Bengaluru News: 3 ಮಹಿಳೆಯರು ಸೇರಿ 6 ಜನ ಚಿನ್ನ ಕಳ್ಳಸಾಗಣೆಗೆ ಬಳಸಿದ ತಂತ್ರ ಹುಬ್ಬೇರಿಸುವಂಥದ್ದು, 4.5 ಕೋಟಿ ರೂಪಾಯಿ ಚಿನ್ನ ವಶಕ್ಕೆ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: 3 ಮಹಿಳೆಯರು ಸೇರಿ 6 ಜನ ಚಿನ್ನ ಕಳ್ಳಸಾಗಣೆಗೆ ಬಳಸಿದ ತಂತ್ರ ಹುಬ್ಬೇರಿಸುವಂಥದ್ದು, 4.5 ಕೋಟಿ ರೂಪಾಯಿ ಚಿನ್ನ ವಶಕ್ಕೆ

Bengaluru News: 3 ಮಹಿಳೆಯರು ಸೇರಿ 6 ಜನ ಚಿನ್ನ ಕಳ್ಳಸಾಗಣೆಗೆ ಬಳಸಿದ ತಂತ್ರ ಹುಬ್ಬೇರಿಸುವಂಥದ್ದು, 4.5 ಕೋಟಿ ರೂಪಾಯಿ ಚಿನ್ನ ವಶಕ್ಕೆ

ತಂತ್ರಜ್ಞಾನ ಬದಲಾಗಿದೆ. ಚಿನ್ನವನ್ನು ಯಾವುದೇ ಯಾವುದೇ ರೂಪದಲ್ಲಿ ಕಳ್ಳ ಸಾಗಾಣೆ ಮಾಡಿದರೂ ತಪ್ಪಿಸಿಕೊಳ್ಳುವುದು ಅಸಾಧ್ಯ. ಆದರೆ ಈ 6 ಪ್ರಯಾಣಿಕರು ಚಿನ್ನವನ್ನು ಕಳ್ಳ ಸಾಗಣೆ ಮಾಡಲು ಆಯ್ದುಕೊಂಡ ಮಾರ್ಗಗಳನ್ನು ಕೇಳಿದರೆ ಬೆಚ್ಚಿ ಬೀಳುವ ಸರದಿ ನಿಮ್ಮದು! (ವರದಿ - ಎಚ್.ಮಾರುತಿ)

ಪ್ಯಾಂಟ್‌ನ ಸೊಂಟದ ಪಟ್ಟಿಯಲ್ಲೂ ಇತ್ತು ಚಿನ್ನದ ಪೇಸ್ಟ್
ಪ್ಯಾಂಟ್‌ನ ಸೊಂಟದ ಪಟ್ಟಿಯಲ್ಲೂ ಇತ್ತು ಚಿನ್ನದ ಪೇಸ್ಟ್

ಬೆಂಗಳೂರು: ಕಳೆದ 15 ದಿನಗಳಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ಸುಮಾರು 4.8 ಕೊಟಿ ರೂ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಡಿಸೆಂಬರ್ 5ರಿಂದ ಚಿನ್ನವನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಮೂವರು ಮಹಿಳೆಯರು ಸೇರಿದಂತೆ ಆರು ಪ್ರಯಾಣಿಕರನ್ನು ಬಂಧಿಸಲಾಗಿದೆ.

ವಿಶೇಷವಾಗಿ ಗಲ್ಫ್ ರಾಷ್ಟ್ರಗಳಿಂದ ಆಗಮಿಸುವ ಸಂಶಯಾಸ್ಪದ ಪ್ರಯಾಣಿಕರ ಮೇಲೆ ಕಣ್ಣಿಟ್ಟಿರುವ ಕಂದಾಯ ವಿಚಕ್ಷಣಾ ದಳದ ಬೆಂಗಳೂರು ವಿಭಾಗ ಈ ಕಾರ್ಯಾಚರಣೆ ನಡೆಸಿದೆ.

ಕಳೆದ ಮಂಗಳವಾರ ಎಮಿರೇಟ್ಸ್ ವಿಮಾನದಿಂದ ದುಬೈನಿಂದ 30 ವರ್ಷದ ಪ್ರಯಾಣಿಕನೊಬ್ಬ ಆಗಮಿಸಿದ. ಈತ 1.5 ಕೆಜಿ ತೂಕದ ವಿಶೇಷವಾಗಿ ಸಿದ್ದಪಡಿಸಿದ್ದ ಒಳ ಉಡುಪು ಧರಿಸಿದ್ದ. ಇದರ ಬೆಲೆ ಬರೋಬ್ಬರಿ 91 ಲಕ್ಷ ರೂಪಾಯಿ.

