ಹೊಸ ಯೋಜನೆಗೆ ಬೆಂಗಳೂರು ಮೆಟ್ರೋ ಸಿದ್ಧತೆ; ಪಾರ್ಕಿಂಗ್‌ಗೆ ಅವಕಾಶ ಇಲ್ಲ ಎಂದು ಇನ್ನು ಮುಂದೆ ಕೊರಗಬೇಕಿಲ್ಲ
ಕನ್ನಡ ಸುದ್ದಿ  /  ಕರ್ನಾಟಕ  /  ಹೊಸ ಯೋಜನೆಗೆ ಬೆಂಗಳೂರು ಮೆಟ್ರೋ ಸಿದ್ಧತೆ; ಪಾರ್ಕಿಂಗ್‌ಗೆ ಅವಕಾಶ ಇಲ್ಲ ಎಂದು ಇನ್ನು ಮುಂದೆ ಕೊರಗಬೇಕಿಲ್ಲ

ಹೊಸ ಯೋಜನೆಗೆ ಬೆಂಗಳೂರು ಮೆಟ್ರೋ ಸಿದ್ಧತೆ; ಪಾರ್ಕಿಂಗ್‌ಗೆ ಅವಕಾಶ ಇಲ್ಲ ಎಂದು ಇನ್ನು ಮುಂದೆ ಕೊರಗಬೇಕಿಲ್ಲ

ಪ್ರತಿನಿತ್ಯ ಕೆಲಸಕ್ಕೆ ತೆರಳುವ ಸಾಕಷ್ಟು ಜನ ತಮ್ಮ ವಾಹನಗಳನ್ನು ಮೆಟ್ರೋ ಹತ್ತಿರ ಪಾರ್ಕ್ ಮಾಡಿ ನಂತರ ಅಲ್ಲಿಂದ ಬೇರೆ ಕಡೆ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಮೆಟ್ರೋ ಬಳಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು ಹಲವೆಡೆ ಸಮಸ್ಯೆಯಾಗಿದೆ.

ಹೊಸ ಯೋಜನೆಗೆ ಬೆಂಗಳೂರು ಮೆಟ್ರೋ ಸಿದ್ಧತೆ
ಹೊಸ ಯೋಜನೆಗೆ ಬೆಂಗಳೂರು ಮೆಟ್ರೋ ಸಿದ್ಧತೆ (ಸಂಗ್ರಹ ಚಿತ್ರ- PTI)

ಪ್ರತಿನಿತ್ಯ ತಮ್ಮ ಕೆಲಸಕ್ಕಾಗಿ ಒಂದು ಕಡೆಯಿಂದ ಇನ್ನೊಂದು ಕಡೆ ಸಾಗುವ ಸಾಕಷ್ಟು ಮೆಟ್ರೋ ಪ್ರಯಾಣಿಕರಿದ್ದಾರೆ. ಆದರೆ, ಹಲವು ಜನರಿಗೆ ಕಾಡುವ ಸಮಸ್ಯೆ ಎಂದರೆ ಮೆಟ್ರೋ ಬಳಿ ಪಾರ್ಕಿಂಗ್ ಸಮಸ್ಯೆ. ತಮ್ಮ ನಿವಾಸದಿಂದ ಮೆಟ್ರೋ ನಿಲ್ದಾಣದವರೆಗೆ ತಮ್ಮ ಸ್ವಂತ ವಾಹನದ ಮೂಲಕ ಬಂದು, ನಂತರ ಮೆಟ್ರೋ ಹತ್ತಿ ಸಾಗುವ ಹಲವರಿದ್ದಾರೆ. ಆದರೆ ಕೆಲ ಮೆಟ್ರೋ ನಿಲ್ದಾಣಗಳಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಇದರಿಂದಾಗಿ ಸಾಕಷ್ಟು ಜನರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಮೆಟ್ರೋ ನಿಲ್ದಾಣಗಳ ಸುತ್ತಲೂ ಸಾಕಷ್ಟು ವಾಹನಗಳು ಅಸ್ಥವ್ಯಸ್ಥವಾಗಿ ನಿಂತಿರುವುದನ್ನು ಸಹ ಎಲ್ಲೆಡೆ ಗಮನಿಸಬಹುದು. 

