Liquid Nitrogen Paan: ಮದುವೆಯಲ್ಲಿ ಲಿಕ್ವಿಡ್ ನೈಟ್ರೋಜನ್ ಪಾನ್ ತಿಂದು 12 ವರ್ಷದ ಬಾಲಕಿ ಹೊಟ್ಟೆಯಲ್ಲಿ ರಂಧ್ರ
ಕನ್ನಡ ಸುದ್ದಿ  /  ಕರ್ನಾಟಕ  /  Liquid Nitrogen Paan: ಮದುವೆಯಲ್ಲಿ ಲಿಕ್ವಿಡ್ ನೈಟ್ರೋಜನ್ ಪಾನ್ ತಿಂದು 12 ವರ್ಷದ ಬಾಲಕಿ ಹೊಟ್ಟೆಯಲ್ಲಿ ರಂಧ್ರ

Liquid Nitrogen Paan: ಮದುವೆಯಲ್ಲಿ ಲಿಕ್ವಿಡ್ ನೈಟ್ರೋಜನ್ ಪಾನ್ ತಿಂದು 12 ವರ್ಷದ ಬಾಲಕಿ ಹೊಟ್ಟೆಯಲ್ಲಿ ರಂಧ್ರ

ಲಿಕ್ವಿಡ್ ನೈಟ್ರೋಜನ್ ಪಾನ್ ಸೇವಿಸಿದ್ದ ಬಾಲಕಿಗೆ ಆರಂಭದಲ್ಲಿ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತು. ನಂತರ ಆಕೆಯ ಹೊಟ್ಟೆಯಲ್ಲಿ ರಂಧ್ರ ಕಂಡುಬಂದಿದ್ದರಿಂದ ವೈದ್ಯರು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದಾರೆ.

ಮದವೆ ಕಾರ್ಯಕ್ರಮದಲ್ಲಿ ಲಿಕ್ವಿಡ್ ನೈಟ್ರೋಜನ್ ಪಾನ್ ತಿಂದ 12 ವರ್ಷದ ಬಾಲಕಿ ಹೊಟ್ಟೆಯಲ್ಲಿ ರಂಧ್ರ ಕಾಣಿಸಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮದವೆ ಕಾರ್ಯಕ್ರಮದಲ್ಲಿ ಲಿಕ್ವಿಡ್ ನೈಟ್ರೋಜನ್ ಪಾನ್ ತಿಂದ 12 ವರ್ಷದ ಬಾಲಕಿ ಹೊಟ್ಟೆಯಲ್ಲಿ ರಂಧ್ರ ಕಾಣಿಸಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಲಿಕ್ವಿಡ್ ನೈಟ್ರೋಜನ್‌ (Liquid Nitrogen Paan) ನಿಂದ ತಯಾರಿಸಿದ್ದ ಜನಪ್ರಿಯ ಸ್ಮೋಕಿ ಪಾನ್ (Smoky Paan) ಸೇವಿಸಿದ 12 ವರ್ಷದ ಬಾಲಕಿಯ ಹೊಟ್ಟೆಯಲ್ಲಿ ರಂಧ್ರ ಕಾಣಿಸಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 'ಸ್ಮೋಕಿ ಪಾನ್' ಸೇವಿಸಿದ ನಂತರ ಬಾಲಕಿ ಅಸ್ವಸ್ಥಗೊಂಡಿದ್ದಾಳೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದ ಬಳಿಕ ಗ್ಯಾಸ್ಟ್ರೋ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಳೆ ಎಂದು ವರದಿಯಾಗಿದೆ. ಬಾಲಕಿಗೆ ಆರಂಭದಲ್ಲಿ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತು. ನಂತರ ಆಕೆಯ ಹೊಟ್ಟೆಯಲ್ಲಿ ರಂಧ್ರ ಕಂಡುಬಂದಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ಸಲಹೆ ನೀಡಿದ್ದಾರೆ.

