Aadhaar RTC Linking: ಆಧಾರ್ - ಪಹಣಿ ಜೋಡಣೆ, ಸಣ್ಣ, ಅತಿಸಣ್ಣ ರೈತರನ್ನು ಗುರುತಿಸಲು ಕರ್ನಾಟಕ ಸರ್ಕಾರದ ಚಿಂತನೆ
ಕನ್ನಡ ಸುದ್ದಿ  /  ಕರ್ನಾಟಕ  /  Aadhaar Rtc Linking: ಆಧಾರ್ - ಪಹಣಿ ಜೋಡಣೆ, ಸಣ್ಣ, ಅತಿಸಣ್ಣ ರೈತರನ್ನು ಗುರುತಿಸಲು ಕರ್ನಾಟಕ ಸರ್ಕಾರದ ಚಿಂತನೆ

Aadhaar RTC Linking: ಆಧಾರ್ - ಪಹಣಿ ಜೋಡಣೆ, ಸಣ್ಣ, ಅತಿಸಣ್ಣ ರೈತರನ್ನು ಗುರುತಿಸಲು ಕರ್ನಾಟಕ ಸರ್ಕಾರದ ಚಿಂತನೆ

ಆಂಧ್ರಪ್ರದೇಶ ಮಾದರಿಯಲ್ಲಿ ಕರ್ನಾಟಕದಲ್ಲೂ ಆಧಾರ್ - ಪಹಣಿ ಜೋಡಣೆಯ ಕಾರ್ಯ ನಡೆಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಗುರುತಿಸಿ ಅವರಿಗೆ ಪರಿಹಾರ ನೇರವಾಗಿ ಪಾವತಿಯಾಗುವಂತೆ ಮತ್ತು ಜಮೀನು ಅಕ್ರಮ ತಡೆಯುವುದು ಇದರ ಉದ್ದೇಶ.

ಸಣ್ಣ ಮತ್ತು ಅತಿಸಣ್ಣ ರೈತರ ಅನುಕೂಲಕ್ಕಾಗಿ ಆಧಾರ್ - ಪಹಣಿ ಜೋಡಣೆ ನಡೆಸಲು  ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. (ಸಾಂಕೇತಿಕ ಚಿತ್ರ)
ಸಣ್ಣ ಮತ್ತು ಅತಿಸಣ್ಣ ರೈತರ ಅನುಕೂಲಕ್ಕಾಗಿ ಆಧಾರ್ - ಪಹಣಿ ಜೋಡಣೆ ನಡೆಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. (ಸಾಂಕೇತಿಕ ಚಿತ್ರ) (GoK)

ಕರ್ನಾಟಕ ಸರ್ಕಾರವು ಆಧಾರ್ ಮತ್ತು ಆರ್‌ಟಿಸಿ ಅಥವಾ ಪಹಣಿಯನ್ನು ಜೋಡಿಸುವುದಕ್ಕೆ ಚಿಂತನೆ ನಡೆಸಿದೆ. ಆ ಮೂಲಕ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಗುರುತಿಸಿ ಅವರಿಗೆ ಪರಿಹಾರ ಕ್ರಮಗಳನ್ನು ಒದಗಿಸುವುದಕ್ಕೆ "ಶಾಶ್ವತ ವ್ಯವಸ್ಥೆ" ರೂಪಿಸಲು ಸರ್ಕಾರ ಆಲೋಚನೆ ನಡೆಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೋಮವಾರ ಬೆಳಗಾವಿಯಲ್ಲಿ ಹೇಳಿದರು.

ವಿಧಾನಸಭೆಯ ಕಲಾಪದ ವೇಳೆ ಬರಗಾಲದ ಮೇಲಿನ ಚರ್ಚೆಗೆ ಉತ್ತರಿಸಿದ ಸಚಿವ ಕೃಷ್ಣ ಭೈರೇಗೌಡರು, ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿರುವುದು ಶೇ. 44 ರಷ್ಟು ರೈತರು ಸಣ್ಣ ಮತ್ತು ಅತಿ ಸಣ್ಣ ರೈತರು (ಎರಡು ಹೆಕ್ಟೇರ್‌ಗಿಂತ ಕಡಿಮೆ ಭೂಮಿಯನ್ನು ಹೊಂದಿರುವವರು). ಆದರೆ ವಾಸ್ತವದಲ್ಲಿ, ರಾಜ್ಯದ 70 ಪ್ರತಿಶತದಷ್ಟು ರೈತರು ಸಣ್ಣ ಮತ್ತು ಅತಿ ಸಣ್ಣ ರೈತರು ಇದ್ದಾರೆ ಎಂದು ವಿವರಿಸಿದರು.

