ಕನ್ನಡ ಸುದ್ದಿ  /  Karnataka  /  Bengaluru News 24 Hr Water Shutdown For Cauvery 4th Stage 2nd Phase In Parts Of Bengaluru On Feb 27 28 Bwssb Updates Uks

ಬೆಂಗಳೂರಿನ ವಿವಿಧೆಡೆ ಇಂದು ಬೆಳಗ್ಗೆ 6 ಗಂಟೆಯಿಂದ 24 ಗಂಟೆ ಕಾವೇರಿ ಕುಡಿಯುವ ನೀರು ಪೂರೈಕೆ ಇರಲ್ಲ; ಎಲ್ಲೆಲ್ಲಿ ಇಲ್ಲಿದೆ ಪೂರ್ಣ ಮಾಹಿತಿ

ಬೆಂಗಳೂರಿನ ವಿವಿಧೆಡೆ ಫೆ 27, 28 ರಂದು ಅಂದರೆ ನಾಳೆ ಬೆಳಗ್ಗೆ 6 ಗಂಟೆಯಿಂದ 24 ಗಂಟೆ ಕಾವೇರಿ ಕುಡಿಯುವ ನೀರು ಪೂರೈಕೆ ಇರಲ್ಲ ಎಂದು ಬೆಂಗಳೂರು ಜಲ ಮಂಡಳಿ ಸೂಚನೆ ನೀಡಿದೆ. ತುರ್ತು ನಿರ್ವಹಣೆ ಮತ್ತು ಯುಎಫ್‌ಡಬ್ಲ್ಯೂ ಬಲ್ಕ್ ಪ್ಲೋ ಮೀಟರ್ ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಕಾರಣ ಈ ತೊಂದರೆ ಉಂಟಾಗುತ್ತಿದೆ ಎಂದು ಜಲ ಮಂಡಳಿ ಹೇಳಿಕೊಂಡಿದೆ.

ಬೆಂಗಳೂರಿನ ವಿವಿಧೆಡೆ ಫೆ 27 28 ರಂದು 24 ಗಂಟೆ ಕಾವೇರಿ ಕುಡಿಯುವ ನೀರು ಪೂರೈಕೆ ಇರಲ್ಲ ಎಂದು ಬೆಂಗಳೂರು ಜಲ ಮಂಡಳಿ ಸೂಚನೆ ನೀಡಿದ್ದು, ಒಂದು ದಿನದ ಅಗತ್ಯಕ್ಕೆ ನೀರು ಸಂಗ್ರಹಿಸಿಟ್ಟುಕೊಳ್ಳುವಂತೆ ಮನವಿ ಮಾಡಿದೆ.
ಬೆಂಗಳೂರಿನ ವಿವಿಧೆಡೆ ಫೆ 27 28 ರಂದು 24 ಗಂಟೆ ಕಾವೇರಿ ಕುಡಿಯುವ ನೀರು ಪೂರೈಕೆ ಇರಲ್ಲ ಎಂದು ಬೆಂಗಳೂರು ಜಲ ಮಂಡಳಿ ಸೂಚನೆ ನೀಡಿದ್ದು, ಒಂದು ದಿನದ ಅಗತ್ಯಕ್ಕೆ ನೀರು ಸಂಗ್ರಹಿಸಿಟ್ಟುಕೊಳ್ಳುವಂತೆ ಮನವಿ ಮಾಡಿದೆ.

ಬೆಂಗಳೂರು: ತುರ್ತು ನಿರ್ವಹಣೆ ಮತ್ತು ಯುಎಫ್‌ಡಬ್ಲ್ಯೂ ಬಲ್ಕ್ ಪ್ಲೋ ಮೀಟರ್ ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಕಾರಣ ಬೆಂಗಳೂರು ಮಹಾನಗರದ ವಿವಿಧೆಡೆ ನಾಳೆ (ಫೆ. 27) ಬೆಳಗ್ಗೆ 6 ಗಂಟೆಯಿಂದ ನಾಡಿದ್ದು (ಫೆ.28) ಬೆಳಗ್ಗೆ 6 ಗಂಟೆ ತನಕ ಕಾವೇರಿ ಕುಡಿಯುವ ನೀರು ಪೂರೈಕೆ ಸ್ಥಗಿತವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.

