ಕನ್ನಡ ಸುದ್ದಿ  /  Karnataka  /  Bengaluru News Avalahalli Neighbours Fight Over Open Window Sex 44 Yr Woman Has Filed A Police Complaint Girinagar Uks

Bengaluru Crime: ಪಕ್ಕದ ಮನೆಯವರು ಕಿಟಕಿ ತೆರೆದಿಟ್ಟೇ ಸರಸ ಸಲ್ಲಾಪ ಮಾಡ್ತಾರೆ, ಗಿರಿನಗರ ಪೊಲೀಸರಿಗೆ 44 ವರ್ಷದ ಮಹಿಳೆಯ ದೂರು

ಮೇರೆ ಸಾಮ್ನೇ ವಾಲಿ ಕಿಡಕಿ ಮೇ ಹಾಡು ನೆನಪಾಯ್ತಾ.. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ ಬಿಡಿ. ಬೆಂಗಳೂರಿನ ಗಿರಿನಗರ ಆವಲಹಳ್ಳಿಯಲ್ಲಿ ನೆರೆಮನೆಯವರು ಕಿಟಕಿ ತೆರೆದಿಟ್ಟೇ ಸರಸ ಸಲ್ಲಾಪ ಮಾಡ್ತಾರೆ ಎಂದು ಗಿರಿನಗರ ಪೊಲೀಸರಿಗೆ 44 ವರ್ಷದ ಮಹಿಳೆಯ ದೂರು ದಾಖಲಿಸಿದ್ದಾರೆ. ಕುತೂಹಲ ಕೆರಳಿಸುವ ಪ್ರಕರಣದ ವಿವರ ಇಲ್ಲಿದೆ.

ಪಕ್ಕದ ಮನೆಯವರು ಕಿಟಕಿ ತೆರೆದಿಟ್ಟೇ ಸರಸ ಸಲ್ಲಾಪ ಮಾಡ್ತಾರೆ ಎಂದು ಗಿರಿನಗರ ಪೊಲೀಸ್ ಠಾಣೆಯಲ್ಲಿ 44 ವರ್ಷದ ಮಹಿಳೆ ದೂರು ದಾಖಲಿಸಿದ್ದಾರೆ. (ಸಾಂಕೇತಿಕ ಚಿತ್ರ)
ಪಕ್ಕದ ಮನೆಯವರು ಕಿಟಕಿ ತೆರೆದಿಟ್ಟೇ ಸರಸ ಸಲ್ಲಾಪ ಮಾಡ್ತಾರೆ ಎಂದು ಗಿರಿನಗರ ಪೊಲೀಸ್ ಠಾಣೆಯಲ್ಲಿ 44 ವರ್ಷದ ಮಹಿಳೆ ದೂರು ದಾಖಲಿಸಿದ್ದಾರೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ವಾಹನ ಪಾರ್ಕಿಂಗ್ ವಿಚಾರಕ್ಕೆ, ನಲ್ಲಿ ನೀರಿಗೆ, ಕಸದ ವಿಚಾರಕ್ಕೆ ಅಕ್ಕಪಕ್ಕದ ಮನೆಯವರು ಜಗಳಾಡುವುದನ್ನು ಕಂಡಿದ್ದೇವೆ. ಅಂತಹ ಸುದ್ದಿ ಕೇಳಿದ್ದೇವೆ. ಆದರೆ ಇದು ಸ್ವಲ್ಪ ವಿಚಿತ್ರ ಕೇಸ್. “ನೆರೆಮನೆಯವರು ಕಿಟಕಿ ತೆರೆದಿಟ್ಟೇ ಸರಸ ಸಲ್ಲಾಪ ಮಾಡ್ತಾರೆ” ಎಂದು ಆವಲಹಳ್ಳಿಯ 44 ವರ್ಷದ ಮಹಿಳೆಯೊಬ್ಬರು ಗಿರಿನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ದಕ್ಷಿಣ ಬೆಂಗಳೂರಿನ ಗಿರಿನಗರ ಸಮೀಪದ ಆವಲಹಳ್ಳಿಯಲ್ಲಿ ಈ ರೀತಿ ಗಲಾಟೆ ನಡೆದಿರುವುದು. ಪಕ್ಕದ ಮನೆಯ ಗಂಡ ಹೆಂಡತಿ ಬೆಡ್‌ರೂಮ್‌ನ ಕಿಟಕಿ ತೆರೆದಿಟ್ಟುಕೊಂಡೇ ಸರಸ ಸಲ್ಲಾಪ ಮಾಡ್ತಾರೆ, ಲೈಂಗಿಕ ಕ್ರಿಯೆ ನಡೆಸ್ತಾರೆ. ಇದರಿಂದ ತಮಗೆ ಮುಜುಗರ ಉಂಟಾಗಿದೆ ಎಂದು ಗಿರಿನಗರ ಆವಲಹಳ್ಳಿಯ ಬಿಡಿಎ ಲೇಔಟ್‌ನ 44 ವರ್ಷದ ಮಹಿಳೆ ದೂರು ನೀಡಿದ್ದಾರೆ.

