ಕನ್ನಡ ಸುದ್ದಿ  /  ಕರ್ನಾಟಕ  /  ಅಕ್ಷಯ ತೃತೀಯ 2024ರ ಕೊಡುಗೆ, ಯಾವ ಜುವೆಲ್ಲರ್ಸ್ ಏನು ಆಫರ್, ಉಚಿತ ಚಿನ್ನ ಬೆಳ್ಳಿ ನಾಣ್ಯ, ಮೇಕಿಂಗ್ ಚಾರ್ಜ್‌ ವಿನಾಯಿತಿ ಸೇರಿ ಹಲವು ಆಫರ್‌

ಅಕ್ಷಯ ತೃತೀಯ 2024ರ ಕೊಡುಗೆ, ಯಾವ ಜುವೆಲ್ಲರ್ಸ್ ಏನು ಆಫರ್, ಉಚಿತ ಚಿನ್ನ ಬೆಳ್ಳಿ ನಾಣ್ಯ, ಮೇಕಿಂಗ್ ಚಾರ್ಜ್‌ ವಿನಾಯಿತಿ ಸೇರಿ ಹಲವು ಆಫರ್‌

ಅಕ್ಷಯ ತೃತೀಯ 2024 ಕೊಡುಗೆ: ಈ ಬಾರಿಯೂ ಅಕ್ಷಯ ತೃತೀಯಕ್ಕೆ ಭರ್ಜರಿ ಆಫರ್‌ಗಳನ್ನೇ (Akshaya Tritiya Gold Offers 2024) ಜುವೆಲ್ಲರ್ಸ್ ಮುಂದಿಟ್ಟಿದ್ದಾರೆ. ಅಕ್ಷಯ ತೃತೀಯ 2024 ಶುಕ್ರವಾರ (ಮೇ 10) ಇದ್ದು, ಯಾವ ಜುವೆಲ್ಲರ್ಸ್ ಏನು ಆಫರ್ ನೀಡಿದ್ದಾರೆ. ಉಚಿತ ಚಿನ್ನ ಬೆಳ್ಳಿ ನಾಣ್ಯ, ಮೇಕಿಂಗ್ ಚಾರ್ಜ್‌ ವಿನಾಯಿತಿ ಸೇರಿ ಹಲವು ಆಫರ್‌ಗಳ ವಿವರ ಇಲ್ಲಿದೆ.

ಅಕ್ಷಯ ತೃತೀಯ 2024 ಕೊಡುಗೆ: ಯಾವ ಜುವೆಲ್ಲರ್ಸ್ ಏನು ಆಫರ್, ಉಚಿತ ಚಿನ್ನ ಬೆಳ್ಳಿ ನಾಣ್ಯ, ಮೇಕಿಂಗ್ ಚಾರ್ಜ್‌ ವಿನಾಯಿತಿ ಸೇರಿ ಹಲವು ಆಫರ್‌. (ಸಾಂಕೇತಿಕ ಚಿತ್ರ)
ಅಕ್ಷಯ ತೃತೀಯ 2024 ಕೊಡುಗೆ: ಯಾವ ಜುವೆಲ್ಲರ್ಸ್ ಏನು ಆಫರ್, ಉಚಿತ ಚಿನ್ನ ಬೆಳ್ಳಿ ನಾಣ್ಯ, ಮೇಕಿಂಗ್ ಚಾರ್ಜ್‌ ವಿನಾಯಿತಿ ಸೇರಿ ಹಲವು ಆಫರ್‌. (ಸಾಂಕೇತಿಕ ಚಿತ್ರ)

ಬೆಂಗಳೂರು: ನಾಡಿನ ಉದ್ದಗಲಕ್ಕೂ ವಿಶೇಷವಾಗಿ ಚಿನ್ನಾಭರಣ ಮಳಿಗೆಗಳಲ್ಲಿ ಹಬ್ಬದ ಸಂಭ್ರಮ. ಈ ಸಲ ಶುಕ್ರವಾರವೇ (ಮೇ 10) ಅಕ್ಷಯ ತೃತೀಯ ಬಂದಿದ್ದು, ಚಿನ್ನಾಭರಣ ವ್ಯಾಪಾರಿಗಳು ಇದನ್ನು ಶುಭ ಶುಕ್ರವಾರವನ್ನಾಗಿ ಪರಿಗಣಿಸಿ ಅಕ್ಷಯ ತೃತೀಯ 2024 ಕೊಡುಗೆ (Akshaya Tritiya Gold Offers 2024) ಘೋಷಿಸಿದ್ದಾರೆ. ಹಬ್ಬದ ವಿಶೇಷ ರಿಯಾಯಿತಿ, ಕೊಡುಗೆಗಳನ್ನು ಘೋಷಿಸಿದ್ದು, ಬೆಂಗಳೂರಿನ ಚಿನ್ನಾಭರಣ ಮಳಿಗೆಗಳು ಗ್ರಾಹಕರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸಿವೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

