ಬೆಂಗಳೂರು ಸಂಚಾರ ಸಲಹೆ; ನಾಗವಾರ ಮೇಲ್ಸೇತುವೆ ಬಳಿ ಇಂದಿನಿಂದ ಸರ್ವೀಸ್‌ ರಸ್ತೆ ಬಂದ್‌, ಟೈಮಿಂಗ್ಸ್ ಮತ್ತು ಇತರೆ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಸಂಚಾರ ಸಲಹೆ; ನಾಗವಾರ ಮೇಲ್ಸೇತುವೆ ಬಳಿ ಇಂದಿನಿಂದ ಸರ್ವೀಸ್‌ ರಸ್ತೆ ಬಂದ್‌, ಟೈಮಿಂಗ್ಸ್ ಮತ್ತು ಇತರೆ ವಿವರ

ಬೆಂಗಳೂರು ಸಂಚಾರ ಸಲಹೆ; ನಾಗವಾರ ಮೇಲ್ಸೇತುವೆ ಬಳಿ ಇಂದಿನಿಂದ ಸರ್ವೀಸ್‌ ರಸ್ತೆ ಬಂದ್‌, ಟೈಮಿಂಗ್ಸ್ ಮತ್ತು ಇತರೆ ವಿವರ

ಬೆಂಗಳೂರು ಸಂಚಾರ ಸಲಹೆ; ಹೆಬ್ಬಾಳ ಸಮೀಪದ ನಾಗವಾರ ಮೇಲ್ಸೇತುವೆ ಬಳಿ ಇಂದಿನಿಂದ ಸರ್ವೀಸ್‌ ರಸ್ತೆ ಬಂದ್‌ ಆಗಿರಲಿದೆ. ನಮ್ಮ ಮೆಟ್ರೋ ಕಾಮಗಾರಿಯನ್ನು ಬಿಎಂಆರ್‌ಸಿಎಲ್ ಕೈಗೆತ್ತಿಕೊಂಡಿದ್ದು, ರಾತ್ರಿ ವೇಳೆ ಸಂಚಾರ ಬಂದ್‌ ಮಾಡಲು ಮನವಿ ಮಾಡಿತ್ತು. ಸಂಚಾರ ನಿರ್ಬಂದದ ಟೈಮಿಂಗ್ಸ್ ಮತ್ತು ಇತರೆ ವಿವರ ಇಲ್ಲಿದೆ.

ಬೆಂಗಳೂರು ಸಂಚಾರ ಸಲಹೆ; ನಾಗವಾರಾ ಮೇಲ್ಸೇತುವೆ ಬಳಿ ಇಂದಿನಿಂದ ಸರ್ವೀಸ್‌ ರಸ್ತೆ ಬಂದ್‌ ಆಗಿರಲಿದ್ದು, ಅದರ ಟೈಮಿಂಗ್ಸ್ ಮತ್ತು ಇತರೆ ವಿವರಗಳನ್ನು ಹೆಬ್ಬಾಳ ಸಂಚಾರ ಪೊಲೀಸರ್ ಪ್ರಕಟಿಸಿದ್ದಾರೆ.
ಬೆಂಗಳೂರು ಸಂಚಾರ ಸಲಹೆ; ನಾಗವಾರಾ ಮೇಲ್ಸೇತುವೆ ಬಳಿ ಇಂದಿನಿಂದ ಸರ್ವೀಸ್‌ ರಸ್ತೆ ಬಂದ್‌ ಆಗಿರಲಿದ್ದು, ಅದರ ಟೈಮಿಂಗ್ಸ್ ಮತ್ತು ಇತರೆ ವಿವರಗಳನ್ನು ಹೆಬ್ಬಾಳ ಸಂಚಾರ ಪೊಲೀಸರ್ ಪ್ರಕಟಿಸಿದ್ದಾರೆ. (HT News )

