ಹವಾಮಾನ ವೈಪರೀತ್ಯ; ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ 9 ವಿಮಾನಗಳು ಚೆನ್ನೈಗೆ ಡೈವರ್ಟ್, 3 ದಿನದಲ್ಲಿ 2ನೇ ಘಟನೆ
ಕನ್ನಡ ಸುದ್ದಿ  /  ಕರ್ನಾಟಕ  /  ಹವಾಮಾನ ವೈಪರೀತ್ಯ; ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ 9 ವಿಮಾನಗಳು ಚೆನ್ನೈಗೆ ಡೈವರ್ಟ್, 3 ದಿನದಲ್ಲಿ 2ನೇ ಘಟನೆ

ಹವಾಮಾನ ವೈಪರೀತ್ಯ; ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ 9 ವಿಮಾನಗಳು ಚೆನ್ನೈಗೆ ಡೈವರ್ಟ್, 3 ದಿನದಲ್ಲಿ 2ನೇ ಘಟನೆ

ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ 9 ವಿಮಾನಗಳನ್ನು ಚೆನ್ನೈಗೆ ಡೈವರ್ಟ್ ಮಾಡಲಾಗಿದೆ. ಇದರಲ್ಲಿ ಪ್ಯಾರಿಸ್, ಆಂಸ್ಟರ್ಡ್ಯಾಮ್ ಹಾಗೂ ಬ್ಯಾಂಕಾಕ್‌ನಿಂದ ಬಂದಿದ್ದ ವಿಮಾನಗಳು ಸೇರಿವೆ.

ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಬೆಂಗಳೂರಿನಲ್ಲಿ ಲ್ಯಾಂಡಿಂಗ್ ಆಗಬೇಕಿದ್ದ 9 ವಿಮಾನಗಳನ್ನು ಚೆನ್ನೈ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ.
ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಬೆಂಗಳೂರಿನಲ್ಲಿ ಲ್ಯಾಂಡಿಂಗ್ ಆಗಬೇಕಿದ್ದ 9 ವಿಮಾನಗಳನ್ನು ಚೆನ್ನೈ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ.

ಬೆಂಗಳೂರಿನಲ್ಲಿ ಭಾನುವಾರವೂ (ಮೇ 12) ಭಾರೀ ಮಳೆಯಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Kempegowda International Airport) ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಹವಾಮಾನ ವೈಪರೀತ್ಯದಿಂದಾಗಿ (Bad Weather) ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಬೇಕಿದ್ದ 9 ವಿಮಾನಗಳನ್ನು ಚೆನ್ನೈ ವಿಮಾನ ನಿಲ್ದಾಣಕ್ಕೆ (Chennai Airport) ತಿರುಗಿಸಲಾಗಿದೆ ಎಂದು ವರದಿಯಾಗಿದೆ. 3 ದಿನಗಳ ಅಂತರದಲ್ಲಿ ಇದು ಎರಡನೇ ಘಟನೆಯಾಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮುಂಬೈನಿಂದ ಅಕಾಸಾ ಏರ್ ವಿಮಾನ (ಕ್ಯೂಪಿ 1341), ದೆಹಲಿಯಿಂದ ವಿಸ್ತಾರಾ ವಿಮಾನ (ಯುಕೆ 807), ಗುವಾಹಟಿಯಿಂದ ಏರ್ ಏಷ್ಯಾ ವಿಮಾನ (ಐ 5821), ಮುಂಬೈನಿಂದ ಏರ್ ಇಂಡಿಯಾ ವಿಮಾನ (ಎಐ 585), ಗೋವಾದಿಂದ ಅಲಯನ್ಸ್ ಏರ್ ವಿಮಾನ (9 ಐ 548) ಬೆಂಗಳೂರಿನಿಂದ ಬೇರೆಡೆಗೆ ತಿರುಗಿಸಿದ ದೇಶೀಯ ವಿಮಾನಗಳಲ್ಲಿ ಸೇರಿವೆ.

