ಬೆಂಗಳೂರು ಮೆಟ್ರೋದ ಹಳದಿ ಮಾರ್ಗ ಜೂನ್ ವೇಳೆಗೆ ಭಾಗಶಃ ಕಾರ್ಯಾರಂಭ; ಸೆಪ್ಟೆಂಬರ್ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಉದ್ಘಾಟನೆ ಸಾಧ್ಯತೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಮೆಟ್ರೋದ ಹಳದಿ ಮಾರ್ಗ ಜೂನ್ ವೇಳೆಗೆ ಭಾಗಶಃ ಕಾರ್ಯಾರಂಭ; ಸೆಪ್ಟೆಂಬರ್ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಉದ್ಘಾಟನೆ ಸಾಧ್ಯತೆ

ಬೆಂಗಳೂರು ಮೆಟ್ರೋದ ಹಳದಿ ಮಾರ್ಗ ಜೂನ್ ವೇಳೆಗೆ ಭಾಗಶಃ ಕಾರ್ಯಾರಂಭ; ಸೆಪ್ಟೆಂಬರ್ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಉದ್ಘಾಟನೆ ಸಾಧ್ಯತೆ

ಆರು ಬೋಗಿಗಳನ್ನು ಒಳಗೊಂಡಿರುವ ಮೊದಲ ಬ್ಯಾಚ್ ಫೆಬ್ರವರಿ 14 ರಂದು ಹೆಬ್ಬಗೋಡಿ ಡಿಪೋ ತಲುಪಿದೆ. ಕನಿಷ್ಠ ಮೂರು ರೈಲು ಸೆಟ್‌ಗಳೊಂದಿಗೆ ಸೇವೆಗಳನ್ನು ಪ್ರಾರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ.

ಬೆಂಗಳೂರು ಮೆಟ್ರೋದ ಹಳದಿ ಮಾರ್ಗ ಜೂನ್ ವೇಳೆಗೆ ಭಾಗಶಃ ಕಾರ್ಯಾರಂಭ
ಬೆಂಗಳೂರು ಮೆಟ್ರೋದ ಹಳದಿ ಮಾರ್ಗ ಜೂನ್ ವೇಳೆಗೆ ಭಾಗಶಃ ಕಾರ್ಯಾರಂಭ (ಸಂಗ್ರಹ ಚಿತ್ರ - wikipedia.)

ದೀರ್ಘಕಾಲದಿಂದ ವಿಳಂಬವಾಗಿದ್ದ ಬೆಂಗಳೂರಿನ ನಮ್ಮ ಮೆಟ್ರೋದ ಹಳದಿ ಮಾರ್ಗವು ಜೂನ್ 2025 ರ ವೇಳೆಗೆ ಭಾಗಶಃ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಅವರ ಪ್ರಕಾರ, ಕಾರಿಡಾರ್‌ನಲ್ಲಿ ಪೂರ್ಣ ಪ್ರಮಾಣದ ಸೇವೆಗಳು ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ ಪ್ರಾರಂಭವಾಗಬಹುದು. CMRS ಅನುಮೋದನೆ ದೊರೆತ ನಂತರ ಮತ್ತು ನಮಗೆ ಅಗತ್ಯವಿರುವ ರೈಲು ಸೆಟ್‌ಗಳು ದೊರೆತ ನಂತರ ಕಾರ್ಯಾಚರಣೆಗಳು ಪ್ರಾರಂಭವಾಗುತ್ತವೆ ಎಂದು ಅವರು ಹೇಳಿದ್ಧಾರೆ.

ಮೂರನೇ ರೈಲಿಗಾಗಿ ಕಾಯುತ್ತಿದ್ದೇವೆ. ಈ ತಿಂಗಳ ಅಂತ್ಯದ ವೇಳೆಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ ಎಂದು ಅವರು ಹೇಳಿದ್ದಾರೆ. ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಚಲಿಸುವ 19.15 ಕಿಮೀ ಹಳದಿ ಮಾರ್ಗದ ಕೆಲಸಗಳು ಹಲವಾರು ತಿಂಗಳುಗಳ ಹಿಂದೆಯೇ ಪೂರ್ಣಗೊಂಡಿವೆ. ಚೀನಾದಿಂದ ಖರೀದಿಸಲಾಗುತ್ತಿರುವ ಚಾಲಕರಹಿತ ರೈಲು ಸೆಟ್‌ಗಳ ಆಗಮನದಲ್ಲಿನ ವಿಳಂಬವು ಉದ್ಘಾಟನಾ ಸಮಯವನ್ನು ಮುಂದೂಡಿದೆ ಎಂದಿದ್ದಾರೆ.

