ಕಲಬುರಗಿ ವ್ಯಕ್ತಿಯ ಮಂಡಿ ಚಿಪ್ಪು ಬದಲಾವಣೆಗೆ ರೊಬೋಟಿಕ್ ಚಿಕಿತ್ಸೆ; ಬೆಂಗಳೂರು ನಾರಾಯಣ ಹೆಲ್ತ್ ವೈದ್ಯರ ತಂಡದಿಂದ ಸಂಕೀರ್ಣ ಶಸ್ತ್ರ ಚಿಕಿತ್ಸೆ
ಕನ್ನಡ ಸುದ್ದಿ  /  ಕರ್ನಾಟಕ  /  ಕಲಬುರಗಿ ವ್ಯಕ್ತಿಯ ಮಂಡಿ ಚಿಪ್ಪು ಬದಲಾವಣೆಗೆ ರೊಬೋಟಿಕ್ ಚಿಕಿತ್ಸೆ; ಬೆಂಗಳೂರು ನಾರಾಯಣ ಹೆಲ್ತ್ ವೈದ್ಯರ ತಂಡದಿಂದ ಸಂಕೀರ್ಣ ಶಸ್ತ್ರ ಚಿಕಿತ್ಸೆ

ಕಲಬುರಗಿ ವ್ಯಕ್ತಿಯ ಮಂಡಿ ಚಿಪ್ಪು ಬದಲಾವಣೆಗೆ ರೊಬೋಟಿಕ್ ಚಿಕಿತ್ಸೆ; ಬೆಂಗಳೂರು ನಾರಾಯಣ ಹೆಲ್ತ್ ವೈದ್ಯರ ತಂಡದಿಂದ ಸಂಕೀರ್ಣ ಶಸ್ತ್ರ ಚಿಕಿತ್ಸೆ

ಆಸ್ಟಿಯೋ ಆರ್ಥರೈಟಿಸ್ (ಅಸ್ಥಿ ಸಂಧಿವಾತ) ಸಮಸ್ಯೆ ಬಹಳ ನೋವು ಕೊಡುವಂಥದ್ದು. ಈ ರೀತಿ ನೋವು ಅನುಭವಿಸಿದ್ದ ಕಲಬುರಗಿ ವ್ಯಕ್ತಿಯ ಮಂಡಿ ಚಿಪ್ಪು ಬದಲಾವಣೆಗೆ ರೊಬೋಟಿಕ್ ಚಿಕಿತ್ಸೆ ಮಾಡಿ ಪರಿಹಾರ ಒದಗಿಸುವಲ್ಲಿ ಬೆಂಗಳೂರು ನಾರಾಯಣ ಹೆಲ್ತ್ ವೈದ್ಯರ ತಂಡ ಯಶಸ್ವಿಯಾಗಿದೆ. ಸಂಕೀರ್ಣ ಶಸ್ತ್ರ ಚಿಕಿತ್ಸೆಯ ವಿವರ ಇಲ್ಲಿದೆ.

ಕಲಬುರಗಿ ವ್ಯಕ್ತಿಯ ಮಂಡಿ ಚಿಪ್ಪು ಬದಲಾವಣೆಗೆ ರೊಬೋಟಿಕ್ ಚಿಕಿತ್ಸೆ ಯಶಸ್ವಿಯಾಗಿದೆ. ಬೆಂಗಳೂರು ನಾರಾಯಣ ಹೆಲ್ತ್ ವೈದ್ಯರ ತಂಡದಿಂದ ಸಂಕೀರ್ಣ ಶಸ್ತ್ರ ಚಿಕಿತ್ಸೆ ನಡೆದಿದ್ದು, ಕಲಬುರಗಿಯ ರವೀಂದ್ರ ಇತ್ತಂಗುಡಿ (ಬಲ ಚಿತ್ರ)
ಕಲಬುರಗಿ ವ್ಯಕ್ತಿಯ ಮಂಡಿ ಚಿಪ್ಪು ಬದಲಾವಣೆಗೆ ರೊಬೋಟಿಕ್ ಚಿಕಿತ್ಸೆ ಯಶಸ್ವಿಯಾಗಿದೆ. ಬೆಂಗಳೂರು ನಾರಾಯಣ ಹೆಲ್ತ್ ವೈದ್ಯರ ತಂಡದಿಂದ ಸಂಕೀರ್ಣ ಶಸ್ತ್ರ ಚಿಕಿತ್ಸೆ ನಡೆದಿದ್ದು, ಕಲಬುರಗಿಯ ರವೀಂದ್ರ ಇತ್ತಂಗುಡಿ (ಬಲ ಚಿತ್ರ)

