ಹೊಸ ವರ್ಷಾಚರಣೆ ಖುಷಿಯಲ್ಲಿರುವ ಬೆಂಗಳೂರಿಗರಿಗೊಂದು ಸಂತಸದ ಸುದ್ದಿ, ಡಿ 31ಕ್ಕೆ ಮೆಟ್ರೋ ರೈಲು ಸಂಚಾರ ಅವಧಿ ವಿಸ್ತರಣೆ
ಕನ್ನಡ ಸುದ್ದಿ  /  ಕರ್ನಾಟಕ  /  ಹೊಸ ವರ್ಷಾಚರಣೆ ಖುಷಿಯಲ್ಲಿರುವ ಬೆಂಗಳೂರಿಗರಿಗೊಂದು ಸಂತಸದ ಸುದ್ದಿ, ಡಿ 31ಕ್ಕೆ ಮೆಟ್ರೋ ರೈಲು ಸಂಚಾರ ಅವಧಿ ವಿಸ್ತರಣೆ

ಹೊಸ ವರ್ಷಾಚರಣೆ ಖುಷಿಯಲ್ಲಿರುವ ಬೆಂಗಳೂರಿಗರಿಗೊಂದು ಸಂತಸದ ಸುದ್ದಿ, ಡಿ 31ಕ್ಕೆ ಮೆಟ್ರೋ ರೈಲು ಸಂಚಾರ ಅವಧಿ ವಿಸ್ತರಣೆ

New year in Bengaluru: ಹೊಸ ವರ್ಷಾಚರಣೆಗೆ ಬೆಂಗಳೂರು ಸಜ್ಜಾಗಿದೆ. ಎಂಜಿ ರಸ್ತೆ, ಬಿಗ್ರೇಡ್ ರಸ್ತೆಗಳಲ್ಲಿ ಇದಕ್ಕೆ ತಯಾರಿ ನಡೆದಿದೆ. ಹೊಸ ವರ್ಷಾಚರಣೆ ಖುಷಿಯಲ್ಲಿರುವ ಬೆಂಗಳೂರಿಗರಿಗೊಂದು ಸಂತಸದ ಸುದ್ದಿ ಕೊಟ್ಟಿದೆ ಬಿಎಂಆರ್‌ಸಿಎಲ್‌. ಡಿಸೆಂಬರ್ 31 ರಂದು ಮೆಟ್ರೋ ರೈಲು ಸಂಚಾರ ಅವಧಿ ವಿಸ್ತರಣೆ ಆಗಿದೆ. (ವರದಿ: ಎಚ್.‌ ಮಾರುತಿ, ಬೆಂಗಳೂರು)

ಹೊಸ ವರ್ಷಾಚರಣೆ ಖುಷಿಯಲ್ಲಿರುವ ಬೆಂಗಳೂರಿಗರಿಗೊಂದು ಸಂತಸದ ಸುದ್ದಿ, ಡಿ 31ಕ್ಕೆ ಮೆಟ್ರೋ ರೈಲು ಸಂಚಾರ ಅವಧಿ ವಿಸ್ತರಣೆಯಾಗಿದೆ. (ಸಾಂಕೇತಿಕ ಚಿತ್ರ)
ಹೊಸ ವರ್ಷಾಚರಣೆ ಖುಷಿಯಲ್ಲಿರುವ ಬೆಂಗಳೂರಿಗರಿಗೊಂದು ಸಂತಸದ ಸುದ್ದಿ, ಡಿ 31ಕ್ಕೆ ಮೆಟ್ರೋ ರೈಲು ಸಂಚಾರ ಅವಧಿ ವಿಸ್ತರಣೆಯಾಗಿದೆ. (ಸಾಂಕೇತಿಕ ಚಿತ್ರ)

New year in Bengaluru: ಹೊಸ ವರ್ಷದ ಸಂಭ್ರಮಾಚರಣೆಗೆ ಎಂಜಿ ರಸ್ತೆ ಮತ್ತು ಬ್ರಿಗೇಡ್‌ ರಸ್ತೆಗಳೇ ಕೇಂದ್ರ ಬಿಂದು. ಅಲ್ಲಿ ಒಂದು ಸುತ್ತು ಹೊಡೆದರೆ ಹೊಸ ವರ್ಷದ ಸ್ವಾಗತಕ್ಕೆ ಒಂದು ಕಳೆ. ಇದಕಾಗಿ ಈ ರಸ್ತೆಗಳಿಗೆ ಬೇಟಿ ನೀಡುವವರಿಗೆ ಬಿಎಂಆರ್‌ಸಿಎಲ್‌ ಖುಷಿ ಸುದ್ದಿ ಕೊಟ್ಟಿದೆ. ಡಿಸೆಂಬರ್ 31 ರಂದು ಮಧ್ಯರಾತ್ರಿ ದಾಟಿ ಜನವರಿ 1 ರಂದು ನಸುಕಿನ 2.15 ರವರೆಗೆ ಮೆಟ್ರೋ ರೈಲುಗಳ ಸಂಚಾರವನ್ನು ವಿಸ್ತರಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಅವಧಿ ವಿಸ್ತರಿಸಿ ಬೆಂಗಳೂರು ಮೆಟ್ರೋ ರೈಲು ನಿಗಮ ಪ್ರಕಟಣೆ ಹೊರಡಿಸಿದೆ.

