ಬೆಂಗಳೂರು ಮೆಟ್ರೋ ವಿಸ್ತರಣೆ, ಹೊಸ ನಿಲ್ದಾಣಗಳ ಸೇರ್ಪಡೆಯಾದರೂ ಹಳೆ ಸಮಸ್ಯೆಗಳಿಗೆ ಸಿಕ್ಕಿಲ್ಲ ಪರಿಹಾರ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಮೆಟ್ರೋ ವಿಸ್ತರಣೆ, ಹೊಸ ನಿಲ್ದಾಣಗಳ ಸೇರ್ಪಡೆಯಾದರೂ ಹಳೆ ಸಮಸ್ಯೆಗಳಿಗೆ ಸಿಕ್ಕಿಲ್ಲ ಪರಿಹಾರ

ಬೆಂಗಳೂರು ಮೆಟ್ರೋ ವಿಸ್ತರಣೆ, ಹೊಸ ನಿಲ್ದಾಣಗಳ ಸೇರ್ಪಡೆಯಾದರೂ ಹಳೆ ಸಮಸ್ಯೆಗಳಿಗೆ ಸಿಕ್ಕಿಲ್ಲ ಪರಿಹಾರ

ಬೆಂಗಳೂರು ಮೆಟ್ರೋ ಮಾರ್ಗ ವಿಸ್ತರಣೆಯಾಗಿದೆ, ಹೊಸ ನಿಲ್ದಾಣಗಳ ಸೇರ್ಪಡೆಯಾಗಿದೆ. ಅದರೆ ಹಳೆ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂಬುದರ ಕಡೆಗೆ ಸ್ಥಳೀಯರು ಗಮನಸೆಳಯುತ್ತಿದ್ದಾರೆ.

ಬೆಂಗಳೂರು ಮೆಟ್ರೋ ವಿಸ್ತರಣೆ, ಹೊಸ ನಿಲ್ದಾಣಗಳ ಸೇರ್ಪಡೆಯಾದರೂ ಹಳೆ ಸಮಸ್ಯೆಗಳಿಗೆ ಸಿಕ್ಕಿಲ್ಲ ಪರಿಹಾರ ಎಂದು ಸ್ಥಳೀಯರು ಗಮನಸೆಳೆದಿದ್ದಾರೆ.
ಬೆಂಗಳೂರು ಮೆಟ್ರೋ ವಿಸ್ತರಣೆ, ಹೊಸ ನಿಲ್ದಾಣಗಳ ಸೇರ್ಪಡೆಯಾದರೂ ಹಳೆ ಸಮಸ್ಯೆಗಳಿಗೆ ಸಿಕ್ಕಿಲ್ಲ ಪರಿಹಾರ ಎಂದು ಸ್ಥಳೀಯರು ಗಮನಸೆಳೆದಿದ್ದಾರೆ.

ಬೆಂಗಳೂರು: ನಮ್ಮ ಮೆಟ್ರೋ ರೈಲು ಮಾರ್ಗ ವಿಸ್ತರಣೆಯಾಗಿದ್ದು, ನಾಗಸಂದ್ರ - ಮಾದಾವರ ತನಕ ರೈಲು ಸಂಚಾರ ಶುರುವಾದರೂ ಹಳೆಯ ಸಮಸ್ಯೆಗಳು ಹಾಗೆಯೇ ಉಳಿದಿವೆ ಎಂಬ ಅಭಿಪ್ರಾಯಗಳು ವ್ಯಕ್ತವಾಘಿದೆ. ನೈಸ್‌ ರಸ್ತೆ ಸುತ್ತಮುತ್ತಲಿನ ನಿವಾಸಿಗಳಿಗೆ ಇನ್ನೂ ಮಾದಾವರ ಮೆಟ್ರೋ ಸ್ಟೇಷನ್‌ಗೆ ಹೋಗಲು ವಾಹನಗಳು ಸಂಚರಿಸುವ ಅಂಡರ್‌ಪಾಸ್‌ ಬಳಸಬೇಕಾದ ಸ್ಥಿತಿ ಇದೆ. ಚಿಕ್ಕಬಾಬಿರಕಲ್ಲು ಪ್ರದೇಶದಲ್ಲಿ ಮೇಲ್ಸೇತುವೆ ಕೆಳಗೆ ಪಾದಚಾರಿ ಮಾರ್ಗ ಇದ್ದರೂ, ಅದರಲ್ಲಿ ಸಂಚರಿಸುವುದು ಕಷ್ಟವಾದ ಕಾರಣ ಎಲ್ಲರೂ ವಾಹನಗಳ ಮಾರ್ಗವನ್ನೇ ಬಳಸುತ್ತಿದ್ದಾರೆ. ಮಂಜುನಾಥ ನಗರ ಸ್ಟೇಷನ್‌ನಲ್ಲಿ ಪಾದಚಾರಿ ಮೇಲ್ಸೇತುವೆ ಇದ್ದು, ಅದು ನಿಲ್ದಾಣದಿಂದ 200 ಮೀಟರ್ ದೂರದಲ್ಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮಾದಾವರ ಮೆಟ್ರೋ ನಿಲ್ದಾಣ ಸುತ್ತಮುತ್ತ ಸಮಸ್ಯೆ, ಸವಾಲು