ವರದಿಯ ಪ್ರಕಾರ, ಪ್ಯಾನ್ ತಿಂದ ನಂತರ ಜನರು ಬಾಯಿನಿಂದ ಹೊಗೆ ಬಿಡುವುದನ್ನು ನೋಡಿದ ಬಾಲಕಿ ತಾನು ಕೂಡ ಪಾನ್ ತಿಂದು ಹೊಗೆಯನ್ನು ಬಿಡಲು ಮುಂದಾಗಿದ್ದಾಳೆ. ಲಿಕ್ವಿಡ್ ನೈಟ್ರೋಜನ್ ಪಾನ್ ತಿಂದ ತಕ್ಷಣವೇ ಈಕೆ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ನೀಡಿರುವ ಬಾಲಕಿ, "ಎಲ್ಲರೂ ಹೊಗೆಯ ಪಾನ್ ಅನ್ನು ಪ್ರಯತ್ನಿಸುತ್ತಿದ್ದರು. ನಾನು ಸಹ ಅದನ್ನು ಒಂದು ಶಾಟ್ ನೀಡಲು ಬಯಸಿದ್ದೆ. ಅದನ್ನು ತಿಂದ ಕೂಡಲೇ ನಾನು ಅಸ್ವಸ್ಥಗೊಂಡೆ. ನಂತರ ನನ್ನ ಹೊಟ್ಟೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿತು. ಸ್ವಲ್ಪ ಸಮಯದ ನಂತರ ನೋವು ಹೆಚ್ಚಾಗಿ ತೀವ್ರ ಆರೋಗ್ಯ ಸಮಸ್ಯೆ ಕಂಡು ಬಂದಿತು. ಪಾನ್ ಸೇವಿಸಿದ ಇತರ ಜನರು ಚೆನ್ನಾಗಿದ್ದರು, ಆದರೆ ನನಗೆ ಅನಾರೋಗ್ಯವಾಯಿತು ಎಂದು ವಿವರಿಸಿದ್ದಾಳೆ.

ಸ್ಮೋಕಿ ಪಾನ್ ಬೆಂಗಳೂರಿನ ಜನಪ್ರಿಯ ಬೀದಿ ಆಹಾರ ಮಳಿಗೆಗಳಲ್ಲಿ ವ್ಯಾಪಕವಾಗಿ ಲಭ್ಯವಿರುತ್ತದೆ. ಸಾಕಷ್ಟು ಮಂದಿಯ ನೆಚ್ಚಿನ ಪಾನ್ ಕೂಡ ಇದಾಗಿದೆ. ಏತನ್ಮಧ್ಯೆ, ವೈದ್ಯರು ಇದನ್ನು ರಂಧ್ರ ಪೆರಿಟೋನಿಟಿಸ್ ಎಂದು ಕರೆದಿದ್ದಾರೆ. ಬಾಲಕಿಯ ಹೊಟ್ಟೆಯಲ್ಲಿ ರಂಧ್ರ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಇಂಟ್ರಾ-ಆಪ್ ಒಜಿಡಿ ಸ್ಕೋಪಿಯಿಂದ ಮಾತ್ರ ಈಕೆಯ ಮತ್ತಷ್ಟು ಸಮಸ್ಯೆಗಳಿಗೆ ಪರಿಹಾರ ಎಂದು ಹೇಳಿದ್ದಾರೆ.

"ಇಂಟ್ರಾ-ಆಪ್ ಒಜಿಡಿ ಸ್ಕೋಪಿ ಎಂಬುದು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅನ್ನನಾಳ, ಹೊಟ್ಟೆ ಮತ್ತು ಸಣ್ಣ ಕರುಳಿನ ಮೊದಲ ಭಾಗವಾದ ಡ್ಯುಡೆನಮ್ ಅನ್ನು ಪರೀಕ್ಷಿಸಲು ಕ್ಯಾಮೆರಾ ಮತ್ತು ಬೆಳಕನ್ನು ಹೊಂದಿರುವ ಟ್ಯೂಬ್ ಅನ್ನು ಬಳಸುವ ಒಂದು ಕಾರ್ಯವಿಧಾನವಾಗಿದೆ" ಎಂದು ಶಸ್ತ್ರಚಿಕಿತ್ಸಾ ತಂಡದ ನೇತೃತ್ವ ವಹಿಸಿದ್ದ ಆಪರೇಟಿಂಗ್ ಸರ್ಜನ್ ಡಾ ವಿಜಯ್ ಎಚ್‌ಎಸ್ ತಿಳಿಸಿದ್ದಾರೆ.

ಲಿಕ್ವಿಡ್ ನೈಟ್ರೋಜನ್ ತುಂಬಿದ ಆಹಾರವನ್ನು ಸೇವಿಸಿದ ನಂತರ ಜನರು ಸಮಸ್ಯೆಗಳನ್ನು ಎದುರಿಸಿದ ಕೆಲವು ಉದಾಹರಣೆಗಳು ಈ ಹಿಂದೆ ನಡೆದಿವೆ. ಲಿಕ್ವಿಡ್ ನೈಟ್ರೋಜನ್ ಹೆಚ್ಚಾಗಿ ರೆಸ್ಟೋರೆಂಟ್‌ಗಳಲ್ಲಿನ ಸಿಜ್ಲರ್‌ಗಳಲ್ಲಿ ಆಹಾರ ಅಥವಾ ಪಾನೀಯಕ್ಕೆ ಹೊಗೆಯ ನೋಟವನ್ನು ನೀಡಲು ಬಳಸಲಾಗುತ್ತದೆ. ಜನರು ತಮ್ಮ ಮನೆಯ ಹೊರಗೆ ಏನು ಸೇವಿಸುತ್ತಾರೆ ಎಂಬುದರ ಬಗ್ಗೆ ಜಾಗರೂಕರಾಗಿರಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner