Bengaluru Governance Bill; ಬೆಂಗಳೂರು ಆಡಳಿತ ಮಸೂದೆಯ ಕರಡು ಪ್ರತಿಯಲ್ಲಿದ್ದ ಒಂಬುಡ್ಸ್‌ಮನ್ ನೇಮಕ ವಿಚಾರ ತೆರೆಮರೆಗೆ, ಜನರ ಅಸಮಾಧಾನ-bengaluru news bengaluru governance bill lacks ombudsman role leaving citizens with limited relief uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Governance Bill; ಬೆಂಗಳೂರು ಆಡಳಿತ ಮಸೂದೆಯ ಕರಡು ಪ್ರತಿಯಲ್ಲಿದ್ದ ಒಂಬುಡ್ಸ್‌ಮನ್ ನೇಮಕ ವಿಚಾರ ತೆರೆಮರೆಗೆ, ಜನರ ಅಸಮಾಧಾನ

Bengaluru Governance Bill; ಬೆಂಗಳೂರು ಆಡಳಿತ ಮಸೂದೆಯ ಕರಡು ಪ್ರತಿಯಲ್ಲಿದ್ದ ಒಂಬುಡ್ಸ್‌ಮನ್ ನೇಮಕ ವಿಚಾರ ತೆರೆಮರೆಗೆ, ಜನರ ಅಸಮಾಧಾನ

Bengaluru Governance Bill; ಬೆಂಗಳೂರು ಆಡಳಿತ ಮಸೂದೆಯ ಕರಡು ಪ್ರತಿಯಲ್ಲಿದ್ದ ಒಂಬುಡ್ಸ್‌ಮನ್ ನೇಮಕ ವಿಚಾರ ತೆರೆಮರೆಗೆ ಹೋಗಿದೆ. ಅರ್ಥಾತ್ ಸರ್ಕಾರ ಈ ವಿಚಾರವನ್ನೇ ಮಸೂದೆಯಿಂದ ಕೈಬಿಟ್ಟಿದೆ. ಇದು ಕಾನೂನು ಪರಿಣತರ ಮತ್ತು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಬೆಂಗಳೂರು ಆಡಳಿತ ಮಸೂದೆಯ ಕರಡು ಪ್ರತಿಯಲ್ಲಿದ್ದ ಒಂಬುಡ್ಸ್‌ಮನ್ ನೇಮಕ ವಿಚಾರ ತೆರೆಮರೆಗೆ ಸರಿದಿದೆ. ಮೂಲಸೌಕರ್ಯ ಸೇರಿ ಸಮಸ್ಯೆಗೆ ಸ್ಪಂದಿಸದ ಆಡಳಿತದ ವಿರುದ್ಧ ದೂರು ನೀಡುವುದು ಯಾರಿಗೆ ಎಂಬ ಅಸಮಾಧಾನ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಆಡಳಿತ ಮಸೂದೆಯ ಕರಡು ಪ್ರತಿಯಲ್ಲಿದ್ದ ಒಂಬುಡ್ಸ್‌ಮನ್ ನೇಮಕ ವಿಚಾರ ತೆರೆಮರೆಗೆ ಸರಿದಿದೆ. ಮೂಲಸೌಕರ್ಯ ಸೇರಿ ಸಮಸ್ಯೆಗೆ ಸ್ಪಂದಿಸದ ಆಡಳಿತದ ವಿರುದ್ಧ ದೂರು ನೀಡುವುದು ಯಾರಿಗೆ ಎಂಬ ಅಸಮಾಧಾನ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ. (ಸಾಂಕೇತಿಕ ಚಿತ್ರ) (PC- X)

ಬೆಂಗಳೂರು: ಇತ್ತೀಚೆಗೆ ನಡೆದ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ, ರಾಜ್ಯ ಸರ್ಕಾರವು ಬೃಹತ್ ಬೆಂಗಳೂರು ಆಡಳಿತ ಮಸೂದೆಯನ್ನು ಮಂಡಿಸಿತು. ಇದರಲ್ಲಿ ಬೆಂಗಳೂರು ಮಹಾ ನಗರದ ತ್ವರಿತ ವಿಸ್ತರಣೆಯನ್ನು ನಿರ್ವಹಿಸಲು ಬಿಬಿಎಂಪಿ ಆಡಳಿತ ವ್ಯವಸ್ಥೆ ಎದುರಿಸುತ್ತಿರುವ ತಲ್ಲಣಗಳನ್ನೂ ಪ್ರಸ್ತಾಪಿಸಲಾಗಿತ್ತು.

