ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ನಗರ ಜಿಲ್ಲೆಯಲ್ಲಿ 2020ರ ದಾಖಲೆ ಸರಿಗಟ್ಟುವತ್ತ ಸಾಗಿದೆ ಸರಾಸರಿ ಅಂತರ್ಜಲ ಮಟ್ಟ; 10 ವರ್ಷಗಳ ಅಂಕಿ ನೋಟ ಹೀಗಿದೆ

ಬೆಂಗಳೂರು ನಗರ ಜಿಲ್ಲೆಯಲ್ಲಿ 2020ರ ದಾಖಲೆ ಸರಿಗಟ್ಟುವತ್ತ ಸಾಗಿದೆ ಸರಾಸರಿ ಅಂತರ್ಜಲ ಮಟ್ಟ; 10 ವರ್ಷಗಳ ಅಂಕಿ ನೋಟ ಹೀಗಿದೆ

ಬೆಂಗಳೂರಿನ ನೀರಿನ ಸಮಸ್ಯೆ ಕಾಡುತ್ತಿರುವಾಗಲೇ, ಬೆಂಗಳೂರು ಜಿಲ್ಲೆಯ ಅಂತರ್ಜಲ ಮಟ್ಟವೂ ಗಣನೀಯವಾಗಿ ಕುಸಿದಿರುವುದು ಗಮನಸೆಳೆದಿದೆ. ಇದು 2020ರ ಮಟ್ಟಕ್ಕೆ ಇಳಿಯತೊಡಗಿದ್ದು, ಫೆಬ್ರವರಿ ತಿಂಗಳ ದತ್ತಾಂಶ ವರದಿಯ ವಿವರ ಹೀಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಸರಾಸರಿ ಅಂತರ್ಜಲ ಮಟ್ಟ 2020ರ ದಾಖಲೆ ಸರಿಗಟ್ಟುವತ್ತ ಸಾಗಿದೆ. ಕುಡಿಯುವ ನೀರಿಗೆ ಸರದಿ ನಿಂತ ಜನ (ಎಡ ಚಿತ್ರ); ನೀರಿನ ಟ್ಯಾಂಕರ್ (ಬಲ ಚಿತ್ರ) (ಸಾಂಕೇತಿಕ ಚಿತ್ರ)
ಬೆಂಗಳೂರು ನಗರ ಜಿಲ್ಲೆಯಲ್ಲಿ ಸರಾಸರಿ ಅಂತರ್ಜಲ ಮಟ್ಟ 2020ರ ದಾಖಲೆ ಸರಿಗಟ್ಟುವತ್ತ ಸಾಗಿದೆ. ಕುಡಿಯುವ ನೀರಿಗೆ ಸರದಿ ನಿಂತ ಜನ (ಎಡ ಚಿತ್ರ); ನೀರಿನ ಟ್ಯಾಂಕರ್ (ಬಲ ಚಿತ್ರ) (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕದ ರಾಜಧಾನಿ ಇರುವ ಬೆಂಗಳೂರು ನಗರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ದಿನೇದಿನೆ ಹೆಚ್ಚಾಗುತ್ತಿದ್ದು, ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. 2020ರ ಬಳಿಕ ಇದೇ ಮೊದಲ ಸಲ ಇಷ್ಟು ಬೀಕರ ಜಲಕ್ಷಾಮವನ್ನು ಬೆಂಗಳೂರು ನಗರ ಎದುರಿಸುತ್ತಿದೆ. ಇದರ ನಡುವೆ ನಗರ ಜಿಲ್ಲೆಯ ಅಂತರ್ಜಲ ಮಟ್ಟವೂ ಗಣನೀಯವಾಗಿ ಕುಸಿದಿದೆ ಎಂಬ ವರದಿ ಗಮನಸೆಳೆದಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ 10 ವರ್ಷಗಳ ಫೆಬ್ರವರಿ ತಿಂಗಳ ಅಂತರ್ಜಲ ಮಟ್ಟದ ದತ್ತಾಂಶವನ್ನು ಶೇರ್ ಮಾಡಿದೆ. ಅಂತರ್ಜಲ ನಿರ್ದೇಶನಾಲಯದ ದತ್ತಾಂಶ ಇದಾಗಿದ್ದು, ಕಳೆದ 10 ವರ್ಷಗಳ ಅವಧಿಯಲ್ಲಿ ಇದು ಎರಡನೇ ಬಾರಿಗೆ ಮೈನಸ್ 30 (m.bgl) ರ ಗಡಿ ದಾಟಿದೆ. ಇದರಲ್ಲಿ m.bgl ಎಂಬುದು ನೆಲಮಟ್ಟದಿಂದ ಎಷ್ಟು ಮೀಟರ್ ಆಳಕ್ಕೆ ಅಂತರ್ಜಲ ಇಳಿದಿದೆ ಅಥವಾ ಏರಿದೆ ಎಂಬುದನ್ನು ಸೂಚಿಸುತ್ತದೆ.

