ಗಗನಸಖಿಯನ್ನು ಮುಟ್ಟಿ ರೇಟ್‌ ಎಷ್ಟು ಎಂದು ಕೇಳಿದ ವಿದೇಶಿ ಪ್ರಜೆ ಬೆಂಗಳೂರಿನಲ್ಲಿ ಅರೆಸ್ಟ್
ಕನ್ನಡ ಸುದ್ದಿ  /  ಕರ್ನಾಟಕ  /  ಗಗನಸಖಿಯನ್ನು ಮುಟ್ಟಿ ರೇಟ್‌ ಎಷ್ಟು ಎಂದು ಕೇಳಿದ ವಿದೇಶಿ ಪ್ರಜೆ ಬೆಂಗಳೂರಿನಲ್ಲಿ ಅರೆಸ್ಟ್

ಗಗನಸಖಿಯನ್ನು ಮುಟ್ಟಿ ರೇಟ್‌ ಎಷ್ಟು ಎಂದು ಕೇಳಿದ ವಿದೇಶಿ ಪ್ರಜೆ ಬೆಂಗಳೂರಿನಲ್ಲಿ ಅರೆಸ್ಟ್

Bengaluru news: ಆಗಸ್ಟ್ 18 ರಂದು ಮಾಲ್ಡೀವ್ಸ್‌ನಿಂದ ಬೆಂಗಳೂರಿಗೆ ಬರ್ತಿದ್ದ ಖಾಸಗಿ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಗಗನಸಖಿ ಜೊತೆ ಅಸಭ್ಯವಾಗಿ ವರ್ತಿಸಿದ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ.

ಗಗನಸಖಿ ಜೊತೆ ಅಸಭ್ಯವಾಗಿ ವರ್ತಿಸಿದ ವಿದೇಶಿ ಪ್ರಜೆ ಬಂಧನ
ಗಗನಸಖಿ ಜೊತೆ ಅಸಭ್ಯವಾಗಿ ವರ್ತಿಸಿದ ವಿದೇಶಿ ಪ್ರಜೆ ಬಂಧನ

ಬೆಂಗಳೂರು: ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಹಾಗೂ ಅಸಭ್ಯವಾಗಿ ವರ್ತಿಸುತ್ತಿರುವ ಘಟನೆಗಳು ದಿನೇ ದಿನೇ ಹೆಚ್ಚುತ್ತಲೇ ಇದೆ. ಇದೀಗ ಗಗನಸಖಿ ಜೊತೆ ವಿದೇಶಿ ಪ್ರಜೆಯೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ವರದಿಯಾಗಿದೆ.

ಮಾಲ್ಡೀವ್ಸ್ ಪ್ರಜೆಯೊಬ್ಬ ವಿಮಾನದಲ್ಲಿ ಗಗನಸಖಿ ಬಳಿ ಬಿಯರ್​ ಹಾಗೂ ಗೋಡಂಬಿ ಕೇಳಿದ್ದಾನೆ. ಸರ್ವ್​ ಮಾಡುವಾಗ 51 ವರ್ಷಗಳಿಂದ ನಿನ್ನಂತ ಹುಡುಗಿಯನ್ನು ಹುಡುಕುತ್ತಿದ್ದೇನೆ. ನಿನ್ನ ರೇಟ್ ಎಷ್ಟು? ಎಷ್ಟು ಡಾಲರ್ ಕೊಟ್ರೆ ನೀನು ಬರ್ತಿಯಾ ಎಂದು ಕೇಳಿದ್ದಾನೆ. ನೂರು ಡಾಲರ್ ಕೊಟ್ರೆ ಸಾಕಾ ಇನ್ನು ಬೇಕಾ ಎಂದೆಲ್ಲಾ ಕೇಳಿದ್ದಾನೆ ಎಂದು ಆರೋಪಿಸಲಾಗಿದೆ. ಅಕ್ರಂ ಅಹ್ಮದ್ (51) ಎಂಬ ಆರೋಪಿಯನ್ನ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್ 18 ರಂದು ಮಾಲ್ಡೀವ್ಸ್‌ನಿಂದ ಬೆಂಗಳೂರಿಗೆ ಬರ್ತಿದ್ದ ಖಾಸಗಿ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಘಟನೆ ನಡೆದಿದೆ. ಆತ ಕುಳಿತಿದ್ದ ಸೀಟ್​ ಬಳಿ ಗಗನಸಖಿಯ ಮೈ ಮುಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೇ ಬಿಯರ್​ ಹಾಗೂ ಗೋಡಂಬಿಯ ಹಣ ಕೇಳಲು ಹೋದ ಮತ್ತೊಬ್ಬ ಗಗನಸಖಿಯ ಬಳಿಯೂ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.

ನೊಂದ ಗಗನಸಖಿ ಈ ಬಗ್ಗೆ ದೂರು ನೀಡಿದ್ದಾರೆ. ದೇವನಹಳ್ಳಿ ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಲ್ಡೀವ್ಸ್​​ನ ಮಾಲೆಯಿಂದ ಬ್ಯುಸಿನೆಸ್ ಕ್ಲಾಸ್​​​ನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡಿದ್ದ ಈತನನ್ನು ದೇವನಹಳ್ಳಿ ಏರ್‌ಪೋರ್ಟ್‌ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬ್ಯುಸಿನೆಸ್​ ವೀಸಾದಡಿ ಆರೋಪಿ ಭಾರತಕ್ಕೆ ಬಂದಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿ: ಅಕ್ಷರಾ ಕಿರಣ್

Whats_app_banner