ಈ ಎಲ್ಲ ಸಮಸ್ಯೆಗಳನ್ನು ಸಾಕಷ್ಟು ಜನರು ಹೇಳಿಕೊಂಡಿದ್ದು, ನಿಜ ಸ್ಥಿತಿಯ ಅರಿವಾದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಆಯ್ದ ಸ್ಥಳಗಳಲ್ಲಿ ಬಹು ಮಹಡಿಯ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಯೋಚಿಸುತ್ತಿದೆ. ಅನೇಕ ಪ್ರಯಾಣಿಕರು ಮತ್ತು ಇತರರು ತಮ್ಮ ವಾಹನಗಳನ್ನು ಮೆಟ್ರೋ ನಿಲ್ದಾಣಗಳ ಬಳಿಯ ರಸ್ತೆಗಳಲ್ಲಿ ನಿಲ್ಲಿಸುವುದರಿಂದ ಸಂಚಾರ ದಟ್ಟಣೆಯೂ ಹೆಚ್ಚುತ್ತಿದೆ. 

ಇದ್ದ ಸ್ಥಳಾವಕಾಶವನ್ನೇ ಬಳಸಿಕೊಂಡು ಅಲ್ಲೇ ಪಾರ್ಕಿಂಗ್ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಇದರಿಂದ ಎಲ್ಲರಿಗೂ ಅನುಕೂಲವಾಗಿದೆ. ಮಾಲ್‌ಗಳಲ್ಲಿ ಮಾಡಿದಂತೆಯೇ ಮೆಟ್ರೋ ನಿಲ್ದಾಣಗಳ ಹತ್ತಿರವೂ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು BMRCL ಅಧಿಕಾರಿಯೊಬ್ಬರು ಹೇಳಿದ್ದಾರೆಂದು ದಿ ಹಿಂದು ಜಾಲತಾಣ ವರದಿ ಮಾಡಿದೆ. ಮೆಟ್ರೋ ನಿಲ್ದಾಣಗಳ ಬಳಿ ತಮ್ಮ ಮನೆಯನ್ನು ಹೊಂದಿರುವ ಸಾಕಷ್ಟು ಜನರು ಈಗಲೂ ಸಮಸ್ಯೆಯನ್ನು ಅನುಭವಿಸುತ್ತಲೇ ಇದ್ದಾರೆ ಎಂಬ ಕುರಿತೂ ವರದಿಯಾಗಿದೆ. 

ಸಾಕಷ್ಟು ಜನರು ತಮ್ಮ ಮನೆಯ ಮುಂದೆ ವಾಹನ ನಿಲುಗಡೆಗೆ ಅವಕಾಶ ಇಲ್ಲ ಎಂದು ಫಲಕ ಹಾಕಿದ್ದರೂ ಸಹ ಅದನ್ನು ಲೆಕ್ಕಿಸದೇ ಕೆಲವರು ಮನೆಯ ಮುಂದೆ ವಾಹನ ನಿಲ್ಲಿಸುತ್ತಾರೆ. ಇದರಿಂದ ನಮ್ಮ ವೈಯಕ್ತಿಕ ಬದುಕಿಗೆ ತೊಂದರೆ ಆಗುತ್ತಿದೆ. ನಮಗೆ ಅನಿವಾರ್ಯ ಇರುವ ಸಂದರ್ಭದಲ್ಲಿ ನಮ್ಮ ವಾಹನವನ್ನು ಮನೆಯಿಂದ ಹೊರಗಡೆ ತೆಗೆದುಕೊಂಡು ಹೋಗುವುದು ಸಹ ಕಷ್ಟವಾಗಿದೆ ಎಂಬ ಮಾತುಗಳು ಜನ ಸಾಮಾನ್ಯರಿಂದ ಕೇಳಿ ಬರುತ್ತಿದೆ. 

Suma Gaonkar

eMail
Whats_app_banner