Viral Video; ಬೆಂಗಳೂರಲ್ಲಿ ಲ್ಯಾಪ್‌ಟಾಪ್ ಕೂಡ 13 ನಿಮಿಷಕ್ಕೆ ಡೆಲಿವರಿ ಸಿಗುತ್ತೆ, ಯಾವ ಏರಿಯಾದಲ್ಲಿ, ಏನಿದು ಹೊಸ ಸೇವೆ
ಕನ್ನಡ ಸುದ್ದಿ  /  ಕರ್ನಾಟಕ  /  Viral Video; ಬೆಂಗಳೂರಲ್ಲಿ ಲ್ಯಾಪ್‌ಟಾಪ್ ಕೂಡ 13 ನಿಮಿಷಕ್ಕೆ ಡೆಲಿವರಿ ಸಿಗುತ್ತೆ, ಯಾವ ಏರಿಯಾದಲ್ಲಿ, ಏನಿದು ಹೊಸ ಸೇವೆ

Viral Video; ಬೆಂಗಳೂರಲ್ಲಿ ಲ್ಯಾಪ್‌ಟಾಪ್ ಕೂಡ 13 ನಿಮಿಷಕ್ಕೆ ಡೆಲಿವರಿ ಸಿಗುತ್ತೆ, ಯಾವ ಏರಿಯಾದಲ್ಲಿ, ಏನಿದು ಹೊಸ ಸೇವೆ

Viral Video; ಬೆಂಗಳೂರಲ್ಲಿ ಈಗ ಪಿಜ್ಜಾ, ಫುಡ್‌ ಐಟಮ್ಸ್ ಅಷ್ಟೇ ಅಲ್ಲ, ಲ್ಯಾಪ್‌ಟಾಪ್ ಕೂಡ 13 ನಿಮಿಷಕ್ಕೆ ಡೆಲಿವರಿ ಸಿಗುತ್ತೆ, ಯಾವ ಏರಿಯಾದಲ್ಲಿ, ಏನಿದು ಹೊಸ ಸೇವೆ ಎಂಬ ಕುತೂಹಲವೇ? ಎಕ್ಸ್‌ನಲ್ಲಿ ಇದರ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಆ ವಿವರ ಈ ವರದಿಯಲ್ಲಿದೆ.

ಸ್ಟಾರ್‌ಬಕ್ಸ್‌ ಔಟ್‌ಲೆಟ್‌ಗೆ ಲ್ಯಾಪ್‌ಟಾಪ್ ಡೆಲಿವರಿ ಕೊಡಲು ಬಂದ ಪಾಲುದಾರ ಮತ್ತು ಡೆಲಿವರಿ ಮಾಡಲ್ಪಟ್ಟ ಲ್ಯಾಪ್‌ಟಾಪ್‌ (ವಿಡಿಯೋದಿಂದ ತೆಗೆದ ಚಿತ್ರ)
ಸ್ಟಾರ್‌ಬಕ್ಸ್‌ ಔಟ್‌ಲೆಟ್‌ಗೆ ಲ್ಯಾಪ್‌ಟಾಪ್ ಡೆಲಿವರಿ ಕೊಡಲು ಬಂದ ಪಾಲುದಾರ ಮತ್ತು ಡೆಲಿವರಿ ಮಾಡಲ್ಪಟ್ಟ ಲ್ಯಾಪ್‌ಟಾಪ್‌ (ವಿಡಿಯೋದಿಂದ ತೆಗೆದ ಚಿತ್ರ)