ಇಂಡೋನೇಶಿಯಾದ ಪಾಸ್ ಪೋರ್ಟ್ ಹೊಂದಿದ್ದ 33 ವರ್ಷದ ಮಹಿಳೆ ಸಿಂಗಾಪುರದಿಂದ ಡಿಸೆಂಬರ್ 11 ರಂದು ರಾತ್ರಿ ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಆಗಮಿಸಿದ್ದ ಈ ಮಹಿಳೆ 1.5 ಕೆಜಿ ತೂಕದ ಚಿನ್ನದಿಂದ ತಯಾರಿಸಿದ್ದ ಒಳ ಉಡುಪು ಧರಿಸಿದ್ದರು. ಅಂದೇ ರಾತ್ರಿ ಮಸ್ಕಟ್ ನಿಂದ ಒಮಾನ್ ವಿಮಾನದಲ್ಲಿ ಆಗಮಿಸಿದ 35 ವರ್ಷದ ಪುರುಷನೊಬ್ಬನನ್ನು ಬಂಧಿಸಿಲಾಯಿತು. ಈತನೂ 1.6 ಕೆಜಿ ತೂಕದ ಚಿನ್ನದ ಪೇಸ್ಟ್ ಅನ್ನು ತನ್ನ ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡು ಬೆಂಗಳೂರಿಗೆ ಆಗಮಿಸಿದ್ದ. ಇದರ ಬೆಲೆ 85 ಲಕ್ಷ ರೂ. ಎಂದು ತಿಳಿದು ಬಂದಿದೆ. ತನ್ನ ವೈಯಕ್ತಿಕ ಬಳಕೆಗಾಗಿ ತಂದಿದ್ದೇನೆ ಎಂದು ಸಬೂಬು ಹೇಳಿದ್ದಾನೆ.

ತಮಿಳುನಾಡು ಮೂಲದ 30 ವರ್ಷದ ಆಸುಪಾಸಿನ ಇಬ್ಬರು ಮಹಿಳೆಯರು ಬ್ಯಾಂಕಾಕ್‌ನಿಂದ ಥಾಯ್ ಏರ್ ವೇಸ್ ನಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಇವರು ಚಿನ್ನದಿಂದ ತಯಾರಿಸಿದ ಶೂಗಳನ್ನು ಧರಿಸಿದ್ದರು. ಇವರು ಧರಿಸಿದ್ದ ಶೂಗಳ ತೂಕ 3.4 ಕೆಜಿ. ಇದರ ಬೆಲೆ 2.2 ಕೋಟಿ ಎಂದು ಅಂದಾಜು ಮಾಡಲಾಗಿದೆ. ಇದೀಗ ಇವರು ಪೊಲೀಸರ ಅತಿಥಿಗಳಾಗಿದ್ದಾರೆ.

ಕೊಡಗು ಮೂಲದ 23 ವರ್ಷದ ಯುವಕನೊಬ್ಬ ಚಿನ್ನದ ಪೇಸ್ಟ್ ಅನ್ನು ಚಿನ್ನವನ್ನು ಜೀನ್ಸ್ ಪ್ಯಾಂಟ್ ನಲ್ಲಿ ಅಡಗಿಸಿಟ್ಟುಕೊಂಡು ಡಿಸೆಂಬರ್ 13 ರಂದು ಆಗಮಿಸಿದ್ದ. ಈತ ವಿಶೇಷವಾಗಿ ಚಿನ್ನದ ಪೇಸ್ಟ್ ಅಡಗಿಸಲೆಂದೇ ಜೀನ್ಸ್ ಮತ್ತು ಒಳ ಉಡುಪನ್ನು ವಿಶೇಷವಾಗಿ ಹೊಲಿಸಿದ್ದ. ದುಬೈನಿಂದ ಬೆಂಗಳೂರಿಗೆ ಆಗಮಿಸಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಇಂಡಿಗೋ ಏರ್ ಲೈನ್ಸ್ ವಿಮಾನದಲ್ಲಿ ಬೆಳಗಿನ ಜಾವ ಆಗಮಿಸಿದ ಈತನ ವರ್ತನೆ ಅನುಮಾನಾಸ್ಪದವಾಗಿದ್ದರಿಂದ ಪೊಲೀಸರು ತಪಾಸಣೆಗೆ ಒಳಪಡಿಸಿದ್ದಾರೆ. ಆದರೆ ಈತನ ಬ್ಯಾಗ್ ನಲ್ಲಿ ಏನೂ ಪತ್ತೆಯಾಗದಿದ್ದಾಗ ಈತ ಧರಿಸಿದ್ದ ಜೀನ್ಸ್ ಪ್ಯಾಂಟ್ ಅನ್ನು ತಪಾಸಣೆಗೊಳಪಡಿಸಿದ್ದಾರೆ. ಸೊಂಟದ ಭಾಗದಲ್ಲಿ ಚಿನ್ನದ ಪೌಚ್ ಗಳನ್ನು ಹೊಲಿಸಿದ್ದಾನೆ. ಹಾಗೆಯೇ ಒಳ ಉಡುಪಿನಲ್ಲೂ ಚಿನ್ನದ ಪೌಚ್ ಗಳು ಪತ್ತೆಯಾಗಿವೆ. ಈತ ಕಳ್ಳ ಸಾಗಾಣೆ ಮಾಡಿದ ಚಿನ್ನದ ತೂಕ 907 ಗ್ರಾಂ ಎಂದು ತಿಳಿದು ಬಂದಿದೆ.

ತಂತ್ರಜ್ಞಾನ ಬದಲಾಗಿದೆ. ಒಂದು ಸ್ಕ್ಯಾನರ್ ಯಂತ್ರ ಇಡೀ ದೇಹವನ್ನು ತಪಾಸಣೆಗೊಳಪಡಿಸಿ ಅಕ್ರಮ ಸಾಗಣೆಯನ್ನು ಪತ್ತೆ ಮಾಡುತ್ತದೆ.

Whats_app_banner