ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಬಿಯರ್ ಕೊರತೆ; ಈವರೆಗೆ 30,000 ಲೀಟರ್ ಮಾರಾಟ, ಬೈ ಒನ್ ಗೆಟ್‌ ಒನ್ ಆಫರ್‌ ಸಿಗೋದು ಡೌಟ್

ಬೆಂಗಳೂರಲ್ಲಿ ಬಿಯರ್ ಕೊರತೆ; ಈವರೆಗೆ 30,000 ಲೀಟರ್ ಮಾರಾಟ, ಬೈ ಒನ್ ಗೆಟ್‌ ಒನ್ ಆಫರ್‌ ಸಿಗೋದು ಡೌಟ್

ಬೆಂಗಳೂರಲ್ಲಿ ಬಿಯರ್ ಕೊರತೆ ಕಾಡತೊಡಗಿದ್ದು, ಈ ವರ್ಷ ಈವರೆಗೆ 30,000 ಲೀಟರ್ ಮಾರಾಟವಾಗಿದೆ. ಕಳೆದ ವರ್ಷ 9,000 ಲೀಟರ್ ಬಿಯರ್‌ ಮಾರಾಟವಾಗಿತ್ತು ಅಷ್ಟೆ. ಹೀಗಾಗಿ ಇನ್ನು ವಾರಾಂತ್ಯದಲ್ಲಿ ಬೈ ಒನ್ ಗೆಟ್‌ ಒನ್ ಆಫರ್‌ ಸಿಗೋದು ಡೌಟ್. ಇಲ್ಲಿದೆ ಈ ಕುರಿತ ಪೂರ್ಣ ವರದಿ.

ಬೆಂಗಳೂರಲ್ಲಿ ಬಿಯರ್ ಕೊರತೆ ಉಂಟಾಗಿದ್ದು, ಈವರೆಗೆ 30,000 ಲೀಟರ್ ಮಾರಾಟವಾಗಿದೆ. ಹೀಗಾಗಿ ವಾರಾಂತ್ಯದಲ್ಲಿ ಬೈ ಒನ್ ಗೆಟ್‌ ಒನ್ ಆಫರ್‌ ಸಿಗೋದು ಡೌಟ್ ಎಂದು ಹೇಳುತ್ತಿದೆ ವರದಿ.
ಬೆಂಗಳೂರಲ್ಲಿ ಬಿಯರ್ ಕೊರತೆ ಉಂಟಾಗಿದ್ದು, ಈವರೆಗೆ 30,000 ಲೀಟರ್ ಮಾರಾಟವಾಗಿದೆ. ಹೀಗಾಗಿ ವಾರಾಂತ್ಯದಲ್ಲಿ ಬೈ ಒನ್ ಗೆಟ್‌ ಒನ್ ಆಫರ್‌ ಸಿಗೋದು ಡೌಟ್ ಎಂದು ಹೇಳುತ್ತಿದೆ ವರದಿ.

ಬೆಂಗಳೂರು: ಹವಾಮಾನ ವೈಪರೀತ್ಯದ ಕಾರಣ ನೀರಿನ ಕೊರತೆ, ಸುಡುಬಿಸಿಲು ಎದುರಿಸುತ್ತಿರುವ ಬೆಂಗಳೂರು ಮಹಾನಗರದಲ್ಲಿ ಮುಂದಿನ ದಿನಗಳಲ್ಲಿ ಬಿಯರ್ ಕೊರತೆ ಎದುರಾಗಬಹುದು. ನಗರದ ಪಬ್‌ಗಳು, ಬ್ರೂವರಿಗಳಲ್ಲಿ ನೀರಿನ ಬಿಕ್ಕಟ್ಟು ಕಾಡಿದ್ದು, ವಿಪರೀತ ಹವಾಮಾನದ ನಡುವೆ ಹೆಚ್ಚುತ್ತಿರುವ ಬಿಯರ್ ಬೇಡಿಕೆಯನ್ನು ಪೂರೈಸಲು ಒದ್ದಾಡುತ್ತಿವೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ತಾಪಮಾನದ ಕಾರಣ ಅದರಿಂದ ಮುಕ್ತರಾಗಲು ಜನ ಹೆಚ್ಚು ಹೆಚ್ಚು ಬಿಯರ್ ಕುಡಿಯುತ್ತಿರುವ ಕಾರಣ, ಬೇಡಿಕೆ ಹೆಚ್ಚಳವಾಗಿದೆ. ಬಿಯರ್ ಮಾರಾಟ ಹೆಚ್ಚಳವಾದ ಪರಿಣಾಮ ದಾಸ್ತಾನು ಪ್ರಮಾಣ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಬೆಂಗಳೂರಿನ ಹಲವು ಪಬ್‌ ಮತ್ತು ಬ್ರೂವರೀಸ್‌ ತಮ್ಮ ಬಿಯರ್ ದಾಸ್ತಾನು ಹೆಚ್ಚಿಸಲು ಪ್ರಯತ್ನಿಸಿವೆ.

