ಬೆಂಗಳೂರು ನೀರಿನ ಸಮಸ್ಯೆ; 185 ಕೆರೆಗಳ ನೀರು ಮರುಬಳಕೆಗೆ ಜಲ ಮಂಡಳಿ ಚಿಂತನೆ, ಐಐಎಸ್‌ಸಿ ಜೊತೆ ಒಪ್ಪಂದ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ನೀರಿನ ಸಮಸ್ಯೆ; 185 ಕೆರೆಗಳ ನೀರು ಮರುಬಳಕೆಗೆ ಜಲ ಮಂಡಳಿ ಚಿಂತನೆ, ಐಐಎಸ್‌ಸಿ ಜೊತೆ ಒಪ್ಪಂದ

ಬೆಂಗಳೂರು ನೀರಿನ ಸಮಸ್ಯೆ; 185 ಕೆರೆಗಳ ನೀರು ಮರುಬಳಕೆಗೆ ಜಲ ಮಂಡಳಿ ಚಿಂತನೆ, ಐಐಎಸ್‌ಸಿ ಜೊತೆ ಒಪ್ಪಂದ

ಬೆಂಗಳೂರು ನಗರದಲ್ಲಿ ನೀರಿನ ತೀವ್ರ ಅಭಾವ ತಲೆದೋರಿದ್ದು, ನೀರಿನ ಕೊರತೆ ಪ್ರಮಾಣ ತಗ್ಗಿಸುವುದಕ್ಕಾಗಿ 185 ಕೆರೆಗಳಿಂದ ನೀರು ತರುವ ಸಾಧ್ಯತೆ ಇದೆ. ಇದಕ್ಕಾಗಿ ಐಐಎಸ್‌ಸಿ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಸಾಂದರ್ಭಿಕ ಚಿತ್ರ)
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಸಾಂದರ್ಭಿಕ ಚಿತ್ರ)

ಬೆಂಗಳೂರು: ನಗರವಾಸಿಗಳ ನೀರಿನ ಬೇಡಿಕೆಯನ್ನು ಈಡೇರಿಸುವುದಕ್ಕಾಗಿ ನವೀನ ತಂತ್ರಜ್ಞಾನಗಳನ್ನು ಬಳಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಂದಾಗಿದೆ. ಇದಕ್ಕಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಐಐಎಸ್‌ಸಿ) ಬೆಂಗಳೂರು ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಯೋಜಿಸಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಈಗಾಗಲೇ ಒಂದು ಪ್ರಾಯೋಗಿಕ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇದರಲ್ಲಿ ಬೆಂಗಳೂರಿನ ಕೆರೆಯೊಂದ ಸಮೀಪ ಲಭ್ಯವಿರುವ ನೀರಿನ ಮರುಬಳಕೆ ಮಾಡುವುದಕ್ಕಾಗಿ ನವೀನ ತಂತ್ರಜ್ಞಾನವನ್ನು ತಜ್ಞರು ಬಳಸುತ್ತಿದ್ದಾರೆ. ಈ ಮೂಲಕ ಆ ನೀರಿನ ಮರುಬಳಕೆ ಸಾಧ್ಯವಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ರಾಮ್ ಪ್ರಸಾತ್ ಮನೋಹ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಈ ಮೂಲಕ ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸುವುದಕ್ಕೆ ಮಹತ್ವದ ಹೆಜ್ಜೆಯೊಂದನ್ನು ಬೆಂಗಳೂರು ಜಲ ಮಂಡಳಿ ಕೈಗೊಂಡಿದೆ. ಇದು ಯಶಸ್ವಿಯಾಗುತ್ತಿದ್ದಂತೆ ಬೆಂಗಳೂರು ಇತರೆ ಕೆರೆಗಳ ನೀರಿನ ಮರುಬಳಕೆಗೆ ಬಿಡಬ್ಲ್ಯುಎಸ್‌ಎಸ್‌ಬಿ ಕ್ರಮ ತೆಗೆದುಕೊಳ್ಳಲಿದೆ ಎಂದು ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಬೆಂಗಳೂರಿನ ನೀರಿನ ಸಮಸ್ಯೆ; 185 ಕೆರೆಗಳ ನೀರಿನ ಮರುಬಳಕೆಗೆ ಚಿಂತನೆ

ವೈಜ್ಞಾನಿಕ ಮತ್ತು ನವೀನ ವಿಧಾನಗಳನ್ನು ಬಳಸಲು ಐಐಎಸ್ಸಿ ತಜ್ಞರೊಂದಿಗೆ ಸಹಕರಿಸಲು ನಾವು ಯೋಚಿಸುತ್ತಿದ್ದೇವೆ. ಈ ತಂತ್ರಜ್ಞಾನಗಳ ಸಹಾಯದಿಂದ, ಬೆಂಗಳೂರಿನ 185 ಕೆರೆಗಳು ಹೆಚ್ಚುವರಿ 20-30 ಎಂಎಲ್‌ಡಿ ನೀರನ್ನು ಉತ್ಪಾದಿಸಬಹುದು. ಇದು ಬೆಂಗಳೂರಿನ ನೀರಿನ ಕೊರತೆಯ ಪ್ರಮಾಣವನ್ನು ತಗ್ಗಿಸಲಿದೆ ಎಂದು ರಾಮ್ ಪ್ರಸಾದ್ ಮನೋಹರ್ ತಿಳಿಸಿದ್ದಾರೆ.

