ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಕ್ಯಾಬ್ ಓಡಿಸಿ ದಿನಕ್ಕೆ 3,000 ರೂಪಾಯಿಯಿಂದ 4,000 ರೂಪಾಯಿ ಆರಾಮ ದುಡೀಬಹುದು; ಚಾಲಕನ ಮಾತು ಕೇಳಿ ದಂಗಾದ ಪ್ರಯಾಣಿಕ

ಬೆಂಗಳೂರಲ್ಲಿ ಕ್ಯಾಬ್ ಓಡಿಸಿ ದಿನಕ್ಕೆ 3,000 ರೂಪಾಯಿಯಿಂದ 4,000 ರೂಪಾಯಿ ಆರಾಮ ದುಡೀಬಹುದು; ಚಾಲಕನ ಮಾತು ಕೇಳಿ ದಂಗಾದ ಪ್ರಯಾಣಿಕ

ಗಳಿಕೆ, ದುಡಿಮೆ ಪ್ರತಿಯೊಬ್ಬರ ಕುತೂಹಲ ಕೆರಳಿಸುವ ವಿಚಾರ. ಬೆಂಗಳೂರಿನಂತಹ ಮಹಾನಗರದಲ್ಲಿ ಬದುಕು ಸಾಗಿಸುವವರ ಬಗ್ಗೆ ಸ್ವಲ್ಪ ಕುತೂಹಲ ಹೆಚ್ಚು. ಇದರಂತೆ, ಬೆಂಗಳೂರಲ್ಲಿ ಕ್ಯಾಬ್ ಓಡಿಸಿ ದಿನಕ್ಕೆ 3,000 ರೂಪಾಯಿಯಿಂದ 4,000 ರೂಪಾಯಿ ಆರಾಮ ದುಡೀಬಹುದು ಎಂಬ ಚಾಲಕನ ಮಾತು ಕೇಳಿ ದಂಗಾದ ಪ್ರಯಾಣಿಕ. ರೆಡ್ಡಿಟ್‌ ಪೋಸ್ಟ್‌ನಲ್ಲಿ ಬರೆದಿರುವುದು ಇಷ್ಟು.

ಬೆಂಗಳೂರಲ್ಲಿ ಕ್ಯಾಬ್ ಓಡಿಸಿ 3,000 ರೂಪಾಯಿಯಿಂದ 4,000 ರೂಪಾಯಿ ಆರಾಮ ದುಡೀಬಹುದು; ಚಾಲಕನ ಮಾತು ಕೇಳಿ ದಂಗಾದ ಪ್ರಯಾಣಿಕ
ಬೆಂಗಳೂರಲ್ಲಿ ಕ್ಯಾಬ್ ಓಡಿಸಿ 3,000 ರೂಪಾಯಿಯಿಂದ 4,000 ರೂಪಾಯಿ ಆರಾಮ ದುಡೀಬಹುದು; ಚಾಲಕನ ಮಾತು ಕೇಳಿ ದಂಗಾದ ಪ್ರಯಾಣಿಕ (Unsplash)

ಬೆಂಗಳೂರು: ಯಾರದ್ದು ಎಷ್ಟು ಗಳಿಕೆ ಎಂಬ ವಿಚಾರ ಸಹಜ ಕುತೂಹಲದ್ದು. ಹೀಗಾಗಿಯೇ ಎಲ್ಲೇ ಹೋದರೂ ಎಷ್ಟು ವೇತನ, ಎಷ್ಟು ವ್ಯಾಪಾರ ಆಗುತ್ತೆ ಎಂಬಿತ್ಯಾದಿ ಪ್ರಶ್ನೆಗಳು ಎದುರಾಗುತ್ತವೆ. ಹಾಗೆಯೇ, ಬೆಂಗಳೂರಿನಲ್ಲಿ ಕ್ಯಾಬ್‌ನಲ್ಲಿ ಪ್ರಯಾಣಿಸಿದವರೊಬ್ಬರು ದಿನಕ್ಕೆಷ್ಟು ದುಡೀತೀರೀ ಎಂದು ಕ್ಯಾಬ್‌ ಚಾಲಕನನ್ನು ಕೇಳಿದ್ದಾರೆ. ಇದಕ್ಕೆ ಆತ' ಸರ್ ದಿನಕ್ಕೆ ಏನಿಲ್ಲ ಅಂದ್ರೂ 3,000 ರೂಪಾಯಿಯಿಂದ 4,000 ರೂಪಾಯಿ ದುಡೀತೇನೆ" ಎಂದು ಸಹಜವೆಂಬಂತೆ ಹೇಳಿದ್ದಾನೆ.

ಆತ ಹೇಳಿದ ರೀತಿ ಮತ್ತು ಬಾಡಿ ಲಾಗ್ವೇಜ್ ನೋಡಿ ಪ್ರಶ್ನೆ ಕೇಳಿದವರು ಹೌಹಾರಿದ್ದಾರೆ. ಅವರು ರೆಡ್ಡಿಟ್ ಬಳಕೆದಾರರಾಗಿದ್ದು ಅಲ್ಲಿ ಈ ವಿಚಾರವನ್ನು ಶೇರ್ ಮಾಡಿದ್ಧಾರೆ. ಆ ಚಾಲಕ ಸ್ವತಃ ಬಾಡಿಗೆಗೆ ಹೋಗುವುದಲ್ಲದೆ, ಅದಿಲ್ಲದೇ ಇದ್ದಾಗ ಓಲಾ ಕ್ಯಾಬ್‌ ಆಗಿಯೂ ತನ್ನ ಕ್ಯಾಬ್‌ ಚಲಾಯಿಸಿ ದುಡಿಮೆ ಮಾಡುತ್ತಿದ್ದಾನೆ ಎಂಬ ವಿವರವನ್ನೂ ಅವರು ಹಂಚಿಕೊಂಡಿದ್ದಾರೆ.

ಬೆಂಗಳೂರು ಹೆಸರಿನ ರೆಡ್ಡಿಟ್ ಖಾತೆಯ ಪೋಸ್ಟ್‌

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು ಹೆಸರಿನ ರೆಡ್ಡಿಟ್ ಖಾತೆಯ ಪೋಸ್ಟ್‌; ಬೆಂಗಳೂರಲ್ಲಿ ಕ್ಯಾಬ್ ಓಡಿಸಿ 3000 ರೂನಿಂದ 4000 ರೂ ಆರಾಮ ದುಡೀಬಹುದು; ಚಾಲಕನ ವಿಶ್ವಾಸದ ಮಾತು.
ಬೆಂಗಳೂರು ಹೆಸರಿನ ರೆಡ್ಡಿಟ್ ಖಾತೆಯ ಪೋಸ್ಟ್‌; ಬೆಂಗಳೂರಲ್ಲಿ ಕ್ಯಾಬ್ ಓಡಿಸಿ 3000 ರೂನಿಂದ 4000 ರೂ ಆರಾಮ ದುಡೀಬಹುದು; ಚಾಲಕನ ವಿಶ್ವಾಸದ ಮಾತು.

"ಹಾಗೆ, ನಾನು ಇಂದು ಸಮಾರಂಭದಿಂದ ಹಿಂತಿರುಗುತ್ತಿದ್ದೆ. ಆಗ ನಾನು ಕ್ಯಾಬ್ ಕಾಯ್ದಿರಿಸಿದೆ. ಆ ಕ್ಯಾಬ್ ಏರಿದ ಬಳಿಕ ಚಾಲಕನೊಂದಿಗೆ ಮಾತನಾಡುವಾಗ, ಅವನ ಗಳಿಕೆಯ ಬಗ್ಗೆ ಕೇಳಿದೆ. ಅವರು ದಿನಕ್ಕೆ ಸುಮಾರು 3000 ರೂಪಾಯಿಯಿಂದ 4000 ರೂಪಾಯಿ ಗಳಿಸುವುದಾಗಿ ಹೇಳಿದ. ನನಗೆ ಆಘಾತವಾಯಿತು! ಅವರು ದಿನಕ್ಕೆ 3000 ಗಳಿಸಿದರೆ ಮತ್ತು ತಿಂಗಳಿಗೆ 25 ದಿನ ಕೆಲಸ ಮಾಡಿದರೆ, ಅದು ತಿಂಗಳಿಗೆ ಒಟ್ಟು 75,000 ರೂಪಾಯಿ. ಪೆಟ್ರೋಲ್ ವೆಚ್ಚವನ್ನು ಕಡಿತಗೊಳಿಸಿದ ನಂತರವೂ, ಅವರ ಬಳಿ ಇನ್ನೂ ಸಾಕಷ್ಟು ಹಣವಿದೆ ಎಂದು ಹೇಳಿದ. ಜೊತೆಗೆ, ಅವರು ಓಲಾಗೆ ಜೋಡಿಸಲಾದ ಮತ್ತೊಂದು ಕ್ಯಾಬ್ ಅನ್ನು ಹೊಂದಿದ್ದಾರೆ. ಇದು ಹೆಚ್ಚುವರಿ ಆದಾಯವನ್ನು ತರುತ್ತದೆ. ತನ್ನ ಮಕ್ಕಳು ಉತ್ತಮ ಶಾಲೆಗೆ ಹೋಗುತ್ತಾರೆ ಎಂದು ಆ ಚಾಲಕ ಹೆಮ್ಮೆಯಿಂದ ಹೇಳಿದರು. ನೀವು ಎಷ್ಟು ಸಮಯದಿಂದ ಚಾಲನೆ ಮಾಡುತ್ತಿದ್ದೀರಿ ಎಂದು ನಾನು ಅವರನ್ನು ಕೇಳಿದಾಗ, 2019ರಲ್ಲಿ ಕೆಲಸ ಕಳೆದುಕೊಂಡ ಬಳಿಕ ಕ್ಯಾಬ್ ಓಡಿಸುತ್ತಿರುವುದಾಗಿ ಹೇಳಿದರು" ಎಂದು ರೆಡ್ಡಿಟ್‌ ಪೋಸ್ಟ್‌ನಲ್ಲಿದೆ.

