ಜನರ ಆಕ್ರೋಶಕ್ಕೆ ಮಣಿದು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಉಣಿಸಿದ BMRCL; ಟಿಕೆಟ್‌ ದರ 10 ರೂ ಇಳಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  ಜನರ ಆಕ್ರೋಶಕ್ಕೆ ಮಣಿದು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಉಣಿಸಿದ Bmrcl; ಟಿಕೆಟ್‌ ದರ 10 ರೂ ಇಳಿಕೆ

ಜನರ ಆಕ್ರೋಶಕ್ಕೆ ಮಣಿದು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಉಣಿಸಿದ BMRCL; ಟಿಕೆಟ್‌ ದರ 10 ರೂ ಇಳಿಕೆ

ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರು ತುಸು ನಿಟ್ಟುಸಿರು ಬಿಟ್ಟಿದ್ದಾರೆ. ಟಿಕೆಟ್‌ ದರವನ್ನು ಗರಿಷ್ಠ10 ರೂ. ಇಳಿಸಲಾಗಿದೆ. ಕೆಲವು ಸ್ಟೇಷನ್‌ಗಳವರೆಗಿನ ಪ್ರಯಾಣ ದರ ಮಾತ್ರ ಇಳಿಕೆ ಮಾಡಲಾಗಿದೆ.

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಉಣಿಸಿದ BMRCL; ಟಿಕೆಟ್‌ ದರ 10 ರೂ ಇಳಿಕೆ
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಉಣಿಸಿದ BMRCL; ಟಿಕೆಟ್‌ ದರ 10 ರೂ ಇಳಿಕೆ

ಬೆಂಗಳೂರು: ಪ್ರೇಮಿಗಳ ದಿನದಂದು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ಗುಡ್‌ ನ್ಯೂಸ್‌ ಕೊಟ್ಟಿದೆ. ಪ್ರಯಾಣ ದರ ಏರಿಕೆಯ ನಂತರ ವ್ಯಾಪಕ ವಿರೋಧದ ಬೆನ್ನಲ್ಲೇ ಟಿಕೆಟ್‌ ದರವನ್ನು ಅಲ್ಪ ಪ್ರಮಾಣದಲ್ಲಿ ಇಳಿಸಲಾಗಿದೆ. ಮೆಟ್ರೋ ಟಿಕೆಟ್‌ನ ಕನಿಷ್ಠ ಹಾಗೂ ಗರಿಷ್ಠ ದರ ಹಾಗೆಯೇ ಇರಲಿದೆ. ಆದರೆ, ಕೆಲವು ಸ್ಟೇಷನ್‌ಗಳಿಗೆ ಇರುವ ಟಿಕೆಟ್‌ ಬೆಲೆಯಲ್ಲಿ 10 ರೂ ಇಳಿಸಲಾಗಿದೆ. ಇದು ನಿತ್ಯದ ಪ್ರಯಾಣಿಕರಿಗೆ ತುಸು ನೆಮ್ಮದಿ ತರಿಸಿದೆ.

ಟಿಕೆಟ್‌ ದರದಲ್ಲಿ ದೊಡ್ಡ ಬದಲಾವಣೆ ಇಲ್ಲ. ಕನಿಷ್ಠ ಬೆಲೆ 10 ರೂ ಹಾಗೂ ಗರಿಷ್ಠ ಬೆಲೆ 90 ರೂ ಹಾಗೆಯೇ ಇರಲಿದೆ. ಆದರೆ ಕೆಲವು ದೂರಗಳಿಗೆ ಏರಿಸಿದ್ದ ಬೆಲೆಯಲ್ಲಿ ಗರಿಷ್ಠ 10 ರೂ ಇಳಿಸಲಾಗಿದೆ. ಟಿಕೆಟ್‌ ದರ ಏರಿಕೆ ಕುರಿತು ಸಾರ್ವಜನಿಕರ ವಿರೋಧ ವ್ಯಕ್ತವಾಗಿದ್ದ ಬೆನ್ನಲ್ಲೇ, ಗುರುವಾರ (ಫೆ.13) ಬಿಎಂಆರ್‌ಸಿಎಲ್ ಎಂಡಿ ಮಹೇಶ್ವರ್ ರಾವ್ ಸುದ್ದಿಗೋಷ್ಠಿ ನಡೆಸಿ, ಟಿಕೆಟ್‌ ದರ ಇಳಿಕೆಗೆ ಸಾಧ್ಯವಾದಷ್ಟೂ ಪ್ರಯತ್ನಿಸುವುದಾಗಿ ಹೇಳಿದ್ದರು. ಸ್ಟೇಜ್‌ ಆಧಾರದಲ್ಲಿ ದರ ಇಳಿಕೆ ಮಾಡಲಾಗುತ್ತದೆ. ಶೇ.45ರಿಂದ 50ರವರೆಗೆ ದರ ಹೆಚ್ಚಳವಾಗಿರುವಲ್ಲಿ ಇಳಿಕೆ ಮಾಡಲಾಗುತ್ತದೆ ಎಂದು ಎಂಡಿ ಹೇಳಿದ್ದರು.

