ಬೆಂಗಳೂರು: 30 ಲಕ್ಷ ರೂಪಾಯಿ ಮೌಲ್ಯದ ನಿಷೇಧಿತ ಇ ಸಿಗರೇಟ್‌ ವಶ, ಮಾರಾಟಗಾರನ ಬಂಧನ, ಇತರೆ ಅಪರಾಧ ಸುದ್ದಿಗಳು-bengaluru news bangalore police seize e cigarettes worth rs 30 lakh and other crime news mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: 30 ಲಕ್ಷ ರೂಪಾಯಿ ಮೌಲ್ಯದ ನಿಷೇಧಿತ ಇ ಸಿಗರೇಟ್‌ ವಶ, ಮಾರಾಟಗಾರನ ಬಂಧನ, ಇತರೆ ಅಪರಾಧ ಸುದ್ದಿಗಳು

ಬೆಂಗಳೂರು: 30 ಲಕ್ಷ ರೂಪಾಯಿ ಮೌಲ್ಯದ ನಿಷೇಧಿತ ಇ ಸಿಗರೇಟ್‌ ವಶ, ಮಾರಾಟಗಾರನ ಬಂಧನ, ಇತರೆ ಅಪರಾಧ ಸುದ್ದಿಗಳು

Bengaluru Crime News; 30 ಲಕ್ಷ ರೂಪಾಯಿ ಮೌಲ್ಯದ ನಿಷೇಧಿತ ಇ ಸಿಗರೇಟ್‌ ವಶಪಡಿಸಿಕೊಂಡ ಪೊಲೀಸರು ಮಾರಾಟಗಾರನನ್ನು ಬಂಧಿಸಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ಹೊರ ರಾಜ್ಯದ 3 ಕಳ್ಳರನ್ನು ಸೆರೆ ಹಿಡಿದ ಪೊಲೀಸರು, 5 ಲ್ಯಾಪ್‌ ಟಾಪ್‌ ವಶಪಡಿಸಿದ್ದಾರೆ. ಅದೇ ರೀತಿ, ಆನ್‌ಲೈನ್‌ ಮೂಲಕ ನಕಲಿ ಪೇಮೆಂಟ್‌ ಮಾಡಿದ್ದ ವ್ಯಕ್ತಿ ಬಂಧನವಾಗಿದೆ (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರಿನಲ್ಲಿ 30 ಲಕ್ಷ ರೂಪಾಯಿ ಮೌಲ್ಯದ ನಿಷೇಧಿತ ಇ ಸಿಗರೇಟ್‌ ವಶ ಪಡಿಸಿಕೊಂಡಿರುವ ಪೊಲೀಸರು ಮಾರಾಟಗಾರನನ್ನು ಬಂಧಿಸಿದ್ದಾರೆ (ಸಾಂಕೇತಿಕ ಚಿತ್ರ)
ಬೆಂಗಳೂರಿನಲ್ಲಿ 30 ಲಕ್ಷ ರೂಪಾಯಿ ಮೌಲ್ಯದ ನಿಷೇಧಿತ ಇ ಸಿಗರೇಟ್‌ ವಶ ಪಡಿಸಿಕೊಂಡಿರುವ ಪೊಲೀಸರು ಮಾರಾಟಗಾರನನ್ನು ಬಂಧಿಸಿದ್ದಾರೆ (ಸಾಂಕೇತಿಕ ಚಿತ್ರ)

ಬೆಂಗಳೂರು: ನಿಷೇಧಿತ ಇ ಸಿಗರೇಟ್‌ ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಯೊಂದರ ಮಾಲೀಕನನ್ನು ಬಂಧಿಸಿರುವ ಬೆಂಗಳೂರಿನ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಆತನಿಂದ ಸುಮಾರು 30 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ ಇ ಸಿಗರೇಟ್‌ ಗಳನ್ನು ವಶಪಡಿಸಿಕೊಂಡಿದ್ದಾರೆ.

