ಚಾಲನಾ ಪರೀಕ್ಷೆ ಪಾಸ್‌, ಆದರೂ ಪರವಾನಗಿ ಕೊಡುವುದಿಲ್ಲ ಅಂದ್ರು ಆರ್‌ಟಿಒ ಅಧಿಕಾರಿಗಳು; ರೆಡ್ಡಿಟ್ ಪೋಸ್ಟ್ ಬಹಿರಂಗಪಡಿಸಿದ ಕಾರಣ ಇದು
ಕನ್ನಡ ಸುದ್ದಿ  /  ಕರ್ನಾಟಕ  /  ಚಾಲನಾ ಪರೀಕ್ಷೆ ಪಾಸ್‌, ಆದರೂ ಪರವಾನಗಿ ಕೊಡುವುದಿಲ್ಲ ಅಂದ್ರು ಆರ್‌ಟಿಒ ಅಧಿಕಾರಿಗಳು; ರೆಡ್ಡಿಟ್ ಪೋಸ್ಟ್ ಬಹಿರಂಗಪಡಿಸಿದ ಕಾರಣ ಇದು

ಚಾಲನಾ ಪರೀಕ್ಷೆ ಪಾಸ್‌, ಆದರೂ ಪರವಾನಗಿ ಕೊಡುವುದಿಲ್ಲ ಅಂದ್ರು ಆರ್‌ಟಿಒ ಅಧಿಕಾರಿಗಳು; ರೆಡ್ಡಿಟ್ ಪೋಸ್ಟ್ ಬಹಿರಂಗಪಡಿಸಿದ ಕಾರಣ ಇದು

ಬೆಂಗಳೂರು ಕಸ್ತೂರಿ ನಗರ ಆರ್‌ಟಿಒ ಕಚೇರಿಯಲ್ಲಿ ಚಾಲನಾ ಪರೀಕ್ಷೆ ಉತ್ತೀರ್ಣರಾದರೂ ಪರವಾನಗಿ ಪಡೆಯಲು ಲಂಚ ಕೊಡಬೇಕಾದ ಅನಿವಾರ್ಯತೆ ಕಡೆಗೆ ರೆಡ್ಡಿಟ್ ಪೋಸ್ಟ್ ಗಮನಸೆಳೆದಿದೆ. ಚಾಲನಾ ಪರೀಕ್ಷೆ ಪಾಸ್‌, ಆದರೂ ಪರವಾನಗಿ ಕೊಡುವುದಿಲ್ಲ ಅಂದ್ರು ಆರ್‌ಟಿಒ ಅಧಿಕಾರಿಗಳು ಎಂಬ ಅಂಶ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.

ಚಾಲನಾ ಪರೀಕ್ಷೆ ಪಾಸ್‌, ಆದರೂ ಪರವಾನಗಿ ಕೊಡುವುದಿಲ್ಲ ಅಂದ್ರು ಆರ್‌ಟಿಒ ಅಧಿಕಾರಿಗಳು. ರೆಡ್ಡಿಟ್ ಪೋಸ್ಟ್ ಬಹಿರಂಗಪಡಿಸಿದ ಕಾರಣ ಮತ್ತು ವಿವರ ಈ ವರದಿಯಲ್ಲಿದೆ. (ಸಾಂಕೇತಿಕ ಚಿತ್ರ)
ಚಾಲನಾ ಪರೀಕ್ಷೆ ಪಾಸ್‌, ಆದರೂ ಪರವಾನಗಿ ಕೊಡುವುದಿಲ್ಲ ಅಂದ್ರು ಆರ್‌ಟಿಒ ಅಧಿಕಾರಿಗಳು. ರೆಡ್ಡಿಟ್ ಪೋಸ್ಟ್ ಬಹಿರಂಗಪಡಿಸಿದ ಕಾರಣ ಮತ್ತು ವಿವರ ಈ ವರದಿಯಲ್ಲಿದೆ. (ಸಾಂಕೇತಿಕ ಚಿತ್ರ) (HT News)

