ಕನ್ನಡ ಸುದ್ದಿ  /  Karnataka  /  Bengaluru News: An Entire Office Set Inside A Bengaluru Coffee Shop This Is Why Internet Is Amused

Bengaluru News: ಆಫೀಸ್‌ ಕಾಫಿ ಶಾಪ್‌ಗೆ ಶಿಫ್ಟ್‌ ಆಯ್ತಾ?! ಕಾಫಿ ಶಾಪಲ್ಲಿ ಡೆಸ್ಕ್‌ಟಾಪ್‌ ಇಟ್ಕೊಂಡು ಕೆಲಸ ಮಾಡ್ತಿದ್ದಾರಾ!

ಕಾಫಿ ಶಾಪಲ್ಲಿ ಲ್ಯಾಪ್‌ಟಾಪ್‌ ಇಟ್ಕೊಂಡು ಕೆಲಸ ಮಾಡೋದನ್ನು ನೋಡಿದ್ದೇವೆ. ಆದರೆ ಡೆಸ್ಕ್‌ಟಾಪ್‌ ಇಟ್ಕೊಂಡು ಕೆಲಸ ಮಾಡೋದನ್ನು ಇದೇ ಮೊದಲು ನೋಡ್ತಿರೋದು! ಬೆಂಗಳೂರಿನ ಪ್ರವಾಹ ಪೀಡಿತ ಪ್ರದೇಶಗಳಲ್ಲಿದ್ದ ಆಫೀಸೇನಾದರೂ ಕಾಫಿ ಶಾಪ್‌ಗೆ ಶಿ‍ಫ್ಟ್‌ ಆಯ್ತಾ? ಇಂಟರ್‌ನೆಟ್‌ನಲ್ಲಿ ಫುಲ್‌ ಆಶ್ಚರ್ಯಚಕಿತ ಪ್ರಶ್ನೆಗಳ ಸುರಿಮಳೆ! ಅವುಗಳ ಕಡೆಗೊಂದು ನೋಟ ಇಲ್ಲಿದೆ ನೋಡಿ!

ಪೂರ್ಣ ಪ್ರಮಾಣದ ಕೆಲಸದ ಸೆಟಪ್ ಅನ್ನು ಕಾಫಿ ಅಂಗಡಿಗೆ ಸ್ಥಳಾಂತರಿಸಿರುವ ವಿಚಾರ ಅನೇಕರಲ್ಲಿ ಸಂಚಲನ ಮೂಡಿಸಿದೆ!
ಪೂರ್ಣ ಪ್ರಮಾಣದ ಕೆಲಸದ ಸೆಟಪ್ ಅನ್ನು ಕಾಫಿ ಅಂಗಡಿಗೆ ಸ್ಥಳಾಂತರಿಸಿರುವ ವಿಚಾರ ಅನೇಕರಲ್ಲಿ ಸಂಚಲನ ಮೂಡಿಸಿದೆ! (Twitter)

ಬೆಂಗಳೂರು: ಕೋವಿಡ್‌ ಕಾರಣ ಉಂಟಾಗಿದ್ದ ಅಡಚಣೆಯ ಬಳಿಕ ಎಲ್ಲರೂ ನಿಧಾನವಾಗಿ ಕಚೇರಿಗೆ ಹೋಗಿ ಕೆಲಸ ಮಾಡಲು ಶುರುಮಾಡಿದ್ದರಷ್ಟೆ. ಬೆಂಗಳೂರಿನಲ್ಲಿ ಐಟಿ ಕಚೇರಿಗಳಲ್ಲಿ ಕೆಲಸದ ವಾತಾವರಣ ಸೃಷ್ಟಿಯಾಗುತ್ತಿರುವಾಗಲೇ, ನಿರಂತರ ಮಳೆಯ ಕಾರಣ ಸಂಕಷ್ಟ ಉಂಟಾಗಿದೆ. ಮುಳುಗಡೆ ಪ್ರದೇಶದಲ್ಲಿರುವ ಐಟಿ ಕಂಪನಿ ಮತ್ತು ಇತರೆ ಕಂಪನಿಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ.

ಆ ಸೂಚನೆಯನ್ನು ಉದ್ಯೋಗಿಗಳು ಪಾಲಿಸುತ್ತಿದ್ದಾರೆ. ಈ ನಡುವೆ, ಇಂಟರ್‌ನೆಟ್‌ನಲ್ಲಿ ಶೇರ್‌ ಆದ ಫೋಟೋ ಮತ್ತು ಅದರ ಸ್ಟೇಟಸ್‌ ಎಲ್ಲರ ಗಮನಸೆಳೆದಿದೆ. ಬೆಂಗಳೂರಿನ ಕಾಫಿ ಶಾಪ್‌ಗಳಲ್ಲಿ ಉದ್ಯೋಗಿ ಗೆಳೆಯರು ಒಟ್ಟು ಸೇರಿ ಲ್ಯಾಪ್‌ಟಾಪ್‌ ಇಟ್ಟುಕೊಂಡು ಕೆಲಸ ಮಾಡುವುದನ್ನು ಗಮನಿಸಿದ್ದೇವೆ. ಆದರೆ, ಕಾಫಿ ಶಾಪ್‌ನಲ್ಲಿ ಡೆಸ್ಕ್‌ಟಾಪ್‌ ಇಟ್ಕೊಂಡು ಕೆಲಸ ಮಾಡುವುದು ಎಂದರೆ ಸಾಮಾನ್ಯವೇ?! ಈ ಫೋಟೋ ವೈರಲ್‌ ಆಗಿದೆ. ನಿಜಕ್ಕೂ ಇದೊಂದು ಸಾಹಸವೇ ಸರಿ!!!