ಹೊಸ ವರ್ಷಾಚರಣೆಗೆ ಮೆಟ್ರೋ ರೈಲು ಸಂಚಾರ ಅವಧಿ ವಿಸ್ತರಣೆ

ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಪ್ರತಿ 10 ನಿಮಿಷಕ್ಕೊಂದು ರೈಲು ಸೇವೆ ಇರಲಿದ್ದು, ಜನವರಿ 1ರಂದು ನಸುಕಿನ 2 ಗಂಟೆಗೆ ಎಲ್ಲ ಮೆಟ್ರೋ ಟರ್ಮಿನಲ್‌ಗಳಿಂದ ಕೊನೆಯ ರೈಲು ಹೊರಡಲಿದೆ. ಆದರೆ ಮೆಜೆಸ್ಟಿಕ್‌ನಿಂದ ನಸುಕಿನ 2.40 ಕ್ಕೆ ಕೊನೆಯ ರೈಲು ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿದೆ.

ಇನ್ನು ಎಂಜಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗುವುದರಿಂದ ಡಿಸೆಂಬರ್ 31ರ ರಾತ್ರಿ 11 ಗಂಟೆಯ ನಂತರ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಮುಚ್ಚಲಾಗುತ್ತದೆ. ಪ್ರಯಾಣಿಕರು ಸಮೀಪದ ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳನ್ನು ಬಳಸಬಹುದಾಗಿದೆ.

ಪೇಪರ್ ಟಿಕೆಟ್ ಬಳಕೆಗೆ ಸೂಚನೆ

ರಾತ್ರಿ 11 ಗಂಟೆಯ ನಂತರ ಪ್ರಯಾಣಿಸುವ ಪ್ರಯಾಣಿಕರು 50 ರೂ ಮುಖಬೆಲೆಯ ರಿಟರ್ನ್‌ ಜರ್ನಿ ಟಿಕೆಟ್‌ ಅನ್ನು ಬಳಸಲು ಸೂಚಿಸಲಾಗಿದೆ. ಈ ಪೇಪರ್‌ ಟಿಕೆಟ್‌ ಡಿಸೆಂಬರ್‌ 31 ರಂದು ಬೆಳಗ್ಗೆ 8 ಗಂಟೆಯಿಂದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮುಂಗಡವಾಗಿ ಖರೀದಿಸಲು ಅವಕಾಶವಿದೆ. ಸಾಮಾನ್ಯ QR ಕೋಡ್‌ ಟಿಕೆಟ್‌ ಗಳು ಮತ್ತು ಕಾರ್ಡ್‌ ಗಳನ್ನು ಬಳಸಲು ಯಾವುದೇ ನಿರ್ಬಂಧ ಇರುವುದಿಲ್ಲ. ಟಿಕೆಟ್ ಪಡೆದುಕೊಳ್ಳಲು ನೂಕುನುಗ್ಗಲು ಉಂಟಾಗುವುದರಿಂದ ಈ ಪೇಪರ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಪೇಪರ್ ಟಿಕೆಟ್ ಬೇಗ ಕೊಡಬಹುದು. ಯಾವುದೇ ಸ್ಕ್ಯಾನ್ ಮಾಡುವ ತೊಂದರೆ ಇರುವುದಿಲ್ಲ. ಇದರಿಂದ ಜನಸಂದಣೆಯೂ ಆಗುವುದಿಲ್ಲ ಎಂಬ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ.

ಯಾವುದೇ ನಿರ್ದಿಷ್ಟ ನಿಲ್ದಾಣದಲ್ಲಿ ಜನಸಂದಣಿಯನ್ನು ತಪ್ಪಿಸಲು ಪ್ರಯಾಣಿಕರು ವೈಟ್‌ ಫೀಲ್ಡ್‌ ಮತ್ತು ಸಿಲ್ಕ್‌ ಬೋರ್ಡ್‌ ನಿಲ್ದಾಣಗಳ ಕಡೆ ಹೋಗುವವರು ಪ್ರಯಾಣಕ್ಕಾಗಿ ಟ್ರಿನಿಟಿ ಮೆಟ್ರೋ ನಿಲ್ದಾಣವನ್ನು ಬಳಸಬಹುದಾಗಿದೆ. ಚಲ್ಲಘಟ್ಟ ಮತ್ತು ಮಾದಾವರ ಕಡೆ ಪ್ರಯಾಣ ಮಾಡುವ ಪ್ರಯಾಣಿಕರು ಕಬ್ಬನ್‌ ಪಾರ್ಕ್‌ ಮೆಟ್ರೋ ನಿಲ್ದಾಣವನ್ನು ಬಳಸಲು ಕೋರಲಾಗಿದೆ.

ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಬಿಗಿ ಬಂದೋಬಸ್ತ್

ಬೆಂಗಳೂರಿನ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ನಿರ್ಬಂಧ ಇಲ್ಲ ಎಂದೂ ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ತಿಳಿಸಿದ್ದಾರೆ. ಹೊಸ ವರ್ಷಾಚರಣೆ ನಿಮಿತ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದ್ದರು. ಹೊಸ ವರ್ಷಾಚರಣೆ ಅಂಗವಾಗಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ವಿಶೇಷವಾಗಿ ಹೇಳಿದ್ದು, ಹೆಚ್ಚು ನಿಗಾವಹಿಸುವಂತೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಬಂದೋಬಸ್ತ್ ಕ್ರಮಗಳನ್ನು ಕೈಗೊಳ್ಳಲು ಮತ್ತು ವಿಶೇಷವಾಗಿ ಮಹಿಳೆಯರ ಸುರಕ್ಷತೆಗೆ ಒತ್ತು ನೀಡಲು ಪೊಲೀಸ್‌ ಇಲಾಖೆ ನಿರ್ಧರಿಸಿದೆ.

(ವರದಿ: ಎಚ್.‌ ಮಾರುತಿ, ಬೆಂಗಳೂರು)

Whats_app_banner