ಕಾವೇರಿ 4ನೇ ಹಂತದ 2ನೇ ಹಂತಕ್ಕೆ ಕಾವೇರಿ ಕುಡಿಯುವ ನೀರು ಪೂರೈಕೆ 24 ಗಂಟೆಗಳ ಕಾಲ ಬಂದ್ ಆಗಲಿದೆ.ಇದರಂತೆ, 4 ನೇ ಬ್ಲಾಕ್ ನಂದಿನಿ ಲೇಔಟ್, ಬಿಎಚ್‌ಇಎಲ್ ಲೇಔಟ್, ನಂದಿನಿ ಲೇಔಟ್, ಶ್ರೀನಿವಾಸ ನಗರ, ಜೈಮಾರುತಿ ನಗರ ಮತ್ತು ಬಡವಣೆ, ಸಾಕಮ್ಮ ಲೇಔಟ್, ನರಸಿಂಹ ಸ್ವಾಮಿ ಲೇಔಟ್, ಮುನೇಶ್ವರ ನಗರ, ಜ್ಞಾನ ಜ್ಯೋತಿ ನಗರ, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ, ಎನ್‌ಜಿಇಎಫ್ ಲೇಔಟ್, ಐಟಿಐಡಿ 2ನೇ ಭಾಗ ರೈಲ್ವೇ ಲೇಔಟ್, ಆರ್‌ಎಚ್‌ಬಿಸಿಎಸ್ ಲೇಔಟ್ 1 ಮತ್ತು 2ನೇ ಹಂತ, ಬೈರವೇಶ್ವರನಗರ, ಸುಂಕದಕಟ್ಟೆ, ಜಯ ಲಕ್ಷ್ಮಮ್ಮ ಲೇಔಟ್, ಕೆಬ್ಬೆಹಳ್ಳ, ಚಂದನ ಲೇಔಟ್, ಚಂದ್ರಶೇಖರ ಲೇಔಟ್, ಭೂವಿಜ್ಞಾನ ಬಡಾವಣೆ, ನರಸಾಪುರ, ಕಂದಾಯ ಲೇಔಟ್, ಮುಳಕತ್ತಮ್ಮ ಲೇಔಟ್, ಬಿಇಎಲ್‌1ಪಾಳ್ಯ, ಬಿಇಎಲ್‌1 ಪಾಳ್ಯ, ಬಿಇಎಲ್‌1 ಪಾಳ್ಯ ಬ್ಯಾಡರಹಳ್ಳಿ, ಉಪಕಾರ್ ಲೇಔಟ್ ಮತ್ತು ಪಶ್ಚಿಮ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆ ಇರಲ್ಲ. ಹಾಗೆಯೇ, ಬೆಂಗಳೂರು ಉತ್ತರದಲ್ಲಿ ದಾಸರಹಳ್ಳಿ ವಲಯ, ಆರ್ ಆರ್‌ ನಗರ ವಲಯ ಸೇರಿ ಬಿಬಿಎಂಪಿಯ 14 ವಾರ್ಡ್‌ಗಳಿಗೆ ಒಂದು ದಿನದ ಮಟ್ಟಿಗೆ ಕಾವೇರಿ ಕುಡಿಯುವ ನೀರು ಪೂರೈಕೆ ಇರಲ್ಲ ಎಂದು ಜಲಮಂಡಳಿ ತಿಳಿಸಿದೆ.