ಕೆಲವರು ಈ ಫೋಟೋವನ್ನು ಫನ್ನಿ ಎಂದು ಹೇಳಿದರೆ, ಇನ್ನು ಕೆಲವರು ಕೆಲಸದ ಮೇಲಿನ ಬದ್ಧತೆ (Work dedication) ಎಂದು ಹೇಳಿದ್ದಾರೆ. ಬೆಂಗಳೂರಿನ ಉದ್ಯಮಿ ಸಂಕೇತ್‌ ಸಾಹು ಎಂಬುವವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಫೋಟೋ ಶೇರ್‌ ಮಾಡಿದ್ದು, “ಕಚೇರಿ ಮುಳುಗಿರುವ ಕಾರಣ ಒಂದು ಗ್ರೂಪ್‌ ಥರ್ಡ್‌ ವೇವ್‌ ಕಾಫಿಯಲ್ಲಿ ಫುಲ್‌ ಡೆಸ್ಕ್‌ಟಾಪ್‌ ಸೆಟಪ್‌ ಮಾಡಿಕೊಂಡು ಕೆಲಸ ಮಾಡ್ತಿರೋದನ್ನು ಈಗಷ್ಟೇ ನೋಡಿದೆ." ಎಂದು ಕಳವಳದೊಂದಿಗೆ ಬರೆದುಕೊಂಡಿದ್ದಾರೆ!

ಪೂರ್ಣ ಪ್ರಮಾಣದ ಕೆಲಸದ ಸೆಟಪ್ ಅನ್ನು ಕಾಫಿ ಶಾಪ್‌ಗೆ ಸ್ಥಳಾಂತರಿಸಿರುವ ಬಗ್ಗೆ ಅನೇಕರು ತಮಾಷೆಯ ಕಮೆಂಟ್‌ ಮಾಡಿದರೆ, ಒಬ್ಬ ಬಳಕೆದಾರ ಕಾಳಜಿಯೊಂದಿಗೆ ಪ್ರತಿಕ್ರಿಯಿಸಿದ್ದು ಹೀಗೆ : "ನೀವು ಮಾನಿಟರ್ ಮತ್ತು ಸಂಪೂರ್ಣ CPU ಅನ್ನು ಕಾಫಿ ಶಾಪ್‌ಗೆ ಕೊಂಡೊಯ್ಯಬೇಕಾದರೆ ಅದಕ್ಕೂ ಡೆಡಿಕೇಶನ್‌ ಬೇಕು".

ಆದಾಗ್ಯೂ, ಕೆಲವು ಬಳಕೆದಾರರು ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿದ್ದರು. ವಿಷಕಾರಿ ಕೆಲಸದ ಸ್ಥಳ ಸಂಸ್ಕೃತಿ ಎಂದು ಕರೆದ ಕೆಲವರು ಕೂಡ ಈ ಪೈಕಿ ಇದ್ದರು. "ಕಾಫಿ ಶಾಪ್‌ ಕಚೇರಿಯಂತೆ ಹೆಚ್ಚು ಒತ್ತಡದಿಂದ ಮತ್ತು ಒತ್ತಡದಿಂದ ಕೂಡಿದ್ದರೆ, ಏನು ಪ್ರಯೋಜನ? ನಾನು ಇನ್ನೂ ಕೆಫೆಯಂತೆ ಮಾಸ್ಕ್ವೆರೇಡಿಂಗ್ ಮಾಡುವ ಕೋ ವರ್ಕಿಂಗ್‌ ಸ್ಪೇಸ್‌ಗಿಂತ ಹೆಚ್ಚಾಗಿ ಕೆಲಸ ಮಾಡುವ ಸ್ಥಳವಾಗಿ ಕೆಫೆಯನ್ನು ಇಷ್ಟಪಡುತ್ತೇನೆ" ಎಂದು ಬರೆದಿದ್ದಾರೆ.

“ಇದನ್ನು ರೊಮ್ಯಾಂಟಿಕ್ ಅಥವಾ ವೈಭವೀಕರಿಸಬೇಕು ಎಂದು ನಾನು ಭಾವಿಸುವುದಿಲ್ಲ. ಇದು ನಿಜವಾಗಿಯೂ ದುಃಖಕರವಾಗಿದೆ" ಎಂದು ಇನ್ನೊಬ್ಬ ಟ್ವೀಟ್‌ ಮಾಡಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಕೆಲವು ಭಾಗಗಳಲ್ಲಿ ಪ್ರವಾಹದ ದೃಶ್ಯಗಳು ಇಡೀ ರಾಷ್ಟ್ರದ ಗಮನ ಸೆಳೆದಿದ್ದವು. ಈಗ ಪುಣೆಯಲ್ಲೂ ಅಂಥದ್ದೇ ಒಂದು ಸನ್ನಿವೇಶ ಎದುರಾಗಿದೆ.

IPL_Entry_Point