ಬೆಂಗಳೂರು ಜಲ ಬಿಕ್ಕಟ್ಟು ಯಾಕೆ, ಕಾವೇರಿ ನೀರಿನ ಅವಲಂಬನೆ ಕಾರಣವೇ, ಸಿವಿಲ್‌ ಇಂಜಿನಿಯರ್ ರಾಜ್‌ಭಗತ್‌ ವಿವರಣೆ ಹೀಗಿದೆ-bengaluru news bengaluru water crisis is it due to over exploitation of cauvery river civil engineer explains uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಜಲ ಬಿಕ್ಕಟ್ಟು ಯಾಕೆ, ಕಾವೇರಿ ನೀರಿನ ಅವಲಂಬನೆ ಕಾರಣವೇ, ಸಿವಿಲ್‌ ಇಂಜಿನಿಯರ್ ರಾಜ್‌ಭಗತ್‌ ವಿವರಣೆ ಹೀಗಿದೆ

ಬೆಂಗಳೂರು ಜಲ ಬಿಕ್ಕಟ್ಟು ಯಾಕೆ, ಕಾವೇರಿ ನೀರಿನ ಅವಲಂಬನೆ ಕಾರಣವೇ, ಸಿವಿಲ್‌ ಇಂಜಿನಿಯರ್ ರಾಜ್‌ಭಗತ್‌ ವಿವರಣೆ ಹೀಗಿದೆ

ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗಿದ್ದು, ಪ್ರಸ್ತುತ 1.4 ಕೋಟಿಯಷ್ಟು ಜನರಿದ್ದಾರೆ. ಅವರಿಗೆ ಕುಡಿಯುವ ನೀರು ಸೇರಿ ನಿತ್ಯ ಬಳಕೆಗೆ ನೀರು ಪೂರೈಕೆಯದ್ದೇ ಸಮಸ್ಯೆ. ಈ ಸಲ ಫೆಬ್ರವರಿಯಲ್ಲೇ ಜಲಕ್ಷಾಮ ಬಹುಚರ್ಚಿತ ವಿಚಾರ. ಈಗ ಬೆಂಗಳೂರು ಜಲ ಬಿಕ್ಕಟ್ಟು ಯಾಕೆ, ಕಾವೇರಿ ನೀರಿನ ಅವಲಂಬನೆ ಕಾರಣವೇ ಎಂಬಿತ್ಯಾದಿ ಪ್ರಶ್ನೆಗೆ ಸಿವಿಲ್‌ ಇಂಜಿನಿಯರ್ ರಾಜ್‌ಭಗತ್ ವಿವರಣೆ ಹೀಗಿದೆ.

ಬೆಂಗಳೂರು ಜಲ ಬಿಕ್ಕಟ್ಟು ಯಾಕೆ? ಕಾವೇರಿ ನೀರಿನ ಅವಲಂಬನೆ ಕಾರಣವೇ ಎಂಬಿತ್ಯಾದಿ ಪ್ರಶ್ನೆ, ಸಂದೇಹಗಳು ಸಹಜ. ಇದಕ್ಕೆ ಸಿವಿಲ್‌ ಇಂಜಿನಿಯರ್  ಒಬ್ಬರ ವಿವರಣೆ ಹೀಗಿದೆ. ಅದರಲ್ಲಿರುವ ವಾಸ್ತವಾಂಶಗಳು ಗಮನಸೆಳೆಯುತ್ತವೆ.
ಬೆಂಗಳೂರು ಜಲ ಬಿಕ್ಕಟ್ಟು ಯಾಕೆ? ಕಾವೇರಿ ನೀರಿನ ಅವಲಂಬನೆ ಕಾರಣವೇ ಎಂಬಿತ್ಯಾದಿ ಪ್ರಶ್ನೆ, ಸಂದೇಹಗಳು ಸಹಜ. ಇದಕ್ಕೆ ಸಿವಿಲ್‌ ಇಂಜಿನಿಯರ್ ಒಬ್ಬರ ವಿವರಣೆ ಹೀಗಿದೆ. ಅದರಲ್ಲಿರುವ ವಾಸ್ತವಾಂಶಗಳು ಗಮನಸೆಳೆಯುತ್ತವೆ.