ಏನಿದು ಪ್ರಕರಣ…

ಪಕ್ಕದ ಮನೆಯ ಕಿಟಕಿ ಎಂದ ತತ್‌ಕ್ಷಣಕ್ಕೆ ನೆನಪಿಗೆ ಬರುವುದು 1968ರ ಪಡೋಸಾನ್‌ (ನೆರೆಮನೆ) ಸಿನಿಮಾ ಮತ್ತು ಅದರ ಮೇರೆ ಸಾಮ್ನೇ ವಾಲಿ ಕಿಡಕಿ ಮೇ… ಹಾಡು. ಕನ್ನಡದಲ್ಲೂ ರಾಘವೇಂದ್ರ ರಾಜ್‌ ಕುಮಾರ್, ಅನಂತನಾಗ್ ಅಭಿನಯದ ಪಕ್ಕದ ಮನೆಯ ಹುಡುಗಿ ಚಿತ್ರದಲ್ಲ ಈ ಹಾಡು “ಅಂದ ಚಂದದ ಮನೆಯ ಕಿಟಕಿಯಲಿ…” ಎಂದು ಜನಪ್ರಿಯವಾಗಿದೆ. ಇರಲಿ ಬಿಡಿ.

ಗಿರಿನಗರ ಆವಲಹಳ್ಳಿಯ ಈ ಪ್ರಕರಣದ ದೂರು ದಾಖಲಾಗಿರುವುದು ಮಾರ್ಚ್ 8ರಂದು. ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದೆ. ಇದಕ್ಕೆ ಒಂದು ಪ್ರತಿದೂರು ಮಾರ್ಚ್ 10ರಂದು ದಾಖಲಾಗಿದೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಮಹಿಳೆ ನೀಡಿರುವ ದೂರು ಏನು?

ಪಕ್ಕದ ಮನೆಯ ಗಂಡ ಹೆಂಡತಿ ಇತ್ತೀಚೆಗೆ ರಾತ್ರಿ 10.30ರ ಸುಮಾರಿಗೆ ಅವರ ಬೆಡ್‌ರೂಮ್‌ನ ಕಿಟಕಿ ತೆರೆದಿಟ್ಟು ಸರಸ ಸಲ್ಲಾಪವಾಡುತ್ತ ಲೈಂಗಿಕ ಕ್ರಿಯೆ ನಡೆಸುತ್ತಿದ್ದರು. ನಮ್ಮ ಮನೆ ಎರಡನೇ ಮಹಡಿಯಲ್ಲಿದ್ದು, ಈ ಮನೆಯ ಬಾಗಿಲಿಗೆ ಪಕ್ಕದಲ್ಲೇ ಅವರ ಬೆಡ್‌ರೂಮ್ ಕಿಟಕಿ ಇದೆ. ಈ ವಿಕೃತಿ ಗಮನಿಸಿ ಕಿಟಕಿ ಹಾಕಿಕೊಳ್ಳುವಂತೆ ಹೇಳಿದರೆ, ಅವರು ನನ್ನ ಮತ್ತು ನನ್ನ ಮನೆಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನನ್ನ ಮೇಲೆ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಮಹಿಳೆಯ ವಿರುದ್ಧ ದಾಖಲಾಗಿರುವ ಪ್ರತಿದೂರು ಏನು

ಆ ಗಂಡ ಹೆಂಡತಿ ಬಾಡಿಗೆ ಮನೆಯಲ್ಲಿದ್ದ ಕಾರಣ, ಅವರ ಮನೆಯ ಮಾಲೀಕ ಈ ಮಹಿಳೆಯ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಈ ಮಹಿಳೆ ಮತ್ತು ಅವರ ಕುಟುಂಬದವರು ನಮ್ಮ ಮನೆಗೆ ಬಾಡಿಗೆಗೆ ಬರುವವರ ಜೊತೆಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಾರೆ. ಅವರಿಗೆ ಕಿರಿಕಿರಿ ಮಾಡಿ ಬಾಡಿಗೆಗೆ ನಿಲ್ಲದಂತೆ ಮಾಡುತ್ತಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಕೆಲವು ಯುವಕರನ್ನು ಕರೆತಂದು ಜೀವ ಬೆದರಿಕೆ ಹಾಕಿದ್ದಾರೆ. ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪ್ರತಿ ದೂರಿನಲ್ಲಿ ತಿಳಿಸಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point