ಅಂಗಡಿ ಮಾಲೀಕ ಇ ಸಿಗರೇಟ್‌ ಗಳನ್ನು ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಎಂದು ಲಭ್ಯವಾದ ಖಚಿತ ಮಾಹಿತಿಯನ್ನಾಧರಿಸಿ ಪೊಲಿಸರು ಅಂಗಡಿಯ ಮೇಲೆ ದಾಳಿ ನಡೆಸಿದ್ದರು. ಅಂಗಡಿ ಮಾಲೀಕ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಗೋವಿಂದಪುರ ಪೊಲೀಸ್‌ ಟಾಣೆಯಲ್ಲಿ ನಿಷೇದಿತ ಇ ಸಿಗರೇಟ್‌ ಕಾಯಿದೆ- 2019ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹೊರ ರಾಜ್ಯದ 3 ಕಳ್ಳರ ಬಂಧನ; 5 ಲ್ಯಾಪ್‌ ಟಾಪ್‌ ವಶ

ಇಂದಿರಾನಗರದ ಕದಿರಯ್ಯನಪಾಳ್ಯ ನೀಲಗಿರಿ ತೋಪಿನ ಬಳಿ ಮಾರಕಾಸ್ತ್ರ, ಖಾರದ ಪುಡಿ, ಚಾಕು ಮತ್ತಿತರ ಆಯುಧಗಳನ್ನಿಟ್ಟುಕೊಂಡು ದರೋಡೆ ನಡೆಸಲು ಹೊಂಚು ಹಾಕುತಿದ್ದ ಐವರು ದೋಡೆಕೋರರನ್ನು ಇಂದಿರಾನಗರ ಪೊಲೀಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇವರ ಮೇಲೆ ದಾಳಿ ನಡೆಸುತ್ತಿದ್ದಂತೆ ಮೂವರು ಸಿಕ್ಕಿ ಹಾಕಿಕೊಂಡಿದ್ದು ಇಬ್ಬರು ಪರಾರಿಯಾಗಿದ್ದಾರೆ. ಇವರು ತಮಿಳುನಾಡಿನ ತಿರುಚನಾಪಳ್ಳಿ ಜಿಲ್ಲೆಯ ಶ್ರೀರಂಗ ತಾಲೂಕಿನವರು ಎಂದು ವಿಚಾರಣೆಯ ಸಂಧರ್ಭದಲ್ಲಿ ತಿಳಿದು ಬಂದಿದೆ. ಕಾರಿನ ಗಾಜು ಹೊಡೆದು ಕಾರಿನಲ್ಲಿದ್ದ ಲ್ಯಾಪ್‌ ಟಾಪ್‌ ಗಳನ್ನು ಕಳವು ಮಾಡಿರುವುದಾಗಿಯೂ ಇವರು ಬಾಯಿ ಬಿಟ್ಟಿದ್ದಾರೆ. ನಂತರ ಇವರಿಂದ ಲ್ಯಾಪ್‌ ಟಾಪ್‌ ಗಳನ್ನು ಸಂಗ್ರಹಿಸುತ್ತಿದ್ದ ಮತ್ತೊಬ್ಬ ತಮಿಳುನಾಡು ಮೂಲದ ವ್ಯಕ್ತಿಯೊಬ್ಬನಿಗೆ ಲ್ಯಾಪ್‌ ಟಾಪ್‌ಗಳನ್ನು ಒಪ್ಪಿಸುವಂತೆ ನೋಟಿಸ್‌ ನೀಡಲಾಗಿತ್ತು. ನಂತರ ಆತನನ್ನೂ ಬಂಧಿಸಲಾಗಿದೆ.

ಬೈಕ್‌ನಲ್ಲಿದ್ದ ಹಣ ದೋಚಿದ್ದ ಕಳ್ಳನ ಬಂಧನ

ಬೈಕ್‌ ನ ಡಿಕ್ಕಿಯಲ್ಲಿದ್ದ 2 ಲಕ್ಷ ರೂ, ನಗದು ಹಣವನ್ನು ದೋಚಿದ್ದ ಕಳ್ಳನೊಬ್ಬನನ್ನು ಬೆಂಗಳೂರಿನ ವೈಟ್‌ ಫೀಲ್ಡ್‌ ಪೊಲೀಸ್‌ ಠಾಣೆ ಪೊಲೀಸರು ಆಂಧ್ರಪ್ರದೇಶದ ಈಜಿಕುಪ್ಪಂನಲ್ಲಿ ಬಂಧಿಸಿದ್ದಾರೆ.

