ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಇನ್ನು ಮುಂದೆ ಕಟ್ಟಡದ ಘನ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವಂತಿಲ್ಲ; ಶುಲ್ಕ ವಿಧಿಸಲಿದೆ ಬಿಬಿಎಂಪಿ

ಬೆಂಗಳೂರಲ್ಲಿ ಇನ್ನು ಮುಂದೆ ಕಟ್ಟಡದ ಘನ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವಂತಿಲ್ಲ; ಶುಲ್ಕ ವಿಧಿಸಲಿದೆ ಬಿಬಿಎಂಪಿ

ಬೆಂಗಳೂರಲ್ಲಿ ಇನ್ನು ಮುಂದೆ ನಿಮ್ಮ ಕಟ್ಟಡದ ಘನ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವಂತಿಲ್ಲ. ಅವುಗಳನ್ನು ಸಂಗ್ರಹಿಸಲು, ಸಂಸ್ಕರಿಸಲು ಶುಲ್ಕ ಕಡ್ಡಾಯವಾಗಲಿದೆ. ಬಿಬಿಎಂಪಿ ಶುಲ್ಕ ವಿಧಿಸಲಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರಲ್ಲಿ ಇನ್ನು ಮುಂದೆ ನಿಮ್ಮ ಕಟ್ಟಡದ ಘನ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವಂತಿಲ್ಲ. ಸಂಗ್ರಹಣೆ ಮತ್ತು ವಿಲೇವಾರಿಗೆ ಬಿಬಿಎಂಪಿ ಶುಲ್ಕ ವಿಧಿಸಲಿದೆ.
ಬೆಂಗಳೂರಲ್ಲಿ ಇನ್ನು ಮುಂದೆ ನಿಮ್ಮ ಕಟ್ಟಡದ ಘನ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವಂತಿಲ್ಲ. ಸಂಗ್ರಹಣೆ ಮತ್ತು ವಿಲೇವಾರಿಗೆ ಬಿಬಿಎಂಪಿ ಶುಲ್ಕ ವಿಧಿಸಲಿದೆ.

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯವನ್ನು ಸುರಿಯುವುದನ್ನು ನಿಯಂತ್ರಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ ಹೊಸ ಯೋಜನೆಯೊಂದನ್ನು ಜಾರಿಗೊಳಿಸಲು ಮುಂದಾಗಿದೆ. ನಿರ್ಮಾಣ ಮತ್ತು ಕೆಡವಿ ಹಾಕಿರುವ ಕಟ್ಡಗಳ ಘನ ತ್ಯಾಜ್ಯವನ್ನು ಸಂಗ್ರಹಣೆ, ನಿರ್ವಹಣೆ ಮತ್ತು ಸಂಸ್ಕರಿಸಲು ಆಯ್ದ ಗುತ್ತಿಗೆದಾರರಿಗೆ ಜವಾಬ್ದಾರಿ ವಹಿಸಲು ನಿರ್ಧರಿಸಿದೆ.

ಈ ಹೊಸ ನಿಯಮದ ಅನ್ವಯ ತ್ಯಾಜ್ಯವನ್ನು ವಿಲೇವಾರಿ ಮಾಡಲು ಬಯಸುವವರು ಪ್ರತ್ಯೇಕ ಶುಲ್ಕವನ್ನು ನೀಡಬೇಕಾಗುತ್ತದೆ. ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಾಗುತ್ತದೆ. ಗುತ್ತಿಗೆದಾರರ ಪ್ರತಿಕ್ರಿಯೆಯನ್ನು ಆಧರಿಸಿ ಶುಲ್ಕವನ್ನು ನಿಗಧಿಪಡಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಲ್ಲಿ ಘನತ್ಯಾಜ್ಯ ನಿರ್ವಹಣೆ; ಇಬ್ಬರು ಗುತ್ತಿಗೆದಾರರ ಗುರುತಿಸಿದ ಬಿಬಿಎಂಪಿ

