ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ಆವರಣದಲ್ಲಿ ಪ್ರತಿ 7 ನಿಮಿಷಕ್ಕೆ 150 ರೂಗಳ ವಿವಾದಾತ್ಮಕ ಶುಲ್ಕ ರದ್ದು

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ಆವರಣದಲ್ಲಿ ಪ್ರತಿ 7 ನಿಮಿಷಕ್ಕೆ 150 ರೂಗಳ ವಿವಾದಾತ್ಮಕ ಶುಲ್ಕ ರದ್ದು

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವ ವಾಹನಗಳಿಗೆ ಶುಲ್ಕ ಪರಿಷ್ಕರಣೆ ಮಾಡುವ ನಿರ್ಧಾರವನ್ನು ಚಾಲಕರ ಭಾರಿ ವಿರೋಧದ ಬಳಿಕ ತಾತ್ಕಾಲಿಕವಾಗಿ ವಾಪಸ್ ಪಡೆಯಲಾಗಿದೆ.

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಆವರಣದಲ್ಲಿ ಪ್ರತಿ 7 ನಿಮಿಷಕ್ಕೆ 150 ರೂಗಳ ವಿವಾದಾತ್ಮಕ ಶುಲ್ಕವನ್ನು ಕ್ಯಾಬ್ ಚಾಲಕರ ವಿರೋಧದ ಬಲಿಕ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಆವರಣದಲ್ಲಿ ಪ್ರತಿ 7 ನಿಮಿಷಕ್ಕೆ 150 ರೂಗಳ ವಿವಾದಾತ್ಮಕ ಶುಲ್ಕವನ್ನು ಕ್ಯಾಬ್ ಚಾಲಕರ ವಿರೋಧದ ಬಲಿಕ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport) ಆವರಣದಲ್ಲಿ ಪಾರ್ಕಿಂಗ್ ಶುಲ್ಕ ಪರಿಷ್ಕರಣೆಗೆ (Bengaluru Airport Controversial Parking Fee) ಕ್ಯಾಬ್ ಹಾಗೂ ಇತರೆ ವಾಹನಗಳ ಚಾಲಕರು ಭಾರಿ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶುಲ್ಕವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಖಾಸಗಿ ಮತ್ತು ವಾಣಿಜ್ಯ ವಾಹನಗಳು ವಿಮಾನ ನಿಲ್ದಾಣದ ಆವರಣಕ್ಕೆ ಪ್ರವೇಶಿಸಲು ಹಣ ಪಾವತಿಸಬೇಕಾಗಿತ್ತು. 7 ನಿಮಿಷಕ್ಕೆ 150 ರೂಪಾಯಿ ಪಾವತಿಸಬೇಕೆಂದು ಹೊಸದಾಗಿ ಪಾರ್ಕಿಂಗ್ ಶುಲ್ಕವನ್ನು ಪರಿಷ್ಕರಣೆ ಮಾಡಲಾಗಿತ್ತು. ಆದರೆ ಇದಕ್ಕೆ ಕ್ಯಾಬ್ ಚಾಲಕ, ಇತರೆ ಖಾಸಗಿ ವಾಹನಗಳ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದರಿಂದ ಬಿಐಎಎಲ್ ಅಧಿಕಾರಿಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದು, ಶುಲ್ಕದ ನಾಮಫಲಕವನ್ನು ತೆರೆವುಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಸೋಮವಾರದಿಂದ (ಮೇ 20) ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ಪ್ರಯಾಣಿಸಲು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕೆಂದು ಎಂದು ಮೊದಲು ಪ್ರಕಟಣೆಯನ್ನು ಹೊರಡಿಸಲಾಗಿತ್ತು. ಆದರೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಕೆಲವೇ ಗಂಟೆಗಳ ನಂತರ ಈ ಹಿಂದೆ ಸರಿದಿದೆ. ಈಗ ಹಿಂತೆಗೆದುಕೊಂಡ ಆದೇಶದ ಪ್ರಕಾರ, ಓಲಾ ಮತ್ತು ಉಬರ್‌ನಂತಹ ರೈಡ್-ಹೆಯ್ಲಿಂಗ್ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ವಾಣಿಜ್ಯ ವಾಹನಗಳಿಗೆ ಏಳು ನಿಮಿಷಗಳ ಪ್ರವೇಶದ ವಿಂಡೋಗೆ 150 ರೂ. ಈ ವಾಹನಗಳು ಈ ಕಾಲಮಿತಿಯನ್ನು ಮೀರಿದ್ದರೆ, ಶುಲ್ಕವು 300 ರೂ.ಗೆ ಏರುತ್ತಿತ್ತು ಎಂದು ಪ್ರಕಟಣೆಯಲ್ಲಿ ಹೇಳಲಾಗಿತ್ತು.