ಚಿನ್ನ, ಬೆಳ್ಳಿ ದರ ಹೆಚ್ಚಳವಾಗುತ್ತಿದ್ದರೂ, ಈ ವರ್ಷ ಕಳೆದ ವರ್ಷಕ್ಕಿಂತ ಶೇಕಡ 20 ರಷ್ಟು ಹೆಚ್ಚು ಚಿನ್ನಾಭರಣ ವ್ಯಾಪಾರ ಅಕ್ಷಯ ತೃತೀಯದ ದಿನ ನಡೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಜುವೆಲ್ಲರ್ಸ್. ಹೀಗಾಗಿ, ಆಕರ್ಷಕ ಕೊಡುಗೆಗಳನ್ನೂ ಘೋ‍ಷಿಸಿದ್ದಾರೆ. ಇದರಲ್ಲಿ, ಅಯೋಧ್ಯೆ ಬಾಲ ರಾಮನ ಬೆಳ್ಳಿಯ ಚಿಕ್ಕ ಮೂರ್ತಿ, ಬಂಗಾರದ ನಾಣ್ಯಗಳೂ ಒಳಗೊಂಡಿವೆ. ಇದಲ್ಲದೆ, ಮೇಕಿಂಗ್ ಚಾರ್ಜ್‌ನಲ್ಲಿ ವಿನಾಯಿತಿಯನ್ನೂ ಘೋಷಿಸಿವೆ. ಈ ನಡುವೆ ಚಿನ್ನದ ದರ ಹೆಚ್ಚಳವಾಗುತ್ತಿದ್ದು, ಅಕ್ಷಯ ತೃತೀಯದ ದಿನ ಚಿನ್ನಾಭರಣ ದರವೂ ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ.

ಆನ್‌ಲೈನ್ ಮತ್ತು ಆಫ್‌ಲೈನ್‌ ಮಳಿಗೆಗಳಲ್ಲೂ ಅಕ್ಷಯ ತೃತೀಯ ಗೋಲ್ಡ್ ಆಫರ್‌

ಕೆಲವು ಸಂಸ್ಥೆಗಳು ಘೋ‍ಷಿಸಿರುವ ಅಕ್ಷಯ ತೃತೀಯ ಗೋಲ್ಡ್ ಆಫರ್‌ಗಳು ಹೀಗಿವೆ

ಕಾರಟ್‌ಲೇನ್‌ ಅಕ್ಷಯ ತೃತೀಯ ಗೋಲ್ಡ್‌ ಆಫರ್

ಕಾರಟ್‌ಲೇಟ್‌ ಸಂಸ್ಥೆಯು ತನ್ನ ಬಳಿ ಇರುವ 4500ಕ್ಕೂ ಹೆಚ್ಚು ವಿನ್ಯಾಸಗಳ ಚಿನ್ನಾಭರಣಗಳ ಮೇಲೆ ಶೇಕಡ 20 ರಿಯಾಯಿತಿ ಮತ್ತು ಮೊದಲ ಖರೀದಿಗೆ ಫ್ಲಾಟ್‌ 500 ರೂಪಾಯಿ ಕಡಿತ ಘೋಷಿಸಿದೆ. ಅಷ್ಟೇ ಅಲ್ಲ, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ವಹಿವಾಟು ನಡೆಸಿದರೆ ಶೇಕಡ 5 ತತ್‌ಕ್ಷಣದ ರಿಯಾಯಿತಿ ಸಿಗಲಿದೆ. ಈ ಆಫರ್ ಮೇ 10ರ ತನಕ ಲಭ್ಯವಿದೆ.

ಕ್ಯಾಂಡೆರೆ ಅಕ್ಷಯ ತೃತೀಯ ಆಫರ್

ಕಲ್ಯಾಣ್ ಜುವೆಲ್ಲರ್ಸ್‌ನವರ ಕ್ಯಾಂಡೆರೆಯಲ್ಲಿ ವಜ್ರ ಖಚಿತ ಆಭರಣಗಳ ಮೇಲೆ ಶೇಕಡ 20 ರಿಯಾಯಿತಿ ಘೋಷಿಸಲಾಗಿದೆ. ಇದರ ಜೊತೆಗೆ ಡೆಬಿಟ್‌ ಮತ್ತು ಕ್ರೆಡಿಟ್ ಕಾರ್ಡ್‌ ಪಾವತಿಗೆ ಶೇಕಡ 5 ಇನ್‌ಸ್ಟಂಟ್‌ ಬ್ಯಾಂಕ್ ಡಿಸ್ಕೌಂಟ್ ಕೂಡ ಸಿಗಲಿದೆ.