ಪ್ರಸ್ತುತ ಬಿಬಿಎಂಪಿಯ ಘನ ತ್ಯಾಜ್ಯ ನಿರ್ವಹಣಾ ವಿಭಾಗದಲ್ಲಿ ತ್ಯಾಜ್ಯ ವಿಲೇವಾರಿಗೆ ಚಿಕ್ಕಜಾಲ ಮತ್ತು ಬಾಗಲೂರು ವಿಭಾಗದಲ್ಲಿ ಇಬ್ಬರು ಗುತ್ತಿಗೆದಾರರನ್ನು ಗುರುತಿಸಿದೆ. ಆದರೆ ಇವರಿಬ್ಬರೂ ಶೇ.10ರಷ್ಟು ತ್ಯಾಜ್ಯವನ್ನು ಮಾತ್ರ ಸಂಗ್ರಹಿಸುವ ಸಾಮರ್ಥ್ಯವನ್ನು ಮಾತ್ರ ಹೊಂದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹೆಚ್ಚುವರಿಯಾಗಿ ಇನ್ನೂ 5 ಘನ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ನಿರ್ಧಾರ ಮಾಡಿದೆ. ಸದ್ಯ ಅನಧಿಕೃತ ಗುತ್ತಿಗೆದಾರರು ಸಾರ್ವಜನಿಕರಿಂದ ಘನ ತ್ಯಾಜ್ಯವನ್ನು ಸಂಗ್ರಹಿಸುತ್ತಿದ್ದಾರೆ. ಇದಕ್ಕಾಗಿ ಅವರು ಶುಲ್ಕವನ್ನೂ ಸಂಗ್ರಹಿಸುತ್ತಿದ್ದಾರೆ. ಆದರೆ ಈ ತ್ಯಾಜ್ಯವನ್ನು ಅವರು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುತ್ತಿಲ್ಲ. ಕೆರೆಗಳ ಬದಿಯಲ್ಲಿ, ರಸ್ತೆ ಬದಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸುರಿಯುತ್ತಿದ್ದಾರೆ.

ಆದರೆ ಹೊಸ ಯೋಜನೆಯ ಪ್ರಕಾರ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವಂತಿಲ್ಲ. ಇಂತಹ ತ್ಯಾಜ್ಯವನ್ನು ಉತ್ಪಾದಿಸುವವರು ಅಧಿಕೃತ ಗುತ್ತಿಗೆದಾರರಿಗೆ ನಿಗಧಿತ ಶುಲ್ಕವನ್ನು ಪಾವತಿಸಬೇಕು. ಅವರು ತ್ಯಾಜ್ಯವನ್ನು ಸಂಗ್ರಹಸಿ ವೈಕ್ಞಾನಿಕವಾಗಿ ಸಂಗ್ರಹಿಸುವ ಘಟಕಕ್ಕೆ ಸಾಗಿಸಬೇಕಾಗುತ್ತದೆ. ಅಲ್ಲಿ ಗುತ್ತಿಗೆದಾರರು ಘನತ್ಯಾಜ್ಯವನ್ನು ಮರುಬಳಕೆ ಮಾಡುವ ರೀತಿಯಲ್ಲಿ ಸಂಸ್ಕರಿಸುತ್ತಾರೆ.

ಈ ಯೋಜನೆ ಜಾರಿಗೆ ಬಂದರೆ ಅನಧಿಕೃತ ತ್ಯಾಜ್ಯ ಸಂಗ್ರಹದಾರರಿಗೆ ನಿಷೇಧ ಹೇರಲಾಗುತ್ತದೆ. ಅಕಸ್ಮಾತ್‌ ಅನಧಿಕೃತವಾಗಿ ಘನತ್ಯಾಜ್ಯವನ್ನು ಸಂಗ್ರಹಿಸಿದರೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸುರಿದರೆ 10 ಸಾವಿರ ರೂ.ವರೆಗೆ ದಂಢ ಪಾವತಿಸಬೇಕಾಗುತ್ತದೆ. ಅನೇಕ ಸಾರ್ವಜನಿಕ ಸಂಘ ಸಂಸ್ಥೆಗಳು ಸರ್ಕಾರದ ಈ ನಿಲುವನ್ನು ಸ್ವಾಗತಿಸಿದ್ದಾರೆ. ನಗರದ ಸ್ವಚ್ಚತಯನು ಕಾಪಾಡಲು ಇಂತಹುದೊಂದು ನಿರ್ಣಯದ ಅಗತ್ಯವಿತ್ತು ಎಂದು ಹೇಳಿದ್ದಾರೆ.