ಈ ಹೊಸ ಶುಲ್ಕ ರಚನೆಯ ಉದ್ದೇಶಿತ ಅನುಷ್ಠಾನವನ್ನು ವಿಮಾನ ನಿಲ್ದಾಣದ ಟರ್ಮಿನಲ್ 1 ಮತ್ತು ಟರ್ಮಿನಲ್ 2 ಎರಡಕ್ಕೂ ನಿಗದಿಪಡಿಸಲಾಗಿತ್ತು. ಇದು ಪ್ರಯಾಣಿಕರು ಮತ್ತು ಸಾರಿಗೆ ನಿರ್ವಾಹಕರ ಮೇಲೆ ಪರಿಣಾಮ ಬೀರಿತು. ನೂತನ ಶುಲ್ಕದ ನಿರ್ಧಾರವನ್ನು ವಾಪಸ್ ಪಡೆದಿರುವುದಕ್ಕೆ ಸಾರ್ವಜನಿಕ ಆಕ್ರೋಶ, ವ್ಯವಸ್ಥಾಪನಾ ಸವಾಲುಗಳೇ ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ. ಇಂತಹ ಶುಲ್ಕಗಳನ್ನು ವಿಧಿಸಿದರೆ ಉಗ್ರ ಹೋರಾಟ ಮಾಡುವುದಾಗಿ ಕ್ಯಾಬ್ ಚಾಲಕರು ಎಚ್ಚರಿಕೆ ನೀಡಿದ್ದರು. ಸದ್ಯ ಚಾಲಕರ ಆಕ್ರೋಶಕ್ಕೆ ವಿಮಾನ ನಿಲ್ದಾಣದ ಅಧಿಕಾರಿಗಳು ಮಣಿದಂತೆ ಕಾಣುತ್ತಿದೆ.

ಬೆಂಗಳೂರು ನಗರದ ಮಧ್ಯ ಭಾಗದಿಂದ 40 ಕಿಲೋ ಮೀಟರ್ ದೂರದಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 4,700 ಎಕೆರೆಯ ವಿಸ್ತೀರ್ಣದಲ್ಲಿದೆ. 2008 ಮೇ 23 ರಂದಿಂದ ಸೇವೆಯನ್ನು ಆರಂಭಿಸಿದ್ದು, ದೇಶ ಹಾಗೂ ಹಲವಾರು ವಿದೇಶಗಳಿಗೆ ನೇರ ವಿಮಾನಯಾನ ವ್ಯವಸ್ಥೆಯನ್ನು ಹೊಂದಿದೆ. ಇದು ಭಾರತದ 3ನೇ ಅತಿ ದೊಡ್ಡ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಅತಿ ಹೆಚ್ಚು ಪ್ರಮಾಣಿಕರ ದಟ್ಟಣೆಯನ್ನು ಹೊಂದಿರುವ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ಕೂಡ ಒಂದಾಗಿದೆ. ಉತ್ತಮ ಸೇವೆ ಮೂಲಕ ಹಲವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024