ಮಾದಾವರ ನಿಲ್ದಾಣದ ಬಳಿ ಪ್ರತಿನಿತ್ಯ ಸಾವಿರಾರು ವಾಹನಗಳು ಎಡ ತಿರುವು ಪಡೆದು ನೈಸ್ ರಸ್ತೆ ತಲುಪುತ್ತವೆ. ವಿರುದ್ಧ ದಿಕ್ಕಿನಲ್ಲಿ, ವಾಹನಗಳು ರಾಷ್ಟ್ರೀಯ ಹೆದ್ದಾರಿಯ ಸಂಚಾರ ದಟ್ಟಣೆಯಿಂದ ಪಾರಾಗಲು ನೈಸ್ ರಸ್ತೆ ಮೂಲಕ ನಿರ್ಗಮಿಸುತ್ತವೆ. ‘ಮಾದಾವರ ನಿಲ್ದಾಣದ ಬಳಿ ರಸ್ತೆ ದಾಟುವುದು ಸವಾಲಿನ ಕೆಲಸವಾಗಿದ್ದು, ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಉತ್ತಮ ಫುಟ್‌ಪಾತ್‌ಗಳಿಲ್ಲದ ಕಾರಣ ರಾತ್ರಿ ವೇಳೆಯಲ್ಲಿ ಮೆಟ್ರೊ ನಿಲ್ದಾಣ ಬಳಸಲು ತೊಂದರೆಯಾಗುತ್ತದೆ. ಮಾದಾವರ ದಿಂದ ಎಲೆಕ್ಟ್ರಾನಿಕ್ ಸಿಟಿಗೆ ನೈಸ್ ರಸ್ತೆ ಮೂಲಕ ಸಂಚರಿಸುವ ಬಸ್‌ಗಳಿಗೆ ಪಾರ್ಕಿಂಗ್ ಸಮಸ್ಯೆ ಇದೆ ಎಂದು ಮಾದಾವರದ ನಿವಾಸಿಯೊಬ್ಬರು ಹೇಳಿದ್ದಾಗಿ ವರದಿ ವಿವರಿಸಿದೆ.

ಹಸಿರು ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಣೆ ಶುರುವಾಗುವುದರೊಂದಿಗೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮತ್ತು ದೂರದ ಬಸ್‌ಗಳನ್ನು ನಿರ್ವಹಿಸುವ ಖಾಸಗಿ ಸಂಸ್ಥೆಗಳು ಹಸಿರು ಮಾರ್ಗದ ಟರ್ಮಿನಲ್ ನಿಲ್ದಾಣವಾದ ಮಾದಾವರ ನಿಲ್ದಾಣದಲ್ಲಿ ಬಸ್‌ ನಿಲುಗಡೆಯನ್ನು ಸೇರಿಸಬೇಕೆಂದು ಅನೇಕರು ಒತ್ತಾಯಿಸಿದ್ದಾರೆ.

ಮಾದಾವರದಲ್ಲಿ ನಿಲುಗಡೆ ನೀಡಲು ರಾಷ್ಟ್ರೀಯ ಹೆದ್ದಾರಿಯಿಂದ ವ್ಯತಿರಿಕ್ತವಾಗಿ ಸಂಚಾರ ದಟ್ಟಣೆ ಉಂಟಾಗಲಿದ್ದು, ಬಸ್‌ಗಳು ಮೆಜೆಸ್ಟಿಕ್‌ಗೆ ಬರಲು ಹೆಚ್ಚಿನ ಸಮಯ ಬೇಕಾಗುತ್ತದೆ. ಈ ಹಿಂದೆ ನೆಲಮಂಗಲ ಪೊಲೀಸರಿಂದ ಮಾದಾವರ ಬಳಿ ಬಸ್‌ಗಳು ನಿಲ್ಲಿಸಬಾರದು ಎಂದು ಸೂಚಿಸಿದ್ದರು ಎಂದು ಕೆಎಸ್ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾಗಿ ವರದಿ ವಿವರಿಸಿದೆ.

