Namma Metro; ಸರ್ಜಾಪುರ ಹೆಬ್ಬಾಳ ಮೆಟ್ರೋ ಮಾರ್ಗ ಬೇಗ ಪೂರ್ಣಗೊಳಿಸಲು ಒತ್ತಾಯಿಸಿ 10000 ಸಹಿ ಸಂಗ್ರಹದ ಎಸ್‌ಒಎಸ್‌ ಅಭಿಯಾನ-bengaluru news citizens rally for metro relief 10000 sign petition urging speedy completion of sarjapur hebbal line uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Namma Metro; ಸರ್ಜಾಪುರ ಹೆಬ್ಬಾಳ ಮೆಟ್ರೋ ಮಾರ್ಗ ಬೇಗ ಪೂರ್ಣಗೊಳಿಸಲು ಒತ್ತಾಯಿಸಿ 10000 ಸಹಿ ಸಂಗ್ರಹದ ಎಸ್‌ಒಎಸ್‌ ಅಭಿಯಾನ

Namma Metro; ಸರ್ಜಾಪುರ ಹೆಬ್ಬಾಳ ಮೆಟ್ರೋ ಮಾರ್ಗ ಬೇಗ ಪೂರ್ಣಗೊಳಿಸಲು ಒತ್ತಾಯಿಸಿ 10000 ಸಹಿ ಸಂಗ್ರಹದ ಎಸ್‌ಒಎಸ್‌ ಅಭಿಯಾನ

Sarjapur Hebbal Metro Line; ಬೆಂಗಳೂರಿನ ಸರ್ಜಾಪುರ ಹೆಬ್ಬಾಳ ಮೆಟ್ರೋ ಮಾರ್ಗ ಬೇಗ ಪೂರ್ಣಗೊಳಿಸಲು ಒತ್ತಾಯಿಸಿ 10000 ಸಹಿ ಸಂಗ್ರಹದ ಎಸ್‌ಒಎಸ್‌ (ಸೇವ್ ಅವರ್ ಸರ್ಜಾಪುರ) ಅಭಿಯಾನ ಪ್ರಗತಿಯಲ್ಲಿದೆ. ಸರ್ಜಾಪುರ ಮೆಟ್ರೋ ಮಾರ್ಗದ ಸಮಗ್ರ ಅಭಿವೃದ್ಧಿಯ ಕಾಳಜಿ ವ್ಯಕ್ತವಾಗಿದ್ದು, ಅದರ ವಿವರ ಇಲ್ಲಿದೆ.

ಸರ್ಜಾಪುರ ಹೆಬ್ಬಾಳ ಮೆಟ್ರೋ ಮಾರ್ಗ ಬೇಗ ಪೂರ್ಣಗೊಳಿಸಲು ಒತ್ತಾಯಿಸಿ, ಆನ್‌ಲೈನ್ ಮೂಲಕ 10000 ಸಹಿ ಸಂಗ್ರಹದ ಎಸ್‌ಒಎಸ್‌ ಅಭಿಯಾನ ನಡೆಯುತ್ತಿದೆ.
ಸರ್ಜಾಪುರ ಹೆಬ್ಬಾಳ ಮೆಟ್ರೋ ಮಾರ್ಗ ಬೇಗ ಪೂರ್ಣಗೊಳಿಸಲು ಒತ್ತಾಯಿಸಿ, ಆನ್‌ಲೈನ್ ಮೂಲಕ 10000 ಸಹಿ ಸಂಗ್ರಹದ ಎಸ್‌ಒಎಸ್‌ ಅಭಿಯಾನ ನಡೆಯುತ್ತಿದೆ.

ಬೆಂಗಳೂರು: ಕ್ಷಿಪ್ರ ನಗರೀಕರಣ ಮತ್ತು ಸರ್ಜಾಪುರದ ಸುತ್ತಮುತ್ತಲಿನ ಹೊಸ ಬೆಳವಣಿಗೆಗಳ ಕಾರಣ ಈ ಭಾಗದಲ್ಲಿ ಟ್ರಾಫಿಕ್ ದಟ್ಟಣೆಯನ್ನು ಹೆಚ್ಚಿಸಿದೆ. ಹೊಸ ಕಚೇರಿಗಳು ಮತ್ತು ವಸತಿ ಕಟ್ಟಡಗಳಿಂದಾಗಿ ಸರ್ಜಾಪುರ ರಸ್ತೆಯಲ್ಲಿ ನಿತ್ಯದ ಪ್ರಯಾಣ ಕಷ್ಟಕರವಾಗುವಂತೆ ಮಾಡಿದೆ. ಹೀಗಾಗಿ, ಸೇವ್ ಅವರ್ ಸರ್ಜಾಪುರ (ಎಸ್‌ಒಎಸ್) ಗುಂಪು 3ಎ ಹಂತದ ಸರ್ಜಾಪುರ-ಹೆಬ್ಬಾಳ ಮೆಟ್ರೋ ಮಾರ್ಗದ ಬಿಕ್ಕಟ್ಟನ್ನು ನಿವಾರಿಸುವುದಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಆನ್‌ಲೈನ್‌ ಸಹಿ ಸಂಗ್ರಹ ಅಭಿಯಾನ ಶುರುಮಾಡಿದೆ.