ಬೆಂಗಳೂರು: ಕಲಬುರಗಿಯ ಮೂರೂವರೆ ಅಡಿ ಎತ್ತರ ವ್ಯಕ್ತಿಯ ಮಂಡಿ ನೋವು ಸಮಸ್ಯೆಗೆ ಬೆಂಗಳೂರಿನ ನಾರಾಯಣ ಹೆಲ್ತ್‌ ವೈದ್ಯರ ತಂಡ ರೊಬೋಟಿಕ್ ಚಿಕಿತ್ಸೆ ಮೂಲಕ ಪರಿಹಾರ ಒದಗಿಸಿದೆ. ಆಸ್ಟಿಯೋ ಆರ್ಥರೈಟಿಸ್ (ಅಸ್ಥಿ ಸಂಧಿವಾತ) ಸಮಸ್ಯೆಯಿಂದ ಬಳಲುತ್ತಿದ್ದ ಕಲಬುರಗಿ ವ್ಯಕ್ತಿಯ ಮಂಡಿಚಿಪ್ಪು ಬದಲಾವಣೆಗೆ ನಾರಾಯಣ ಹೆಲ್ತ್‌ ವೈದ್ಯರ ತಂಡ ರೊಬೋಟಿಕ್ಸ್ ಚಿಕಿತ್ಸೆ ಬಳಸಿ ಅವರಿಗೆ ಯಶಸ್ವಿ ಪರಿಹಾರ ಒದಗಿಸಿದೆ ಎಂದು ಎಎನ್‌ಐ ವರದಿ ಮಾಡಿದೆ. ತೀವ್ರ ಅಸ್ಥಿ ಸಂಧಿವಾತ ಮತ್ತು ವಿರೂಪಗೊಂಡ ಕಾಲುಗಳ ಸಮಸ್ಯೆ ನೀಗಿಸಲು ಕ್ರಾಂತಿಕಾರಿ ಪೂರ್ಣ ಪ್ರಮಾಣದ ಮಂಡಿ ಚಿಪ್ಪು ಬದಲಾವಣೆ ಚಿಕಿತ್ಸೆ ನಡೆಸಲಾಯಿತು ಎಂದು ನಾರಾಯಣ ಹೆಲ್ತ್ ಸಿಟಿ ಮೂಳೆ ರೋಗ ತಜ್ಞ ಡಾ.ಬಿ.ಎನ್.ಪ್ರಶಾಂತ್ ಹೇಳಿದ್ದಾರೆ.

ಮಂಡಿ ಚಿಪ್ಪು ಬದಲಾವಣೆಗೆ ರೊಬೋಟಿಕ್ ಚಿಕಿತ್ಸೆ

ಕಲಬುರಗಿಯ ರವೀಂದ್ರ ಇತ್ತಂಗುಡಿ (57) ಎಂಬುವವರು ಆಸ್ಟಿಯೋ ಆರ್ಥರೈಟಿಸ್ (ಅಸ್ಥಿ ಸಂಧಿವಾತ) ಸಮಸ್ಯೆಯಿಂದ ಬಳಲುತ್ತಿದ್ದರು. ಹಲವು ವರ್ಷಗಳಿಂದ ತೀವ್ರ ಮಂಡಿ ನೋವು ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ನೋವು ಕಡಿಮೆಯಾಗಿರಲಿಲ್ಲ. ನಡೆದಾಡುವುದಕ್ಕೂ ಕಷ್ಟ ಪಡುತ್ತಿದ್ದ ರವೀಂದ್ರ ಇತ್ತಂಗುಡಿ ಅವರು ನಾರಾಯಣ ಹೆಲ್ತ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದಾರೆ. ಸಣ್ಣ ಇಂಪ್ಲಾಂಟ್‌ನೊಂದಿಗೆ ಮಂಡಿ ಚಿಪ್ಪು ಬದಲಾವಣೆ ಮಾಡಲಾಗಿದೆ ಎಂದು ಡಾ. ಬಿಎನ್‌ ಪ್ರಶಾಂತ್ ವಿವರಿಸಿದ್ದಾಗಿ ವರದಿ ಹೇಳಿದೆ.

ಈಗ ರವೀಂದ್ರ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಆರಂಭದಲ್ಲಿ ಓಡಾಡಲು ಊರುಗೋಲು ಬಳಸುತ್ತಿದ್ದರು. ಈಗ ಯಾವುದೇ ಊರುಗೋಲು ಅಥವಾ ಯಾರ ನೆರವೂ ಇಲ್ಲದೆ ಸ್ವತಂತ್ರವಾಗಿ ಓಡಾಡುತ್ತಿದ್ದಾರೆ. ರವೀಂದ್ರ ಅವರು ಈ ಹಿಂದೆ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆಗ ಶಸ್ತ್ರ ಚಿಕಿತ್ಸೆ ನಡೆಸುವಾಗ ಪ್ರತಿ ಹಂತದಲ್ಲೂ ಸವಾಲು ಎದುರಾಗಿತ್ತು. ತೊಡೆಯ ಮೂಳೆಯು ಅಸಮವಾಗಿದ್ದ ಕಾರಣ ಮಂಡಿಯ ಚಲನವಲನಕ್ಕೆ ಪೂರಕವಾಗಿರಲಿಲ್ಲ. ಎಕ್ಸ್‌ ರೇ ಮತ್ತು ಸಿಟಿ ಸ್ಕ್ಯಾನಿಂಗ್ ಪರೀಕ್ಷೆ ನಡೆಸಿ ಶಸ್ತ್ರಚಿಕಿತ್ಸೆ ಕುರಿತು ಖಚಿತ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಡಾ. ಬಿಎನ್ ಪ್ರಶಾಂತ್ ವಿವರಿಸಿದರು.