ಬೆಂಗಳೂರು: ಹೆಬ್ಬಾಳ-ಕೊಡಿಗೆಹಳ್ಳಿ ಜಂಕ್ಷನ್‌ನಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಹೆಬ್ಬಾಳ-ಕೊಡಿಗೆಹಳ್ಳಿ ಜಂಕ್ಷನ್ನಲ್ಲಿ ಮೆಟ್ರೋ ಸಂಬಂಧಿತ ಕಾಮಗಾರಿಗಳನ್ನು ಪ್ರಾರಂಭಿಸುತ್ತಿದೆ. ಹೀಗಾಗಿ, ಹೊರ ವರ್ತುಲ ರಸ್ತೆಯ ನಾಗವಾರ ಮೇಲ್ಸೇತುವೆ ಬಳಿಯ ಸರ್ವೀಸ್ ರಸ್ತೆಯಲ್ಲಿ ವಾಹನಗಳ ಪ್ರವೇಶಕ್ಕೆ ಸಂಚಾರ ಪೊಲೀಸರು ನಿರ್ಬಂಧ ಹೇರಿದ್ದಾರೆ.

ಇಲ್ಲಿನ ಸರ್ವೀಸ್‌ ರಸ್ತೆಯಲ್ಲಿ ಇಂದಿನಿಂದ (ಮೇ 10) ರಾತ್ರಿ 11 ಗಂಟೆಯಿಂದ ಮುಂಜಾನೆ 5 ಗಂಟೆ ಅವಧಿಯಲ್ಲಿ ಸಂಚಾರ ನಿರ್ಬಂಧ ಇರಲಿದ್ದು, ಸುಗಮ ಸಂಚಾರಕ್ಕಾಗಿ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ನಾಗವಾರ ಮೇಲ್ಸೇತುವೆ ಬಳಿ ಬಿಎಂಆರ್‌ಸಿಎಲ್ ಕಾಮಗಾರಿ

ಬೆಂಗಳೂರು ಮೆಟ್ರೋ ರೈಲು ನಿಗಮವು ಮೇ 10 ರಿಂದ ಕೊಡಿಗೆಹಳ್ಳಿ-ಹೆಬ್ಬಾಳ ವೃತ್ತದ ಮೆಟ್ರೋ ಪಿಲ್ಲರ್ ಗಳಿಗೆ ಹಳಿಗಳನ್ನು ಜೋಡಿಸಲಿದೆ. ಆದ್ದರಿಂದ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕೊಡಿಗೆಹಳ್ಳಿ ಜಂಕ್ಷನ್ ನಿಂದ ಸರ್ವಿಸ್ ರಸ್ತೆಯಲ್ಲಿ ಎಸ್ಟೀಮ್ ಮಾಲ್ ವರೆಗೆ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಪ್ರಯಾಣಿಕರು ಎಸ್ಟೀಮ್ ಮಾಲ್‌ಗೆೆ ಹೋಗಲು ರನ್ನ ರಸ್ತೆಯ ಮೂಲಕ ತೆರಳುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಎಲ್ಲಾ ಎಚ್ಜಿವಿ ವಾಹನಗಳು ವಿದ್ಯಾಶಿಲ್ಪ ಜಂಕ್ಷನ್ನಲ್ಲಿ ಹೋಗುವ ಬದಲು ದಾಸರಹಳ್ಳಿ ಮುಖ್ಯರಸ್ತೆಯಿಂದ ಪಂಪಾ ಎಕ್ಸ್ ಟೆನ್ಷನ್ ರಸ್ತೆ ತಲುಪಿ, ರನ್ನ ರಸ್ತೆ ಮೂಲಕ ಸಾಗಿ ಕೆಂಪಾಪುರ ಮುಖ್ಯರಸ್ತೆ ಮೂಲಕ ಎಸ್ಟೀಮ್ ಮಾಲ್ ತಲುಪಬೇಕು" ಎಂದು ಹೆಬ್ಬಾಳ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ನಾಗವಾರ ಫ್ಲೈಓವರ್ ಮೇಲಿನ ಸರ್ವಿಸ್ ರಸ್ತೆಗೆ ಪ್ರವೇಶವನ್ನು ಶುಕ್ರವಾರದಿಂದ ಮುಚ್ಚಲಾಗುವುದು ಎಂದು ಬೆಂಗಳೂರು ಸಂಚಾರ ಪೊಲೀಸರು ಘೋಷಿಸಿದ್ದಾರೆ. ಇದು ಹೊರ ವರ್ತುಲ ರಸ್ತೆಯಲ್ಲಿ ಸುಗಮ ಸಂಚಾರ ಹರಿವನ್ನು ಖಚಿತಪಡಿಸುತ್ತದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೆಬ್ಬಾಳ ಮೇಲ್ಸೇತುವೆಗಾಗಿ ಎರಡು ಹೊಸ ಪಥಗಳನ್ನು ನಿರ್ಮಿಸಲು ಪ್ರಾರಂಭಿಸಿದೆ ಮತ್ತು ಕಳೆದ ತಿಂಗಳಿನಿಂದ ಕೆಲವು ತಿರುವುಗಳು ಈಗಾಗಲೇ ಜಾರಿಯಲ್ಲಿವೆ. ಹೆಬ್ಬಾಳ ಫ್ಲೈಓವರ್ ಬಳಿಯ ಕೆ.ಆರ್.ಪುರಂ ರ್ಯಾಂಪ್ ಅನ್ನು ಕೆಡವಿ ಫ್ಲೈಓವರ್‌ನಲ್ಲಿ ಹೊಸ ಪಥಗಳನ್ನು ನಿರ್ಮಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಓದಬಹುದಾದ ಕೆಲವು ಸ್ಟೋರಿಗಳು

1) ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವೆ ಮತ್ತು ದರ್ಶನದ ಆಗಸ್ಟ್‌ನ ಟಿಕೆಟ್ ಹಂಚಿಕೆ ಮೇ 18ಕ್ಕೆ, ಟಿಟಿಡಿ ಆನ್‌ಲೈನ್‌ ಕೋಟಾ ವೇಳಾಪಟ್ಟಿ ಪ್ರಕಟ

2) ಬಂಗಾರದ ಬೆಲೆ ಕಳೆದ ಅಕ್ಷಯ ತೃತೀಯಕ್ಕಿಂತ ಈ ಸಲಕ್ಕೆ ಶೇ 13 ಹೆಚ್ಚಳ; 2014 ರಿಂದೀಚೆಗಿನ ವಾರ್ಷಿಕ ಚಿನ್ನದ ದರದ ಐತಿಹಾಸಿಕ ಟ್ರೆಂಡ್ ಹೀಗಿತ್ತು

3) Brundavana Serial: ಸಹನಾಗೆ ಬ್ರೈನ್‌ ಟ್ಯೂಮರ್‌ ಎಂಬ ಸತ್ಯ ಸುನಾಮಿ ಮುಂದೆ ಅನಾವರಣ ಮಾಡಿದ ಆಕಾಶ್‌; ಕೊನೆಗೂ ಸುಳ್ಳಿಗೇ ಗೆಲುವಾಯ್ತಾ

4) ರಾಮಾನುಜಾಚಾರ್ಯ ಜಯಂತಿ 2024; ವಿಶಿಷ್ಟಾದ್ವೈತ ತತ್ವದ ಮೂಲಕ ಮೋಕ್ಷದ ಮಾರ್ಗ ತಿಳಿಸಿದ ಸಮಾನತೆಯ ಸಂತ, ಕರ್ನಾಟಕದೊಂದಿಗೆ ಆಪ್ತ ಒಡನಾಟ

5) Dhanwanthari Temple: ಆಯುರ್ವೇದದ ಹರಿಕಾರ, ಮಹಾವಿಷ್ಣುವಿನ ಅವತಾರ ಧನ್ವಂತರಿಗೆ ಮುಡಿಪಾದ ದೇವಾಲಯಗಳಿವು; ಗಿಡಮೂಲಿಕೆಗಳೇ ಇಲ್ಲಿ ಪ್ರಸಾದ

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

Whats_app_banner