ಗೋವಿಂದರಾಜ ನಗರ ವ್ಯಾಪ್ತಿಯಲ್ಲೂ ನೀರು ಪೂರೈಕೆ ಇರಲ್ಲ

ನಂದಾದೀಪ ಲೇಔಟ್, ಶಂಕರಪ್ಪ ಲೇಔಟ್, ಪಟ್ಟಣ್ಣಗೆರೆ, ಮೈಲಸಂದ್ರ ವಿಲೇಜ್, ಭೂಮಿಕಾ ಲೇಔಟ್, ಯುನಿರ್ವರ್ ಸಿಟಿ ಲೇಔಟ್ 4ನೇ ಮತ್ತು 5ನೇ ಸೈಜ್, ಬಿ.ಇ.ಎಂ.ಎಲ್ 10ನೇ ಸ್ಟೇಜ್, ಮಣಿಪಾಲ 5ನೇ ಸ್ಟೇಜ್, ಭುವನೇಶ್ವರಿನಗರ 1ನೇ ಮತ್ತು 2ನೇ ಸೈಜ್, ಕೆಂಗೇರಿ ಉಪನಗರ, ಕೆಂಗೇರಿ, ನಾಗದೇವನಹಳ್ಳಿ, ವಿದ್ಯಾಪೀಠ ರೋಡ್ 1 ರಿಂದ 13ನೇ ಕ್ರಾಸ್, ಜಾನಭಾರತಿ 1 ರಿಂದ 4ನೇ ಬ್ಲಾಕ್, ಕೆ.ಸಿ.ಹೆಚ್.ಎಸ್. ಲೇಔಟ್, ಆರ್.ಆರ್ ಲೇಔಟ್, ಜಗಜ್ಯೋತಿ ಲೇಔಟ್, ಮರಿಯಪ್ಪನಪಾಳ್ಯ, ದುಬಾಸಿ ಪಾಳ್ಯ, ಬೃಂದಾವನ್ ಲೇಔಟ್, ಸ್ವಾತಿ ಲೇಔಟ್, ಕೆ.ಪಿ.ಎಸ್.ಸಿ ಲೇಔಟ್, ಕೆಂಪಮ್ಮ ಲೇಔಟ್, ದೊಡ್ಡ ಗೊಲ್ಲರಹಟ್ಟಿ, ಚಿಕ್ಕಗೊಲ್ಲರಹಟ್ಟಿ, ಮೇಗಲು ಬೀದಿ, ಬಿ.ಡಿ.ಎ ಎನ್‌ವ್, ಮೈಸೂರು ರೋಡ್, ಶಿರರ್ಕೆ, ಶಿವಣ್ಣ ಲೇಔಟ್, ಬಿ.ಹೆಚ್.ಇ.ಎಲ್ ಎಲ್ ಶೇಪ್, ಜಯಣ್ಣ, ಲೇಔಟ್, ಮಾರಪ್ಪ ಲೇಔಟ್, ರಾಜ್‌ಘರ್ ಭವನ, ಎಂ.ಸಿ. ಲೇಔಟ್, ಸುಬ್ಬಣ್ಣ ಗಾರ್ಡನ್, ಮಾರೇನಹಳ್ಳಿ, ಬಿನ್ನಿ ಲೇಔಟ್,ಆರ್.ಪಿ.ಸಿ ಲೇಔಟ್, ನಾಗರಭಾವಿ, ಮಾನಸನಗರ, ಹೊಯ್ಸಳನಗರ, ಸುವರ್ಣ ಲೇಔಟ್, ಮೆಟ್ರೋ ಲೇಔಟ್, ನಾಯಂಡಹಳ್ಳಿ ರಂಗನಾಥ ಕಾಲೋನಿ, ರೋಷನ್ ನಗರ, ಬಿ.ಸಿ.ಸಿ ಲೇಔಟ್, ತಿಗಳರ ತೋಟ, ವಿನಾಯಕ ಲೇಔಟ್, ವಿದ್ಯಾಗಿರಿ ಲೇಔಟ್, ರಂಗನಾಥಪುರ, ಮಾರುತಿನಗರ, ಕಾವೇರಿನಗರ, ಸಂಪಿಗೆನಗರ, ಕಾಮಾಕ್ಷಿಪಾಳ್ಯ, ಪಟ್ಟಿಗಾರಪಾಳ್ಯ ಪ್ರಶಾಂತನಗರ, ತಿಮ್ಮನಹಳ್ಳಿ, ಗೋವಿಂದರಾಜನಗರದ ವ್ಯಾಪ್ತಿಯಲ್ಲಿಯೂ ಕಾವೇರಿ ಕುಡಿಯು ನೀರು ಪೂರೈಕೆ ಇರುವುದಿಲ್ಲ.