ಮಂಡಿಚಿಪ್ಪು ಬದಲಾವಣೆಗೆ ರೊಬೋಟಿಕ್ ಚಿಕಿತ್ಸೆ ವರದಾನ

"ವರ್ಷಗಳ ಕಾಲ ತೀವ್ರ ಕಾಲು ನೋವಿನಿಂದ ನನ್ನ ಕುಳಿತುಕೊಳ್ಳುವ, ನಡೆಯುವ ಮತ್ತು ಸಾಮಾನ್ಯ ಚಲನೆಯನ್ನು ನಿರ್ವಹಿಸುವ ಸಾಮರ್ಥ್ಯ ಕಡಿಮೆಯಾಗಿತ್ತು. ನಾನು ಡಾ. ಪ್ರಶಾಂತ್ ಬಿಎನ್ ಮತ್ತು ನಾರಾಯಣ ಹೆಲ್ತ್‌ನ ಸಮರ್ಪಿತ ವೈದ್ಯರ ತಂಡಕ್ಕೆ ಕೃತಜ್ಞನಾಗಿದ್ದೇನೆ. ಅವರು ನನ್ನ ಸ್ಥಿತಿಯನ್ನು ಕೌಶಲ್ಯ ಮತ್ತು ಸಹಾನುಭೂತಿಯಿಂದ ಪರಿಹರಿಸಿದರು, ನನ್ನ ವಿರೂಪತೆಯನ್ನು ಸರಿಪಡಿಸಿದರು ಮತ್ತು ವೈಯಕ್ತಿಕಗೊಳಿಸಿದ ಒಟ್ಟು ಮಂಡಿ ಚಿಪ್ಪು ಬದಲಾವಣೆ ಮಾಡಿಕೊಟ್ಟರು. ಈಗ ನೋವು ಮತ್ತು ಯಾವುದೇ ತೊಂದರೆ ಇಲ್ಲದೆ ಸಾಮಾನ್ಯರಂತೆ ನಡೆಯಬಲ್ಲೆ ಎಂದು ಕಲಬುರಗಿಯ ರವೀಂದ್ರ ಇತ್ತಂಗುಡಿ ಹೇಳಿದರು.

ಕಲಬುರಗಿಯ ರವೀಂದ್ರ ಇತ್ತಂಗುಡಿ ಅವರ ಮಂಡಿ ಚಿಪ್ಪು ಬದಲಾವಣೆಗೆ ರೊಬೋಟಿಕ್‌ ಶಸ್ತ್ರ ಚಿಕಿತ್ಸೆಗಾಗಿ ಸಿ.ಟಿ. ಇಮೇಜಿಂಗ್ ಹಾಗೂ ತ್ರೀ–ಡಿ ಮಾದರಿಗಳನ್ನು ಬಳಸಲಾಗಿದೆ. ಅವುಗಳ ಮೂಲಕ ರೋಗಿಯ ಮಂಡಿಯ ಚಲನವಲನಗಳಿಗೆ ಅನುಕೂಲವಾಗುವಂತಹ ಇಂಪ್ಲಾಂಟ್‌ಗಳನ್ನು ವಿನ್ಯಾಸಗೊಳಿಸಲಾಯಿತು. ಈ ಸುಧಾರಿತ ವಿಧಾನವು ರೋಗಿಯ ಕಾಲಿನ ಸಮಸ್ಯೆ ನಿವಾರಣೆಗೆ ನೆರವಾಗಿದ್ದು, ಚಿಕಿತ್ಸೆಯೂ ದುಬಾರಿಯಲ್ಲ ಎಂದು ಡಾಕ್ಟರ್ ಬಿಎನ್ ಪ್ರಶಾಂತ್ ಹೇಳಿದರು.

ಆರ್ಥೋಪೆಡಿಕ್ಸ್, ಬೆನ್ನೆಲುಬು ಮತ್ತು ಟ್ರಾಮಾ ವಿಭಾಗದ ನಿರ್ದೇಶಕ ಮತ್ತು ಎಚ್‌ಒಡಿ ಅರುಣ್ ರಂಗನಾಥನ್, ಡಾ ಅಭಿನಂದನ್ ಎಸ್ ಪುನೀತ್ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಜತೆಗಿದ್ದರು.

Whats_app_banner