ಇದೇ ನೆಪದಲ್ಲಿ ಸಾರ್ವಜನಿಕರಿಗೆ ಹೊರೆಯಾಗುವ ರೀತಿಯಲ್ಲಿ ಶುಲ್ಕವನ್ನು ಸಂಗ್ರಹಿಸಬಾರದು. ಬಿಬಿಎಂಪಿ ಸ್ಪರ್ಧಾತ್ಮಕ ರೀತಿಯಲ್ಲಿ ಶುಲ್ಕವನ್ನು ನಿಗದಿಪಡಿಸಿದರೆ ಮಾತ್ರ ಈ ಉದ್ದೇಶ ಈಡೇರುತ್ತದೆ. ಇಲ್ಲವಾದಲ್ಲಿ ಸಾರ್ವಜನಿಕರು ಹಣ ಉಳಿಸುವ ಹೆಸರಿನಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯವನ್ನು ರಾತೋರಾತ್ರಿ ಸುರಿಯುವುದನ್ನು ಮುಂದುವರೆಸುತ್ತಾರೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಖಾಲಿ ನಿವೇಶನಗಳಲ್ಲಿ ಘನತ್ಯಾಜ್ಯ ವಿಲೇವಾರಿ ಹೆಚ್ಚಳ

ಬೆಂಗಳೂರಿನಲ್ಲಿ ಅದರಲ್ಲೂ ಹೊರವಲಯದಲ್ಲಿ ಖಾಲಿ ನಿವೇಶನ, ರಸ್ತೆಗಳ ಅಕ್ಕಪಕ್ಕ ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಬಿಬಿಎಂಪಿ ಅನೇಕ ಬಾರಿ ಎಚ್ಚರಿಕೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ತ್ಯಾಜ್ಯ ಉತ್ಪಾದಕರೇ ಕಟ್ಟಡ ಮತ್ತು ಭಗ್ನಾವಶೇಷ ತ್ಯಜ್ಯದ ಸಂಗ್ರಹಣೆ ಮತ್ತು ವಿಲೇವಾರಿ ಮಾಲೀಕರದ್ದೇ ಎಂದು ಆಜ್ಞೆ ಹೊರಡಿಸಿದ್ದರೂ ಯಾರೊಬ್ಬರೂ ಅನುಸರಿಸುತ್ತಿಲ್ಲ.

ಬೆಂಗಳೂರಿನ ವ್ಯಾಪ್ತಿ 713 ಕಿಮೀ ವಿಸ್ತೀರ್ಣ ಹೊಂದಿದ್ದು, ಅಂದಾಜು 30 ಲಕ್ಷ ಮನೆಗಳಿವೆ. ಇವುಗಳಲ್ಲಿ ಹಳೆಯ ಹೊಸ ಮನೆಗಳನ್ನು ಕೆಡವಿ ಹಾಕುತ್ತಿರುವ ಪ್ರಕರಣಗಳು ಪ್ರತಿದಿನ ನಡೆಯುತ್ತಿವೆ. ಹೀಗಾಗಿ ಬಿಬಿಎಂಪಿ ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದು ಸಾರ್ವಜನಿಕರು ಎಷ್ಟರ ಮಟ್ಟಿಗೆ ಸ್ಪಂದಿಸುತ್ತಾರೆ ಎಂದು ಕಾದುನೋಡಬೇಕಿದೆ.

(ವರದಿ- ಎಚ್.ಮಾರುತಿ, ಬೆಂಗಳೂರು)