ಕನ್ನಡ ಸುದ್ದಿ  /  ಕರ್ನಾಟಕ  /  ರೇಣುಕಾಸ್ವಾಮಿ ಹತ್ಯೆ ಕೇಸ್; ಮೊದಲು ಹಲ್ಲೆ ನಡೆಸಿದ್ದನ್ನು ಒಪ್ಪಿಕೊಂಡ ದರ್ಶನ್ ತೂಗುದೀಪ ಗೆಳತಿ ಪವಿತ್ರಾ ಗೌಡ, ತಪ್ಪೊಪ್ಪಿಗೆ ಹೇಳಿಕೆ - ವರದಿ

ರೇಣುಕಾಸ್ವಾಮಿ ಹತ್ಯೆ ಕೇಸ್; ಮೊದಲು ಹಲ್ಲೆ ನಡೆಸಿದ್ದನ್ನು ಒಪ್ಪಿಕೊಂಡ ದರ್ಶನ್ ತೂಗುದೀಪ ಗೆಳತಿ ಪವಿತ್ರಾ ಗೌಡ, ತಪ್ಪೊಪ್ಪಿಗೆ ಹೇಳಿಕೆ - ವರದಿ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ನ ವಿಸ್ತೃತ ತನಿಖೆ ಮುಂದುವರಿದಿದೆ. ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ, ಮೊದಲು ಹಲ್ಲೆ ನಡೆಸಿದ್ದನ್ನು ಒಪ್ಪಿಕೊಂಡಿರುವುದಾಗಿ ವರದಿಗಳು ಹೇಳಿವೆ. ಇದಕ್ಕೆ ಬಳಸಿದ ಚಪ್ಪಲಿ ಮತ್ತು ಇತರೆ ಸಾಕ್ಷ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಕೇಸ್; ಮೊದಲು ಹಲ್ಲೆ ನಡೆಸಿದ್ದನ್ನು ಒಪ್ಪಿಕೊಂಡ ದರ್ಶನ್ ತೂಗುದೀಪ ಗೆಳತಿ ಪವಿತ್ರಾ ಗೌಡ, ತಪ್ಪೊಪ್ಪಿಗೆ ಹೇಳಿಕೆ
ರೇಣುಕಾಸ್ವಾಮಿ ಹತ್ಯೆ ಕೇಸ್; ಮೊದಲು ಹಲ್ಲೆ ನಡೆಸಿದ್ದನ್ನು ಒಪ್ಪಿಕೊಂಡ ದರ್ಶನ್ ತೂಗುದೀಪ ಗೆಳತಿ ಪವಿತ್ರಾ ಗೌಡ, ತಪ್ಪೊಪ್ಪಿಗೆ ಹೇಳಿಕೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಗೆಳತಿ ಪವಿತ್ರಾ ಗೌಡ ಅವರು ಹಲ್ಲೆ ನಡೆಸಲು ಬಳಸಿದ ಚಪ್ಪಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಪೊಲೀಸರು ಭಾನುವಾರ ರಾಜರಾಜೇಶ್ವರಿನಗರದ ಕೆಂಚೇನಹಳ್ಳಿಯಲ್ಲಿರುವ ಪವಿತ್ರಾ ಗೌಡ ಅವರ ಮನೆಯಿಂದ ಈ ಚಪ್ಪಲಿಯನ್ನು ವಶಪಡಿಸಿಕೊಂಡರು.

ಪವಿತ್ರಾ ಗೌಡ ಅವರು ನೀಡಿದ ತಪ್ಪೊಪ್ಪಿಗೆ ಹೇಳಿಕೆ ಪ್ರಕಾರ, ರೇಣುಕಾಸ್ವಾಮಿ ಮೇಲೆ ಮೊದಲು ಹಲ್ಲೆ ನಡೆಸಿದ್ದೇ ಅವರು. ತನ್ನ ಚಪ್ಪಲಿ ತಗೊಂಡು ಮನಸೋ ಇಚ್ಛೆ ಬಾರಿಸಿದ ಬಳಿಕ ಇತರರು ಆತನ ಮೇಲೆ ಪಟ್ಟಣಗೆರೆಯ ಮುಟ್ಟುಗೋಲು ಹಾಕಿದ ವಾಹನಗಳ ಶೆಡ್‌ನಲ್ಲಿ ಹಲ್ಲೆ ನಡೆಸಿದ್ದಾರೆ. ಇದು ಜೂನ್ 8 ರಂದು ನಡೆಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಕೇಸ್‌ನಲ್ಲಿ ಪವಿತ್ರಾ ಗೌಡ, ನಟ ದರ್ಶನ್ ತೂಗುದೀಪ ಮತ್ತು ಇತರೆ 17 ಜನರು ಬಂಧಿತರಾಗಿದ್ದಾರೆ.

