ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಪ್ರಯಾಣಿಕ ಸಾರಿಗೆ; ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸಂಚಾರ, 3 ಮಾರ್ಗಗಳ ವೇಳಾಪಟ್ಟಿ ಮತ್ತು ಇತರೆ ವಿವರ

ಬೆಂಗಳೂರು ಪ್ರಯಾಣಿಕ ಸಾರಿಗೆ; ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸಂಚಾರ, 3 ಮಾರ್ಗಗಳ ವೇಳಾಪಟ್ಟಿ ಮತ್ತು ಇತರೆ ವಿವರ

ಬೆಂಗಳೂರು ಪ್ರಯಾಣಿಕ ಸಾರಿಗೆಗೆ ಸಂಬಂಧಿಸಿದ ಸುದ್ದಿ ಇದಾಗಿದ್ದು, ಬೆಂಗಳೂರು ನಗರದ ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸಂಚಾರ ಶುರುವಾಗಿದೆ. ನೆಲಮಂಗಲದಿಂದ ನೆಲಮಂಗಲಕ್ಕೆ ಚಕ್ರ ಬಸ್‌ಗಳು ಜುಲೈ 1ರಿಂದ ಶುರುವಾಗಲಿದೆ. ಇನ್ನೂ 2 ಮಾರ್ಗಗಳ ವೇಳಾಪಟ್ಟಿ ಮತ್ತು ಇತರೆ ವಿವರ ಇಲ್ಲಿದೆ.

ಬೆಂಗಳೂರು ಪ್ರಯಾಣಿಕ ಸಾರಿಗೆ; ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸಂಚಾರ, 3 ಮಾರ್ಗಗಳ ವೇಳಾಪಟ್ಟಿ ಮತ್ತು ಇತರೆ ವಿವರ
ಬೆಂಗಳೂರು ಪ್ರಯಾಣಿಕ ಸಾರಿಗೆ; ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸಂಚಾರ, 3 ಮಾರ್ಗಗಳ ವೇಳಾಪಟ್ಟಿ ಮತ್ತು ಇತರೆ ವಿವರ

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ತನ್ನ ಹೊಸ ಬಸ್‌ ಸೇವೆಯನ್ನು ಜುಲೈ 1ರಿಂದ ಶುರುಮಾಡಲಿದೆ. ಇವೆಲ್ಲವೂ ನಾನ್‌-ಎಸಿ ಬಸ್‌ ಸಂಚಾರ ಸೇವೆಯಾಗಿದೆ. ನಿಗದಿತ ರಸ್ತೆಗಳಲ್ಲಿ ಈ ಬಸ್‌ಗಳು ದಿನಕ್ಕೆ ಎಂಟರಿಂದ 9 ಟ್ರಿಪ್ ನಡೆಸಲಿವೆ ಎಂದು ಬಿಎಂಸಿಟಿ ಮೂಲಗಳು ತಿಳಿಸಿವೆ.

ಜುಲೈ 1 ರಿಂದ ಬಿಎಂಟಿಸಿ ಬಸ್ ಸಂಚಾರದ ಹೊಸ ಮಾರ್ಗಗಳಿವು

ಚಕ್ರ 1- ನೆಲಮಂಗಲದಿಂದ ನೆಲಮಂಗಲಕ್ಕೆ ದಾರಿ- ಬಸವನಹಳ್ಳಿ, ಬೊಮ್ಮಶೆಟ್ಟಿಹಳ್ಳಿ ಕ್ರಾಸ್, ಹುಸ್ಕೂರು ಕ್ರಾಸ್, ಹೊನ್ನಸಂದ್ರ ಕ್ರಾಸ್, ನಗರೂರು ಕ್ರಾಸ್, ನಗರೂರು, ನಂದರಾಮಪಾಳ್ಯ ಮತ್ತು ಬಿನ್ನಮಂಗಲ. ಈ ಬಸ್ ದಿನಕ್ಕೆ 9 ರೌಂಡ್‌ ಟ್ರಿಪ್ ಸಂಚರಿಸಲಿದೆ.