ಬೆಂಗಳೂರು: ಸದ್ಯ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಜಲ ಸಂಕಷ್ಟದ್ದೇ ಮಾತುಕತೆ. ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗಿದ್ದು, ಪ್ರಸ್ತುತ 1.4 ಕೋಟಿಯಷ್ಟು ಜನರಿದ್ದಾರೆ. ಅವರಿಗೆ ಕುಡಿಯುವ ನೀರು ಸೇರಿ ನಿತ್ಯ ಬಳಕೆಗೆ ನೀರು ಪೂರೈಕೆಯದ್ದೇ ಸಮಸ್ಯೆ. ಈ ಸಲ ಫೆಬ್ರವರಿ ತಿಂಗಳಲ್ಲೇ ಜಲಕ್ಷಾಮದ ವಿಚಾರ ಬಹಳ ಚರ್ಚೆಗೆ ಬಂದಿದೆ.

ಸೋಷಿಯಲ್ ಮೀಡಿಯಾದಲ್ಲೂ ಈ ವಿಚಾರ ಚರ್ಚೆಗೆ ಒಳಗಾಗಿದೆ. ತಮಿಳುನಾಡು ಮೂಲದ ಸಿವಿಲ್ ಇಂಜಿನಿಯರ್ ಒಬ್ಬರು ಬೆಂಗಳೂರು ಜಲ ಬಿಕ್ಕಟ್ಟು (Bengaluru Water Crisis) ಸಂಬಂಧಿಸಿ ಯಾಕೆ ಮತ್ತು ಹೇಗೆ ಎಂಬ ವಿವರಣೆ ನೀಡಲು ಪ್ರಯತ್ನಿಸಿದ್ದಾರೆ.

ಈ ವಿಚಾರವಾಗಿ ಅವರು ಸರಣಿ ಟ್ವೀಟ್ ಮಾಡಿದ್ದು, ತಮ್ಮ ಆಲೋಚನೆಗಳನ್ನು ಪ್ರತಿಪಾದಿಸುವಾಗ ಒಳನೋಟಗಳನ್ನು ನೀಡುವಾಗ ಹಲವು ಅಂಕಿ ಅಂಶಗಳನ್ನು, ಮ್ಯಾಪ್‌ಗಳನ್ನು ಬಳಸಿದ್ದಾರೆ. ಹೀಗಾಗಿ ಅವರ ಟ್ವೀಟ್‌ ಗಮನಸೆಳೆದಿದೆ.

ಸಿವಿಲ್ ಇಂಜಿನಿಯರ್ ರಾಜ್ ಭಗತ್‌ (@rajbhagatt) ಈ ರೀತಿ ಟ್ವೀಟ್ ಮಾಡಿರುವಂಥದ್ದು. ಅವರ ಟ್ವೀಟ್‌ಗಳು, ಆಲೋಚನೆಗಳು ಎಲ್ಲವೂ ನೀರು, ನಗರಾಭಿವೃದ್ಧಿ, ಪರಿಸರ ಮತ್ತು ಸಂಬಂಧಿತ ವಿಷಯಗಳ ಕುರಿತು ಅವರ ಸಂಶೋಧನೆ ಮತ್ತು ಒಳನೋಟಗಳನ್ನು ಒದಗಿಸುತ್ತವೆ. ಅವರು ಇತ್ತೀಚಿನ ಪೋಸ್ಟ್‌ನಲ್ಲಿ, ಬೆಂಗಳೂರು ಈಗ ಎದುರಿಸುತ್ತಿರುವ ನೀರಿನ ಬಿಕ್ಕಟ್ಟಿನ ಹಿಂದಿನ ಭೌಗೋಳಿಕ ಕಾರಣವನ್ನು ವಿವರಿಸುತ್ತ, ಹಲವು ಕಾರಣಗಳನ್ನು ತೆರೆದಿಟ್ಟಿದ್ಧಾರೆ.

ಬೆಂಗಳೂರು ಜಲ ಬಿಕ್ಕಟ್ಟು ಗಮನಿಸಬೇಕಾದ ಕಾರಣ 3

ರಾಜ್‌ಭಗತ್ ಅವರು ತಮ್ಮ ಟ್ವೀಟ್‌ನಲ್ಲಿ ಬೆಂಗಳೂರು ಜಲ ಬಿಕ್ಕಟ್ಟು ವಿಚಾರದಲ್ಲಿ ಗಮನಿಸಬೇಕಾದ ಮೂರು ಕಾರಣಗಳನ್ನು ಹೀಗೆ ಪಟ್ಟಿ ಮಾಡಿದ್ದಾರೆ.

