ಬೆಂಗಳೂರಿನಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯ ನಗ್ನ ಎಐ ಆಧಾರಿತ ಫೋಟೊ ವೈರಲ್; ಪೊಲೀಸರಿಗೆ ಪೋಷಕರ ದೂರು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯ ನಗ್ನ ಎಐ ಆಧಾರಿತ ಫೋಟೊ ವೈರಲ್; ಪೊಲೀಸರಿಗೆ ಪೋಷಕರ ದೂರು

ಬೆಂಗಳೂರಿನಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯ ನಗ್ನ ಎಐ ಆಧಾರಿತ ಫೋಟೊ ವೈರಲ್; ಪೊಲೀಸರಿಗೆ ಪೋಷಕರ ದೂರು

ಉದ್ಯಾನ ನಗರಿ ಬೆಂಗಳೂರಿನಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯ ನಗ್ನ ಭಾವಚಿತ್ರ ವೈರಲ್ ಆಗಿದ್ದು, ಪೋಷಕರ ಆತಂಕಕ್ಕೆ ಕಾರಣವಾಗಿದೆ. ಪೊಲೀಸರಿಗೆ ದೂರು ನೀಡಿದ್ದಾರೆ. (ವರದಿ: ಎಚ್.ಮಾರುತಿ)

ಬೆಂಗಳೂರಿನಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯ ನಗ್ನ ಎಐ ಆಧಾರಿತ ಫೋಟೊ ವೈರಲ್ ಆಗಿದ್ದು, ಸಂಬಂಧ ಪೊಲೀಸರಿಗೆ ಪೋಷಕರ ದೂರು ನೀಡಿದ್ದಾರೆ.
ಬೆಂಗಳೂರಿನಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯ ನಗ್ನ ಎಐ ಆಧಾರಿತ ಫೋಟೊ ವೈರಲ್ ಆಗಿದ್ದು, ಸಂಬಂಧ ಪೊಲೀಸರಿಗೆ ಪೋಷಕರ ದೂರು ನೀಡಿದ್ದಾರೆ.

ಬೆಂಗಳೂರು: ಸಿಬಿಎಸ್‌ಇ ಪಠ್ಯದ ಪ್ರತಿಷ್ಠಿತ ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬರ ನಗ್ನ ಫೋಟೊವನ್ನು ಕೃತಕ ಬುದ್ದಿಮತ್ತೆ ಮೂಲಕ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಲಾಗಿದೆ. ಈ ವಿದ್ಯಾರ್ಥಿನಿಯ ಪೋಷಕರು ಸೈಬರ್ ಸೆಲ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಮೊದಲು ಈ ಫೋಟೊವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ.

ಆರಂಭದಲ್ಲಿ ಇಂತಹ ಫೋಟೊಗಳನ್ನು ಸೃಷ್ಟಿಸಿರುವುದು ಆ ವಿದ್ಯಾರ್ಥಿನಿಗೆ ತಿಳಿದಿರಲಿಲ್ಲ. ಸಹಪಾಠಿಗಳು ಎಚ್ಚರಿಸಿದ ನಂತರವಷ್ಟೇ ಅರಿವಿಗೆ ಬಂದಿದೆ. ಈ ವಿದ್ಯಾರ್ಥಿನಿಯು ಇನ್‌ಸ್ಟಾಗ್ರಾಂನಲ್ಲಿ ತನ್ನ ಎರಡು ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಎರಡರಲ್ಲಿ ಒಂದನ್ನು ನಗ್ನವಾಗಿ ಚಿತ್ರಿಸಲು ಬಳಸಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ. ಆ ನಂತರ ಪೋಷಕರು ದೂರು ದಾಖಲಿಸಿದ್ದಾರೆ.

ಈ ಕೃತಕ ಸೃಷ್ಟಿ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವಲ್ಲಿ ಅನಾಮಿಕ ವ್ಯಕ್ತಿಯೊಬ್ಬನ ಪಾತ್ರ ಇದೆ ಎಂದು ಶಂಕಿಸಲಾಗಿದೆ. ಈ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ನಂತರ ಬೇರೆ ಯಾವುದೇ ಪೋಸ್ಟ್ ಗಳನ್ನು ಹಂಚಿಕೊಂಡಿಲ್ಲ ಮತ್ತು ಆ ವ್ಯಕ್ತಿ ಸಾಮಾಜಿಕ ಜಾಲತಾಣದಿಂದ ನಾಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ.

ಶಾಲೆಗೆ ಬೇಸಿಗೆ ರಜೆ ಇರರುವ ಕಾರಣ ಇನ್ನೂ ಶಾಲೆಗಳು ಆರಂಭವಾಗಿಲ್ಲ. ಬಾಲಕಿಯ ಪೋಷಕರು ಸೈಬರ್ ಸೆಲ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಪ್ರಕರಣವನ್ನು ಶಾಲಾ ಆಡಳಿತ ಮಂಡಳಿಯು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಸಹಕರಿಸುವುದಾಗಿ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ. ಇದೇ ಶಾಲೆಯ ಮತ್ತೊಬ್ಬ ವಿದ್ಯಾರ್ಥಿನಿಯ ಭಾವಚಿತ್ರಗಳನ್ನೂ ನಗ್ನಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಲಾಗಿದೆ. ಆದರೆ ಆ ಬಾಲಕಿಯ ಪೋಷಕರು ಯಾವುದೇ ದೂರು ಸಲ್ಲಿಸಿಲ್ಲ.

ನಿಮ್ಮ ವೈಯಕ್ತಿಕ ದಾಖಲೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಸ್ನೇಹಿತರ ಆಯ್ಕೆಯಲ್ಲಿ ಎಚ್ಚರವಹಿಸಬೇಕು. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಾಮಾಜಿಕ ಜಾಲತಾಣಗಳು ಆತಂಕವನ್ನು ಉಂಟು ಮಾಡುವುದರಲ್ಲಿ ಸಂದೇಹವಿಲ್ಲ ಎಂದು ಪೊಲೀಸರು ಸಲಹೆ ನೀಡುತ್ತಾರೆ. ಮೊಬೈಲ್‌ನ ಅತಿಯಾದ ಅವಲಂಬನೆ ಇಂತಹ ಅವಾಂತರಗಳನ್ನು ಸೃಷ್ಟಿಸುವುದರಲ್ಲಿ ಸಂದೇಹವಿಲ್ಲ. ಕಾಣದ ಕೈವಾಡಗಳು ಯಾವುದೇ ಅನಾಹುತ ಮಾಡಲು ಹಿಂಜರಿಯುವುದಿಲ್ಲ. ಆದ್ದರಿಂದ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಎಚ್ಚರಿಕೆಯಿಂದ ಇರುವುದು ಕ್ಷೇಮ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner