45ನೇ ವಯಸ್ಸಿಗೆ ಹೃದಯಾಘಾತ; ಬೆಂಗಳೂರಿನ ಫಿಟ್ನೆಸ್‌ ಟ್ರೈನರ್‌, ಸೆಂಚುರಿ ಸೈಕ್ಲಿಸ್ಟ್‌ ಖ್ಯಾತಿಯ ಅನಿಲ್‌ ಕಡ್ಸೂರು ನಿಧನ
ಕನ್ನಡ ಸುದ್ದಿ  /  ಕರ್ನಾಟಕ  /  45ನೇ ವಯಸ್ಸಿಗೆ ಹೃದಯಾಘಾತ; ಬೆಂಗಳೂರಿನ ಫಿಟ್ನೆಸ್‌ ಟ್ರೈನರ್‌, ಸೆಂಚುರಿ ಸೈಕ್ಲಿಸ್ಟ್‌ ಖ್ಯಾತಿಯ ಅನಿಲ್‌ ಕಡ್ಸೂರು ನಿಧನ

45ನೇ ವಯಸ್ಸಿಗೆ ಹೃದಯಾಘಾತ; ಬೆಂಗಳೂರಿನ ಫಿಟ್ನೆಸ್‌ ಟ್ರೈನರ್‌, ಸೆಂಚುರಿ ಸೈಕ್ಲಿಸ್ಟ್‌ ಖ್ಯಾತಿಯ ಅನಿಲ್‌ ಕಡ್ಸೂರು ನಿಧನ

ಸೆಂಚುರಿ ಸೈಕ್ಲಿಸ್ಟ್‌ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ಮೂಲದ ಫಿಟ್ನೆಸ್‌ ಟ್ರೈನರ್‌ ಅನಿಲ್‌ ಕಡ್‌ಸೂರು ನಿನ್ನೆ (ಫೆ.4) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರಿಗೆ 45 ವರ್ಷ ವಯಸ್ಸಾಗಿತ್ತು.

ಅನಿಲ್‌ ಕಡ್ಸೂರು
ಅನಿಲ್‌ ಕಡ್ಸೂರು

ಆತ ಸೈಕ್ಲಿಸ್ಟ್‌, ಕಿಲೋಮೀಟರ್‌ಗಟ್ಟಲೆ ಸೈಕಲ್‌ ತುಳಿಯುವ ಮೂಲಕ ಫಿಟ್ನೆಸ್‌ಗೆ ಪ್ರಾಮುಖ್ಯ ನೀಡಿದವರು. ಸೈಕಲ್‌ ತುಳಿಯವ ಮೂಲಕ ಫಿಟ್ನೆಸ್‌ ಕಾಯ್ದುಕೊಳ್ಳುವ ಇವರು ಹಲವರಿಗೆ ಸ್ಫೂರ್ತಿಯಾಗಿದ್ದಾರೆ. ಫಿಟ್ನೆಸ್‌ ಟ್ರೈನರ್‌ ಆಗಿಯೂ ಇದ್ದ ಅವರು ನಿನ್ನೆ (ಫೆ.4) ನಿಧನರಾಗುತ್ತಾರೆ. ಇವರ ಸಾವಿಗೆ ಕಾರಣ ಹೃದಯಾಘಾತ.

45 ವರ್ಷ ವಯಸ್ಸಿನ ಇವರು ಪ್ರತಿದಿನ 100 ಕಿಲೋಮೀಟರ್‌ ದೂರ ಸೈಕಲ್‌ ತುಳಿಯುತ್ತಿದ್ದರು, ಆ ಮೂಲಕವೇ ದೇಶದಾದ್ಯಂತ ಖ್ಯಾತಿ ಗಳಿಸಿದ್ದರು. ಇತ್ತೀಗಷ್ಟೇ 42 ತಿಂಗಳ 100 ಕಿಲೋಮೀಟರ್‌ ಸೈಕಲ್‌ ಪಯಣವನ್ನು ಪೂರ್ಣಗೊಳಿಸಿದ ಖ್ಯಾತಿ ಅವರದ್ದು. ಸುಮಾರು 1,250 ನೂರು ಕಿಲೋಮೀಟರ್‌ ಸೈಕಲ್‌ ರೈಡ್‌ ಅನ್ನು ಪೂರ್ಣಗೊಳಿಸಿದ್ದರು.