ಬೆಂಗಳೂರು: ಎಲ್ಲವೂ ಬೇಗ ಬೇಗ ಆಗಬೇಕು ಎನ್ನುವ ಧಾವಂತದ ಬದುಕು. ಅದಕ್ಕೆ ತಕ್ಕಂತೆ ವ್ಯವಸ್ಥೆಗಳೂ ರೂಪುಗೊಳ್ಳುತ್ತಿವೆ. ಪಿಜ್ಜಾ, ಫುಡ್‌ ಡೆಲಿವರಿಗಳೆಲ್ಲವೂ ಈ ವೇಗಕ್ಕೆ ಹೊಂದಿಕೊಂಡಿವೆ. ಈಗ ಲ್ಯಾಪ್‌ಟಾಪ್ ಡೆಲಿವರಿ ಕೂಡ ಇದೇ ವೇಗದಲ್ಲಾಗುತ್ತಿರುವ ವಿಚಾರ ಮೈಕ್ರೋ ಬ್ಲಾಗಿಂಗ್ ಸೈಟ್ ಎಕ್ಸ್‌ನಲ್ಲಿ ಚರ್ಚೆಗೆ ಒಳಗಾಗಿದೆ. ತಾಜಾ ನಿದರ್ಶನದ ವಿಡಿಯೋ ಮತ್ತು ವಿವಿಧ ಹಂತಗಳನ್ನು ಒಬ್ಬರು ದಾಖಲಿಸಿರುವುದು ಇದಕ್ಕೆ ಕಾರಣ.

ಬೆಂಗಳೂರಿನ ವ್ಯಕ್ತಿಯೊಬ್ಬರು ಫ್ಲಿಪ್‌ಕಾರ್ಟ್‌ ಮಿನಿಟ್ಸ್‌ ಪ್ಲಾಟ್‌ಫಾರಂ ಮೂಲಕ ಲ್ಯಾಪ್‌ಟಾಪ್ ಖರೀದಿಸಿದರು. ಇದನ್ನು 13 ನಿಮಿಷಗಳ ಅವಧಿಯಲ್ಲಿ ಫ್ಲಿಪ್‌ಕಾರ್ಟ್‌ ಗ್ರಾಹಕರ ಮನೆಗೆ ತಲುಪಿಸಿದೆ. ಫ್ಲಿಪ್‌ ಕಾರ್ಟ್‌ ಪರಿಚಯಿಸಿರುವ ಫ್ಲಿಪ್‌ಕಾರ್ಟ್‌ ಮಿನಿಟ್ಸ್‌ (Flipkart Minutes) ಸೇವೆಯಿಂದ ಇದು ಸಾಧ್ಯವಾಗಿದೆ. ಈ ಸೇವೆಯನ್ನು ಈ ತಿಂಗಳ ಆರಂಭದಲ್ಲಿ ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿ ಶುರುಮಾಡಲಾಗಿದೆ. ಇದರಲ್ಲಿ ಉತ್ಪನ್ನಗಳ ಬೆಲೆ ಬ್ಲಿಂಕಿಟ್‌ (Blinkit) ಮತ್ತು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ (Swiggy Instamart) ನಂತಹ ಪ್ರತಿಸ್ಪರ್ಧಿ ಪ್ಲಾಟ್‌ಫಾರ್ಮ್‌ಗಳಿಗಿಂತ ಸರಿಸುಮಾರು 10 ಪ್ರತಿಶತ ಕಡಿಮೆ ಇದೆ.

