ಬೆಂಗಳೂರು ಗಡಿಯ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಮಿಳುನಾಡು ಸಿದ್ದತೆ, ಒಪ್ಪಂದ ಉಲ್ಲಂಘನೆ ಕುರಿತು ತುಟಿಬಿಚ್ಚದ ಬಿಐಎಎಲ್‌
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಗಡಿಯ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಮಿಳುನಾಡು ಸಿದ್ದತೆ, ಒಪ್ಪಂದ ಉಲ್ಲಂಘನೆ ಕುರಿತು ತುಟಿಬಿಚ್ಚದ ಬಿಐಎಎಲ್‌

ಬೆಂಗಳೂರು ಗಡಿಯ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಮಿಳುನಾಡು ಸಿದ್ದತೆ, ಒಪ್ಪಂದ ಉಲ್ಲಂಘನೆ ಕುರಿತು ತುಟಿಬಿಚ್ಚದ ಬಿಐಎಎಲ್‌

ಬೆಂಗಳೂರು ಗಡಿಯ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಮಿಳುನಾಡು ಸಿದ್ದತೆ; ಒಪ್ಪಂದದ ಪ್ರಕಾರ ಹೊಸೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಮಾಡುವಂತಿಲ್ಲ., ಆದರೂ ತುಟಿ ಬಿಚ್ಚದ ಬಿಐಎಎಲ್‌ (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ಗಡಿಯ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಮಿಳುನಾಡು ಸಿದ್ದತೆ, ಒಪ್ಪಂದ ಉಲ್ಲಂಘನೆ ಕುರಿತು ತುಟಿಬಿಚ್ಚದ ಬಿಐಎಎಲ್‌
ಬೆಂಗಳೂರು ಗಡಿಯ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಮಿಳುನಾಡು ಸಿದ್ದತೆ, ಒಪ್ಪಂದ ಉಲ್ಲಂಘನೆ ಕುರಿತು ತುಟಿಬಿಚ್ಚದ ಬಿಐಎಎಲ್‌

ಬೆಂಗಳೂರು: ನಾಗರೀಕ ವಿಮಾನಯಾನ ಸಚಿವಾಲಯ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ 2004ರಲ್ಲಿ ಏರ್ಪಟ್ಟಿರುವ ಒಪ್ಪಂದದ ಪ್ರಕಾರ ವಿಮಾನ ನಿಲ್ದಾಣದ 150 ಕಿಮೀ ವಾಯು ಪ್ರದೇಶದ ಸುತ್ತಮುತ್ತ ಯಾವುದೆ ವಿಮಾನ ನಿಲ್ದಾಣವನ್ನು ನಿರ್ಮಿಸುವಂತಿಲ್ಲ.

ಕೆಐಎ 2023ರ ಮೇ ತಿಂಗಳಲ್ಲಿ ತನ್ನ 25ನೇ ವಾರ್ಷಕೋತ್ಸವವನ್ನು ಆಚರಣೆ ಶುರುಮಾಡಿದ ಈ ಹೊತ್ತಿನಲ್ಲೇ ತಮಿಳುನಾಡು ಸರ್ಕಾರ ಕರ್ನಾಟಕದ ಗಡಿಯಲ್ಲಿರುವ ಹೊಸೂರು ಸಮೀಪ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಯೋಜನೆ ರೂಪಿಸುತ್ತಿದೆ.

ಹೊಸೂರು ಬಳಿ ತಮಿಳುನಾಡು ವಿಮಾನ ನಿಲ್ಧಾಣಕ್ಕೆ ಸಿದ್ಧತೆ

ಈ ಹಿಂದೆ ನಡೆದಿರುವ ಒಪ್ಪಂದದ ಪ್ರಕಾರ ದೇವನಹಳ್ಳಿಯ ಕೆಐಎ ತನ್ನ ಕಾರ್ಯಾರಂಭ ಮಾಡಿದ ದಿನಾಂಕದಿಂದ 25ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುವುದಕ್ಕೂ ಮುನ್ನ ಕೇಂದ್ರ ಸರ್ಕಾರ ಈಗಾಗಲೇ ಅಸ್ತಿತ್ವದಲ್ಲಿರುವ ಅಥವಾ ಹೊಸ ವಿಮಾನ ನಿಲ್ದಣವನ್ನು ಸ್ಥಾಪಿಸಲು ಅಥವಾ ಸುಧಾರಿಸಲು ಅಥವಾ ಉನ್ನತೀಕರಿಸಲು ವಾಯುನೆಲೆಯ 150 ಕಿಮೀ ವ್ಯಾಪ್ತಿಯಲ್ಲಿ ಅನುಮತಿ ನೀಡುವುದಿಲ್ಲ ಎಂದೂ ಸ್ಪಷ್ಟವಾಗಿ ಹೇಳಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2008 ಮೇ ತಿಂಗಳಿನಿಂದ ಕಾರ್ಯಾರಂಭ ಮಾಡಿದೆ. ಜೊತೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ಗೆ ದೇಶೀಯ ವಿಮಾನಗಳ ಹಾರಾಟ ನಡೆಸುವ ಸಂಪೂರ್ಣ ಅಧಿಕಾರವನ್ನು ನೀಡಿದೆ.

