ಇನ್ಮುಂದೆ ಬಿಬಿಎಂಪಿ ಇ-ಖಾತಾ ಪಡೆಯಲು ಕಚೇರಿಗೆ ಅಲೆಯುವಂತಿಲ್ಲ; ಆನ್​ಲೈನ್​ನಲ್ಲೇ ಡೌನ್​ಲೋಡ್ ಮಾಡಿಕೊಳ್ಳಿ-bengaluru news bbmp to launch test run of e khata issuance system in online from today october 1st prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಇನ್ಮುಂದೆ ಬಿಬಿಎಂಪಿ ಇ-ಖಾತಾ ಪಡೆಯಲು ಕಚೇರಿಗೆ ಅಲೆಯುವಂತಿಲ್ಲ; ಆನ್​ಲೈನ್​ನಲ್ಲೇ ಡೌನ್​ಲೋಡ್ ಮಾಡಿಕೊಳ್ಳಿ

ಇನ್ಮುಂದೆ ಬಿಬಿಎಂಪಿ ಇ-ಖಾತಾ ಪಡೆಯಲು ಕಚೇರಿಗೆ ಅಲೆಯುವಂತಿಲ್ಲ; ಆನ್​ಲೈನ್​ನಲ್ಲೇ ಡೌನ್​ಲೋಡ್ ಮಾಡಿಕೊಳ್ಳಿ

BBMP E-Khata: ಇಂದಿನಿಂದ (ಅಕ್ಟೋಬರ್​ 1ರಿಂದ) ಫೇಸ್‌ಲೆಸ್, ಸಂಪರ್ಕರಹಿತ ಹಾಗೂ ಆನ್​ಲೈನ್ ಮೂಲಕ ಇ-ಖಾತಾ ವಿತರಣಾ ವ್ಯವಸ್ಥೆಯನ್ನು ಪರೀಕ್ಷಾರ್ಥವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರಾರಂಭಿಸುತ್ತಿದೆ.

ಇನ್ಮುಂದೆ ಬಿಬಿಎಂಪಿ ಇ-ಖಾತಾ ಪಡೆಯಲು ಕಚೇರಿಗೆ ಅಲೆಯುವಂತಿಲ್ಲ; ಆನ್​ಲೈನ್​ನಲ್ಲೇ ಡೌನ್​ಲೋಡ್ ಮಾಡಿಕೊಳ್ಳಿ
ಇನ್ಮುಂದೆ ಬಿಬಿಎಂಪಿ ಇ-ಖಾತಾ ಪಡೆಯಲು ಕಚೇರಿಗೆ ಅಲೆಯುವಂತಿಲ್ಲ; ಆನ್​ಲೈನ್​ನಲ್ಲೇ ಡೌನ್​ಲೋಡ್ ಮಾಡಿಕೊಳ್ಳಿ

ಬೆಂಗಳೂರು: ಬಿಬಿಎಂಪಿಯು ಬೆಂಗಳೂರಿನ ಆಸ್ತಿ ಮಾಲೀಕರಿಗೆ ಹಾಗೂ ನಿವಾಸಿಗಳಿಗೆ ಶುಭ ಸುದ್ದಿಯೊಂದನ್ನು ನೀಡಿದೆ. ಫೇಸ್‌ಲೆಸ್, ಸಂಪರ್ಕ ರಹಿತ ಹಾಗೂ ಆನ್​ಲೈನ್ ಮೂಲಕ ಬಿಬಿಎಂಪಿ ಇ-ಖಾತಾ ವಿತರಣಾ ವ್ಯವಸ್ಥೆಯನ್ನು ಅಕ್ಟೋಬರ್​​ 1ರಿಂದ ಪರೀಕ್ಷಾರ್ಥವಾಗಿ ಪ್ರಾರಂಭಿಸಲಾಗುತ್ತಿದೆ. ಇದರೊಂದಿಗೆ ನಗರ ನಿವಾಸಿಗಳು ಬಿಬಿಎಂಪಿ ಕಚೇರಿಗೆ ಅಲೆದಾಡುವುದು ತಪ್ಪಲಿದೆ. ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ದಿ ಸಚಿವ ಡಿಕೆ ಶಿವಕುಮಾರ್ ಅವರ ನೇತೃತ್ವ ಮತ್ತು ನಿರ್ದೇಶನದಲ್ಲಿ ಬಿಬಿಎಂಪಿ ಇ-ಖಾತಾ ವ್ಯವಸ್ಥೆ ಆರಂಭಿಸಲಾಗುತ್ತಿದೆ.