1) ಬೆಂಗಳೂರು ಮಹಾ ನಗರದ ನೀರು ಪೂರೈಕೆಗಾಗಿ ಕಾವೇರಿ ನದಿಯ ಮೇಲೆ ಅವಲಂಬನೆಯು ಅದರ ಜಲ ಸಂಪನ್ಮೂಲಗಳನ್ನು ತಗ್ಗಿಸುತ್ತಿದೆ. ಏಕೆಂದರೆ ನದಿಯನ್ನು ಕೃಷಿ ಉದ್ದೇಶಗಳಿಗಾಗಿ ಅತಿಯಾಗಿ ಬಳಸಿಕೊಳ್ಳಲಾಗುತ್ತದೆ. ವಿಶೇಷವಾಗಿ ಮಳೆ ಕಡಿಮೆ ಇರುವಾಗ ಈ ಮಿತಿಮೀರಿದ ಬಳಕೆ, ಅಂತರ್ಜಲ ಮಟ್ಟಗಳ ಸವಕಳಿಯೊಂದಿಗೆ, ಕೊರತೆಗೆ ಕಾರಣವಾಗುತ್ತದೆ.

2) ಬೆಂಗಳೂರಿನ ಕ್ಷಿಪ್ರ ಮತ್ತು ಅಸಮತೋಲನದಿಂದ ಕೂಡಿದ ಬೆಳವಣಿಗೆ, ಕಾವೇರಿ ಜಲಾನಯನದ ಹೊರಗೆ ಗಮನಾರ್ಹವಾದ ಅಭಿವೃದ್ಧಿ ನಡೆಯುತ್ತಿದೆ. ಇದು ನೀರಿನ ಸಂಪನ್ಮೂಲಗಳ ಮೇಲಿನ ಒತ್ತಡವನ್ನು ಉಲ್ಬಣಗೊಳಿಸುತ್ತದೆ.

3) ಕಳಪೆ ಯೋಜನೆ ಮತ್ತು ಸಂರಕ್ಷಣಾ ಪ್ರಯತ್ನಗಳ ಕೊರತೆಯು ಬೆಂಗಳೂರು ಜಲ ಬಿಕ್ಕಟ್ಟಿಗೆ ಕೊಡುಗೆ ನೀಡುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು, ಸುಸ್ಥಿರವಾದ ನೀರಿನ ನಿರ್ವಹಣೆ ಅಭ್ಯಾಸಗಳು, ಇತರ ನಗರಗಳಿಗೆ ಬೆಳವಣಿಗೆಯ ವೈವಿಧ್ಯ ಒದಗಿಸುವುದು ಮತ್ತು ನೀರಿನ ಸಂರಕ್ಷಣೆ ಮತ್ತು ಬರಗಾಲದ ಪರಿಣಾಮವನ್ನು ತಗ್ಗಿಸಲು ಸಾಮೂಹಿಕ ಪ್ರಯತ್ನಗಳ ಅವಶ್ಯಕತೆಯಿದೆ.

ಬೆಂಗಳೂರು ಜಲ ಬಿಕ್ಕಟ್ಟು ಯಾಕಾಗಿದೆ

ಬೆಂಗಳೂರು ಎಂಬುದು ಘಟ್ಟದ ಮೇಲಿನ ಪ್ರದೇಶ. ಸಮುದ್ರ ಮಟ್ಟದಿಂದ ಕನಿಷ್ಠ 900 ಮೀಟರ್ ಎತ್ತರದಲ್ಲಿದೆ. ಇಷ್ಟು ಎತ್ತರದ ಪ್ರದೇಶದಲ್ಲಿ ಕಾವೇರಿ ನೀರನ್ನು 100 ಕಿ.ಮೀ. ದೂರದಿಂದ ಪೂರೈಸಲಾಗುತ್ತಿದೆ. ಬೆಂಗಳೂರಿಗರೂ ಇದನ್ನೇ ನಂಬಿದ್ದಾರೆ. ಬೇರೆಲ್ಲಿಂದಲೂ ನೀರು ಇಲ್ಲಿಗೆ ಹರಿಯಲ್ಲ. ಬೆಂಗಳೂರಿನಿಂದ ನೀರು ಹೊರಕ್ಕೆ ಹರಿಯತ್ತದೆ.