13 ನಿಮಿಷಗಳ ಒಳಗೆ ಲ್ಯಾಪ್‌ಟಾಪ್ ಡೆಲಿವಿ- ಏನಿದು ವಿದ್ಯಮಾನ

ಬೆಂಗಳೂರು ನಿವಾಸಿ ಸನ್ನಿ ಗುಪ್ತಾ ಎಂಬುವವರು ಸ್ಟಾರ್ ಬಕ್ಸ್‌ ಔಟ್‌ಲೆಟ್‌ನಲ್ಲಿ ಕುಳಿತು ಫ್ಲಿಪ್‌ಕಾರ್ಟ್ ಮಿನಿಟ್ಸ್‌ನಲ್ಲಿ ಲ್ಯಾಪ್‌ಟಾಪ್ ಅನ್ನು ಆರ್ಡರ್ ಮಾಡಿದ ಅನುಭವವನ್ನು ಎಕ್ಸ್‌ನಲ್ಲಿ ಸರಣಿ ಟ್ವೀಟ್ ಮೂಲಕ ವಿವರಿಸಿದ್ದಾರೆ. ಆರ್ಡರ್ ಮಾಡಿದ 13 ನಿಮಿಷದಲ್ಲಿ ಲ್ಯಾಪ್‌ಟಾಪ್ ಡೆಲಿವರಿ ಸಿಕ್ಕಿರುವುದನ್ನು ಖಚಿತಪಡಿಸಿದ್ದಾರೆ.

“ಫ್ಲಿಪ್‌ಕಾರ್ಟ್ ಮಿನಿಟ್ಸ್‌ನ ಮೂಲಕ ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದೇನೆ. 7 ನಿಮಿಷಗಳ ವಿತರಣೆಯನ್ನು ತೋರಿಸುತ್ತಿದೆ." ಎಂದು ಮೊದಲ ಟ್ವೀಟ್‌ನಲ್ಲಿ ತೋರಿಸಿದರು. "ಆರ್ಡರ್ ಮಾಡಿದ ತಕ್ಷಣ, ಟ್ರ್ಯಾಕಿಂಗ್ ಪುಟದಲ್ಲಿ 'ಸ್ವಲ್ಪ ವಿಳಂಬವಾಗಿದೆ' ಎಂಬ ಸಂದೇಶ ತೋರಿಸಿದೆ. ಅಲ್ಲದೆ, ಡೆಲಿವರಿ ಸಮಯವನ್ನು 12 ನಿಮಿಷ ಎಂದು ಅಪ್ಡೇಟ್ ಮಾಡಿದೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಅಪ್ಡೇಟ್ ಮಾಡಿದೆ ಎಂದು ವಿವರಿಸಿದ್ದಾರೆ.

ಅವರು ಕುಳಿತಿದ್ದ ಸ್ಟಾರ್‌ಬಕ್ಸ್‌ಗೆ ತಲುಪಲು ಡೆಲಿವರಿ ಪಾಲುದಾರರು ಬೈಕ್‌ ಪಾರ್ಕ್ ಮಾಡಿದ ಬಳಿಕ ಸುಮಾರು 3 ನಿಮಿಷಗಳನ್ನು ತೆಗೆದುಕೊಂಡರು. ಅವರು ಒಟಿಪಿ ಮೂಲಕ ಪರಿಶೀಲನೆ ನಡೆಸಿ ಲ್ಯಾಪ್‌ಟಾಪ್ ಹಸ್ತಾಂತರಿಸಿದರು ಎಂದು ಗುಪ್ತಾ ವಿವರಿಸಿದ್ದಾರೆ.

"ಆದ್ದರಿಂದ ಪಾವತಿಯ ಮಾಡಿದ ಬಳಿಕ ಸ್ಟಾರ್‌ಬಕ್ಸ್‌ನಲ್ಲಿ ಕುಳಿತು ಅದನ್ನು ಸ್ವೀಕರಿಸಲು ನಿಖರವಾಗಿ 13 ನಿಮಿಷಗಳು ಬೇಕಾಯಿತು" ಎಂದು ಅವರು ಡಿವೈಸ್‌ ಅನ್‌ಬಾಕ್ಸಿಂಗ್‌ನ ದೃಶ್ಯಗಳನ್ನು ಹಂಚಿಕೊಂಡ ನಂತರ ಹೇಳಿದ್ದಾರೆ.