ಜೋಯಾಲುಕ್ಕಾಸ್‌ ಅಕ್ಷಯ ತೃತೀಯ ಆಫರ್‌

ಅಕ್ಷಯ ತೃತೀಯ ಸಂದರ್ಭದಲ್ಲಿ ಜೋಯಾಲುಕ್ಕಾಸ್ ತನ್ನ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. 50,000 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಚಿನ್ನಾಭರಣಗಳ ಖರೀದಿಯ ಮೇಲೆ ಇದು ಉಚಿತ 1,000 ರೂಪಾಯಿ ಗಿಫ್ಟ್ ವೋಚರ್ ಸಿಗಲಿದೆ. ಇದಲ್ಲದೆ, 10,000 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಬೆಳ್ಳಿ ಆಭರಣ ಆಭರಣ ಖರೀದಿಯ ಮೇಲೆ ಉಚಿತ 500 ರೂಪಾಯಿ ಗಿಫ್ಟ್ ವೋಚರ್ ಲಭ್ಯವಿದೆ. ಈ ಕೊಡುಗೆಯು ಮೇ 3 ರಿಂದ ಮೇ 12ರ ತನಕ ಲಭ್ಯವಿದೆ.

50,000 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಬಾಳುವ ವಜ್ರಗಳು, ಕತ್ತರಿಸದ ವಜ್ರಗಳು, ವಜ್ರದ ಆಭರಣಗಳ ಖರೀದಿಯ ಮೇಲೆ ಗ್ರಾಹಕರಿಗೆ 2000 ರೂಪಾಯಿ ಗಿಫ್ಟ್ ವೋಚರ್ ಅನ್ನು ಸಹ ನೀಡಲಾಗುತ್ತದೆ. ಈ ಕೊಡುಗೆಯು ಏಪ್ರಿಲ್ 26 ರಿಂದ ಮೇ 12, 2024 ರವರೆಗೆ ಲಭ್ಯವಿದೆ. ಈ ವೋಚರ್‌ಗಳನ್ನು 2024ರ ಮೇ 15 ಮತ್ತು ನವೆಂಬರ್ 5 ರ ನಡುವೆ ಬಳಸಬಹುದು ಎಂದು ಅವರ ವೆಬ್‌ಸೈಟ್‌ ಹೇಳಿದೆ.

ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಬಾಲರಾಮ ಉಡುಗೊರೆ

ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಈ ಬಾರಿ ಅಕ್ಷಯ ತೃತೀಯಕ್ಕೆ ಅಯೋಧ್ಯೆಯಲ್ಲಿನ ಬಾಲರಾಮನ ವಿನ್ಯಾಸದ ಬೆಳ್ಳಿ ವಿಗ್ರಹದ ಕೊಡುಗೆಯನ್ನು ಘೋಷಿಸಿದೆ. 50,000 ರೂಪಾಯಿ ಮೇಲ್ಪಟ್ಟು ಆಭರಣ ಖರೀದಿ ಮಾಡುವವರಿಗೆ ಬಾಲರಾಮನ ವಿಗ್ರಹವನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದೆ.

ಮಲಬಾರ್ ಗೋಲ್ಡ್ಸ್‌ ಅಕ್ಷಯ ತೃತೀಯ ಗೋಲ್ಡ್ ಆಫರ್‌

ಮಲಬಾರ್ ಗೋಲ್ಡ್ಸ್ ಪ್ರತಿ ಚಿನ್ನಾಭರಣ ಮತ್ತು ವಜ್ರದ ಆಭರಣ ಖರೀದಿಯಲ್ಲಿ ಮೇಕಿಂಗ್ ಜಾರ್ಜ್‌ನಲ್ಲಿ ಶೇ 25 ರಿಯಾಯಿತಿ ಘೋಷಿಸಿದೆ. ಇದು ಮೇ 12ರ ತನಕ ಲಭ್ಯವಿದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿದರೆ ಶೇಕಡ 5 ರಿಯಾಯಿತಿ ಇದ್ದು, ಕನಿಷ್ಠ 25,000 ರೂಪಾಯಿ ಖರೀದಿ ಮಾಡಿದರೆ ಗರಿಷ್ಠ 2500 ರೂಪಾಯಿ ಕ್ಯಾಶ್‌ಬ್ಯಾಕ್ ಸಿಗಲಿದೆ. ಈ ಆಫರ್‌ ಮೇ 10ಕ್ಕೆ ಕೊನೆಗೊಳ್ಳುತ್ತದೆ.

IPL_Entry_Point