ಆಧಾರ್ ಮತ್ತು ಪಹಣಿ/ ಆರ್‌ಟಿಸಿ ಜೋಡಣೆಯಿಂದ ಏನು ಪ್ರಯೋಜನ

ಆಧಾರ್ ಮತ್ತು ಆರ್‌ಟಿಸಿ ಅಥವಾ ಪಹಣಿಯ ಜೋಡಣೆಯ ಮೂಲಕ ಭೂ-ಸಂಬಂಧಿತ ವಂಚನೆಗಳನ್ನು ನಿಗ್ರಹಿಸುವುದು ಸಾಧ್ಯವಾಗಲಿದೆ. ಅಷ್ಟೇ ಅಲ್ಲ, ಜಮೀನು ಮಾಲೀಕತ್ವದ ವಿಚಾರದಲ್ಲಿ ಮಾಲೀಕತ್ವವನ್ನು ಖಾತ್ರಿಪಡಿಸುವುದು ಸಾಧ್ಯವಿದೆ.

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನಾವು ಒದಗಿಸಿದ ಆಧಾರ್ ಆಧಾರಿತ ದತ್ತಾಂಶಗಳನ್ನು ಪರಿಶೀಲಿಸಿ, ಬರಪರಿಹಾರವನ್ನ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ನಾವು ಒತ್ತಾಯಿಸಿದ್ದೇವೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೇರವಾಗಿ ಪರಿಹಾರವನ್ನು ತಲುಪಿಸುವುದಕ್ಕಾಗಿ ಶಾಶ್ವತ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ. ಇದಕ್ಕಾಗಿ ನಾವು ನಾವು ಎಲ್ಲಾ ಆರ್‌ಟಿಸಿಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಮತ್ತು ಆಧಾರ್ ದೃಢೀಕರಣವನ್ನು ಬಳಸಲು ಯೋಚಿಸುತ್ತಿದ್ದೇವೆ ಎಂದು ಸಚಿವ ಕೃಷ್ಣ ಭೈರೇಗೌಡ ಅವರು ವಿಧಾನಸಭೆಗೆ ತಿಳಿಸಿದರು.

ಆಂಧ್ರ ಪ್ರದೇಶದಲ್ಲಿ ಆರ್‌ಟಿಸಿ ಜತೆಗೆ ಆಧಾರ್ ಲಿಂಕ್ ಮಾಡುವ ಕೆಲಸ ಈಗಾಗಲೇ ನಡೆದಿದೆ.

ಆರ್‌ಟಿಸಿ ಎಂದರೆ ರೆಕಾರ್ಟ್ಸ್ ಆಫ್ ರೈಟ್ಸ್, ಟೆನನ್ಸಿ ಆಂಡ್ ಕ್ರಾಪ್ಸ್. ಇದನ್ನೇ ಪಹಣಿ ಎಂದೂ ಕರೆಯುತ್ತಾರೆ. ಇದರಲ್ಲಿ ಜಮೀನು ಮಾಲೀಕರ ವಿವರ, ಪ್ರದೇಶ, ಮಣ್ಣಿನ ಪ್ರಕಾರ, ಭೂಮಿಯ ಸ್ವಾಧೀನದ ಸ್ವರೂಪ, ಹೊರೆ, ಬೆಳೆದ ಬೆಳೆಗಳು ಮತ್ತು ಮುಂತಾದ ಮಾಹಿತಿಗಳಿರುತ್ತವೆ.

ರೈತರಿಗೆ ಪರಿಹಾರ ವಿತರಣೆಗೆ ಸುಧಾರಿತ ವ್ಯವಸ್ಥೆ

ರೈತರಿಗೆ ಪರಿಹಾರ ವಿತರಣೆ ವ್ಯವಸ್ಥೆಯನ್ನು ಎಂಡ್ ಟು ಎಂಡ್ ಆಟೋಮೇಷನ್ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಗೆ ತಿಳಿಸಿದರು.

ಇಲ್ಲಿಯವರೆಗೆ, ಡಾಟಾ ಎಂಟ್ರಿ ಆಪರೇಟರ್‌ಗಳು ಫಲಾನುಭವಿಗಳ ಹೆಸರನ್ನು ನಮೂದಿಸಿ ಅಕ್ರಮಗಳಿಗೆ ಹೆಚ್ಚಿನ ವ್ಯಾಪ್ತಿಯನ್ನು ನೀಡುತ್ತಿದ್ದರು. ಈ ಹಿಂದೆ, ಅಂದಿನ ಸಿಎಂ ಸಹೋದರನ ಹೆಸರಿಗೆ ನೋಂದಾಯಿತ ಭೂಮಿಗೆ ಪರಿಹಾರ ನೀಡುವುದು ಬೇರೆ ಯಾವುದೋ ಜಿಲ್ಲೆಯ ಹೆಸರಿಗೆ ಹೋಯಿತು ಎಂದು ಕೃಷ್ಣ ಬೈರೇಗೌಡ ಅವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಹೋದರ ಒಳಗೊಂಡ ಅಕ್ರಮದ ಒಂದು ನಿದರ್ಶನವನ್ನು ಉಲ್ಲೇಖಿಸಿದರು ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

Whats_app_banner