ಬೆಂಗಳೂರು: ಚಾಲನಾ ಪರವಾನಗಿ (ಡಿಎಲ್‌) ಪಡೆಯೋದು ಸುಲಭ ಅಲ್ಲ. ಚಾಲನಾ ಪರೀಕ್ಷೆ ಪಾಸ್‌ ಆದ್ರೂ, ಪರವಾನಗಿ ಕೊಡುವುದಿಲ್ಲ ಎಂದು ಬೆಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ಹೇಳಿದ್ದಾರೆ ಎಂಬ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಚಾಲನಾ ಪರೀಕ್ಷೆ ಪಾಸಾದ್ರೆ ಸಾಲದು, ಲಂಚ ಕೊಡಬೇಕು. ಅದು ಕೊಟ್ಟರಷ್ಟೆ ಡಿಎಲ್ ಕೊಡ್ತಾರೆ. ಭ್ರಷ್ಟಾಚಾರ ತುಂಬಿ ತುಳುಕ್ತಾ ಇದೆ ಎಂಬ ಆರೋಪವೇ ಈ ಎಲ್ಲ ಚರ್ಚೆಗೂ ಕಾರಣ. ಸಾರಿಗೆ ಇಲಾಖೆ ಕಚೇರಿಗಳಲ್ಲಿ ಮಧ್ಯವರ್ತಿಗಳಿಗೆ ಪ್ರವೇಶ ಇಲ್ಲ ಎಂಬ ಬೋರ್ಡ್ ಇದ್ದರೂ, ಕೆಲಸ ಕಾರ್ಯಗಳು ಅವರಿಲ್ಲದೇ ನಡೆಯುವುದು ಸ್ವಲ್ಪ ಕಷ್ಟ ಎಂಬ ವಾತಾವರಣ ಇದೆ ಎಂಬ ಆರೋಪವೂ ಇದೆ. ಸದ್ಯ ಚರ್ಚೆಯಲ್ಲಿರುವ ರೆಡ್ಡಿಟ್ ಪೋಸ್ಟ್ ಮೂರು ದಿನಗಳ ಹಿಂದೆ ಪೋಸ್ಟ್ ಆಗಿರುವಂಥದ್ದು. ಈ ಪೋಸ್ಟ್ ಗಮನಿಸಿದರೆ ಪ್ರತಿಕ್ರಿಯೆ ನೀಡಿದವರೆಲ್ಲ ತಾನೆಷ್ಟು ದುಡ್ಡು ಕೊಟ್ಟಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಕಸ್ತೂರಿ ನಗರ ಆರ್‌ಟಿಒ ಕಚೇರಿಯಲ್ಲಿ 1000 ರೂ. ಕೊಟ್ಟ ಬಳಿಕ ಕೆಲಸ ಸಲೀಸು

ರೆಡಿಟ್‌ ಪೋಸ್ಟ್‌ನಲ್ಲಿ ಹೇಳಿರುವ ಪ್ರಕಾರ, ಕಸ್ತೂರಿ ನಗರ ಆರ್‌ಟಿಒ ಕಚೇರಿಯುಲ್ಲಿ ಚಾಲನಾ ಪರೀಕ್ಷೆ ಪಾಸಾದ ಬಳಿಕ ಗೇಟ್‌ ದಾಟುವಾಗ ವ್ಯಕ್ತಿಯೊಬ್ಬ 1000 ರೂಪಾಯಿ ಕೇಳಿದ. ಚಾಲನಾ ಪರೀಕ್ಷೆ ಪಾಸ್‌ ಆದರೂ, ಅಗತ್ಯ ಮಾನದಂಡಗಳನ್ನು ಪೂರೈಸಿದರೂ ದುಡ್ಡು ಯಾಕೆ ಕೊಡಬೇಕು ಎಂದರೆ, ಪರವಾನಗಿ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೆ ದುಡ್ಡುಪಾವತಿಸಿ ಎಂದು ಆ ವ್ಯಕ್ತಿ ಹೇಳಿದ. ಅಲ್ಲಿ ಚಾಲನಾ ಪರೀಕ್ಷೆ ನೀಡಿದವರೆಲ್ಲರೂ ಸರದಿ ನಿಂತು ಈ ದುಡ್ಡು ಕೊಟ್ಟು ಹೋಗುತ್ತಿರುವುದು ಕಂಡುಬಂತು.

ಅನುಮಾನ ಬಂದ ಕಾರಣ, ನಗದು ಹಣ ಇಲ್ಲ ಎಂದು ಹೇಳಿದ ಬಳಿಕ ಮನಸ್ಸಿಲ್ಲದ ಮನಸ್ಸಿನಿಂದ ಫೋನ್‌ಪೇ ಮೂಲಕ ಹಣ ಪಾವತಿಸಿ ಎಂದು ಆತ ಹೇಳಿದ. ಬಳಿಕ ಯಾರದ್ದೋ ನಂಬರ್ ಕೊಟ್ಟ. ಆ ನಂಬರ್‌ಗೆ ಹಣ ಪಾವತಿ ಮಾಡುವಂತೆ ತಿಳಿಸಿದ. ಆ ವ್ಯಕ್ತಿ ಯಾರು ಎಂಬುದು ತಿಳಿದಿಲ್ಲ. ಆ ಕ್ಷಣ ನನಗೆ ಪರವಾನಗಿ ಮುಖ್ಯವಾಗಿತ್ತು. ಹಾಗಾಗಿ ಹಣ ಪಾವತಿಸಿದೆ ಎಂದು ಆ ವ್ಯಕ್ತಿ ರೆಡ್ಡಿಟ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಆ ರೆಡ್ಡಿಟ್ ಪೋಸ್ಟ್‌ ಇಲ್ಲಿದೆ ನೋಡಿ

ಜನರ ಪ್ರತಿಕ್ರಿಯೆ ಹೀಗಿತ್ತು ನೋಡಿ

ಈ ರೆಡ್ಡಿಟ್ ಪೋಸ್ಟ್ ಸಂಚಲನ ಮೂಡಿಸಿದ್ದು, 50ಕ್ಕೂ ಹೆಚ್ಚು ಪ್ರತಿಕ್ರಿಯೆ ಬಂದಿದೆ. ಬಹುತೇಕರು ಆರ್‌ಟಿಒ ಕಚೇರಿಗಳ ಲಂಚಾವತಾರದ ಮುಖವನ್ನು ವಿವರಿಸಿದ್ದಾರೆ. ನೀವು ಕೊಟ್ಟಿರೋದು 1000 ರೂಪಾಯಿ ಅಷ್ಟೆ. ಪುಣ್ಯವಂತರು. ನಾನು ಚಾಲನಾ ಪರವಾನಗಿ ಪಡೆಯುವುದಕ್ಕೆ 3,500 ರೂಪಾಯಿ ಪಾವತಿಸಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ವಾಹನ ಚಾಲನಾ ಪರೀಕ್ಷೆ ಎದುರಿಸುವಾಗ ಅಲ್ಲಿ ಬೋಧಕನು ಕ್ಲಚ್, ಬ್ರೇಕ್ ಮತ್ತು ಸ್ಟೀರಿಂಗ್ ಅನ್ನು ನಿಯಂತ್ರಿಸುವ ಮೂಲಕ ಅವರ ಡ್ರೈವಿಂಗ್ ಪರೀಕ್ಷೆಯಲ್ಲಿ ಮಧ್ಯಪ್ರವೇಶಿಸುತ್ತಾನೆ. ಸಿಮ್ಯುಲೇಟರ್ ಪರೀಕ್ಷೆಯ ಸಮಯದಲ್ಲಿ ತಪ್ಪಾದರೂ, ಅವರು ಉತ್ತೀರ್ಣರಾಗಿರುವುಅಗಿ ತಿಳಿಸಿದ್ದರು. "ಆ ದಿನ.. ಈ ಕಾನೂನುಗಳು ಬಹಳ ತಮಾಷೆಯಾಗಿದೆ ಎಂದು ನಾನು ನಿಜವಾಗಿಯೂ ಅರ್ಥಮಾಡಿಕೊಂಡಿದ್ದೇನೆ" ಎಂದು ಒಬ್ಬರು ಹತಾಶರಾಗಿ ಬರೆದುಕೊಂಡಿದ್ದಾರೆ.

ಲಂಚ ಎಂಬುದು ಸಾರ್ವಜನಿಕ ರಹಸ್ಯ. ನಿಮ್ಮನ್ನು ನೀವು ದೂಷಿಸಿಕೊಳ್ಳಬೇಡಿ. ಮುಂದಿನ ಬಾರಿ ಹೆಚ್ಚು ಜಾಗರೂಕರಾಗಿರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಆರ್‌ಟಿಒ ಅಧಿಕಾರಿಗಳು ಪರೀಕ್ಷೆ ಬರೆಯುವವರಿಂದ ಎಷ್ಟು ಬೇಗನೆ ಹಣವನ್ನು ಸಂಗ್ರಹಿಸುತ್ತಾರೆ ಎಂಬುದರ ಕಡೆಗೆ ಗಮನಸೆಳೆದ ಒಬ್ಬರು, “ಆರ್‌ಟಿಒ ಜನರು ಒಂದು ದಿನದಲ್ಲಿ ಲಕ್ಷಗಟ್ಟಲೆ ಹಣವನ್ನು ಸುಲಭವಾಗಿ ಗಳಿಸುತ್ತಾರೆ" ಎಂದು ಪ್ರತಿಕ್ರಿಯಿಸಿದ್ದಾರೆ. ಪ್ರಶ್ನಾರ್ಹ ಪರವಾನಗಿ ಪ್ರಕ್ರಿಯೆಯ ಹೊರತಾಗಿಯೂ ಹೆಲ್ಮೆಟ್ ಧರಿಸದೇ ಇದ್ದಾಗ, ಬೆಂಗಳೂರು ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿ ಬೀಳದೇ ಸವಾರಿ ಮಾಡುವುದು ಹೇಗೆ ಎಂಬ ಬಗ್ಗೆ ಆಲೋಚಿಸಿ ಎಂದು ಹಲವರು ವ್ಯಂಗ್ಯವಾಡಿದ್ಧಾರೆ.

Whats_app_banner