ಬೆಂಗಳೂರು ಜಿಲ್ಲೆಯಲ್ಲಿ 10 ವರ್ಷಗಳ ಫೆಬ್ರವರಿ ತಿಂಗಳ ಅಂತರ್ಜಲ ಮಟ್ಟ

ಬೆಂಗಳೂರು ನಗರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ 2020ರ ಫೆಬ್ರವರಿ ತಿಂಗಳಲ್ಲಿ ಮೈನಸ್ (m.bgl) ರ ಗಡಿ ದಾಟಿತ್ತು. ಅಂದರೆ 2024ರ ಫೆಬ್ರವರಿಗಿಂತಲೂ ಹೆಚ್ಚು ಕುಸಿತ ಕಂಡಿತ್ತು. ಈ ಸಲದ ಫೆಬ್ರವರಿಯಲ್ಲಿ ಅಂತರ್ಜಲ ಮಟ್ಟ ಮೈನಸ್ 30.56 (m.bgl) ದಾಖಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಅಂತರ್ಜಲ ಮಟ್ಟವು 2020ರ ಕುಸಿತದ ಬಳಿಕ ಮಾರನೇ ವರ್ಷ ಅಂದರೆ 2021ರಲ್ಲಿ ತುಸು ಚೇತರಿಕೆ ಕಂಡಿದ್ದು ಮೈನಸ್ 27.24 (m.bgl) ಕ್ಕೆ ಏರಿತ್ತು. ಅದಾಗಿ 2022 ರಲ್ಲಿ ಮೈನಸ್ 20.80 ಮತ್ತು2023ರಲ್ಲಿ ಮೈನಸ್ 20.53 (m.bgl) ಕ್ಕೆ ಏರಿಕೆಯಾಗಿತ್ತು. ಕಳೆದ 10 ವರ್ಷಗಳ ಅವಧಿಯಲ್ಲಿ ಈ ಎರಡು ವರ್ಷಗಳಲ್ಲೇ ಬೆಂಗಳೂರು ನಗರ ಜಿಲ್ಲೆಯ ಅಂತರ್ಜಲ ಮಟ್ಟ ತಕ್ಕಮಟ್ಟಿಗೆ ಸುಧಾರಣೆ ಕಂಡದ್ದು.

ಇನ್ನುಳಿದಂತೆ, 2014ರಲ್ಲಿ ಮೈನಸ್ 27.72 (m.bgl), 2015ರಲ್ಲಿ ಮೈನಸ್ 28 (m.bgl), 2016ರಲ್ಲಿ ಮೈನಸ್ 22.66 (m.bgl), 2017ರಲ್ಲಿ ಮೈನಸ್‌ 23.69 (m.bgl), 2018ರಲ್ಲಿ ಮೈನಸ್‌ 23.43 (m.bgl), 2019ರಲ್ಲಿ ಮೈನಸ್ 26.70 (m.bgl) ಅಂತರ್ಜಲ ಮಟ್ಟ ದಾಖಲಾಗಿತ್ತು.

ಬೆಂಗಳೂರು ಜಿಲ್ಲೆಯ ಫೆಬ್ರವರಿ ತಿಂಗಳ ಸರಾಸರಿ ಅಂತರ್ಜಲ ಮಟ್ಟದ (m.bgl) ರೇಖಾ ಚಿತ್ರ (2014-2024)

ಬೆಂಗಳೂರು ಜಿಲ್ಲೆಯ ಫೆಬ್ರವರಿ ತಿಂಗಳ ಸರಾಸರಿ ಅಂತರ್ಜಲ ಮಟ್ಟದ ರೇಖಾ ಚಿತ್ರ
ಬೆಂಗಳೂರು ಜಿಲ್ಲೆಯ ಫೆಬ್ರವರಿ ತಿಂಗಳ ಸರಾಸರಿ ಅಂತರ್ಜಲ ಮಟ್ಟದ ರೇಖಾ ಚಿತ್ರ (KSNDMC)

ಬೇಸಿಗೆ ಸಂದರ್ಭದಲ್ಲಿ ಅಂತರ್ಜಲ ಮಟ್ಟ ಕುಸಿತ ಹೊಸ ವಿದ್ಯಮಾನ ಅಲ್ಲದೇ ಹೋದರೂ, ಜಲ ಸಂರಕ್ಷಣೆಯ ವಿಚಾರದಲ್ಲಿ ಗಮನಿಸಬೇಕಾದ ಅಂಶಗಳ ಕಡೆಗೆ ಗಮನಸೆಳೆಯುತ್ತಿದೆ. ಬೆಂಗಳೂರಿನ ಸದ್ಯದ ಪರಿಸ್ಥಿತಿ ನೀರಿನ ಕೊರತೆಯನ್ನು ಬಿಂಬಿಸುತ್ತಿದ್ದು, ಪರಿಸ್ಥಿತಿಯ ಗಾಂಭೀರ್ಯವನ್ನು ಮನದಟ್ಟುಮಾಡಿಕೊಳ್ಳುವುದಕ್ಕೆ ಸಹಕಾರಿಯಾಗಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)