ಬ್ಯಾಂಕಾಕ್‌ನಿಂದ ಥಾಯ್ ಲಯನ್ ಏರ್ ವಿಮಾನ (ಎಸ್ಎಲ್ 216), ಪ್ಯಾರಿಸ್‌ನಿಂದ ಏರ್ ಫ್ರಾನ್ಸ್ ವಿಮಾನ (ಎಎಫ್ 194), ಬ್ಯಾಂಕಾಕ್‌ನಿಂದ ಥಾಯ್ ವಿಮಾನ (ಟಿಜಿ 325) ಮತ್ತು ಆಮ್ಸ್ಟರ್ಡ್ಯಾಮ್‌ನಿಂದ ಕೆಎಲ್ಎಂ ವಿಮಾನ (ಕೆಎಲ್ 879) ಚೆನ್ನೈ ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡಲಾದ ಅಂತಾರಾಷ್ಟ್ರೀಯ ವಿಮಾನಗಳಾಗಿವೆ. ಆದರೆ, ಭಾನುವಾರ (ಮೇ 12) ಮಧ್ಯರಾತ್ರಿಯ ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯಮಿತ ಕಾರ್ಯಾಚರಣೆಯನ್ನು ಪುನರಾರಂಭಿಸಲಾಯಿತು.

ಕಳೆದ ವಾರ ಬೆಂಗಳೂರಿನ ದೇವನಹಳ್ಳಿಯಲ್ಲಿ ಭಾರಿ ಮಳೆಯಾಗಿತ್ತು. ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2ರ ಮೇಲ್ಛಾವಣಿ ಸೋರಿಕೆಯಾಗಿದ್ದು ಭಾರಿ ಸುದ್ದಿಯಾಗಿತ್ತು. ಮುಂದಿನ ಕೆಲವು ದಿನಗಳವರೆಗೆ ಬೆಂಗಳೂರಿನ ಕೆಲವು ಭಾಗಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಈಗಾಗಲೇ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ನಗರದಾದ್ಯಂತ ಅನೇಕ ಮರಗಳು ಬುಡಮೇಲಾಗಿವೆ. ರಸ್ತೆಗಳಲ್ಲಿ ಮಳೆ ನೀರು ಉಕ್ಕಿ ಹರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ.

ಸೋಮವಾರ (ಮೇ 13) ಬೆಳಿಗ್ಗೆ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೆರಳುವಾಗ ವಾಹನ ಸವಾರರು ಒದ್ದೆಯಾದ ರಸ್ತೆಗಳಲ್ಲಿ ಎಚ್ಚರ ವಹಿಸಬೇಕೆಂದು ಸಂಚಾರ ಪೊಲೀಸರು ಬೈಕ್ ಸವಾರರಿಗೆ ಸಲಹೆ ನೀಡಿದ್ದರು. ಹವಾಮಾನ ವೈಪರೀತ್ಯದಿಂದಾಗಿ ವಿಮಾನಗಳ ವಿಳಂಬ, ಬೇರ ಕಡೆಗೆ ತಿರುವು ಹಾಗೂ ವಿಮಾನಗಳ ಹಾರಾಟ ರದ್ದು ಬಗ್ಗೆ ವಿಮಾನಯಾನ ಸಂಸ್ಥೆಗಳು ಮಾಡುವ ಪ್ರಕಟಣೆಗಳನ್ನು ಪ್ರಯಾಣಿಕರು ಗಮನಿಸಿ ತಮ್ಮ ಮುಂದಿನ ನಿರ್ಧಾರಗಳನ್ನು ಕೈಗೊಂಡರೆ ಮುಂದಾಗುವ ಸಮಸ್ಯೆಗಳಿಂದ ಪಾರಾಗಬಹುದಾಗಿದೆ.

Whats_app_banner