ಬೆಂಗಳೂರು: ನಿಷೇಧಿತ ಮಾದಕ ವಸ್ತು ಗಾಂಜಾ, ಇ-ಸಿಗರೇಟ್, ವಿದೇಶಿ ಸಿಗರೆಟ್‌, ಎಂಡಿಎಂಎ ಮಾರಾಟಗಾರರ ಬಂಧನ, ಮಾದಕ ವಸ್ತುಗಳ ಜಪ್ತಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ನಿಷೇಧಿತ ಮಾದಕ ವಸ್ತು ಗಾಂಜಾ, ಇ-ಸಿಗರೇಟ್, ವಿದೇಶಿ ಸಿಗರೆಟ್‌, ಎಂಡಿಎಂಎ ಮಾರಾಟಗಾರರ ಬಂಧನ, ಮಾದಕ ವಸ್ತುಗಳ ಜಪ್ತಿ

ಬೆಂಗಳೂರು: ನಿಷೇಧಿತ ಮಾದಕ ವಸ್ತು ಗಾಂಜಾ, ಇ-ಸಿಗರೇಟ್, ವಿದೇಶಿ ಸಿಗರೆಟ್‌, ಎಂಡಿಎಂಎ ಮಾರಾಟಗಾರರ ಬಂಧನ, ಮಾದಕ ವಸ್ತುಗಳ ಜಪ್ತಿ

ಬೆಂಗಳೂರು: ನಿಷೇಧಿತ ಮಾದಕ ವಸ್ತು ಗಾಂಜಾ, ಇ-ಸಿಗರೇಟ್, ವಿದೇಶಿ ಸಿಗರೇಟ್, ಎಂ.ಡಿ.ಎಂ.ಎ ಮಾರಾಟಗಾರರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಅವರಿಂದ ಲಕ್ಷಾಂತರ ರೂಪಾಯಿ ಮಾದಕ ವಸ್ತುಗಳ ಜಪ್ತಿ ಮಾಡಿದ್ದಾರೆ. (ವರದಿ-ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ನಿಷೇಧಿತ ಮಾದಕ ವಸ್ತು ಗಾಂಜಾ, ಇ-ಸಿಗರೇಟ್, ವಿದೇಶಿ ಸಿಗರೆಟ್‌, ಎಂಡಿಎಂಎ ಮಾರಾಟಗಾರರ ಬಂಧನ
ಬೆಂಗಳೂರು: ನಿಷೇಧಿತ ಮಾದಕ ವಸ್ತು ಗಾಂಜಾ, ಇ-ಸಿಗರೇಟ್, ವಿದೇಶಿ ಸಿಗರೆಟ್‌, ಎಂಡಿಎಂಎ ಮಾರಾಟಗಾರರ ಬಂಧನ

ಬೆಂಗಳೂರು: ಬಂಗಾರಗಿರಿ ನಗರ ಬೆಟ್ಟದ ಬಳಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಬಾತ್ಮೀದಾರರು ನೀಡಿದ ಖಚಿತ ಮಾಹಿತಿಯನ್ನು ಆಧರಿಸಿ ಕೇರಳ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದು, ಆತನಿಂದ 10 ಕೆ.ಜಿ 850 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿರುತ್ತದೆ. ಇದರ ಮೌಲ್ಯ ‍4.34 ಲಕ್ಷ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯವು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.

ವಿದೇಶಿ ಸಿಗರೇಟ್ ಮಾರಾಟಗಾರನ ಅರೆಸ್ಟ್: ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ವಿದೇಶಿ ಸಿಗರೇಟ್ ಗಳನ್ನು ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಂದ 1 ಲಕ್ಷ ರೂ. ಬೆಲೆ ಬಾಳುವ ವಿವಿಧ ಕಂಪನಿಗಳ 225 ಪ್ಯಾಕ್ ವಿದೇಶಿ ಸಿಗರೇಟ್‌ಗಳು, 7 ವಿದೇಶಿ ಸಿಗರೇಟ್ ಬಾಕ್ಸ್ ಗಳು,130 ಇ-ಸಿಗರೇಟ್ ಗಳು ಮತ್ತು 110 ಇ- ಸಿಗರೇಟ್ ಫ್ಲೇವರ್‌ಗಳು ಮತ್ತು ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಅಂಗಡಿಯ ಮತ್ತೊಬ್ಬ ಕೆಲಸಗಾರ ತಲೆ ಮರೆಸಿಕೊಂಡಿರುತ್ತಾನೆ. ಆರೋಪಿಗಳ ವಿರುದ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದಿರಾನಗರ: ನಿಷೇಧಿತ ಇ-ಸಿಗರೇಟ್ ಮಾರುತ್ತಿದ್ದ ಅಂಗಡಿ ಮಾಲೀಕನ ಬಂಧನ

ನಿಷೇಧಿತ ಇ-ಸಿಗರೇಟನ್ನು ಅಕ್ರಮವಾಗಿ ದಾಸಾನು ಮಾಡಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿ.ಎಂ.ಹೆಚ್ ರಸ್ತೆಯಲ್ಲಿರುವ ಅಂಗಡಿಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಂಗಡಿಯಿಲ್ಲಿದ್ದ 2.5 ಲಕ್ಷ ರೂಪಾಯಿ ಮೌಲ್ಯದ ELFBAR ಕಂಪನಿಯ ನಿಷೇಧಿತ 250 ಇ-ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂಗಡಿ ಮಾಲೀಕ ಮತ್ತು ಮತ್ತೊಬ್ಬ ಕೆಲಸಗಾರರನ್ನು ಪೊಲೀಸರು ಬಂಧಿಸಿದ್ದಾರೆ.

ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಓರ್ವನ ಬಂಧನ:

ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಣಸವಾಡಿ ರೈಲ್ವೆ ನಿಲ್ದಾಣದ ಬಳಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನಿಂದ 1. 32 ಲಕ್ಷ ರೂ ಮೌಲ್ಯದ 66 ಗ್ರಾಂ ತೂಕದ ಎಂ.ಡಿ.ಎಂ.ಎ ಮತ್ತು ಒಂದು ಇನೋವಾ ಕಾರ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಎಲ್ಲ ಕಾರ್ಯಚರಣೆಗಳನ್ನು ಬೆಂಗಳೂರು ನಗರ ಪೂರ್ವ ವಿಭಾಗದ ಉಪ ಆಯುಕ್ತ ಕುಲದೀಪ್ ಕುಮಾರ್ ಆರ್, ಜೈನ್, ಹಾಗೂ ಪುಲಕೇಶಿನಗರ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತೆ ಗೀತಾ.ಸಿ.ಆರ್ ರವರ ಮಾರ್ಗದರ್ಶನದಲ್ಲಿ ಆಯಾ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿ ನಡೆಸಿದ್ದಾರೆ.

(ವರದಿ-ಎಚ್. ಮಾರುತಿ, ಬೆಂಗಳೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

Whats_app_banner