ದುರಾದೃಷ್ಟವಶಾತ್‌, ನಮ್ಮ ಸಾಧನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ದಿನವೇ ಅವರಲ್ಲಿ ಅಸ್ವಸ್ಥತೆ ಕಾಡಿದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು.

ಸದಾ ಸಹಕಾರ ಹಾಗೂ ಬೆಂಬಲ ನೀಡುವ ಗುಣದ ವ್ಯಕ್ತಿ ಅವರಾಗಿದ್ದರು. ಇವರು ಯಾವಾಗಲೂ ಹೊಸಬರೊಂದಿಗೆ ತಮ್ಮ ಆಸಕ್ತಿ, ಹವ್ಯಾಸದ ಬಗ್ಗೆ ಹಂಚಿಕೊಳ್ಳುತ್ತಿದ್ದರು. ಇದು ಸೆಂಚುರಿ ಸೈಕ್ಲಿಂಗ್‌ ಹವ್ಯಾಸದ ಕಾರಣಕ್ಕೆ ಇವರಿಗೆ ದ್ರೋಣಾಚಾರ್ಯ ಎಂದು ಬಿರುದು ಸಿಗುವಂತೆ ಮಾಡಿತ್ತು.

2022ರ ಆಗಸ್ಟ್‌ನಲ್ಲಿ ಇವರು 10 ದಿನಗಳ 100 ಕಿಲೋಮೀಟರ್‌ ಸೈಕಲ್‌ ಪಯಣದ ಸವಾಲನ್ನು ಸ್ವೀಕರಿಸಿದ್ದರು. ಆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪದಕ ಗಳಿಸಿದ ಇತರ ಸ್ಲೈಕಿಸ್ಟ್‌ಗಳು ಅದನ್ನು ಅಲ್ಲಿಗೆ ನಿಲ್ಲಿಸಿದರೆ, ಕಡ್ಸೂರು ಅವರು ಮಾತ್ರ 100 ಕಿಲೋಮೀಟರ್‌ ಸೈಕಲ್‌ ಪಯಣವನ್ನು ದೈನಂದಿನ ದಿನಚರಿಯನ್ನಾಗಿಸಿಕೊಂಡರು. ಅತ್ಯಂತ ಶಿಸ್ತಿನಿಂದ ಅವರು ಇದನ್ನು ಪಾಲಿಸುತ್ತಿದ್ದರು. ಇವರು ಬೆಳಗಿನ ಜಾವವೇ ಸೈಕಲ್‌ ರೈಡ್‌ ಆರಂಭಿಸುತ್ತಿದ್ದರು, ಇದು ಸಾವಿರಾರು ಜನರಿಗೆ ಸ್ಫೂರ್ತಿಯಾಗಿತ್ತು.

ದೇಶದಾದ್ಯಂತ ಜನಮನ್ನಣೆ ಗಳಿಸಿದ್ದ ಇವರು ಎಂದಿಗೂ ಮಾಧ್ಯಮಗಳ ಮುಂದೆ ಮಾತನಾಡುತ್ತಿರಲಿಲ್ಲ. 643 ಸೈಕಲ್‌ ರೈಡ್‌ ಪೂರ್ಣಗೊಳಿಸಿ, ಇಟಾಲಿಯನ್‌ ಸೈಕ್ಲಿಸ್ಟ್‌ ದಾಖಲೆಯನ್ನೂ ಮೀರಿಸಿದ್ದರು. ಆದರೆ ಇವರು ತಮ್ಮ ಸಾಧನೆಯನ್ನು ಪುಸ್ತಕದಲ್ಲಿ ದಾಖಲಿಸುವ ಪ್ರಯತ್ನವನ್ನು ನಿರಾಕರಿಸಿದ್ದರು.

Whats_app_banner