ದೂರು ನೀಡಿದ್ದ ವ್ಯಕ್ತಿ ಬ್ಯಾಂಕ್‌ ನಲ್ಲಿ ಹಣವನ್ನು ಡ್ರಾ ಮಾಡಿಕೊಂಡು ಬೈಕ್‌ನ ಡಿಕ್ಕಿಯಲ್ಲಿಟ್ಟುಕೊಂಡು ಮನೆಗೆ ಹಿಂತಿರುಗುತ್ತಿದ್ದರು. ಮಾರ್ಗ ಮಧ್ಯದಲ್ಲಿ ಬ್ರೆಡ್‌ ಖರೀದಿಸಲು ಬೇಕರಿಗೆ ತೆರಳಿದ್ದಾರೆ. ಆ ಸಂಧರ್ಭದಲ್ಲಿ ಡಿಕ್ಕಿಯಲ್ಲಿದ್ದ ಹಣವನನು ಕಳ್ಳ ದೋಚಿಕೊಂಡು ಪರಾರಿಯಾಗಿದ್ದಾನೆ. ಸಿಸಿಟಿವಿ ದೃಶ್ಯಗಳು ಮತ್ತು ವಿವಿಧ ಆಯಾಮಗಳಿಂದ ತನಿಖೆ ನಡೆಸಿ ಖಚಿತ ಮಾಹಿತಿಯನ್ನು ಆಧರಿಸಿ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಈತ ದ್ವಿಚಕ್ರ ವಾಹನವನ್ನೂ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆನ್‌ಲೈನ್‌ ಮೂಲಕ ನಕಲಿ ಪೇಮೆಂಟ್‌ ಮಾಡಿದ್ದ ವ್ಯಕ್ತಿ ಬಂಧನ: ದೇವನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಕನ್ನಮಂಗಲದಲ್ಲಿ ದಿನಸಿ ಅಂಗಡಿಯೊಬ್ಬರಿಗೆ ನಕಲಿ ಪೇಮೆಂಟ್ ಮಾಡಿರುವುದಾಗಿ ಹೇಳೀ 50 ಸಾವಿರ ರೂ. ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕಳ್ಳ ಶ್ರೀ ಬಸವೇಶ್ವರ ಎಂಟರ್‌ ಪ್ರೈಸಸ್‌ ಎಂಬ ಅಂಗಡಿಗೆ ಹೋಗಿ ಮಾತನಾಡುತ್ತಾ 50 ಸಾವಿರ ರೂ.ಗಳನ್ನು ಆನ್‌ ಲೈನ್‌ ಮೂಲಕ ಪೇಮೆಂಟ್‌ ಮಾಡುತ್ತೇನೆ. ಬದಲಾಗಿ 49,500 ರೂ. ನಗದು ಹಣವನ್ನು ನೀಡಲು ಕೇಳಿರುತ್ತಾನೆ. ಅಂಗಡಿ ಮಾಲೀಕರು ಒಪ್ಪಿಕೊಂಡಿರುತ್ತಾರೆ. ಆತ ನಕಲಿ ಪೇಮೆಂಟ್‌ ರಸೀತಿ ತೋರಿಸಿ ನಗದು ಹಣ ಪಡೆದುಕೊಂಡು ಪರಾರಿಯಾಗಿರುತ್ತಾನೆ. ಅಂಗಡಿ ಮಾಲೀಕರಿಗೆ ತಾನು ಮೋಸ ಹೋಗಿರುವುದಾಗಿ ತಡವಾಗಿ ಅರಿವಿಗೆ ಬರುತ್ತದೆ.ನಂತರ ಅವರು ಪೊಲೀಸರಿಗೆ ದೂರು ನೀಡಿರುತ್ತಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ವಿದ್ಯಾರಣ್ಯಪುರ ಬಸ್‌ ನಿಲ್ದಾಣದ ಹತ್ತಿರ ಈ ಕಳ್ಳನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ- ಎಚ್.ಮಾರುತಿ, ಬೆಂಗಳೂರು)