ಹೀಗಾಗಿ ಕೆಲವು ಪಬ್‌ಗಳು ಮತ್ತು ಬ್ರೂವರೀಸ್‌ ವಾರಾಂತ್ಯ ನೀಡುತ್ತಿದ್ದ ಬೋಗೋ ಆಫರ್‌ (BOGO Offer) ಅಂದರೆ ಒಂದು ಕೊಂಡರೆ ಒಂದು ಉಚಿತ ಎಂಬ ವಾರಾಂತ್ಯದ ಆಫರ್‌ ( Buy One Get One weekend offers) ಅನ್ನು ನಿಲ್ಲಿಸಿವೆ. ಇನ್ನು ಕೆಲವು ಅದೇ ಚಿಂತನೆಯಲ್ಲಿವೆ ಎಂದು ವರದಿ ಹೇಳಿದೆ.

ಬೆಂಗಳೂರಿನಲ್ಲಿ ಬಿಯರ್ ಕೊರತೆ ಯಾಕೆ

ಬೇಸಿಗೆಯಲ್ಲಿ ಸಾಮಾನ್ಯವಾಗಿ ಬಿಯರ್‌ಗೆ ಬೇಡಿಕೆ ಹೆಚ್ಚು. ಈ ಸಲ ಬೇಸಿಗೆ ತಾಪಮಾನ ಹೆಚ್ಚಳವಾಗಿರುವುದು ಬಿಯರ್‌ನ ಬೇಡಿಕೆಯನ್ನು ಸಾಮಾನ್ಯಕ್ಕಿಂತ ಹೆಚ್ಚಾಗುವಂತೆ ಮಾಡಿತ್ತು. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳದ ಪರಿಸ್ಥಿತಿ ಇಂತಹ ವಾತಾವರಣಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲೂ ಅಷ್ಟೆ, ತಾಪಮಾನ 39ರ ಗಡಿ ದಾಟಿತ್ತು.

" ಬೆಂಗಳೂರಿನಲ್ಲಿ ಬಿಯರ್‌ ಮಾರಾಟವು 40 ಪ್ರತಿಶತದಷ್ಟು ಹೆಚ್ಚಾಗಿದೆ. ಎಲ್ಲ ಗ್ರಾಹಕರು ಇತರ ಯಾವುದೇ ಪಾನೀಯಕ್ಕಿಂತ ಬಿಯರ್ ಅನ್ನೇ ಹೆಚ್ಚು ಇಷ್ಟಪಡುತ್ತಾರೆ. ಬ್ರೂವರೀಸ್‌ನಿಂದ ಆರ್ಡರ್‌ಗಳ ವಿಳಂಬದಿಂದಾಗಿ ಮಾರಾಟವನ್ನು ನಿರ್ವಹಿಸುವುದು ಸವಾಲಿನ ಸಂಗತಿಯಾಗಿದೆ ಎಂದು ಗಿಲ್ಲಿಸ್ ರೆಸ್ಟೋಬಾರ್‌ನ ಕಾರ್ಯಾಚರಣಾ ಮುಖ್ಯಸ್ಥರನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.

ಇದು ಹೀಗೆಯೇ ಮುಂದುವರಿದರೆ ಬಿಯರ್ ಕೊರತೆ ಕಾಡಬಹುದು. ಹೀಗಾಗಿ, ಶೀಘ್ರದಲ್ಲೇ ವಾರಾಂತ್ಯದ ಬೋಗೋ ಕೊಡುಗೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬಹುದು. ಸಾಮಾನ್ಯವಾಗಿ ವಾರಾಂತ್ಯದಲ್ಲಿ ಎಲ್ಲಾ ಬ್ರಾಂಡ್ ಬಿಯರ್‌ಗಳನ್ನು ಕೂಡ 2 ಅನ್ನು ಖರೀದಿಸಿ 1 ಪಡೆಯಿರಿ ಎಂಬ ಆಫರ್‌ನೊಂದಿಗೆ ಮಾರಾಟ ಮಾಡಲಾಗುತ್ತದೆ ಎಂದು ರೆಸಿಡೆನ್ಸಿ ರಸ್ತೆಯಲ್ಲಿರುವ ಮತ್ತೊಂದು ಬ್ರೂವರಿಯ ಕಾರ್ಯಾಚರಣೆ ಮುಖ್ಯಸ್ಥರಾಗಿರುವ ಪೃಥ್ವಿ ಹೇಳಿರುವುದಾಗಿ ವರದಿ ವಿವರಿಸಿದೆ.

ಐಪಿಎಲ್‌ ಸೀಸನ್‌ - ಹಣ್ಣಿನ ಸುವಾಸನೆಯ ಬಿಯರ್‌

"ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ, ನಾವು ಹಣ್ಣಿನ ಸುವಾಸನೆಯ ಬಿಯರ್ ಅನ್ನು ಪರಿಚಯಿಸುತ್ತೇವೆ. ಮಾವು ಮತ್ತು ಅನಾನಸ್‌ಗಳಂತಹ ಹಣ್ಣುಗಳ ಮೇಲೆ ಇಂತಹ ಬಿಯರ್‌ಗಳ ಮಾರಾಟ ಹೆಚ್ಚು ಅವಲಂಬಿತವಾಗಿದೆ" ಎಂದು ಮಾರತ್ತಹಳ್ಳಿಯ ಪ್ರಮುಖ ಬ್ರೂವರೀಸ್‌ ಪ್ರತಿನಿಧಿಯನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

"ಈ ವರ್ಷ, ಮಾವಿನಹಣ್ಣಿನ ಕೊರತೆಯಿಂದಾಗಿ ಹಣ್ಣಿನ ಬಿಯರ್ ಮಾರಾಟ ಕಡಿಮೆಯಾಗಿದೆ. ಜನರು ಸಾಮಾನ್ಯ ಬಿಯರ್ ಅನ್ನು ಆಯ್ಕೆ ಮಾಡಲು ಪ್ರೇರೇಪಿಸಿದರು. ಶಾಖ ಮತ್ತು ನಡೆಯುತ್ತಿರುವ ಐಪಿಎಲ್ ಸೀಸನ್ ಮತ್ತು ದೀರ್ಘ ವಾರಾಂತ್ಯದಲ್ಲಿ ಜನರು ಬರುವುದರಿಂದ ಮಾರಾಟವು ಹೆಚ್ಚುತ್ತಲೇ ಇದೆ" ಎಂದು ಅವರು ಹೇಳಿದ್ದಾಗಿ ವರದಿ ವಿವರಿಸಿದೆ.

ವರದಿಗಳ ಪ್ರಕಾರ, ಈ ವರ್ಷ ಈಗಾಗಲೇ 30,000 ಲೀಟರ್ ಬಿಯರ್ ಮಾರಾಟವಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 9,000 ಲೀಟರ್ ಬಿಯರ್ ಮಾತ್ರ ಮಾರಾಟವಾಗಿತ್ತು. ಈ ಸಲ ಬಿಯರ್ ಮಾರಾಟ ಹೆಚ್ಚಾಗಲು ಬಿಯರ್ ಬಳಕೆ ಹೆಚ್ಚಾಗಿದ್ದು ಕಾರಣ. ಬಳಕೆ ಹೆಚ್ಚಾಗಲು ತಾಪಮಾನ ಒಂದು ಕಾರಣವಾದರೆ, ಐಪಿಎಲ್ ಪಂದ್ಯಗಳು ಇನ್ನೊಂದು ಕಾರಣ ಎಂದು ವರದಿ ಹೇಳಿದೆ.

ಮೂಲ ವರದಿ - ಫರೇಹಾ ನಾಝ್‌

IPL_Entry_Point