ನಗರ ವಿಸ್ತರಣೆಯಾಗುತ್ತಿರುವಂತೆ ಅದಕ್ಕೆ ತಕ್ಕಂತೆ ಮೂಲಸೌಕರ್ಯಗಳು ಅಭಿವೃದ್ಧಿ ಆಗದೇ ಇರುವುದು ಸಮಸ್ಯೆಗೆ ಕಾರಣವಾಗಿದೆ. ಹತ್ತಾರು ಐಟಿ, ಬಿಟಿ ಪಾರ್ಕ್‌ಗಳು, ಕೈಗಾರಿಕೆಗಳು ಬೆಂಗಳೂರಿಗೆ ಬಂದಿವೆಯಾದರೂ, ಮೂಲಸೌಕರ್ಯಗಳ ಕೊರತೆ ಅವುಗಳನ್ನೂ ಕಾಡಿವೆ. ಹೀಗಾಗಿ ಅವರೂ ಈ ಬಗ್ಗೆ ಪದೇಪದೆ ಸರ್ಕಾರದ ಗಮನಸೆಳೆಯುವ ಪ್ರಯತ್ನ ಮುಂದುವರಿಸಿದ್ದಾರೆ. ಈಗ ಮಸೂದೆ ವಿಚಾರವನ್ನೇ ತೆಗೆದುಕೊಂಡು ನೋಡುವುದಾದರೆ 286 ಪುಟಗಳ ಮಸೂದೆಯಲ್ಲಿ ಹಲವು ಅಂಶಗಳಿವೆ. ವಿಶೇಷವಾಗಿ ಒಂಬುಡ್ಸ್‌ಮನ್‌ ವಿಚಾರ ಗಮನಿಸೋಣ.

ಗ್ರೇಟರ್‌ ಬೆಂಗಳೂರು ಸರ್ವೀಸಸ್ ಓಂಬುಡ್ಸ್‌ಮನ್‌ ನೇಮಕ

ಕರ್ನಾಟಕ ಸರ್ಕಾರ ಮಂಡಿಸಿರುವ ಮಸೂದೆಯು ಪ್ರಸ್ತುತ 14 ಸದಸ್ಯರ ಶಾಸಕಾಂಗ ಸಮಿತಿಯ ಪರಿಶೀಲನೆಗೆ ಒಳಗಾಗಿದೆ. ಇದರಲ್ಲಿ ಜನ ಸಾಮಾನ್ಯರಿಗೆ ಸಂಬಂಧಿಸಿದ ಅಂಶಗಳನ್ನು ಗಮನಿಸುವುದಾದರೆ, ನಗರದ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಅಗತ್ಯವಾದ ಪುರಸಭೆಯ ಸೇವೆಗಳನ್ನು ಸುಧಾರಿಸುವ ವಿಷಯ ಇದೆ. ಅದೇ ರೀತಿ, ಮಳೆ ನೀರು ಹರಿಯುವ ಚರಂಡಿ ಕೆಲಸ, ಖಾತಾ ವರ್ಗಾವಣೆ, ಶವ ಸಂಸ್ಕಾರಕ್ಕೆ ಉಂಟಾಗುತ್ತಿರುವ ಅಡಚಣೆಗಳೂ ಸೇರಿಕೊಂಡಿವೆ. ಅಧಿಕಾರಿಗಳ ಅನಗತ್ಯ ಬೇಡಿಕೆಗಳ ಕಾರಣ ಕುಂದುಕೊರತೆ ಹೆಚ್ಚಳವಾಗಿದ್ದು, ಅದನ್ನು ಪರಿಹರಿಸುವ ಕಡೆಗೆ ಗಮನಹರಿಸಬೇಕಾಗಿದೆ. ಇದಕ್ಕೆ ಮೇಲ್ಮನವಿ ಸಲ್ಲಿಸುವ ಕಾರ್ಯವಿಧಾನ ಈಗ ಇಲ್ಲ. ಹೊಸ ಮಸೂದೆಯಲ್ಲೂ ಅದು ಅಳವಡಿಕೆಯಾಗಿಲ್ಲ ಎಂಬುದರ ಕಡೆಗೆ ಡೆಕ್ಕನ್ ಹೆರಾಲ್ಡ್ ವರದಿ ಗಮನಸೆಳೆದಿದೆ.

