ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ಕೆಂಗೇರಿಯಲ್ಲಿ ಅಕ್ಕನ ಮನೆಯಲ್ಲೇ 65 ಲಕ್ಷ ರೂ ನಗ ನಗದು ಕಳವು ಮಾಡಿದ್ದ 22 ವರ್ಷದ ತಂಗಿಯ ಬಂಧನ

ಬೆಂಗಳೂರು: ಕೆಂಗೇರಿಯಲ್ಲಿ ಅಕ್ಕನ ಮನೆಯಲ್ಲೇ 65 ಲಕ್ಷ ರೂ ನಗ ನಗದು ಕಳವು ಮಾಡಿದ್ದ 22 ವರ್ಷದ ತಂಗಿಯ ಬಂಧನ

ಬೆಂಗಳೂರು ಕೆಂಗೇರಿಯಲ್ಲಿ ಅಕ್ಕನ ಮನೆಯಲ್ಲೇ 65 ಲಕ್ಷ ರೂ ನಗ ನಗದು ಕಳವು ಮಾಡಿದ್ದ 22 ವರ್ಷದ ತಂಗಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ, 95 ಲಕ್ಷ ರೂ. ಬೆಲೆ ಬಳುವ ನಕಲಿ ಸೋಪ್, ಸರ್ಫ್ , ಹಾರ್ಪಿಕ್ , ಮತ್ತು ತ್ರೀ ರೋಸಸ್ ಚಹಾ ಪುಡಿಯನ್ನು ಪೊಲೀಸರ ವಶಪಡಿಸಿದ್ದಾರೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ: ಕೆಂಗೇರಿಯಲ್ಲಿ ಅಕ್ಕನ ಮನೆಯಲ್ಲೇ 65 ಲಕ್ಷ ರೂಪಾಯಿ ನಗ ನಗದು ಕಳವು ಮಾಡಿದ್ದ 22 ವರ್ಷದ ತಂಗಿಯ ಬಂಧನ. (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ: ಕೆಂಗೇರಿಯಲ್ಲಿ ಅಕ್ಕನ ಮನೆಯಲ್ಲೇ 65 ಲಕ್ಷ ರೂಪಾಯಿ ನಗ ನಗದು ಕಳವು ಮಾಡಿದ್ದ 22 ವರ್ಷದ ತಂಗಿಯ ಬಂಧನ. (ಸಾಂಕೇತಿಕ ಚಿತ್ರ)

ಬೆಂಗಳೂರು: ಅಪರಿಚಿತರು ಕಳ್ಳತನ ಮಾಡುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಬ್ಬ ಚಾಲಾಕಿ ಕಳ್ಳಿ ತನ್ನ ಅಕ್ಕನ ಮನೆಯಲ್ಲೇ ಸುಮಾರು 65 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಳ್ಳತನ ನಡೆದಿದ್ದು ಉಮಾ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈಕೆಯಿಂದ 52 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಟ್ರೆಂಡಿಂಗ್​ ಸುದ್ದಿ

ನಾಗದೇವನಹಳ್ಳಿಯ ಆರ್ ಆರ್ ಲೇ ಔಟ್ ನಲ್ಲಿ ಕುನ್ನೇಗೌಡ ಎಂಬುವರು ಕಬ್ಬಿಣ ಮತ್ತು ಸಿಮೆಂಟ್ ವ್ಯಾಪಾರ ನಡೆಸುತ್ತಿರುತ್ತಾರೆ. ಏಪ್ರಿಲ್ 22ರಂದು ಕುಟುಂಬ ಸಮೇತರಾಗಿ ಸ್ವಂತ ಊರಿನಲ್ಲಿ ನಡೆಯುತ್ತಿರುವ ಚೌಡೇಶ್ವರಿ ದೇವಿಯ ಜಾತ್ರೆಗೆ ಊರಿಗೆ ಹೋಗಿರುತ್ತಾರೆ. ಊರಿಗೆ ಹೋಗುವುದಕ್ಕೂ ಮುನ್ನ ತಮ್ಮ ಸಂಬಂಧಿಯೊಬ್ಬರಿಗೆ ಮನೆಯಲ್ಲಿ ಮಲಗುವಂತೆ ತಿಳಿಸಿ ಹೋಗಿರುತ್ತಾರೆ. ಅವರು ಏಪ್ರಿಲ್ 24ರಂದು ಸುಮಾರು 10.30ರ ಸಮಯದಲ್ಲಿ ಮನೆಯಲ್ಲಿ ಮಲಗಲು ಬಂದಾಗ ಬೀರುವಿನ ಬಾಗಿಲು ತೆರೆದಿದ್ದು, ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಕಳ್ಳತನ ನಡೆದಿದೆ ಎಂದು ಭಾವಿಸಿದ ಅವರು ಗೌಡರಿಗೆ ತಿಳಿಸುತ್ತಾರೆ. ಕುನ್ನೇಗೌಡರು ಅಂದು ರಾತ್ರಿಯೇ ಮನೆಗೆ ಮರಳುತ್ತಾರೆ.

ಪೊಲೀಸ್ ತನಿಖೆಯಲ್ಲಿ ತಂಗಿಯ ಕುಕೃತ್ಯ ಬಹಿರಂಗ

ಕಳ್ಳತನ ನಡೆದಿರುವುದನ್ನು ಖಚಿತಪಡಿಸಿಕೊಂಡು ಪೊಲೀಸರಿಗೆ ದೂರು ನೀಡುತ್ತಾರೆ. 182 ಗ್ರಾಂ ಚಿನ್ನಾಭರಣ, ಚಿನ್ನದ ನಣ್ಯ ಮತ್ತು 52 ಲಕ್ಷ ರೂ. ನಗದು ಸೇರಿ 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಿರುತ್ತಾರೆ.