ಪ್ರಯಾಣದ ಅವಧಿ ಕಡಿಮೆಯಾದ ಖುಷಿ

ನಾಗಸಂದ್ರದಿಂದ ಮಾದಾವರವರೆಗಿನ 3.1 ಕಿಮೀ ಮೆಟ್ರೊ ರೈಲು ಮಾರ್ಗದಲ್ಲಿ ರೈಲು ಸಂಚಾರ ಶುರುವಾಗಿದೆ. ಇದು ಅನೇಕರಿಗೆ ನೆಮ್ಮದಿ ಕೊಟ್ಟಿದೆ. ಮಂಜುನಾಥ್ ನಗರ, ಚಿಕ್ಕಬಿದ್ರಕಲ್ಲು ಮತ್ತು ಮಾದಾವರ ಎಂಬ ಮೂರು ಹೊಸ ನಿಲ್ದಾಣಗಳು ಸೇರ್ಪಡೆಯಾಗಿವೆ. 6 ರಿಂದ 10 ನಿಮಿಷಗಳಿಗೊಮ್ಮೆ ರೈಲು ಸಂಚರಿಸುತ್ತದೆ. ಬಹುತೇಕ ಪ್ರಯಾಣಿಕರಲ್ಲಿ ಪ್ರಯಾಣದ ಅವಧಿ ಕಡಿಮೆಯಾದ ಖುಷಿ ಕಂಡುಬಂದಿದೆ.

ಉತ್ತರ-ದಕ್ಷಿಣ ಕಾರಿಡಾರ್‌ನ ನಾಗಸಂದ್ರದಿಂದ ರೇಷ್ಮೆ ಸಂಸ್ಥೆವರೆಗಿನ 30.32 ಕಿ.ಮೀ. ನಮ್ಮ ಮೆಟ್ರೋ ಮಾರ್ಗ ಹಂತ ಹಂತವಾಗಿ ಸಂಚಾರಕ್ಕೆ ತೆರವುಗೊಳ್ಳುತ್ತ ಬಂದಿದೆ. ಇದೀಗ,298.65 ಕೋಟಿ ರೂ. ವೆಚ್ಚದಲ್ಲಿನಿರ್ಮಿಸಿದ 3.14 ಕಿ.ಮೀ. ಮಾರ್ಗದಲ್ಲೂ ರೈಲು ಸಂಚಾರ ಶುರುವಾಗಿದೆ. ಇದರೊಂದಿಗೆ ಹಸಿರು ಮೆಟ್ರೋ ಮಾರ್ಗ 33.46 ಕಿ.ಮೀ ವಿಸ್ತರಣೆಯಾಗಿದೆ. ಬಿಐಇಸಿ, ದಾಸನಪುರ, ನೆಲಮಂಗಲ ಭಾಗದ ಪ್ರಯಾಣಿಕರ ಬಹುವರ್ಷಗಳ ಕನಸು ನನಸಾಗಿದೆ.

ಕನಕಪುರ ಮುಖ್ಯರಸ್ತೆಯ ರೇಷ್ಮೆ ಸಂಸ್ಥೆಯಿಂದ ಮಾದಾವರಕ್ಕೆ ಮತ್ತು ವಿರುದ್ಧ ದಿಕ್ಕಿನಲ್ಲಿ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11ರವರೆಗೆ ಮೆಟ್ರೊ ರೈಲುಗಳು ಸಂಚರಿಸಲಿವೆ. ಕನಿಷ್ಠ ಟಿಕೆಟ್ ದರ 10 ರೂಪಾಯಿ. ಗರಿಷ್ಠ ಟಿಕೆಟ್ ದರ 60 ರೂಪಾಯಿ. ಪ್ರತಿ 10 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ. ಪೂರ್ವ-ಪಶ್ಚಿಮ ಕಾರಿಡಾರ್‌ನ (ವೈಟ್‌ಫೀಲ್ಡ್‌-ಚಲ್ಲಘಟ್ಟ) 43.49 ಕಿ.ಮೀ. ನೇರಳೆ ಬಣ್ಣದ ಮಾರ್ಗದಲ್ಲಿ ಕೂಡ ರೈಲುಗಳು ಸಂಚರಿಸುತ್ತಿವೆ. ಪೂರ್ವ-ಪಶ್ಚಿಮ ಹಾಗೂ ಉತ್ತರ-ದಕ್ಷಿಣ ಕಾರಿಡಾರ್‌ನ ಒಟ್ಟು 73.81 ಕಿ.ಮೀ. ಮಾರ್ಗದಲ್ಲಿ‘ನಮ್ಮ ಮೆಟ್ರೊ’ ಪ್ರಯಾಣ ಸೇವೆ ಒದಗಿಸುತ್ತಿದೆ. ನಾಗಸಂದ್ರ-ಮಾದಾವರ ಮಾರ್ಗ ವಿಸ್ತರಣೆಯಿಂದಾಗಿ ಮೆಟ್ರೊ ರೈಲು ಜಾಲವು 77 ಕಿ.ಮೀ. ಗೆ ವಿಸ್ತರಣೆಯಾದಂತಾಗಿದೆ ಎಂದು ವರದಿ ವಿವರಿಸಿದೆ.

Whats_app_banner