3ಎ ಹಂತದ ಮೆಟ್ರೋ ಕಾಮಗಾರಿ ಶೀಘ್ರ ಪ್ರಗತಿ, ಸೂಲಿಕುಂಟೆ ನಿಲ್ದಾಣ ಮರುಸ್ಥಾಪನೆ, ಜುನ್ನಸಂದ್ರ/ಹಾಲನಾಯಕನಹಳ್ಳಿಯಲ್ಲಿ ಹೊಸ ನಿಲ್ದಾಣ ಸೇರ್ಪಡೆ, ಸರ್ಜಾಪುರ ರಸ್ತೆಯ ಫುಟ್‌ಪಾತ್‌ಗಳ ಅಭಿವೃದ್ಧಿಗೆ ಆಗ್ರಹಿಸಿ ಮನವಿ ಸಲ್ಲಿಸಲು ಸರ್ಜಾಪುರ ರಸ್ತೆಯ ನಾಗರಿಕರುತೀರ್ಮಾನಿಸಿದ್ದಾರೆ.

ಸರ್ಕಾರಕ್ಕೆ ಮನವಿ ಸಲ್ಲಿಸಲು 10,000 ಜನರ ಸಹಿ ಸಂಗ್ರಹಕ್ಕೆ ಆನ್‌ಲೈನ್ ಅಭಿಯಾನ

ಈ ಆನ್‌ಲೈನ್‌ ಸಹಿ ಸಂಗ್ರಹ ಅಭಿಯಾನವು Jhatkaa.org ನಲ್ಲಿ ನಡೆಯುತ್ತಿದ್ದು, ಸದ್ಯದ ಮಾಹಿತಿ ಪ್ರಕಾರ 10,00 ಸಹಿ ಸಂಗ್ರಹದ ಗುರಿಯಲ್ಲಿ 5,200ಕ್ಕೂ ಹೆಚ್ಚು ಸಹಿ ಸಂಗ್ರಹವಾಗಿದೆ. ಇದು ವ್ಯಾಪಕವಾದ ಸಾರ್ವಜನಿಕ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ.

“ಬೆಂಗಳೂರಿನಲ್ಲಿ ಸರ್ಜಾಪುರ ರಸ್ತೆಯು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಲ್ಲಿ ಒಂದಾಗಿದೆ. ಹಲವಾರು ಎತ್ತರದ ಕಟ್ಟಡಗಳು ಮತ್ತು ಕಚೇರಿ ಸಂಕೀರ್ಣಗಳೊಂದಿಗೆ, ಈ 18.5 ಕಿಮೀ ಉದ್ದದಲ್ಲಿ ಹೆಚ್ಚಿನ ಜನ ಸಂಚಾರ, ವಾಹನ ಸಂಚಾರ ಇರುವ ಕಾರಿಡಾರ್ ಆಗಿ ಪರಿವರ್ತನೆಯಾಗಿದೆ. ರಸ್ತೆಯು ಪ್ರಸ್ತುತ ಅದರ ಉದ್ದೇಶಿತ ಸಾಮರ್ಥ್ಯಕ್ಕಿಂತ ಆರು ಪಟ್ಟು ಹೆಚ್ಚು ಸಂಚಾರದ ಹೊರೆಯನ್ನು ಕಾರ್ಯನಿರ್ವಹಿಸುತ್ತಿದೆ, ಐಟಿ ಜನಸಂಖ್ಯೆಯ ಕಾರಣದಿಂದಾಗಿ ಪ್ರತಿದಿನ 1,500 ಖಾಸಗಿ ವಾಹನಗಳನ್ನು ಸೇರಿಸಲಾಗುತ್ತದೆ. ಹಂತ 3ಎ ಮೆಟ್ರೊ ಕಾಮಗಾರಿಯನ್ನು ತ್ವರಿತಗೊಳಿಸುವ ಅಗತ್ಯವು ನಿರ್ಣಾಯಕವಾಗಿದೆ " ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಹಲವಾರು ಶಿಕ್ಷಣ ಸಂಸ್ಥೆಗಳು ಮತ್ತು ಹೊಸ ಬೆಳವಣಿಗೆಗಳಿಗೆ ನೆಲೆಯಾಗಿರುವ ಸೂಲಿಕುಂಟೆ ಪ್ರದೇಶವು ಸೀಮಿತ ಸಾರ್ವಜನಿಕ ಸಾರಿಗೆ ಆಯ್ಕೆಗಳಿಂದಾಗಿ ಹೆಚ್ಚು ಕಠಿಣವಾದ ಸವಾಲುಗಳನ್ನು ಎದುರಿಸುತ್ತಿದೆ. ಈ ಸಾರಿಗೆ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ, ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ತಮ್ಮ ಕರ್ತವ್ಯಕ್ಕೆ ಸಮಯಕ್ಕೆ ಹಾಜರಾಗುವುದು ಸಾಧ್ಯವಾಗುತ್ತಿಲ್ಲ. ಇದು ಸೂಲಿಕುಂಟೆಯಲ್ಲಿ ಮೆಟ್ರೋ ನಿಲ್ದಾಣ ಬೇಕೆಂಬ ಬೇಡಿಕೆಗೆ ಬಲತುಂಬಿದೆ. ಇದು ಪ್ರಯಾಣಿಕರಿಗೆ ಪ್ರವೇಶ ಮತ್ತು ಸುರಕ್ಷತೆಯನ್ನು ಹೆಚ್ಚಿಸುತ್ತದೆ ಎಂಬುದು ಎಸ್‌ಒಎಸ್‌ ಅಭಿಯಾನದ ಸದಸ್ಯರ ಪ್ರತಿಪಾದನೆ.