ಸ್ಥಳಮಹಜರು ವೇಳೆ ಪವಿತ್ರಾ ಗೌಡ ಮನೆಯಿಂದ ಸಾಕ್ಷ್ಯ ಸಂಗ್ರಹ

ಪವಿತ್ರಾ ಗೌಡ ಅವರನ್ನೂ ಕರೆದೊಯ್ದು ಮನೆಯ ಸ್ಥಳಮಹಜರು ನಡೆಸಿದ ಪೊಲೀಸರು ಅಲ್ಲಿಂದಲೂ ಸಾಕ್ಷ್ಯ ಸಂಗ್ರಹ ಮಾಡಿದ್ದಾರೆ. ಘಟನೆ ನಡೆದ ದಿನ ಪವಿತ್ರಾ ಗೌಡ ಧರಿಸಿದ್ದ ಬಟ್ಟೆ, ಚಪ್ಪಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಪವಿತ್ರಾ ಗೌಡ ಅವರ ಮೂರು ಮಹಡಿ ಮನೆಯ ಮೊದಲ ಎರಡು ಮಹಡಿಗಳನ್ನು ಪವಿತ್ರಾ ಬಳಸಿದರೆ, ಕೆಳ ಮಹಡಿಯನ್ನು ಇನ್ನೊಬ್ಬ ಆರೋಪಿ ಪವನ್ ಬಳಸುತ್ತಿದ್ದ. ಪವನ್ ಮನೆಯಲ್ಲೂ ಪೊಲೀಸರು ಶೋಧ ನಡೆಸಿ ಸಾಕ್ಷ್ಯ ಸಂಗ್ರಹಿಸಿದರು.

ಟ್ರೆಂಡಿಂಗ್​ ಸುದ್ದಿ

ಆರೋಪಿಗಳಾದ ಪಟ್ಟಣಗೆರೆ ವಿನಯ್, ಆರ್‌ ಆರ್ ನಗರ ಬಿಇಎಂಎಲ್‌ ಲೇಔಟ್‌ನ ದೀಪಕ್‌ ಅವರ ಮನೆಗಳಲ್ಲೂ ಪೊಲೀಸರು ಶೋಧ ನಡೆಸಿ ಸಾಕ್ಷ್ಯ ಸಂಗ್ರಹಿಸಿದರು. ಎಲ್ಲರ ಮನೆಯಲ್ಲು ಅವರು ಘಟನೆಯ ದಿನ ಬಳಸಿದ ಬಟ್ಟೆಗಳು ಹಾಗೆಯೇ ಇದ್ದವು. ಕೃತ್ಯವೆಸಗಿದ ಬಳಿಕ ಅವರು ಆರ್‌ಆರ್ ನಗರದ ಟ್ರೆಂಡ್ಸ್‌ಗೆ ಹೋಗಿ ಹೊಸ ಉಡುಪು ಖರೀದಿಸಿಕೊಂಡು ಬಂದು ಧರಿಸಿದ್ದರು. ಅಷ್ಟೇ ಅಲ್ಲ, ಸಮೀಪದ ದೇವಸ್ಥಾನಕ್ಕೂ ಹೋಗಿದ್ದರು ಎಂದು ಮೂಲಗಳು ತಿಳಿಸಿವೆ.

ತಂದೆಯ ಅಂತ್ಯಕ್ರಿಯೆಯಲ್ಲಿ ಅನುಕುಮಾರ್ ಭಾಗಿ, ಸ್ಥಳ ಮಹಜರು

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ಪೈಕಿ ಚಿತ್ರದುರ್ಗದವರೇ ಆದ ಅನುಕುಮಾರ್‌ ಅವರ ತಂದೆ ಶುಕ್ರವಾರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು. ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅನುಕುಮಾರ್ ಅವರನ್ನು ಕರೆದೊಯ್ದ ಪೊಲೀಸರು ಭಾನುವಾರ ತನಕ ಅಲ್ಲೇ ಇದ್ದು ಸ್ಥಳಮಹಜರು ಮುಗಿಸಿದರು. ಅಲ್ಲಿದ್ದ ಸಾಕ್ಷ್ಯಗಳನ್ನು ಕಲೆಹಾಕಿದರು.

ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಅವರ ದೊಡ್ಡಪೇಟೆಯಲ್ಲಿರುವ ಮನೆ ಹೋದ ಪೊಲೀಸರು ಅಲ್ಲಿಂದ ಚಿನ್ನಾಭರಣ, ನಗದು ಹಣವನ್ನು ವಶಪಡಿಸಿಕೊಂಡರು. ಟ್ಯಾಕ್ಸಿ ಚಾಲಕ ರವಿಶಂಕರ್ ಮನೆಗೂ ಹೋದ ಪೊಲೀಸರು ಅಲ್ಲಿಂದಲೂ ಸಾಕ್ಷ್ಯ ಕಲೆಹಾಕಿದರು. ಈ ಪ್ರಕರಣದಲ್ಲಿ ರೇಣುಕಾಸ್ವಾಮಿಯ ಮೊಬೈಲ್ ಫೋನ್ ಇನ್ನೂ ಪತ್ತೆಯಾಗಿಲ್ಲ.

ಪವಿತ್ರಾ ಗೌಡ, ದರ್ಶನ್ ಸೇರಿ ಕೇಸ್‌ನ 11 ಆರೋಪಿಗಳಿಗೆ ಜೂನ್ 20ರ ತನಕ ನ್ಯಾಯಾಂಕ ಬಂಧನ ವಿಧಿಸಲಾಗಿದೆ.