ಈ ಪೋಸ್ಟ್ ಅನ್ನು ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದಾಗಿನಿಂದ, ಇದು 350 ಕ್ಕೂ ಹೆಚ್ಚು ಅಪ್ವೋಟ್‌ಗಳನ್ನು ಗಳಿಸಿದೆ. ಈ ಪೋಸ್ಟ್ ಗೆ ಹಲವಾರು ಕಾಮೆಂಟ್‌ಗ‌ಳೂ ಬಂದಿವೆ.

ಜನರು ಕಾಮೆಂಟ್‌ಗಳು ಹೀಗಿವೆ ನೋಡಿ

“ಇದು ತುಂಬಾ ಸಮಂಜಸ ಮತ್ತು ನಂಬಲರ್ಹವಾಗಿದೆ. ನನಗೆ ಓಲಾ ಡ್ರೈವರ್ ಆಗಿ ಕೆಲಸ ಮಾಡುವ ಆಪ್ತ ಸ್ನೇಹಿತನ ಸಹೋದರ ಇದ್ದಾನೆ. ಆತ ಸಾಮಾನ್ಯವಾಗಿ ವಿಮಾನ ನಿಲ್ದಾಣ ಅಥವಾ ರೈಲ್ವೆ ನಿಲ್ದಾಣದ ಪಿಕ್ ಅಪ್‌ಗಳ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ಹೆಚ್ಚುವರಿಯಾಗಿ ಕೆಲಸ ಮಾಡುತ್ತಾರೆ. ಖರ್ಚುಗಳ ನಂತರ (ಇಂಧನ, ಇಎಂಐ, ನಿರ್ವಹಣೆ ಮತ್ತು ವಿಮೆ) ಸುಮಾರು 80 ಸಾವಿರ ರೂಪಾಯಿ ಆರಾಮವಾಗಿ ದುಡಿಯುತ್ತಾರೆ. ತುಂಬಾ ಆರಾಮದಾಯಕ ಜೀವನವನ್ನು ನಡೆಸುತ್ತಿದ್ದಾರೆ. ಯಲಹಂಕದಲ್ಲಿ 30/40ರ ಸೈಟ್‌ನಲ್ಲಿ ಮನೆ ಮತ್ತು ಸ್ಥಳೀಯವಾಗಿ ಒಂದೆರಡು ಎಕರೆ ಭೂಮಿಯನ್ನು ಹೊಂದಿದ್ದಾರೆ. ಅದನ್ನು ಅವರು ತಮ್ಮ ಕ್ಯಾಬ್ ಸಂಪಾದನೆಯಿಂದ ಖರೀದಿಸಿದರು. ನೀವು ಕಠಿಣ ಪರಿಶ್ರಮಿ ಮತ್ತು ವಿಶ್ವಾಸಾರ್ಹರಾಗಿದ್ದರೆ, ನೀವು ಆ ವ್ಯವಹಾರದಲ್ಲಿ ಸಾಕಷ್ಟು ಹಣವನ್ನು ಗಳಿಸಬಹುದು" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

"ಅದಕ್ಕೆ ಯಾಕೆ ಅಚ್ಚರಿಪಡುತ್ತೀರಿ. ಅವರು ಶ್ರಮವಹಿಸಿ ದುಡಿಯುತ್ತಿದ್ಧಾರೆ. ಅನೇಕ ಅಸಮರ್ಥ ಉದ್ಯೋಗಿಗಳು ಅದಕ್ಕಿಂತ ಹೆಚ್ಚು ಸಂಪಾದಿಸುವುದನ್ನು ನಾವು ನೋಡುತ್ತೇವೆ. ಇದು ನಿಜಕ್ಕೂ ಆಶ್ಚರ್ಯಕರವಾಗಿರಬೇಕು." ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

"ಖಂಡಿತ. ನನ್ನ ಆಫೀಸ್ ಕ್ಯಾಬ್ ವ್ಯಕ್ತಿ ಕೇವಲ ಕಚೇರಿ ಪ್ರಯಾಣಗಳ ಮೂಲಕವೇ ಎಲ್ಲಾ ಖರ್ಚು ಕಳೆದು ತಿಂಗಳಿಗೆ ಸುಮಾರು 30 ಸಾವಿರ ರೂಪಾಯಿ ಗಳಿಸುತ್ತಾನೆ. ಅವರು ಇತರ ಅಪ್ಲಿಕೇಶನ್ ಗಳಿಗಾಗಿಯೂ ಸವಾರಿ ಮಾಡುತ್ತಾರೆ. ಒಂದು ಕಡೆ ಅದು ದೈಹಿಕ ಶ್ರಮವನ್ನು ಬಯಸುತ್ತದೆ. ಅದನ್ನು ಜನರು ಗಮನಿಸುವುದಿಲ್ಲ" ಎಂದು ಮೂರನೆಯವರು ಪ್ರತಿಕ್ರಿಯಿಸಿದ್ದಾರೆ.