ನೀರಿನ ಬಿಕ್ಕಟ್ಟನ್ನು ನಿರ್ವಹಿಸಲು ಮರುಬಳಕೆ ಮಾಡಿದ ನೀರಿನ ಬಳಕೆಗಾಗಿ ಮಂಡಳಿಯು ಬೆಂಗಳೂರಿನ ನಿವಾಸಿ ಕಲ್ಯಾಣ ಸಂಘಗಳೊಂದಿಗೆ ಹೇಗೆ ಒಪ್ಪಂದ ಮಾಡಿಕೊಳ್ಳಲು ಯೋಜಿಸುತ್ತಿದೆ ಎಂಬುದರ ಸುಳಿವನ್ನೂ ರಾಮ್ ಪ್ರಸಾತ್ ಮನೋಹರ್ ನೀಡಿದರು.

ನೀರು ದುರ್ಬಳಕೆ ತಡೆಗೆ ಜಲ ಮಂಡಳಿ ಕಠಿಣ ಕ್ರಮ

ನೀರಿನ ಬಿಕ್ಕಟ್ಟನ್ನು ಎದುರಿಸುವುದಕ್ಕಾಗಿ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನೀರಿನ ದುರ್ಬಳಕೆ ತಡೆಯಲು ಕಠಿಣ ಕ್ರಮ ತೆಗೆದುಕೊಂಡಿದೆ.

ಇದರಂತೆ, ಕಾರು ತೊಳೆಯಲು, ತೋಟಗಾರಿಕೆ, ನಿರ್ಮಾಣ, ನೀರಿನ ಕಾರಂಜಿಗಳು ಮತ್ತು ರಸ್ತೆ ನಿರ್ಮಾಣ ಮತ್ತು ನಿರ್ವಹಣೆ ಸೇರಿ ಆರು ಚಟುವಟಿಕೆಗಳಿಗೆ ಕುಡಿಯುವ ನೀರಿನ ಬಳಕೆಯನ್ನು ನಿಷೇಧಿಸಲಾಗಿದೆ. ಒಂದೊಮ್ಮೆ ಈ ಉದ್ದೇಶಗಳಿಗಾಗಿ ಕುಡಿಯುವ ನೀರನ್ನು ಬಳಸುವುದು ಕಂಡುಬಂದರೆ ಕನಿಷ್ಠ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಜಲ ಮಂಡಳಿ ಎಚ್ಚರಿಸಿದೆ.

ಬೆಂಗಳೂರು ನಗರದಲ್ಲಿ ನೀರಿನ ಟ್ಯಾಂಕರ್ ಗಳು ಹೆಚ್ಚಿನ ದರವನ್ನು ವಿಧಿಸುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಡಳಿತವು ಗುರುವಾರ ಎಲ್ಲಾ ನೀರಿನ ಟ್ಯಾಂಕರ್ ಮಾಲೀಕರಿಗೆ ಟ್ಯಾಂಕರ್ ನೀರಿನ ಬೆಲೆಯನ್ನು ನಿಗದಿಪಡಿಸುವ ಬಗ್ಗೆ ಸೂಚನೆ ನೀಡಿದೆ.

ಪ್ರಮಾಣಿತ ನೀರಿನ ಟ್ಯಾಂಕರ್ ದರಗಳ ಪ್ರಕಾರ, ಜನರು (5 ಕಿ.ಮೀ.ವರೆಗೆ) 6,000 ಲೀಟರ್ ನೀರಿಗೆ 600 ರೂ., 8,000 ಲೀಟರ್ ನೀರಿನ ಟ್ಯಾಂಕರ್ ಗೆ 700 ರೂ., 12,000 ಲೀಟರ್ ನೀರಿನ ಟ್ಯಾಂಕರ್ ಗೆ 1000 ರೂಪಾಯಿ ಕೊಡಬೇಕು. ಟ್ಯಾಂಕರ್ ಮಾಲೀಕರು ಮತ್ತು ಗ್ರಾಹಕರ ನಡುವಿನ ಅಂತರವು 5 ಕಿ.ಮೀ.ನಿಂದ 10 ಕಿ.ಮೀ ನಡುವೆ ಇದ್ದರೆ, ಸುಮಾರು 6000 ಲೀಟರ್ ನೀರಿನ ಟ್ಯಾಂಕರ್‌ಗೆ 750 ರೂ., 8000 ಲೀಟರ್ ನೀರಿನ ಟ್ಯಾಂಕರ್‌ಗೆ 850 ರೂ., 12,000 ಲೀಟರ್ ನೀರಿನ ಟ್ಯಾಂಕರ್‌ಗೆ 1200 ರೂ. ಎಂದು ನಿಗದಿ ಮಾಡಲಾಗಿದೆ.

ಇದಲ್ಲದೆ, ಈ ಆದೇಶದ ಪ್ರಕಾರ, ನೀರು ಸರಬರಾಜು ಮಾಡುವ ಖಾಸಗಿ ಟ್ಯಾಂಕರ್ ಗಳು ಜಿಎಸ್ ಟಿ ಅಡಿಯಲ್ಲಿ ಬರುತ್ತವೆ. ಅದಕ್ಕಾಗಿಯೇ ಜನರು ತಮ್ಮ ನೀರಿನ ಟ್ಯಾಂಕರ್ ಬಿಲ್ಗಳ ಮೇಲೆ ಹೆಚ್ಚುವರಿ ಮೊತ್ತದ ಜಿಎಸ್‌ಟಿ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ವರದಿ ಹೇಳಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner