನಲ್ಲಿ ಅಡುಗೆಯವರನ್ನು ಹುಡುಕುತ್ತಿದ್ದೇನೆ. ಅವರು ನನಗೆ ಕೆಲವು ಉತ್ತಮ ಸರಳ ಹೋಮ್ಲಿ ಆಹಾರ ತಯಾರಿಸುವವರು ಬೇಕಿದ್ದಾರೆ. ನಿಮ್ಮ ಬಳಿ ಸುಳಿವುಗಳಿದ್ದರೆ ದಯವಿಟ್ಟು ಹಂಚಿಕೊಳ್ಳಿ? ಎಂದು ಅವರು ಬರೆದಿದ್ದಾರೆ. ಇದಕ್ಕೆ ಬೆಂಗಳೂರು ನಿವಾಸಿ ವರುಣ್ ಪೆರು ಪ್ರತಿಕ್ರಿಯಿಸಿ, ಅಚ್ಚರಿಯ ರೆಸ್ಯೂಮ್ವೊಂದನ್ನು ಹಾಕಿದ್ದಾರೆ. ಇದು ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವರುಣ್ ಅವರಿಗೆ ಗೊತ್ತಿರುವ ಅಡುಗೆಯವರಾದ ರಿತು ಅವರ ರೆಸ್ಯೂಮ್ ಅನ್ನು ಪೋಸ್ಟ್ ಮಾಡಿ, ರಿತು ಅವರನ್ನು ಕೆಲಸಕ್ಕೆ ಪರಿಗಣಿಸುವಂತೆ ಒತ್ತಾಯಿಸಿದ್ದಾರೆ. ನೀವು ರಿತು ದೀದಿ ಅವರ ಮಾಸ್ಟರ್ ಚೆಫ್ ಅನ್ನು ಪರಿಗಣಿಸಬೇಕು. ಅದ್ಭುತವಾಗಿ ಕೆಲಸ ಮಾಡುತ್ತಾರೆ, ಆಕೆಯ ಸರಳ, ಮನೆಯ ಊಟವು ಸವಿಯಲು ರುಚಿಕರ ಮತ್ತು ಅದ್ಭುತವಾಗಿರುತ್ತದೆ. ನಾನು ಆಕೆಗೆ ರೆಸ್ಯೂಮ್ ಸಹ ಸಿದ್ಧಪಡಿಸಿದ್ದೇನೆ. ಏಕೆಂದರೆ, ಆಕೆ ಈ ಕೆಲಸಕ್ಕೆ ಅರ್ಹರು ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಇಷ್ಟಕ್ಕೂ ಆ ರೆಸ್ಯೂಮ್ನಲ್ಲಿ ಏನೇನಿದೆ? ಇಲ್ಲಿದೆ ವಿವರ. ಹಾಸ್ಯಮಯ ರೆಸ್ಯಮ್ ಅಂತರ್ಜಾಲದ ಗಮನವನ್ನು ಸೆಳೆಯಿತು. ಕೌಶಲ್ಯಗಳು ಮತ್ತು ಪ್ರಾವೀಣ್ಯತೆಗಳ ಪಟ್ಟಿ ಇಲ್ಲಿದೆ.
ವಸ್ತುನಿಷ್ಠ ವಿಭಾಗದಲ್ಲಿ ರಿತು ಅವರ ಗುರಿ ಸರಳವಾಗಿದ್ದರೂ ಆಕರ್ಷಕವಾಗಿತ್ತು. ಬಾಸ್ ‘ಏಕ್ ಹೈ ಗೋಲ್ ಹೈ, ಆಪ್ಕೋ ರೋಜ್ ಘರ್ ಜೈಸಾ ಖಾನಾ ಮಿಲ್ತಾ ರಹೇ’ ಅಂದರೆ ‘ಸರಳ, ಮನೆಯ ಆಹಾರ ತಯಾರಿಸುವ ಮೂಲಕ ಗಮನ ಸೆಳೆಯುತ್ತಾರೆ. ತುಂಬಾ ಆಹ್ಲಾದಕರ, ಪರಿಮಳದಿಂದ ಕೂಡಿರುತ್ತದೆ.
ಯಾವೆಲ್ಲಾ ಡಿಶ್ ರೆಡಿ ಮಾಡುತ್ತಾರೆ?
ಉತ್ತರ ಭಾರತ: ರಾಜ್ಮಾ ಚವಲ್, ದಾಲ್ ಫ್ರೈ, ಆಲೂ ಪರಾಟ, ಸಬ್ಜಿ ರೋಟಿ.
ದಕ್ಷಿಣ ಭಾರತ: ಸಾಂಬಾರ್, ರಸಂ, ಮೊಸರನ್ನ, ಇಡ್ಲಿ-ದೋಸ
ಸ್ಕ್ಯಾಕ್ಸ್: ಪಕೋಡ, ಪೋಹಾ, ಟಿ ಜೊತೆಗೆ ನಾಷ್ಟ.
ಕೌಶಲ್ಯ ಮತ್ತು ಪ್ರಾವೀಣ್ಯತೆ
ಕಂಫರ್ಟ್ ಫುಡ್ ಪ್ರೊ (ಫುಡ್ ಸ್ಪೆಷಲಿಸ್ಟ್)
ಶುದ್ಧ ಅಡುಗೆ
ಕಸ್ಟಮ್ ಮೀಲ್ಸ್ (ನಮಗೆ ಬೇಕಾದ ಹಾಗೆ ಮಾಡಿಸಿಕೊಳ್ಳುವುದು)
ಇಂಡೆಕ್ಷನ್ ಕುಕಿಂಗ್ ಎಕ್ಸ್ಫರ್ಟ್
ಟೆಕ್ ಸ್ಟಾಕ್ಸ್
ಕುಕಿಂಗ್ ಟೂಲ್ಸ್: ಪ್ರೆಷರ್ ಕುಕ್ಕರ್, ಕಡಾಯಿ, ತವಾ, ಮಿಕ್ಸರ್ ಗ್ರೈಂಡರ್.
ಭಾಷೆ
ನೇಪಾಳಿ ಮತ್ತು ಹಿಂದಿ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತೇನೆ, ಕೊಂಚ ಇಂಗ್ಲಿಷ್ನಲ್ಲೂ ಮಾತನಾಡುತ್ತೇನೆ.
ಸಾಧನೆಗಳು
- 50ಕ್ಕೂ ಹೆಚ್ಚು ಮನೆಗಳಲ್ಲಿ ರುಚಿಕರ ಮತ್ತು ಆಹ್ಲಾದಕರ ಆಹಾರ ತಯಾರಿಸುವ ಮೂಲಕ ಜನರ ವಿಶ್ವಾಸ ಗಳಿಸಿದ್ದೇನೆ.
ಇದನ್ನೂ ಓದಿ: ಚಳಿಗಾಲದಲ್ಲಿ ಸಂಜೆ ಹೊತ್ತು ಡಿಫ್ರೆಂಟ್ ರುಚಿಯ ಕುರುಕಲು ತಿಂಡಿ ತಿನ್ಬೇಕು ಅನ್ನಿಸಿದ್ರೆ ಶಾವಿಗೆ ಪಕೋಡ ಮಾಡಿ, ರುಚಿಯಂತೂ ಸೂಪರ್
ಈ ಪೋಸ್ಟ್ ಸಾಕಷ್ಟು ಪ್ರತಿಕ್ರಿಯಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾವೆಲ್ಲರೂ ನಮ್ಮ ಮನೆಯ ಸಹಾಯಕರಿಗೆ ತೋರಿಸಬೇಕಾದ ಗೌರವ ಇದು. ರೆಸ್ಯೂಮ್ ನೋಡಿದ ಸಾಕಷ್ಟು ಮಂದಿ ನೋಡಿ ನಕ್ಕಿದ್ದಾರೆ. ಕೆಲವರು ತಮಾಷೆ ಮಾಡಿದ್ದಾರೆ. ನಾನು ಆಕೆಯನ್ನು ನೇಮಿಸಿಕೊಳ್ಳಬಹುದೇ? ಎಂದೆಲ್ಲಾ ಕೇಳಿದ್ದಾರೆ. ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಇನ್ನೂ ಕೆಲವರು ರೆಸ್ಯೂಮ್ ಸಿದ್ಧಪಡಿಸಿದ ವರುಣ್ ಅವರ ಚಿಂತನೆಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಡುಗೆಯವರ ಸಿವಿ ವೈರಲ್ ಆಗಬಹುದು ಎಂದು ಯಾರಿಗೆ ತಿಳಿದಿತ್ತು? ಒಳ್ಳೆಯದು, ವರುಣ್ ಎಂದು ಹೇಳಿದ್ದಾರೆ.