ತನಿಖೆಯನ್ನು ಕೈಗೊಂಡ ಕೆಂಗೇರಿ ಪೊಲೀಸರು ಕುನ್ನೇಗೌಡರ ಸಂಬಂಧಿಕರ ವಿವರ ಕಲೆ ಹಾಕುತ್ತಾರೆ. ಕಳ್ಳತನ ನಡೆದ ದಿನ ಅವರು ಎಲ್ಲಿದ್ದರು ಎಂಬ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಇವರ ಪತ್ನಿಯ ತಂಗಿ ನಾದಿನಿ ಉಮಾ ಲಗ್ಗೆರೆಯಲ್ಲಿ ವಾಸವಾಗಿದ್ದು, ಆಟೋ ಕನ್ಸಲ್ಟೆನ್ಸಿ ಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಈಕೆ ಕುರಿತು ಗೌಡರು ಅನುಮಾನ ವ್ಯಕ್ತಪಡಿಸುತ್ತಾರೆ. ಈಕೆ ಕಳ್ಳತನ ನಡೆದ ದಿನ ತನ್ನ ಮನೆಯಲ್ಲಿ ಇರಲಿಲ್ಲ ಎನ್ನುವುದು ಪತ್ತೆಯಾಗುತ್ತದೆ. ಕೂಡಲೇ ಆಕೆಯನ್ನು ಕರೆ ತಂದು ವಿಚಾರಣೆ ನಡೆಸಿದಾಗ ಏಪ್ರಿಲ್ 22ರಂದು ತಾನೇ ಅಕ್ಕನ ಮನೆಗೆ ಬಂದು ನಕಲಿ ಕೀ ಬಳಸಿ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿರುತ್ತಾಳೆ. ಆಕೆಯ ಮನೆಯಿಂದ 5 ಲಕ್ಷ ರೂ. ನಗದು, 30 ಚಿನ್ನದ ನಾಣ್ಯ ವಶಪಡಿಸಿಕೊಂಡಿದ್ದಾರೆ. ಈಕೆ ತಾನು ಕೆಲಸ ಮಾಡುವ ಕಂಪನಿಯ ಮಾಲೀಕರಿಗೆ ನೀಡಿದ್ದ 16 ಚಿನ್ನದ ನಾಣ್ಯ, 47 ಲಕ್ಷ ರೂ ನಗದು ಹಣವನ್ನು ಆಟೋ ಕನ್ಸಲ್ಟೆನ್ಸಿ ಮಾಲೀಕರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

95 ಲಕ್ಷ ರೂ ಬೆಲೆ ಬಾಳುವ ನಕಲಿ ಸೋಪ್‌, ಸರ್ಫ್ , ಹಾರ್ಪಿಕ್ , ತ್ರೀ ರೋಸಸ್ ಚಹಾ ಪುಡಿ ವಶ

ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ಡಿಟರ್ಜೆಂಟ್ ಮತ್ತು ಚಹಾ ಪುಡಿಯನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದ್ದ ಬೆಂಗಳೂರಿನ ಕಾರ್ಖಾನೆಯೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ವಿನಾಯಕ ನಗರದ ಗೋದಾಮಿನಲ್ಲಿ ಉತ್ಪಾದಿಸಿ ವಿವಿಧ ಗೋದಾಮುಗಳಲ್ಲಿ ಸಂಗ್ರಹಿಸಿದ್ದ ಸುಮಾರು 95 ಲಕ್ಷ ರೂ. ಮೌಲ್ಯದ ನಕಲಿ ಸೋಪ್ ಮತ್ತು ಟೀ ಪೌಡರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಹಿಂದೂಸ್ತಾನ್ ಯೂನಿಲಿವರ್ ಮತ್ತು ರೆಕಿಟ್ ಬೆಂಕೆಸರ್ ಇಂಡಿಯಾ ಲಿ. ಕಂಪನಿಗಳ ಉತ್ಪನ್ನಗಳಾದ ಸರ್ಫ್ ಎಕ್ಸೆಲ್, ವಿಮ್ ಲಿಕ್ವಿಡ್, ಲೈಫ್ ಬಾಯ್ ಹ್ಯಾಂಡ್ ವಾಷ್, ರಿನ್ ವ್ಹೀಲ್ ಡಿಟರ್ಜೆಂಟ್ ಪೌಡರ್ ಗಳು, ಲೈಜೋಲ್ ಮತ್ತು ಹಾರ್ಪಿಕ್ ಸ್ವಚ್ಚಗೊಳಿಸುವ ಲಿಕ್ವಿಡ್, ತ್ರೀ ರೋಸಸ್ ಬ್ರೂಕ್ ಬಾಂಡ್ ಚಹಾ ಪುಡಿ ಮೊದಲಾದ ಉತ್ಪನ್ನಗಳ ನಕಲಿ ವಸ್ತುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಉತ್ಪನ್ನಗಳನ್ನು ಬೆಂಗಳೂರು ಮತ್ತು ಇತರ ಜಿಲ್ಲೆಗಳಿಗೆ ಸಾಗಿಸಿ ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಆಧರಿಸಿ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಗೋದಾಮುಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆರಂಭದಲ್ಲಿ ಸಿಸಿಬಿ ಪೊಲೀಸರು ವಿಲ್ಸನ್ ಗಾರ್ಡ ನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.

(ವರದಿ- ಎಚ್.ಮಾರುತಿ, ಬೆಂಗಳೂರು)

IPL_Entry_Point