ಗ್ರೇಟರ್ ಬೆಂಗಳೂರು ಸರ್ವಿಸಸ್ ಓಂಬುಡ್ಸ್‌ಮನ್‌ ನೇಮಕದ ವಿಚಾರ ಮಸೂದೆಯಲ್ಲಿ ಕಳೆದುಹೋಗಿದೆ. ಇದು ಮೂಲತಃ ನಾಲ್ಕು ಸದಸ್ಯರ ಬ್ರ್ಯಾಂಡ್ ಬೆಂಗಳೂರು ಸಮಿತಿಯ ಕರಡುಪ್ರತಿಯಲ್ಲಿತ್ತು. ಅದನ್ನು ಬಿಲ್‌ನ ಅಂತಿಮ ಆವೃತ್ತಿಯಿಂದ ಕೈಬಿಡಲಾಗಿದೆ. ಈ ಮೂಲಕ ಪಾಲಿಕೆ ಸಮಸ್ಯೆ ಕುರಿತು ನೇರವಾಗಿ ಮೇಲ್ಮನವಿ ಸಲ್ಲಿಸುವ ನಾಗರಿಕರ ಹಕ್ಕನ್ನು ಮೊಟಕುಗೊಳಿಸಿದಂತಾಗಿದೆ. ಇದು ಸರಿಯಲ್ಲ ಎಂಬುದು ಕಾನೂನು ಪರಿಣತರ ಅಭಿಪ್ರಾಯವೂ ಹೌದು ಎಂದು ವರದಿ ವಿವರಿಸಿದೆ.

ಕಳೆದ ವರ್ಷ ಕರಡು ಮಸೂದೆಗೆ ಚೌಕಟ್ಟು

ಕಳೆದ ವರ್ಷ, ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬದಲಿಗೆ ಹೊಸ ಆಡಳಿತ ಚೌಕಟ್ಟನ್ನು ರೂಪಿಸಲು ಸರ್ಕಾರ ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಿತು. ನಿವೃತ್ತ ಐಎಎಸ್ ಅಧಿಕಾರಿ ಬಿಎಸ್ ಪಾಟೀಲ್ ಅವರು ವಿ ರವಿಚಂದರ್ ಮತ್ತು ಇಬ್ಬರ ಸಹಾಯದೊಂದಿಗೆ ಈ ಕರಡು ಮಸೂದೆಯನ್ನು ರಚಿಸಿದರು. ಇದರಲ್ಲಿ, ಸಾರ್ವಜನಿಕ ಕುಂದುಕೊರತೆಗಳನ್ನು ನಿರ್ವಹಿಸಲು ಒಂಬುಡ್ಸ್‌ಮನ್ ಅನ್ನು ನೇಮಿಸುವ ಅಧ್ಯಾಯವನ್ನು ಸೇರಿಸಲಾಗಿತ್ತು. ಆದಾಗ್ಯೂ, ಈ ಅಧ್ಯಾಯವನ್ನು ವಿಧಾನಸಭೆಗೆ ಮಂಡಿಸಿದ ಮಸೂದೆಯ ಅಂತಿಮ ಆವೃತ್ತಿಯಿಂದ ತೆಗೆದುಹಾಕಲಾಗಿದೆ.

ಪಾಲಿಕೆ ಸೇವೆಗಳ ಬಗ್ಗೆ ದೂರುಗಳನ್ನು ಸ್ವೀಕರಿಸಲು ಮತ್ತು ತನಿಖೆ ಮಾಡಲು, ದುರಾಡಳಿತ ಮತ್ತು ಭ್ರಷ್ಟಾಚಾರವನ್ನು ಪರಿಹರಿಸಲು ಮತ್ತು ಮಧ್ಯಸ್ಥಿಕೆ ಸಮಸ್ಯೆಗಳನ್ನು ನಿಭಾಯಿಸಲು ಒಂಬುಡ್ಸ್‌ಮನ್ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಸಮಿತಿಯ ಕರಡು ಮಸೂದೆ ವಿವರಿಸಿದೆ.