ಯಲಹಂಕ, ವಿದ್ಯಾರಣ್ಯಪುರ ಭಾಗದಲ್ಲೂ ಕಾವೇರಿ ನೀರು ಇರಲ್ಲ

ಕೆ.ಹೆಚ್.ಬಿ ಕಾಲೋನಿ, ಎಂ.ಆರ್.ಸಿ.ಆರ್ ಲೇಔಟ್, ಪೇಟೆ ಚನ್ನಪ್ಪ ಇಂಡ್ಲಿಯಲ್, ಸರಸ್ವತಿನಗರ, ಶಿವಾನಂದನಗರ, ಅನುಭವನಗರ, ಕೆನರಾ ಬ್ಯಾಂಕ್ ಕಾಲೋನಿ, ದಾಸರಹಳ್ಳಿ, ಜಿ.ಕೆ.ಡಬ್ಲೂಕಿಕ್ ಲೇಔಟ್, ಬಸವೇಶ್ವರ ಲೇಔಟ್. ನಂಜರಸಪ್ಪ ಲೇಔಟ್, ಮೂಡಲಪಾಳ್ಯ, ಮಧುರನಗರ, ಇನ್‌ಕಮ್ ಟ್ಯಾಕ್ಸ್ ಲೇಔಟ್, ಪಿ.ಎಫ್ ಲೇಔಟ್, ಸಿ.ಹೆಚ್.ಬಿ.ಸಿ.ಎಸ್. ಲೇಔಟ್, ಕನಕನಗರ, ಭೈರವೇಶ್ವರನಗರ, ಕೊಕೋನಟ್ ಗಾರ್ಡನ್, ಆದರ್ಶನಗರ, ಕಲ್ಯಾಣನಗರ, ಸಂಜೀವಿನಿನಗರ, ಬಿ.ಡಿ.ಎ ಲೇಔಟ್, ಶಕ್ತಿ ಗಾರ್ಡನ್, ಅನ್ನಪೂರ್ಣೇಶ್ವರಿ ನಗರ, ಮುನೇಶ್ವರನಗರ, ಶ್ರೀನಿವಾಸ ನಗರ, ಹುಚ್ಚಪ್ಪ ಲೇಔಟ್, ಅಮರಜ್ಯೋತಿನಗರ, ಭಕ್ತಿಲಿಂಗೇಶ್ವರನಗರ, ಮುನಿಕೃಷ್ಣಪ್ಪ ಲೇಔಟ್, ಕಾವೇರಿ ಲೇಔಟ್, ಪಂಚಶೀಲನಗರ, ಜಗಜ್ಯೋತಿನಗರ, ಕೆಂಪಣ್ಣನ ತೋಟ, ಶಂಕರನಗರ, ಕೊಡಿಗೆಹಳ್ಳಿ, ಟಾಟಾನಗರ, ಅಶ್ವಿ ಲೇಔಟ್, ಸಂಜೀವಿನಿನಗರ, ದೇವಿನಗರ, ಬ್ಯಾಟರಾಯನಪುರ, ಯಶೋಧನಗರ, ಅಮೃತನಗರ, ಅಮೃತಹಳ್ಳಿ, ಜಕ್ಕೂರು, ಕಾಫಿ ಬೋರ್ಡ್ ಲೇಔಟ್, ಕೆಂಪಾಪುರ, ಜಿ.ಕೆ.ವಿಕೆ ಲೇಔಟ್, ಜಕ್ಕೂರು ಪ್ಲಾಂಟೇಶನ್, ಯಲಹಂಕ ನ್ಯೂಟೌನ್, ವಿದ್ಯಾರಣ್ಯಪುರ, ಸಿಂಗಾಪುರ, ಎಂ.ಎಸ್.ಪಾಳ್ಯ, ರಾಮಚಂದ್ರಪುರ, ಡಿಫೆನ್ಸ್ ಲೇಔಟ್, ಎ.ಎಂ.ಎಸ್ ಲೇಔಟ್, ಭುವನೇಶ್ವರಿನಗರ, ಮಾನ್ಯತಾ ರೆಸಿಡೆನ್ಸಿ, ಮರಿಯಣ್ಣ ಪಾಳ್ಯ, ನಂದನ ರೆಸಿಡೆನ್ಸಿ, ಮಾರುತಿನಗರ, ವಲ್ಲಭನಗರ, ಶಾರದಾನಗರ, ಯಶವಂತಪುರ(ಪಾರ್ಟ್), ಮುತ್ಯಾಲನಗರ ಭಾಗದಲ್ಲಿ 24 ಗಂಟೆ ಕಾಲ ಕಾವೇರಿ ನೀರು ಪೂರೈಕೆ ಸ್ಥಗಿತವಾಗಲಿದೆ.