ಚಕ್ರ 1 ಎ- ನೆಲಮಂಗಲದಿಂದ ನೆಲಮಂಗಲಕ್ಕೆ ದಾರಿ-ಬಿನ್ನಮಂಗಲ, ನಂದರಾಮಪಾಳ್ಯ, ನಗರೂರು, ನಗರೂರು ಕ್ರಾಸ್, ಹೊನ್ನಸಂದ್ರ ಕ್ರಾಸ್, ಹುಸ್ಕೂರು ಕ್ರಾಸ್, ಬೊಮ್ಮಶೆಟ್ಟಿಹಳ್ಳಿ ಕ್ರಾಸ್ ಮತ್ತು ಬಸವನಹಳ್ಳಿ. ಈ ಬಸ್‌ ದಿನಕ್ಕೆ 9 ರೌಂಡ್‌ ಟ್ರಿಪ್ ಸಂಚರಿಸಲಿದೆ.

ಟ್ರೆಂಡಿಂಗ್​ ಸುದ್ದಿ

255 ಎಫ್: ಜಾಲಹಳ್ಳಿ ಕ್ರಾಸ್-ನೆಲಮಂಗಲ ಮಾರ್ಗವಾಗಿ ಮಾರಿಸನ್ ಫ್ಯಾಕ್ಟರಿ, ಮಾದನಾಯಕನಹಳ್ಳಿ, ಮಾಕಳಿ, ನಗರೂರು ಕ್ರಾಸ್, ನಗರೂರು, ನಂದರಾಮನಪಾಳ್ಯ ಮತ್ತು ಬಿನ್ನಮಂಗಲ. ಈ ಬಸ್‌ ದಿನಕ್ಕೆ 8 ರೌಂಡ್ ಟ್ರಿಪ್ ನಡೆಸುತ್ತದೆ.

ಮಲ್ಲೇಶ್ವರ ಬಸ್‌ನಿಲ್ದಾಣದಿಂದ ಬನಶಂಕರಿ ಬಸ್‌ನಿಲ್ದಾಣಕ್ಕೆ 401 ಎನ್‌ ಬಸ್‌ ರೂಟ್‌

ಮಲ್ಲೇಶ್ವರ ಬಸ್‌ನಿಲ್ದಾಣದಿಂದ ಬನಶಂಕರಿ ಬಸ್‌ನಿಲ್ದಾಣಕ್ಕೆ ಎರಡು ಹೊಸ ಬಸ್‌ ರೂಟ್‌ ಶುರುಮಾಡಿರುವ ಬಿಎಂಟಿಸಿ, ಬಸ್ ಪ್ರಯಾಣದ ವೇಳಾಪಟ್ಟಿಯನ್ನು ಕೂಡ ಪ್ರಕಟಿಸಿದೆ.

ಇದರಂತೆ, ಮಲ್ಲೇಶ್ವರಂ ಬಸ್‌ನಿಲ್ಧಾಣದಿಂದ 401 ಎನ್ ಬಸ್‌ ರೂಟ್‌ನ ಬಸ್ ಮಲ್ಲೇಶ್ವರಂ ಬಸ್‌ ನಿಲ್ಧಾಣದಿಂದ ಬೆಳಗ್ಗೆ/ ಪೂರ್ವಾಹ್ನ 6.40, 7.45, 8.20, 8.50, 9.20,9.50,10.35, 11.10, 11.40 ಬಸ್ ಬನಶಂಕರಿ ಬಸ್‌ನಿಲ್ದಾಣಕ್ಕೆ ಹೊರಡುತ್ತದೆ. ಇನ್ನು ಮಧ್ಯಾಹ್ನ 12.40, 1, 1.30, 2.30, 3.55, ಸಂಜೆ 4.25, 4.50, 5.20, 6.55ಕ್ಕೆ ಮಲ್ಲೇಶ್ವರಂ ಬಸ್‌ನಿಲ್ಧಾಣದಿಂದ ಬನಶಂಕರಿ ಬಸ್‌ನಿಲ್ದಾಣಕ್ಕೆ ಹೊರಡುತ್ತದೆ.

ಇನ್ನೊಂದೆಡೆ, ಬನಶಂಕರಿ ಬಸ್‌ ನಿಲ್ದಾಣದಿಂದ ಬೆಳಗ್ಗೆ / ಪೂರ್ವಾಹ್ನ 7.35, 8.05, 8.35, 8.55, 9.35, 10.30, 11, 11.30, 11.50 ಮತ್ತು ಮಧ್ಯಾಹ್ನ/ಅಪರಾಹ್ನ/ಸಂಜೆ/ ರಾತ್ರಿ 12.20, 12.50, 2.45, 3.05, 3.40, 5.10, 5.40, 8.10ಕ್ಕೆ ಹೊರಟು ಮಲ್ಲೇಶ್ವರಂ ಬಸ್‌ ನಿಲ್ದಾಣಕ್ಕೆ ಸಂಚರಿಸುತ್ತದೆ.