3ಎ ಹಂತದ ಮೆಟ್ರೋ ಕಾಮಗಾರಿಗೆ ಆದ್ಯತೆ ನೀಡುವ ತುರ್ತು ಅಗತ್ಯವನ್ನು ಒತ್ತಿ ಹೇಳಿದ ಸೇವ್ ಅವರ್ ಸರ್ಜಾಪುರ (ಎಸ್‌ಒಎಸ್)ನ ಮುಕುಂದ್ ಕುಮಾರ್ ಅವರು, “ಈ ಕಾಮಗಾರಿಗಳನ್ನು ತ್ವರಿತಗೊಳಿಸುವುದು ಇಂದಿನ ಅಗತ್ಯವಾಗಿದೆ. ಮೆಟ್ರೋ ಸ್ಥಿತಿಯ ಕುರಿತು ಸರ್ಕಾರವು ಅಸ್ಪಷ್ಟ ನವೀಕರಣಗಳನ್ನು ಮಾತ್ರ ಒದಗಿಸಿದೆ ಮತ್ತು ನಾವು ನಿಜವಾದ ಪ್ರಗತಿಯನ್ನು ನೋಡಲು ಬಯಸುತ್ತೇವೆ. ವಿವರವಾದ ಯೋಜನಾ ವರದಿಗಾಗಿ ವಿನಂತಿಸಿದ್ದೇವೆ. ನಾವು ಬಿಎಂಆರ್‌ಸಿಎಲ್‌ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆದಿದ್ದೇವೆ. ಆದರೆ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆದಾಗ್ಯೂ, ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಾಗರಿಕರಿಗೆ ಹಕ್ಕಿದೆ ಎಂದು ಹೇಳಿದ್ದಾಗಿ ಬೆಂಗಳೂರು ಮಿರರ್‌ ವರದಿ ವಿವರಿಸಿದೆ.

ಸೂಲಿಕುಂಟೆ ಮತ್ತು ಜುನ್ನಸಂದ್ರದಲ್ಲಿ ನಮ್ಮ ಮೆಟ್ರೋ ನಿಲ್ದಾಣಗಳನ್ನು ರದ್ದುಗೊಳಿಸಿರುವ ಮೆಟ್ರೋ ಯೋಜನೆಯ ಸಂಭವನೀಯ ಬದಲಾವಣೆಗಳ ಬಗ್ಗೆ ಕುಮಾರ್ ಕಳವಳ ವ್ಯಕ್ತಪಡಿಸಿದ್ದು, “ಸೂಲಿಕುಂಟೆಯಲ್ಲಿರುವ ನಿಲ್ದಾಣವು ರಸ್ತೆ ಪ್ರಯಾಣಕ್ಕೆ ವಿಶ್ವಾಸಾರ್ಹ ಪರ್ಯಾಯವನ್ನು ನೀಡುತ್ತದೆ, ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಗಾಳಿಯ ಗುಣಮಟ್ಟವನ್ನು ಸುಧಾರಿಸುತ್ತದೆ. ಉದ್ದೇಶಿತ ಡಬಲ್ ಡೆಕ್ಕರ್ ರಸ್ತೆಯು ಪರಿಗಣನೆಯಲ್ಲಿದ್ದರೂ, ಇಬ್ಲೂರಿನಿಂದ ಸರ್ಜಾಪುರ ಮಾರ್ಗದ ಉದ್ದಕ್ಕೂ ಫುಟ್‌ಪಾತ್‌ಗಳಂತಹ ಮೂಲ ಸೌಕರ್ಯಗಳು ಇನ್ನೂ ಕೊರತೆಯಿದೆ. ನಾವು ಡಬಲ್ ಡೆಕ್ಕರ್ ಪರಿಕಲ್ಪನೆಯನ್ನು ಬೆಂಬಲಿಸುತ್ತೇವೆ ಆದರೆ, ಅಡಿಪಾಯದ ಮೂಲಸೌಕರ್ಯ ಸುಧಾರಣೆಗಳು ಆದ್ಯತೆ ಇರುವ ಅಗತ್ಯ” ಎಂದು ಹೇಳಿದ್ದಾಗಿ ವರದಿ ವಿವರಿಸಿದೆ.