ಬೆಂಗಳೂರಿನ ಯಾವೆಲ್ಲ ಏರಿಯಾದಲ್ಲಿ ಫೆ.27, 28ರಂದು ನೀರು ಇರಲ್ಲ ಎಂಬ ಪೂರ್ಣ ಮಾಹಿತಿ ಈ ಕೆಳಗಿನ ಪಿಡಿಎಫ್‌ನಲ್ಲಿದೆ

ಪೂರ್ವ ಬೆಂಗಳೂರಿನ ವಿವಿಧೆಡೆ ಕೂಡ ಕಾವೇರಿ ನೀರು ಇರಲ್ಲ

ಎ ನಾರಾಯಣಪುರ, ಉದಯ ನಗರ, ಆಂಧ್ರ ಕಾಲೋನಿ, ವಿಎಸ್ಆರ್ ಲೇಔಟ್, ಇಂದಿರಾಗಾಂಧಿ ಸ್ಟ್ರೀಟ್, ಜ್ಯೋತಿ ನಗರ, ದರ್ಗಾಹಾಲ್, ಸಾಕಮ್ಮ ಲೇಔಟ್, ವಿಜ್ಞಾನ ನಗರ ಸರ್ವೀಸ್ ಸ್ಟೇಷನ್ ಅಡಿಯಲ್ಲಿ ವಿಜ್ಞಾನ ನಗರ ಮತ್ತು ಅಕ್ಷಯನಗರ, ಎಂಇಜಿ ಲೇಔಟ್, ರಮೇಶ್ ನಗರ, ವೀರಭದ್ರ ನಗರ ಮುಂತಾದ ಪ್ರದೇಶಗಳು ಮತ್ತು ಜಗದೀಶ್ ನಗರ ಸೇವಾ ಠಾಣೆ ವ್ಯಾಪ್ತಿಯ ಶಿವ ಶಕ್ತಿ ಕಾಲೋನಿ ಮತ್ತು ವಿವಿಧೆಡೆ ಕಾವೇರಿ ನೀರು ಒಂದು ದಿನದ ಮಟ್ಟಿಗೆ ಪೂರೈಕೆ ಆಗುವುದಿಲ್ಲ. ಹೀಗಾಗಿ ಎಲ್ಲರೂ ಒಂದು ದಿನದ ಅಗತ್ಯಕ್ಕೆ ಬೇಕಾದಷ್ಟು ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು ಎಂದ ಬೆಂಗಳೂರು ಜಲಮಂಡಳಿ ಮನವಿ ಮಾಡಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point