ಆರು ಬೋಗಿಗಳನ್ನು ಒಳಗೊಂಡಿರುವ ಮೊದಲ ಬ್ಯಾಚ್ ಫೆಬ್ರವರಿ 14 ರಂದು ಹೆಬ್ಬಗೋಡಿ ಡಿಪೋ ತಲುಪಿದೆ. ಕನಿಷ್ಠ ಮೂರು ರೈಲು ಸೆಟ್‌ಗಳೊಂದಿಗೆ ಸೇವೆಗಳನ್ನು ಪ್ರಾರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ ಎಂದಿದ್ದಾರೆ.ಇನ್ಫೋಸಿಸ್ ಮತ್ತು ಬಯೋಕಾನ್‌ನಂತಹ ಪ್ರಮುಖ ಕಂಪನಿಗಳನ್ನು ಹೊಂದಿರುವ ಎಲೆಕ್ಟ್ರಾನಿಕ್ಸ್ ಸಿಟಿಯ ಕಾರಿಡಾರ್‌ನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮೆಟ್ರೋ ಸಂಸ್ಥೆ ಹಳದಿ ಮಾರ್ಗದ ಮೇಲೆ ಅವಲಂಬಿತವಾಗಿದೆ. ಒಮ್ಮೆ ಕಾರ್ಯರೂಪಕ್ಕೆ ಬಂದ ನಂತರ, ಹೊಸ ಮಾರ್ಗವು ದಕ್ಷಿಣ ಬೆಂಗಳೂರು ಮತ್ತು ನಗರದ ಬೆಳೆಯುತ್ತಿರುವ ಐಟಿ ಕ್ಲಸ್ಟರ್ ನಡುವೆ ನೇರ ಸಂಪರ್ಕವನ್ನು ಒದಗಿಸುತ್ತದೆ.

16 ನಿಲ್ದಾಣಗಳನ್ನು ಹೊಂದಿರುವ ಹಳದಿ ಮಾರ್ಗವು ನಗರದ ವಿಸ್ತರಿಸುತ್ತಿರುವ ಮೆಟ್ರೋ ಜಾಲದಲ್ಲಿ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಆರ್‌ವಿ ರಸ್ತೆಯಲ್ಲಿರುವ ಹಸಿರು ಮಾರ್ಗದೊಂದಿಗೆ ಸಂಪರ್ಕ ಸಾಧಿಸುತ್ತದೆ ಮತ್ತು ಜಯದೇವ ಆಸ್ಪತ್ರೆಯಲ್ಲಿ ನಿರ್ಮಾಣ ಹಂತದಲ್ಲಿರುವ ಪಿಂಕ್ ಮಾರ್ಗದೊಂದಿಗೂ ಸಂಪರ್ಕ ಹೊಂದಿರುತ್ತದೆ. ಈ ಹಿಂದೆ, ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಳದಿ ಮಾರ್ಗವನ್ನು ಮೇ ತಿಂಗಳೊಳಗೆ ಪ್ರಾರಂಭಿಸಲಾಗುವುದು ಎಂದು ಸೂಚಿಸಿದ್ದರು. ಆದರೆ ಮೊದಲಿನಿಂದಲೂ ಈ ಕೆಲಸ ವಿಳಂಬವಾಗುತ್ತಲೇ ಬಂದಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳು ಈಗ 2025ರ ಮಧ್ಯದಿಂದ ಅಂತ್ಯದವರೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ.

ಮೆಟ್ರೋ ದರ ಏರಿಕೆ ಆದರೂ ಸಹ ಹಲವರು ಇನ್ನು ಮೆಟ್ರೋ ಅವಲಂಬನೆಯಲ್ಲೇ ಇದ್ದಾರೆ. ಸಾಕಷ್ಟು ಪ್ರಯಾಣಿಕರಿಗೆ ಇದು ಅನುಕೂಲಕರವಾಗಿದೆ. ಯಾವುದೇ ಟ್ರಾಫಿಕ್ ಇಲ್ಲದೆ ಆರಾಮದಾಯಕ ಪ್ರಯಾಣವನ್ನು ನೀಡುತ್ತಿರುವ ಕಾರಣ ಎಲ್ಲ ನಾಗರಿಕರೂ ಸಹ ಮೆಟ್ರೋವನ್ನು ಖುಷಿಯಿಂದ ಸ್ವಾಗತಿಸುತ್ತಾರೆ. ಇನ್ನು ಮುಂದಿನ ದಿನಗಳಲ್ಲಿ ಆಗುವ ಹಳದಿ ಮಾರ್ಗವು ಇನ್ನಷ್ಟು ಪ್ರಯಾಣಿಕರಿಗೆ ಸುಗಮ ಪ್ರಯಾಣವನ್ನು ಕಲ್ಪಿಸಲಿದೆ.

Suma Gaonkar

eMail
Whats_app_banner