1. ಬಿಬಿಎಂಪಿಯಲ್ಲಿ ಲಭ್ಯವಿರುವ ದಾಖಲೆಗಳ ಆಧಾರ ಕರಡು ಇ-ಖಾತಾವನ್ನು ಆನ್‌ಲೈನ್‌, www.bbmpeaasthi.karnataka.gov.in ನಲ್ಲಿ ರಚಿಸಿ, ಇರಿಸಲಾಗಿರುತ್ತದೆ.

2. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಸ್ವತ್ತಿನ ಕರಡು ಇ-ಖಾತಾವನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು. 

3. ನಾಗರಿಕರು ತಮ್ಮ ಸ್ವತ್ತಿನ ಅಂತಿಮ ಇ-ಖಾತಾವನ್ನು ಪಡೆಯಲು ಆನ್‌ಲೈನ್‌ ಮೂಲಕ ಈ ಕೆಳಕಂಡ ಹೆಚ್ಚುವರಿ ಮಾಹಿತಿಗಳನ್ನು ಅಥವಾ ಕರಡು ಇ-ಖಾತಾದಲ್ಲಿ ಇರುವ ಅಂಶಗಳನ್ನು ಒಳಗೊಂಡಂತೆ ಒದಗಿಸಬೇಕು.

  • ಆಧಾರ್ ಇ-ಕೆವೈಸಿ
  • ಸ್ವತ್ತಿನ ಜಿ.ಪಿ.ಎಸ್
  • ಸ್ವತ್ತಿನ ಪೋಟೋ
  • ಸ್ವತ್ತಿನ ನೋಂದಾಯಿತ ದಸ್ತಾವೇಜು
  • ಸ್ವತ್ತಿನ ಇ.ಸಿ ದಿನಾಂಕ 2004ರ ಅಕ್ಟೋಬರ್ 1 ರಿಂದ ಈ ಇಲ್ಲಿಯವೆರೆಗೆ ಬೆಸ್ಕಾಂ ಮೀಟರ್ ಸಂಖ್ಯೆ
  • ಎ-ಖಾತಾ ಎಂದು ಧೃಡೀಕರಿಸುವ ಸಂಬಂಧ ಹೆಚ್ಚುವರಿ ಇನ್ನಿತರೆ ದಾಖಲಾತಿಗಳು

4. ನಾಗರಿ ಕರು ಮೇಲಿನ ಯಾವುದೇ ದಾಖಲೆಗಳನ್ನು ಹೊಂದಿಲ್ಲದಿದ್ದರೆ, ನಿಯಮಾವಳಿಯಂತೆ ಅಂತಿಮ ಇ-ಖಾತಾ ಪಡೆಯಲು ವೈಯಕ್ತಿಕವಾಗಿ ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಭೇಟಿ ಮಾಡಲು ಅವಕಾಶ ಇರುತ್ತದೆ.

5. ಸ್ವತ್ತಿನ ಮಾಲೀಕರು ಅಂತಿಮ ಇ-ಖಾತಾವನ್ನು ವಿತರಿಸದಂತೆ ಆಕ್ಷೇಪಣೆಯನ್ನು ಸಲ್ಲಿಸಬಹುದು. ಕರಡು ಇ-ಖಾತಾವನ್ನು ರಚಿಸಿದ 7 ದಿನಗಳವರೆಗೆ ಆಕ್ಷೇಪಣೆ ಅವಧಿಯನ್ನು ನಿಗದಿಪಡಿಸಲಾಗಿದೆ. ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಗಳು ಆಕ್ಷೇಪಣೆಯ ವಿಚಾರಣೆ ಕೈಗೊಂಡು ಆದ್ಯತಾನುಸಾರ ನಿರ್ಧರಿಸುತ್ತಾರೆ.

6. ಮೇಲಿನ ಕಾರ್ಯವಿಧಾನದಂತೆ ಅಂತಿಮ ಇ-ಖಾತಾವನ್ನು ವಿತರಿಸಲಾಗುತ್ತದೆ. ಮೇಲಿನ ಕಾರ್ಯವಿಧಾನಕ್ಕೆ ಸಂಬಂಧಿಸಿದಂತೆ ತರಬೇತಿ ವಿಡಿಯೋವನ್ನು ಪ್ರತ್ಯೇಕವಾಗಿ ಬಿಡುಗಡೆಗೊಳಿಸಲಾಗುವುದು.

7. ಬೃಹತ್ ಸ್ವರೂಪದಲ್ಲಿ ಇ-ಖಾತಾ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಆಗಿರುವುದರಿಂದ ಪರೀಕ್ಷಾರ್ಥ ಪ್ರಾರಂಭಿಸುವ ಮೂಲಕ ಸುಧಾರಣೆಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

mysore-dasara_Entry_Point