ಎಲ್ಲಿ ದರ ಇಳಿಕೆ ಸಾಧ್ಯವಿದೆಯೋ ಅಲ್ಲಿ ಇಳಿಸಲಾಗುವುದು. ಸದ್ಯ ದರ ಪರಿಷ್ಕರಣೆ ಮಾಡಲಾಗುವುದಿಲ್ಲ. ಕನಿಷ್ಠ 10 ಹಾಗೂ ಗರಿಷ್ಠ ಟಿಕೆಟ್‌ ಟಿಕೆಟ್‌ ದರ 90 ರೂ. ಹಾಗೆಯೇ ಇರಲಿದೆ. ಸ್ಟೇಜ್‌ನಿಂದ ಸ್ಟೇಜ್‌ಗೆ ಬೆಲೆ ದುಪ್ಪಟ್ಟಾಗಿರುವಲ್ಲಿ ಇಳಿಕೆ ಪ್ರಯತ್ಮ ಮಾಡಲಾಗುತ್ತದೆ. ಅಲ್ಲಿ ದರವನ್ನು ಮರ್ಜ್‌ ಮಾಡಲಾಗುತ್ತದೆ ಎಂದು ಹೇಳಿದ್ದರು. ಅದರಂತೆಯೇ ಇಂದಿನಿಂದ ಕೆಲವು ಸ್ಟೇಷನ್‌ಗಳಿಗೆ ಟಿಕೆಟ್‌ ಬೆಲೆ ಇಳಿಕೆಯಾಗಿದೆ.

ಹೀಗಿದೆ ಟಿಕೆಟ್‌ ಬೆಲೆ ಬದಲಾವಣೆ

ಮೆಜೆಸ್ಟಿಕ್‌ನಿಂದ ವೈಟ್‌ಫೀಲ್ಡ್‌ಗೆ ಏರಿಸಲಾಗಿದ್ದ 90 ರೂ ಅನ್ನು 80ಕ್ಕೆ ಇಳಿಸಲಾಗಿದೆ. ಮೆಜೆಸ್ಟಿಕ್‌ನಿಂದ ವಿಧಾನಸೌಧಕ್ಕೆ ಇದ್ದ 20 ರೂ ಅನ್ನು 10 ರೂ.ಗೆ ಇಳಿಸಲಾಗಿದೆ. ಚಲ್ಲಘಟ್ಟಕ್ಕೆ ಇದ್ದ 70 ರೂ. ಅನ್ನು 60ಕ್ಕೆ ಇಳಿಸಲಾಗಿದೆ. ಮೆಜೆಸ್ಟಿಕ್‌ನಿಂದ ಬೈಯಪ್ಪನಹಳ್ಳಿಗೆ ಇದ್ದ 60 ರೂ. ಅನ್ನು 50ಕ್ಕೆ ಇಳಿಸಲಾಗಿದೆ. ಸಿಲ್ಕ್‌ ಇನ್‌ಸ್ಟಿಟ್ಯೂಟ್‌ಗೆ ಇದ್ದ 70 ರೂ. ಅನ್ನು 60ಕ್ಕೆ ಇಳಿಸಲಾಗಿದೆ. ಜಾಲಹಳ್ಳಿಯಿಂದ ಸಿಲ್ಕ್‌ ಇನ್‌ಸ್ಟಿಟ್ಯೂಟ್‌ಗೆ ಏರಿಸಿದ್ದ 90 ರೂ ಹಾಗೆಯೇ ಇರಲಿದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner