ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಜಲ ಮಂಡಳಿ ಫೋನ್ ಇನ್ ಕಾರ್ಯಕ್ರಮ ಇಂದು ಬೆಳಗ್ಗೆ 9.30ಕ್ಕೆ, ಕುಂದುಕೊರತೆ, ಅಹವಾಲು ಸಲ್ಲಿಸಲು ಫೋನ್ ನಂಬರ್ ಇಲ್ಲಿದೆ..

ಬೆಂಗಳೂರು ಜಲ ಮಂಡಳಿ ಫೋನ್ ಇನ್ ಕಾರ್ಯಕ್ರಮ ಇಂದು ಬೆಳಗ್ಗೆ 9.30ಕ್ಕೆ, ಕುಂದುಕೊರತೆ, ಅಹವಾಲು ಸಲ್ಲಿಸಲು ಫೋನ್ ನಂಬರ್ ಇಲ್ಲಿದೆ..

ಬೆಂಗಳೂರು ಜಲ ಮಂಡಳಿ ಫೋನ್ ಇನ್ ಕಾರ್ಯಕ್ರಮ ಇಂದು ಬೆಳಗ್ಗೆ 9.30ಕ್ಕೆ ನಡೆಯಲಿದ್ದು, ಜಲಮಂಡಳಿ ಸೇವೆ ಪಡೆಯುತ್ತಿರುವ ನಾಗರಿಕರು ತಮ್ಮ ಕುಂದುಕೊರತೆ, ಅಹವಾಲು ಸಲ್ಲಿಸಲು ಇದೊಂದು ವೇದಿಕೆಯಾಗಿದೆ. ಫೋನ್ ಇನ್ ಕಾರ್ಯಕ್ರಮದ ವಿವರ ಮತ್ತು ಫೋನ್ ನಂಬರ್ ಇಲ್ಲಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ಜಲ ಮಂಡಳಿ ಫೋನ್ ಇನ್ ಕಾರ್ಯಕ್ರಮ ಇಂದು ಬೆಳಗ್ಗೆ 9.30ಕ್ಕೆ ನಡೆಯಲಿದ್ದು, ಕುಂದುಕೊರತೆ, ಅಹವಾಲುಗಳನ್ನು ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಆಲಿಸಲಿದ್ದಾರೆ.
ಬೆಂಗಳೂರು ಜಲ ಮಂಡಳಿ ಫೋನ್ ಇನ್ ಕಾರ್ಯಕ್ರಮ ಇಂದು ಬೆಳಗ್ಗೆ 9.30ಕ್ಕೆ ನಡೆಯಲಿದ್ದು, ಕುಂದುಕೊರತೆ, ಅಹವಾಲುಗಳನ್ನು ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಆಲಿಸಲಿದ್ದಾರೆ.

ಬೆಂಗಳೂರು: ನಾಗರಿಕರು ತಮ್ಮ ಕುಡಿಯುವ ನೀರಿನ ಸಮಸ್ಯೆಗಳು, ಒಳಚರಂಡಿ ಪೈಪ್ ಮತ್ತು ಮ್ಯಾನ್‌ಹೋಲ್ ಸೋರಿಕೆ ಸಮಸ್ಯೆಗಳು, ಮೀಟರ್ ಮತ್ತು ಬಿಲ್ಲಿಂಗ್ ಸಮಸ್ಯೆಗಳ ಬಗ್ಗೆ ಚರ್ಚಿಸುವುದಕ್ಕೆ ಅನುಕೂಲವಾಗುವಂತೆ ಇಂದು (ಮೇ 17) ಬೆಂಗಳೂರು ಜಲ ಮಂಡಳಿಯ ನೇರ ಫೋನ್ ಇನ್ ಕಾರ್ಯಕ್ರಮ (BWSSB Phone In Program Today) ನಡೆಯಲಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ನೇರವಾಗಿ ಫೋನ್ ಕರೆ ಸ್ವೀಕರಿಸಿ ನಾಗರಿಕರ ಅಹವಾಲುಗಳನ್ನು ಆಲಿಸಿ ಸ್ಪಂದಿಸಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಈ ಫೋನ್ ಇನ್ ಕಾರ್ಯಕ್ರಮ ಬೆಳಿಗ್ಗೆ 9:30 ರಿಂದ 10:30 ರವರೆಗೆ ನಡೆಯಲಿದೆ. ನಾಗರಿಕರು ತಮ್ಮ ವಲಯ/ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಮತ್ತು ಒಳಚರಂಡಿ ಕೊಳವೆ/ಇಳಿ ಗುಂಡಿಯಿಂದ ತ್ಯಾಜ್ಯ ನೀರು ಹೊರಬರುತ್ತಿರುವುದು, ಜಲಮಾಪನ ಹಾಗೂ ನೀರಿನ ಬಿಲ್ಲಿನ ಸಮಸ್ಯೆಯನ್ನು ಕುರಿತು ನೇರವಾಗಿ ಅಧ್ಯಕ್ಷರೊಂದಿಗೆ ಮಾತನಾಡಿ ಕುಂದು ಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು. ಸಾರ್ವಜನಿಕರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ; 080-22945119 ಮತ್ತು 080-22229639.

ಈಜುಕೊಳದಲ್ಲಿ ನೀರು ಬಳಕೆಗೆ ಹೇರಿದ್ದ ನಿಷೇಧ ಸಡಿಲಿಸಿದ ಜಲಮಂಡಳಿ

ಈಜುಕೊಳಗಳ ಮಾಲೀಕರು ಮತ್ತು ಈಜು ಪ್ರಿಯರಿಗೆ ಗುಡ್ ನ್ಯೂಸ್. ಈಜುಕೊಳದ ಬಳಕೆಗೆ ಹೇರಲಾಗಿದ್ದ ನಿಷೇಧವನ್ನು ಬೆಂಗಳೂರು ಜಲಮಂಡಳಿ ಸಡಿಲಿಸಿದೆ. ಇನ್ನು ಮುಂದೆ ನೀವು ಧಾರಾಳವಾಗಿ ಈಜುಕೊಳಗಳಲ್ಲಿ ಈಜಾಡಬಹುದು, ಕಲಿಯುವವರು ಕಲಿಯಬಹುದು.

ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಅಪಾರ್ಟ್‌ಮೆಂಟ್‌ ಮಾಲೀಕರ ಸಂಘಗಳು ಹಾಗೂ ಕ್ರೀಡಾ ಸಂಸ್ಥೆಗಳು ಈಜು ಕೊಳಗಳ ಮೇಲೆ ಹೇರಿದ್ದ ನಿಷೇಧವನ್ನು ಸಡಿಲಿಸುವಂತೆ ಜಲಮಂಡಳಿಗೆ ಮನವಿ ಸಲ್ಲಿಸಿದ್ದವು. ಸಾಧಕ ಬಾಧಕಗಳನ್ನು ಪರಿಶೀಲಿಸಿದ ನಂತರ ಜಲಮಂಡಳಿ ಕೆಲವು ಷರತ್ತುಗಳನ್ನು ಅನ್ವಯಿಸಿ ನಿಷೇಧವನ್ನು ಸಡಿಲಿಸಿದೆ.

ಬೆಂಗಳೂರು ನಗರದಲ್ಲಿ ನೀರನ್ನು ಪೋಲು ಮಾಡುವುದನ್ನ ತಡೆಗಟ್ಟುವ ಉದ್ದೇಶದಿಂದ ಈಜುಕೊಳದ ಬಳಕೆಗೆ ಹೇರಲಾಗಿದ್ದ ನಿಷೇಧವನ್ನು ಬೆಂಗಳೂರು ಜಲಮಂಡಳಿ ಸಡಿಲಿಸಿದೆ.

ಈಜುಕೊಳದಲ್ಲಿ ನೀರು ಬಳಕೆಗೆ ಷರತ್ತುಗಳಿವು

ಯಾವುದೇ ಕಾರಣಕ್ಕೂ ಈಜುಕೊಳಗಳಿಗೆ ಕಾವೇರಿ ನೀರನ್ನು ಬಳಸುವಂತಿಲ್ಲ. ಮಳೆ ನೀರು ಅಥವಾ ಕೊಳವೆ ಬಾವಿ ನೀರನ್ನು ಮಾತ್ರ ಬಳಸಬಹುದಾಗಿದೆ. ಈಜುಕೊಳಗಳಿಗೆ ನೀರನ್ನು ಶುದ್ದೀಕರಿಸುವ ಯಂತ್ರವನ್ನು ಅಳವಡಿಸಿಕೊಂಡು ನೀರನ್ನು ಮರುಬಳಕೆ ಮಾಡಬೇಕು. ತಮ್ಮ ಸಮುಚ್ಚಯದಲ್ಲಿ ಕಡ್ಡಾಯವಾಗಿ ಕೊಳವೆ ಬಾವಿ ಅಕ್ಕಪಕ್ಕದಲ್ಲಿ ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಿರಬೇಕು. ಎಲ್ಲಾ ಟ್ಯಾಪ್‌ಗಳಿಗೆ ಕಡ್ಡಾಯವಾಗಿ ಏರಿಯೇಟರ್‌ ಅಳವಡಿಸಿಕೊಂಡಿರಬೇಕು ಹಾಗೂ ಕುಡಿಯಲು ಹೊರತುಪಡಿಸಿ ಅನ್ಯ ಉದ್ದೇಶಗಳಿಗೆ ( ತೋಟಗಾರಿಕೆ ಇತ್ಯಾದಿ)‌ ಗೆ ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನು ಬಳಸಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

ಒಂದು ವೇಳೆ ಈಜುಕೊಳಗಳಿಗೆ ಕಾವೇರಿ ನೀರು ಬಳಕೆ ಮಾಡುವುದು ಕಂಡಬಂದಲ್ಲಿ ಜಲಮಂಡಳಿ ಕಾಯ್ದೆ 1964 ರ ಕಲಂ 109 ಅನ್ವಯ 5,000 ರೂ.ಗಳ ದಂಡ ವಿಧಿಸಲಾಗುವುದು. ಈ ಉಲ್ಲಂಘನೆ ಮರುಕಳಿಸಿದಲ್ಲಿ ದಂಡದ ಜೊತೆಗೆ ಹೆಚ್ಚುವರಿಯಾಗಿ ಪ್ರತಿದಿನಕ್ಕೂ ರೂ. 500 ದಂಡವನ್ನು ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ನೀರಿನ ಸಂಪರ್ಕ ಹೊಂದಿರುವ ಗ್ರಾಹಕರು ತಮ್ಮ ಆರ್.ಆರ್.ಸಂಖ್ಯೆಯನ್ನು ತಿಳಿಸಿ ದೂರು ನೀಡಬಹುದಾಗಿದೆ.

(ವರದಿ- ಎಚ್. ಮಾರುತಿ, ಬೆಂಗಳೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024