ಎಸಿ ವರ್ಕ್ ಆಗಲ್ಲ ಗುರು, ಕನ್ನಡ ಮಾತಾಡು ಇಲ್ಲ ಇಳಿದೋಗು; ಬೆಂಗಳೂರಿನ ಕ್ಯಾಬ್ ಚಾಲಕ, ಪ್ರಯಾಣಿಕನ ವಾಗ್ವಾದದ ವಿಡಿಯೊ ವೈರಲ್
ಕಾರಿನಲ್ಲಿ ಎಸಿ ವಿಚಾರವಾಗಿ ಕ್ಯಾಬ್ ಚಾಲನೊಂದಿಗೆ ನಡೆದಿರುವ ವಾಗ್ವಾದವನ್ನು ಪ್ರಯಾಣಿಕ ಡಾ ಅಥರ್ವ್ ದಾವರ್ ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು: ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದಾಗ ವೈದ್ಯರೊಬ್ಬರು ಎಸಿ (ಹವಾನಿಯಂತ್ರಣ) ಆನ್ ಮಾಡುವಂತೆ ಕೇಳಿದ ವಿಚಾರವಾಗಿ ಕ್ಯಾಬ್ ಚಾಲಕನೊಂದಿಗೆ (Cab Driver) ವಾಗ್ವಾದ ನಡೆಸಿರುವ ಘಟನೆ ಬೆಂಗಳೂರಿನಲ್ಲಿ (Bengaluru News) ನಡೆದಿದೆ. ಡಾ.ಅಥರ್ವ್ ದಾವರ್ ಎಂಬುವರು ಚಾಲನೊಂದಿಗೆ ನಡೆದ ವಾಗ್ವಾದದ ಇಡೀ ಘಟನೆಯನ್ನು ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಘಟನೆಯ ಬಗ್ಗೆ ವಿವರಿಸಿರುವ ಡಾ ದಾವರ್, ಕಾರು ಕೊಳಕಾಗಿತ್ತು. ಹೀಗಾಗಿ ಮೊದಲು ನಾನು ಕಾರನ್ನು ಹತ್ತಲು ಸಿದ್ಧರಿರಲಿಲ್ಲ ಎಂದಿದ್ದಾರೆ. ವಾಗ್ವಾದ ನಡೆಯುವ ಮುನ್ನ ಚಾಲಕ ನನ್ನೊಂದಿಗೆ ಹಿಂದಿಯಲ್ಲಿ ಮಾತನಾಡಿದ್ದಾನೆ ಎಂದು ವಿವರಿಸಿದ್ದಾರೆ.
"ಇದು ಇಲ್ಲಿನ ಭಾಷೆಯ ಬಗ್ಗೆ ಅಲ್ಲ, ಇದು ದುರಹಂಕಾರಿ ಮತ್ತು ಬೇಜವಾಬ್ದಾರಿಯುತ ವ್ಯಕ್ತಿಯು ಕೆಲಸಕ್ಕಾಗಿ ಬೆಂಗಳೂರಿಗೆ ಪ್ರಯಾಣಿಸುವ ಜನರನ್ನು ಮೋಸಗೊಳಿಸುವುದನ್ನು ಮುಂದುವರಿಸಲು ಕನ್ನಡ ಭಾಷೆಯನ್ನು ಹೊಗೆಪರದೆಯಾಗಿ ಬಳಸುವ ಬಗ್ಗೆ" ಎಂದು ವೈದ್ಯ ಅಥರ್ವ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ ಕ್ಯಾಬ್ ಚಾಲಕ ಮತ್ತು ವೈದ್ಯ ನಡುವಿನ ವಾಗ್ವಾದ ಇಲ್ಲಿದೆ.
ಸದ್ಯ ವೈರಲ್ ಆಗಿರುವ ವಿಡಿಯೊದಲ್ಲಿ ಪ್ರಯಾಣಿಕ ವೈದ್ಯ, ಯಾಕೆ ನೀವು ತುಂಬಾ ಕೊಪಗೊಳ್ಳುತ್ತಿದ್ದೀಯಾ ಅಂತ ಹೇಳುತ್ತಾರೆ. ಅದಕ್ಕೆ ಕ್ಯಾಬ್ ಚಾಲಕ, ಎಸಿ ವರ್ಕ್ ಆಗಲ್ಲ ಗುರು. ಮಾತಾಡಂಗಿದ್ರೆ ಕನ್ನಡ ಮಾತಾಡು, ಇಲ್ಲ ಇಳಿದು ಹೋಗು. ಜಾಸ್ತಿ ಮಾತನಾಡಬೇಡ ಎಂದು ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ವೈದ್ಯ ನನಗೆ ನಿಮ್ಮ ಭಾಷೆ ಗೊತ್ತಿ ಎಂದು ಇಂಗ್ಲಿಷ್‌ನಲ್ಲಿ ಹೇಳುತ್ತಾರೆ. ಕನ್ನಡ… ಮಾತನಾಡಂಗಿದ್ರೆ ಮಾತನಾಡು ಇಲ್ಲ ತಿ* ಮುಚ್ಕೊಂಡು ಇಳಿದೋಗು ಎಂದು ಅಶ್ಲೀಲ ಪದವನ್ನು ಬಳಸಿದಿದ್ದಾನೆ. ಮತ್ತೆ ಮಾತನ್ನು ಮುಂದುವರಿಸುವ ವೈದ್ಯ ನಾನು ನಿಗೆ ಏನು ಹೇಳ್ತಾ ಇದ್ದೀನಿ ಅಂದ್ರೆ ಎಂದು ಮಾತು ಆರಂಭಿಸುವಷ್ಟರಲ್ಲಿ ಮತ್ತೆ ಮಧ್ಯ ಪ್ರದೇಶಿಸುವ ಚಾಲಕ ನೋ ಹಿಂದಿ, ನೋ ಇಂಗ್ಲಿಷ್, ನೋ ಬೇರೆ ಭಾಷೆ ಎಂದಿದ್ದಾರೆ. ಇಬ್ಬರ ನಡುವಿನ ವಾಗ್ವಾದದ ವಿಡಿಯೊ ವೈರಲ್ ಆಗಿದೆ.