ಗುಪ್ತಾ ಅವರು ಏಸರ್ ಪ್ರಿಡೇಟರ್ ಲ್ಯಾಪ್‌ಟಾಪ್ ಅನ್ನು ಆನ್‌ಲೈನ್‌ನಲ್ಲಿ 95,000 ರೂಪಾಯಿಯಿಂದ 2.5 ಲಕ್ಷ ರೂಪಾಯಿ ತನಕದ ಆರ್ಡರ್ ಮಾಡಿದ್ದಾರೆ ಎಂಬುದನ್ನು ಅವರ ವಿಡಿಯೋ ಬಹಿರಂಗಪಡಿಸುತ್ತದೆ.

ವೈರಲ್ ಪೋಸ್ಟ್‌ಗೆ ಭಾರಿ ಸ್ಪಂದನೆ

ಅವರ ವೈರಲ್ ಥ್ರೆಡ್‌ಗೆ ವ್ಯಕ್ತವಾಗಿರುವ ಪ್ರತಿಕ್ರಿಯೆಗಳು ಗಮನಿಸಿದರೆ, ಅದರಲ್ಲಿ ಕೆಲವು ವಿನೋದಮಯವಾಗಿದ್ದರೆ ಇನ್ನು ಕೆಲವು ನಂಬಲಾಗದು ಎಂಬ ಭಾವನೆಯನ್ನು ಒಳಗೊಂಡಿದೆ.

“ಫ್ಲಿಪ್‌ಕಾರ್ಟ್ ಈಗ ಅತಿ ವೇಗವಾಗಿ ತಲುಪಿಸುತ್ತಿದೆ ಎಂದು ನಂಬಲು ಸಾಧ್ಯವಿಲ್ಲ! 4 ದಿನದಲ್ಲಿ ಬರಬೇಕಾಗಿದ್ದ ಫೋನ್ ಅನ್ನು ತಲುಪಿಸಲು 15 ದಿನಗಳನ್ನು ತೆಗೆದುಕೊಂಡ ನಂತರ ನಾನು ಅವರಲ್ಲಿ ಆರ್ಡರ್ ಮಾಡುವುದನ್ನು ನಿಲ್ಲಿಸಿದೆ. ಸ್ಪರ್ಧೆಯು ನಿಜವಾಗಿಯೂ ಅದ್ಭುತಗಳನ್ನು ಮಾಡುತ್ತದೆ! ಎಂದು ಎಕ್ಸ್‌ ಬಳಕೆದಾರ ಇಟು ರಾಥೋಡ್‌ ಬರೆದಿದ್ದಾರೆ.

ಹಲವಾರು ಬಳಕೆದಾರರು ಇಂತಹ ಖರೀದಿ ಪ್ರಕ್ರಿಯೆಯನ್ನು ಟೀಕಿಸಿದ್ದಾರೆ.

"7 ನಿಮಿಷಗಳಲ್ಲಿ ನೀವು ಅಂಗಡಿಗೆ ಹೋಗಬಹುದು. ತ್ವರಿತ ವಾಣಿಜ್ಯ ಸೇವೆಯ ಈ ಪ್ರಚೋದನೆಯು ನನಗೆ ಅರ್ಥವಾಗುತ್ತಿಲ್ಲ" ಎಂದು ಒಬ್ಬ ಎಕ್ಸ್‌ ಬಳಕೆದಾರರು ಹೇಳಿಕೊಂಡಿದ್ದಾರೆ.

"ತ್ವರಿತ-ವಾಣಿಜ್ಯ ಸೇವೆಯು ಸ್ವಲ್ಪ ವಿಶ್ರಾಂತಿ ಪಡೆಯಬೇಕು. 10 ನಿಮಿಷಗಳಲ್ಲಿ ಹೊಸ ಲ್ಯಾಪ್‌ಟಾಪ್ ಅನ್ನು ತಮ್ಮ ಮನೆಗೆ ತಲುಪಿಸಬೇಕು ಎಂಬ ಆತುರ ಯಾರಿಗಾದರೂ ಇದೆಯೇ!?” ಮತ್ತೊಬ್ಬರು ಆಶ್ಚರ್ಯದಿಂದ ಕೇಳಿದ್ದಾರೆ.