ಮೈಸೂರು ಮತ್ತು ಹಾಸನ ವಿಮಾನ ನಿಲ್ದಾಣಗಳನ್ನು ಹೊರತುಪಡಿಸಿ ಯಾವುದೇ ಹೊಸ, ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು, ಸುಧಾರಿಸಲು ಅಥವಾ ಉನ್ನತೀಕರಿಸಲು ಭಾರತ ಸರ್ಕಾರ ಅನುಮತಿ ನಿಡುವುದಿಲ್ಲ ಎಂಬ ಅಂಶವೂ ಒಪ್ಪಂದಲ್ಲಿದೆ.

ಒಂದು ವೇಳೆ ಕೆಐಎ ವ್ಯಾಪ್ತಿಯ ವಾಯುನೆಲೆಯಿಂದ 150 ಕಿಮೀ ವ್ಯಾಪ್ತಿಯಲ್ಲಿ ವಾಣಿಜ್ಯ ಉದ್ಧೇಶಗಳಿಗೆ ವಿಮಾನ ನಿಲ್ದಾಣವನ್ನು ಆರಂಭಿಸಲು ಕೆಐಎ ವತಿಯಿಂದ ಪ್ರಮಾಣ ಪತ್ರವನ್ನು ಪಡೆಯಬೇಕಾಗುತ್ತದೆ. ಎಚ್ಎಎಲ್‌ ವಿಮಾನ ನಿಲ್ದಾಣದಿಂದ ವಾಣಿಜ್ಯ ವಿಮಾನಗಳ ಹಾರಾಟಕ್ಕೆ ಬಿಐಎಎಲ್‌ ಅನುಮತಿ ನಿರಾಕರಿಸಿರುವ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಕೆಐಎ ಆರಂಭಗೊಳ್ಳುವುದಕ್ಕೂ ಮುನ್ನ ಎಚ್‌ ಎ ಎಲ್‌ ನಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ನಡೆಯುತ್ತಿತ್ತು.

ಕರ್ನಾಟಕ ಸರ್ಕಾರದಿಂದ ಮಹತ್ವದ ಸಭೆ, ಎರಡನೇ ವಿಮಾನ ನಿಲ್ದಾಣದ ಚಿಂತನೆ

ಕಳೆದ ವಾರವಷ್ಟೇ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ಆರಂಭ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ಈ ಸಂಬಂಧ ಸಾಧ್ಯಾಸಾಧ್ಯತೆಗಳ ವರದಿಯನ್ನು ಸಲ್ಲಿಸಲು ಮೂಲಸೌಕರ್ಯ ಅಭಿವೃದ್ದಿ ಇಲಾಖೆಗೆ ಸೂಚನೆ ನೀಡಿದ್ದಾರೆ. 2033ರ ವೇಳೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತನ್ನ ಸಾಮರ್ಥ್ಯವನ್ನು ತಲುಪುವ ನಿರೀಕ್ಷೆ ಇದ್ದು ರಾಜ್ಯ ಸರ್ಕಾರ 2ನೇ ವಿಮಾನ ನಿಲ್ದಾಣಕ್ಕೆ ಸಿದ್ದತೆಗಳನ್ನು ಆರಂಭಿಸಿದೆ.

ಗುರುವಾರವಷ್ಟೇ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ವಿಧಾನಸಭೆಯಲ್ಲಿ ಹೊಸೂರಿನಲ್ಲಿ ಹಸಿರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸುವುದಾಗಿ ತಿಳಿಸಿದ್ದರು.

ಹೊಸೂರು ವಿಮಾನ ನಿಲ್ದಾಣಕ್ಕೆ ವಾರ್ಷಿಕ 3 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವಿರುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಹೊಸೂರಿನಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಎಲೆಕ್ಟ್ರಿಕ್‌ ವಾಹನಗಳ ತಯಾರಿಕೆಯಲ್ಲಿ ಸಾಕಷ್ಟು ಬಂಡವಾಳ ಹರಿದು ಬರುತ್ತಿದೆ. ಆಧುನಿಕ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಹೊಸೂರನ್ನು ಪ್ರಮುಖ ಆರ್ಥಿಕ ಬೆಳವಣಿಗೆಯ ಕೇಂದ್ರವನ್ನಾಗಿ ರೂಪಿಸಲಾಗುತ್ತಿದೆ ಎಂದೂ ವಿವರಿಸಿದ್ದರು.

2021ರ ಡಿಸೆಂಬರ್‌ ನಲ್ಲೇ ಟೆಂಡರ್‌ ಆಹ್ವಾನಿಸಿ ವರದಿ ನೀಡಲು ಕಂಪನಿಯೊಂದಕ್ಕೆ ಗುತ್ತಿಗೆ ನೀಡಿದೆ. ಹೊಸೂರಿನಲ್ಲಿ ಅಶೋಕಾ ಲೇಲ್ಯಾಂಡ್‌, ಟೈಟಾನ್‌, ಟಿವಿಎಸ್‌, ಕ್ಯಾಟರ್‌ ಪಿಲ್ಲರ್‌, ಸುಂದರಂ, ಓಲಾ ಮೊದಲಾದ ಬೃಹತ್‌ ಉದ್ದಿಮೆಗಳು ಸ್ಥಾಪನೆಯಾಗಿವೆ. ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಯಾಗಿವೆ.

(ವರದಿ- ಎಚ್. ಮಾರುತಿ, ಬೆಂಗಳೂರು)

Whats_app_banner