ಆದರೆ, ಕಾವೇರಿ ಜಲಾನಯನ ಪ್ರದೇಶವು ಭಾರತದಲ್ಲಿ ಅತಿ ಹೆಚ್ಚು ಶೋಷಿತ ನದಿ ವ್ಯವಸ್ಥೆಯಾಗಿದೆ. ಸಾವಿರಾರು ದಿಕ್ಕಿಗೆ ನೀರನ್ನು ತಿರುಗಿಸುವ ಮತ್ತು ಶೇಖರಣಾ ರಚನೆಗಳು ನದಿಯನ್ನು ಹಂಚಿಕೊಳ್ಳುವ ಕರ್ನಾಟಕ ಮತ್ತು ತಮಿಳುನಾಡು ಎರಡರಲ್ಲೂ ಬಳಸಿಕೊಳ್ಳಲು ಸಾಧ್ಯವಾಗಿಸುತ್ತದೆ.

ಕಾವೇರಿ ಜಲಾನಯನ ಪ್ರದೇಶದ ಹೆಚ್ಚಿನ ನೀರನ್ನು ಕೃಷಿ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಮೂಲಭೂತವಾಗಿ, ಖರ್ಚು ಬಹಳ ಹೆಚ್ಚಾಗಿರುತ್ತದೆ ಮತ್ತು ಆದಾಯವು ಆಂದೋಲನಗೊಳ್ಳುತ್ತದೆ. ಇದರರ್ಥ, ಕೆಲವು ವರ್ಷಗಳ ವಿಪರೀತ ಮಳೆ/ಪ್ರವಾಹವನ್ನು ಹೊರತುಪಡಿಸಿ, ಹೆಚ್ಚಿನ ವರ್ಷಗಳಲ್ಲಿ ಈ ಪ್ರದೇಶವು ನೀರಿನ ಕೊರತೆಯನ್ನು ಎದುರಿಸುತ್ತದೆ.

ಬೆಂಗಳೂರಿಗೆ ಸಂಬಂಧಿಸಿದ ಅನಿಯಂತ್ರಿತ ಮತ್ತು ಅಸಮತೋಲಿತ ಬೆಳವಣಿಗೆಯು ಬೆಂಗಳೂರಿನ ಮೇಲೆ ಅಪಾರ ಒತ್ತಡವನ್ನು ಉಂಟುಮಾಡಿದೆ. ಕರ್ನಾಟಕದ ಮುಂದಿನ ನಗರಕ್ಕಿಂತ ಬೆಂಗಳೂರು 10 ಪಟ್ಟು ದೊಡ್ಡದಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಆರ್ಥಿಕತೆಯು ಎಲ್ಲಾ ರಾಜ್ಯಗಳಿಂದ ವಲಸೆ ಹೋಗುವ ಜನರೊಂದಿಗೆ ಬೆಂಗಳೂರಿನ ಕಡೆಗೆ ವಾಲುತ್ತಿದೆ.

ರಾಜ್ ಭಗತ್ ಪಿ ಅವರ ಟ್ವೀಟ್ ಇಲ್ಲಿದೆ ನೋಡಿ

ಇಷ್ಟೆಲ್ಲ ವಿಷಯಗಳನ್ನು ಪ್ರತಿಪಾದಿಸಿರುವ ರಾಜ್ ಭಗತ್‌, ಪರಿಸರ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಯೋಜನೆ ಪ್ರಕ್ರಿಯೆಗಳು, ಕಾರ್ಯಗತಗೊಳಿಸುವ ವಿಧಾನಗಳು ಮತ್ತು ಬೆಳವಣಿಗೆಯ ಮಾದರಿಗಳ ಮೇಲೆ ಕೇಂದ್ರೀಕರಿಸಬೇಕು. ನೀರಿನ ಬಿಕ್ಕಟ್ಟು ಮತ್ತು ಪರಿಸರ ಸಮಸ್ಯೆಗಳನ್ನು ಪರಿಹರಿಸುವಲ್ಲಿ, ತಿಳುವಳಿಕೆಯುಳ್ಳ ಕ್ರಮ ಮತ್ತು ಜಾಗೃತಿಯನ್ನು ಉತ್ತೇಜಿಸುವಲ್ಲಿ ನಾಗರಿಕರ ಸಾಮೂಹಿಕ ಜವಾಬ್ದಾರಿಯ ಕಡೆಗೆ ಗಮನಸೆಳೆದಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)

mysore-dasara_Entry_Point