ಈ ಪೋಸ್ಟ್ ಅನ್ನು ಮೇ 20 ರಂದು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದಾಗಿನಿಂದ, 33 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ಹಲವಾರು ಲೈಕ್ಸ್ ಹಾಗೂ ಕಾಮೆಂಟ್‌ಗಳನ್ನು ಪಡೆದಿದೆ.
ವಿಡಿಯೊಗೆ ನೆಟ್ಟಿಗರ ಪ್ರತಿಕ್ರಿಯೆ ಹೇಗಿತ್ತು ಅನ್ನೋದರ ವಿವರ ಇಲ್ಲಿದೆ
"ಟ್ಯಾಕ್ಸಿ ಚಾಲಕನ ರೌಡಿ ವರ್ತನೆಯನ್ನು ನೋಡಿ ಪ್ರಯಾಣಿಕರು ಭಯಭೀತರಾಗಿದ್ದರು. ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳುವ ಬದಲು ಅವರೊಂದಿಗೆ ಇಷ್ಟು ಶಾಂತವಾಗಿ ಮತ್ತು ಸಿಹಿಯಾಗಿ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಆ ಚಾಲಕನನ್ನು ಎಲ್ಲಾ ಕ್ಯಾಬ್ ಅಗ್ರಿಗೇಟರ್‌ಗಳು ತಕ್ಷಣ ನಿಷೇಧಿಸಬೇಕು ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬ ನೆಟ್ಟಿಗರು, "ಈ ಪ್ರಕರಣದಲ್ಲಿ ಚಾಲಕ ಅಹಂಕಾರಿ ಎಂದು ನಾನು ಕಂಡುಕೊಂಡಿದ್ದೇನೆ! ಆತ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಿಲ್ಲ. ಪ್ರಯಾಣಿಕ ಚಾಲಕನನ್ನು ಹಿಂದಿ ಅಥವಾ ಯಾವುದೇ ಭಾಷೆಯಲ್ಲಿ ಮಾತನಾಡಲು ಕೇಳಿದ್ದಾರೆ. ಇದರಿಂದ ಪ್ರಯಾಣಿಕರೊಂದಿಗೆ ನನಗೆ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಅವರು ಸಹಕಾರ ನೀಡಲು ಪ್ರಯತ್ನಿಸುತ್ತಿದ್ದಾರೆ, ಆದರೆ ಚಾಲಕ ಏಕೆ ಈ ರೀತಿ ವರ್ತಿಸುತ್ತಿದ್ದಾನೆ ಎಂದು ಪ್ರಶ್ನಿಸಿದ್ದಾನೆ.
"ಇದು ಬೆಂಗಳೂರಿನಲ್ಲಿ ಬಹಳ ಸಾಮಾನ್ಯವಾಗಿದೆ. ಈ ಕ್ಯಾಬ್ ಚಾಲಕರು ಎಸಿಯನ್ನು ಆನ್ ಮಾಡುವುದಿಲ್ಲ. ಇದನ್ನು ನಾನೇ ಅನುಭವಿಸಿದ್ದೇನೆ. ವಾಸ್ತವವಾಗಿ, ನೀವು ಕಾರ್ಪೊರೇಟ್ ಬುಕಿಂಗ್ ಹೊಂದಿದ್ದರೆ ಅವರು ನಗದು ರೂಪದಲ್ಲಿ ಪಾವತಿಯನ್ನು ಬಯಸುವುದರಿಂದ ಅವರು ಬುಕಿಂಗ್ ಅನ್ನು ರದ್ದುಗೊಳಿಸುತ್ತಾರೆ" ಎಂದು ಮೂರನೆಯ ವ್ಯಕ್ತಿ ಪೋಸ್ಟ್ ಮಾಡಿದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)